ಕರ್ನಾಟಕ ಪಿಯುಸಿ ಫಲಿತಾಂಶ; ವಾಣಿಜ್ಯ ವಿಭಾಗದ ಟಾಪರ್ ಬೆಂಗಳೂರಿನ ಅನುಪಮಗೆ ನವೋದ್ಯಮ ಶುರು ಮಾಡುವ ಕನಸು
Apr 11, 2024 02:40 PM IST
ಕರ್ನಾಟಕ ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದ ಟಾಪರ್ ಆಗಿರುವ ಬೆಂಗಳೂರಿನ ಅನುಪಮಗೆ ನವೋದ್ಯಮ ಶುರು ಮಾಡುವ ಕನಸು.
ಕರ್ನಾಟಕ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದ ಟಾಪರ್ ಬೆಂಗಳೂರಿನ ಅನುಪಮಗೆ ನವೋದ್ಯಮ ಶುರು ಮಾಡುವ ಕನಸು. ಹೀಗಾಗಿ, ಪರೀಕ್ಷೆ ಬಗ್ಗೆ ವಿಶೇಷ ಭಯ ಬೇಡ, ಸಹಜವಾಗಿಯೇ ಒಂದು ಪರೀಕ್ಷೆ ಎನ್ನುತ್ತ ಸ್ವೀಕರಿಸಿ, ಎದುರಿಸಿದರೆ ಗೆಲುವು ನಿಮ್ಮದಾಗುತ್ತದೆ ಎಂದು ಕಿವಿಮಾತು ಹೇಳುತ್ತಾರೆ ಅನುಪಮ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಪಿಯುವರೆಗೆ ಅನೇಕ ಪರೀಕ್ಷೆಗಳನ್ನು ಬರೆದಿರುತ್ತೇವೆ. ದ್ವಿತೀಯ ಪಿಯುಸಿ ಪರೀಕ್ಷೆಯೂ ಒಂದು ಪರೀಕ್ಷೆಯಷ್ಟೇ. ಸಹಜವಾಗಿ ಸ್ವಾಭಾವಿಕವಾಗಿ ಓದಿ ಪರೀಕ್ಷೆ ಬರೆಯಿರಿ ಯಶಸ್ಸು ನಿಮ್ಮದಾಗುತ್ತದೆ ಎಂದು ಇಂದು ದ್ವಿತೀಯ ಪರೀಕ್ಷೆ ಕಾಮರ್ಸ್ ವಿಭಾಗದಲ್ಲಿ 600 ಕ್ಕೆ 595 ಅಂಕಗಳನ್ನು ಪಡೆದಿರುವ ಅನುಪಮ ಹೊಸ ವಿದ್ಯಾರ್ಥಿಗಳಿಗೆ ಹೇಳುವ ಕಿವಿ ಮಾತು ಇದು.
ಅನುಪಮ ಬೆಂಗಳೂರಿನ ಮಲ್ಲೇಶ್ವರಂ 11ನೇ ಅಡ್ಡ ರಸ್ತೆಯಲ್ಲಿರುವ ವಿದ್ಯಾಮಂದಿರ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿನಿ. ಉದ್ಯಮಿ ಬಿ.ಕೆ. ಮಂಜುನಾಥ್ ಮತ್ತು ಗೃಹಿಣಿ.ಸುಮಾ ಮಂಜುನಾಥ್ ಅವರ ಪುತ್ರಿ. ಇವರ ಸಹೋದರನೂ 2020ರಲ್ಲಿ ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದು ಇಂದು ಚಾರ್ಟೆಡ್ ಅಕೌಂಟ್ ಹುದ್ದೆಯಲ್ಲಿದ್ದಾರೆ.
ಸ್ವತಂತ್ರ ಉದ್ದಿಮೆ ಸ್ಥಾಪಿಸುವ ಕನಸು
ಇಷ್ಟೊಂದು ಪ್ರತಿಭಾವಂತೆಯಾಗಿರುವ ನೀವು ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳದೆ ಕಾಮರ್ಸ್ ಕಾಮರ್ಸ್ ವಿಭಾಗವನ್ನು ಏಕೆ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಎಲ್ಲರೂ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡುತ್ತಾರೆ. ಅದರಲ್ಲಿ ವಿಶೇಷ ಏನೂ ಇಲ್ಲ. ಆದರೆ ಕಾಮರ್ಸ್ ವಿಭಾಗದಲ್ಲೂ ಸಾಧನೆ ಮಾಡಲು ವಿಫುಲ ಅವಕಾಶಗಳಿವೆ ಎನ್ನುವುದನ್ನು ತೋರಿಸಲು ಈ ವಿಭಾಗವನ್ನು ಆಯ್ಕೆ ಮಾಡಿಕೊಂಡೆ ಎಂದು ಹೇಳುತ್ತಾರೆ. ಇದೇ ಕಾಮರ್ಸ್ ನಲ್ಲಿಯೇ ಪದವಿ ಪಡೆದು ಸ್ವತಂತ್ರವಾಗಿ ಉದ್ದಿಮೆಯೊಂದನ್ನು ಕಟ್ಟಿ ಬೆಳೆಸುವ ಕನಸು ಅನುಪಮಾ ಆವರದ್ದು. ಕಾಮರ್ಸ್ ಎಂದರೆ ಮೂಗು ಮುರಿಯಬೇಕಿಲ್ಲ. ಅನಾದರಕ್ಕೊಳಗಾಗಿರುವ ವಿಭಾಗ ಖಂಡಿತಾ ಅಲ್ಲವೇ ಅಲ್ಲ ಎನ್ನುವುದು ಇವರ ಅಭಿಪ್ರಾಯ.
