ಕನ್ನಡ ಮಾತಾಡಲು ಬರಲ್ವಾ? ದೆಹಲಿಗೆ ಬನ್ನಿ; ವಿವಾದ ಹುಟ್ಟುಹಾಕಿದ ಖಾಸಗಿ ಕಂಪನಿಯ ಸಿಇಒ ಹೇಳಿಕೆ
Dec 21, 2024 10:15 AM IST
ಕನ್ನಡ ಮಾತಾಡಲು ಬರಲ್ವಾ? ದೆಹಲಿಗೆ ಬನ್ನಿ
- ದೆಹಲಿ CEO ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಕನ್ನಡ ಮಾತನಾಡಲು ಬರೋದಿಲ್ವಾ? ಹಾಗಾದರೆ ದೆಹಲಿಗೆ ಬನ್ನಿ ಎಂಬುದಾಗಿ ನೇಮಕಾತಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಂಗಳೂರು ಭಾರತದ ಟೆಕ್ ಹಬ್, ಸ್ಟಾರ್ಟ್‌ಅಪ್‌ಗಳು ಮತ್ತು ಹಳೆಕಾಲದಿಂದ ಪಾರಂಪರಿಕ ವ್ಯವಹಾರ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ಸ್ಥಳ. ಆದರೆ ನಗರದ ಅನೇಕ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ಹೆಚ್ಚು ಚರ್ಚೆ ಆಗುತ್ತಿದೆ. ಈ ಸಮಸ್ಯೆಗಳು ಏನೆಂದರೆ ಭಯಾನಕ ಟ್ರಾಫಿಕ್, ಹೊಂಡಗಳಿಂದ ಕೂಡಿದ ರಸ್ತೆಗಳು, ಹೆಚ್ಚುತ್ತಿರುವ ಬಾಡಿಗೆಗಳು ಇತ್ಯಾದಿ. ಬೆಂಗಳೂರಿನಲ್ಲಿ ವಲಸಿಗರ ಒಳಹರಿವಿನಿಂದ ಇನ್ನಷ್ಟು ಸಮಸ್ಯೆಯಾಗುತ್ತಿದೆ. ಅನೇಕರು ಇಲ್ಲಿಯೇ ಬಂದು ತಮ್ಮ ಉದ್ಯೋಗವನ್ನು ಮಾಡುವುದರಿಂದ ನಗರವು ವಾಸಿಸುವ ಜನರ ಸಂಖ್ಯೆಯನ್ನು ನಿಭಾಯಿಸಲು ಅಸಮರ್ಥವಾಗಿದೆ.
ವಲಸಿಗರ ಸಮಸ್ಯೆಯು ಮತ್ತೊಂದು ವಿವಾದಾತ್ಮಕ ವಿಷಯದ ಮೇಲೆ ಬೆಳಕು ಚೆಲ್ಲಿರುವುದು ಭಾಷಾ ವಿಚಾರವಾಗಿ. ಕಳೆದ ಕೆಲವು ವರ್ಷಗಳಿಂದ, ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಕನ್ನಡವನ್ನು ಬೆಳೆಸುವ ಪ್ರಯತ್ನ ನಡೆಯುತ್ತಿದೆ. ಕನ್ನಡ ಗೊತ್ತಿಲ್ಲದ ಕಾರಣಕ್ಕೆ ನೂರಾರು ಮಂದಿ ಕಿರುಕುಳ ನೀಡಿದ್ದಾರೆ ಎಂದು ಸಾಕಷ್ಟು ಜನ ತಮ್ಮ ಅಭಿಪ್ರಾಯಗಳನ್ನು ಶೇರ್ ಮಾಡುತ್ತಿದ್ದಾರೆ.