ಇವರು ಈ ಮಟ್ಟದ ಅಂಕಗಳನ್ನು ಪಡೆಯಲು ಹಗಲು ರಾತ್ರಿ ಕಷ್ಟಪಟ್ಟಿದ್ದಾರೆ ಎಂದು ಭಾವಿಸಬೇಕಿಲ್ಲ. ಆರಂಭದಲ್ಲಿಯೇ ಹೇಳಿದಂತೆ ದ್ವಿತೀಯ ಪಿಯು ಕೂಡಾ ಒಂದು ಪರೀಕ್ಷೆ ಎಂದು ಭಾವಿಸಿದ್ದೆ. ಎಲ್ಲ ಪರೀಕ್ಷೆಗಳಿಗೆ ತಯಾರಿ ನಡೆಸಿದಂತೆ ಈ ವರ್ಷವೂ ಓದುತ್ತಿದ್ದೆ ಎನ್ನುತ್ತಾರೆ. ಪರೀಕ್ಷೆಗೂ ಮುನ್ನ ಕಾಲೇಜಿನಲ್ಲಿ ಸ್ಟಡಿ ಲೀವ್ ಎಂದು 2 ತಿಂಗಳು ಮನೆಯಲ್ಲೇ ಓದಿಕೊಳ್ಳಲು ಅವಕಾಶ ಕೊಟ್ಟಿದ್ದರು. ಈ ಅವಧಿಯಲ್ಲಿ ಪ್ರತಿ ದಿನ ನಾನು 3 ರಿಂದ 4 ಗಂಟೆ ಕಾಲ ಮಾತ್ರ ತಯಾರಿ ನಡೆಸುತ್ತಿದ್ದೆ. ಉಳಿದ ಸಮಯದಲ್ಲಿ ಕ್ರಿಕೆಟ್ ಮತ್ತು ಟಿವಿ ನೋಡುತ್ತಿದ್ದೆ. ಬರೆಯುವ ಹವ್ಯಾಸವಿದ್ದು ಬರವಣಿಗೆ ನಡೆಸುತ್ತಿದ್ದೆ. ಒಟ್ಟಾರೆ ಪರೀಕ್ಷೆ ಪರೀಕ್ಷೆ ಮಾತ್ರ, ಅದೊಂದು ಭೂತ ಅಲ್ಲ ಎಂದು ಅನುಪಮಾ ಹೇಳುತ್ತಾರೆ.
ಮನೆಪಾಠಕ್ಕೆ ಹೋಗುವ ಅವಶ್ಯಕತೆ ಬರಲಿಲ್ಲ
ಕಾಲೇಜಿನಲ್ಲಿ ಮತ್ತು ಮನೆಯಲ್ಲಿ ನೀಡಿದ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ನಮ್ಮ ಎಲ್ಲ ಅನುಮಾನಗಳನ್ನು ಉಪನ್ಯಾಸಕರು ಬಗೆಹರಿಸುತಿದ್ದರು. ಹಾಗಾಗಿ ಪ್ರತ್ಯೇಕವಾಗಿ ಮನೆ ಪಾಠದ ಅವಶ್ಯಕತೆಯೇ ಕಂಡು ಬರಲಿಲ್ಲ ಎನ್ನುತ್ತಾರೆ.
ಓದಲೇಬೇಕು, ಯಾವಾಗಲೂ ಪುಸ್ತಕದ ಮುಂದೆ ಕುಳಿತಿರಬೇಕು ಎಂದು ಯಾವತ್ತೂ ಪೋಷಕರು ಒತ್ತಡ ಹಾಕಲಿಲ್ಲ. ಅಪ್ಪ ಅಮ್ಮ ಮತ್ತು ಅಣ್ಣನ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಅವರ ಮತ್ತು ಕಾಲೇಜಿನ ಸಹಕಾರವನ್ನು ಯಾವತ್ತೂ ಮರೆಯುವುದಿಲ್ಲ ಎಂದು ಹೇಳುತ್ತಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ವಿಜಯಪುರ ಮಕ್ಕಳ ಅನನ್ಯ ಸಾಧನೆ, ಕಲಾ ವಿಭಾಗದ ಟಾಪರ್ ವೇದಾಂತ್ ಓದಿಗೆ ನೆರವಾದ ಗ್ಯಾರಂಟಿ ಹಣ - ವರದಿಗೆ ಇಲ್ಲಿ ಕ್ಲಿಕ್ ಮಾಡಿ
2) ಐಸಿಎಸ್‌ಇ 10ನೇ ತರಗತಿ, ಐಎಸ್‌ಸಿ 12 ನೇ ತರಗತಿ ಫಲಿತಾಂಶ ಶೀಘ್ರವೇ ಪ್ರಕಟ - ವರದಿ ಓದಿ
3) ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿ ಪ್ರಕಟ, ಏ 29 ರಿಂದ ಮೇ 16ರ ತನಕ ಎಕ್ಸಾಂ - ಪೂರ್ಣ ವಿವರ ಇಲ್ಲಿದೆ
4) ಆಕೆಯದ್ದುಗುಜರಾತ್ ಮೂಲ, ಪಿಯುಸಿ ಸಾಧನೆಗೆ ನೆರವಾಯ್ತು ದಕ್ಷಿಣ ಕನ್ನಡ ನೆಲ - ಸಾಧನೆಯ ವರದಿ ಇಲ್ಲಿದೆ