ಸ್ಥಳೀಯ ಭಾಷೆ ಮಾತನಾಡಲು ಬಾರದ ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಿಸುವುದು, ಇಂಗ್ಲಿಷ್‌ನಲ್ಲಿರುವ ಸೈನ್ ಬೋರ್ಡ್‌ಗಳನ್ನು ಹಾಳು ಮಾಡುವುದು, ಹಿಂದಿಯಲ್ಲಿ ಮಾತನಾಡುವ ಗ್ರಾಹಕರಿಂದ ಅಂಗಡಿಕಾರರು ಹೆಚ್ಚು ಹಣ ಪಡೆಯುವುದು ನಡೆಯುತ್ತಿದೆ. ಇದರ ಹೊರತಾಗಿಯೂ, ಐಟಿ ವಲಯದಲ್ಲಿ ಉದ್ಯೋಗಗಳಿಗೆ ಬಂದಾಗ ಬೆಂಗಳೂರು ಮೊದಲಾಗುತ್ತದೆ. ದೇಶದ ಇತರ ಭಾಗಗಳಿಂದ ಕೋಟಿಗಟ್ಟಲೆ ಜನರು ತಮ್ಮ ವೃತ್ತಿಜೀವನಕ್ಕಾಗಿ ಭಾರತದ ಸಿಲಿಕಾನ್ ಸಿಟಿಗೆ ಬರುತ್ತಾರೆ. ಇಷ್ಟೆಲ್ಲ ಇರುವಾಗ ದೆಹಲಿ ಎನ್‌ಸಿಆರ್ ಮೂಲದ ಸಿಇಒ ಒಬ್ಬರು ತಮ್ಮ ನೇಮಕಾತಿ ಪೋಸ್ಟ್ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ, ಅದು ಬೆಂಗಳೂರಿನ ಭಾಷಾ ಸಮಸ್ಯೆಯ ಬಗ್ಗೆ ಇದೆ.
ಇಲ್ಲಿದೆ ನೋಡಿ ಅವರ ಪೋಸ್ಟ್

|#+|
Cars24 ನ CEO ವಿಕ್ರಮ್ ಚೋಪ್ರಾ ಅವರು ಮನೆಗೆ ಹತ್ತಿರವೇ ಇದ್ದುಕೊಂಡು ಕೆಲಸ ಮಾಡಲು ಬಯಸುವ ಎಂಜಿನಿಯರ್‌ಗಳನ್ನು ಉದ್ದೇಶಿಸಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ವರ್ಷಗಳೇ ಕಳೆದರೂ ಇನ್ನೂ ಕನ್ನಡ ಮಾತನಾಡುತ್ತಿಲ್ಲವೇ ? ಪರವಾಗಿಲ್ಲ. ಆ ಜಾವೋ ದಿಲ್ಲಿ (ದೆಹಲಿಗೆ ಬನ್ನಿ)" ಎಂದು ಇಂಜಿನಿಯರ್‌ಗಳ ನೇಮಕಾತಿ ಕರೆಯಲ್ಲಿ ಬರೆದಿದ್ದಾರೆ.
ಅವರ ಪೋಸ್ಟ್ ಎಕ್ಸ್ ಮತ್ತು ಲಿಂಕ್ಡ್‌ಇನ್‌ನಲ್ಲಿ ಚರ್ಚೆಯನ್ನು ಪ್ರಾರಂಭಿಸಿತು. ಕಾಮೆಂಟ್‌ಗಳ ವಿಭಾಗದಲ್ಲಿ, ಕೆಲವರು ಇದನ್ನು ಅಸಹ್ಯಕರವೆಂದು ಕರೆದರೆ ಇತರರು ಈ ಪೋಸ್ಟ್ ತುಂಬಾ ಜಾಣತನದಿಂದ ಕೂಡಿದೆ ಎಂದು ಹೇಳಿದ್ದಾರೆ. ಅವರು ಇದನ್ನು ಪೋಸ್ಟ್ ಮಾಡುತ್ತಿದ್ದಂತೆ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಇನ್ನು ಕೆಲವರು ಅವರಿಗೆ ಬೆಂಬಲ ಸೂಚಿಸುವ ರೀತಿಯಲ್ಲಿಯೂ ಕಾಮೆಂಟ್ ಮಾಡಿದ್ದಾರೆ ಹೀಗೆ ಹತ್ತಾರು ರೀತಿಯ ಅಭಿಪ್ರಾಯಗಳು ಬಂದಿದೆ.