logo
ಕನ್ನಡ ಸುದ್ದಿ  /  ಕರ್ನಾಟಕ  /  Self Introduction: ಶಿಕ್ಷಣ ಮಾರ್ಗದರ್ಶಿ, ಶಾಲೆಗಳು ಆರಂಭ, ತರಗತಿಯಲ್ಲಿ ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವುದು ಹೇಗೆ? ಇಲ್ಲಿದೆ ಗೈಡ್‌

Self Introduction: ಶಿಕ್ಷಣ ಮಾರ್ಗದರ್ಶಿ, ಶಾಲೆಗಳು ಆರಂಭ, ತರಗತಿಯಲ್ಲಿ ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವುದು ಹೇಗೆ? ಇಲ್ಲಿದೆ ಗೈಡ್‌

Praveen Chandra B HT Kannada

May 29, 2023 02:55 PM IST

google News

Self Introduction: ಶಿಕ್ಷಣ ಮಾರ್ಗದರ್ಶಿ, ಶಾಲೆಗಳು ಆರಂಭ, ತರಗತಿಯಲ್ಲಿ ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವುದು ಹೇಗೆ? ಇಲ್ಲಿದೆ ಗೈಡ್‌

    • ಇಂಗ್ಲಿಷ್‌ನಲ್ಲಿ ಸ್ವಯಂ ಪರಿಚಯ ಮಾಡಿಕೊಳ್ಳುವುದು ಹೇಗೆ? (Self Introduction in English) ಎಂದು ಹುಡುಕುವವರಿಗೆ ಮಾತ್ರವಲ್ಲದೆ ಕಸ್ತೂರಿ ಕನ್ನಡದಲ್ಲಿಯೂ ತಮ್ಮನ್ನು ತಾವು ಪರಿಚಯಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.
Self Introduction: ಶಿಕ್ಷಣ ಮಾರ್ಗದರ್ಶಿ, ಶಾಲೆಗಳು ಆರಂಭ, ತರಗತಿಯಲ್ಲಿ ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವುದು ಹೇಗೆ? ಇಲ್ಲಿದೆ ಗೈಡ್‌
Self Introduction: ಶಿಕ್ಷಣ ಮಾರ್ಗದರ್ಶಿ, ಶಾಲೆಗಳು ಆರಂಭ, ತರಗತಿಯಲ್ಲಿ ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವುದು ಹೇಗೆ? ಇಲ್ಲಿದೆ ಗೈಡ್‌

ಶಾಲಾ ಕಾಲೇಜುಗಳು ಆರಂಭವಾಗುವ ಸಮಯ. ಕೆಲವು ಶಾಲೆಗಳು ಇಂದು ಆರಂಭವಾಗಿದ್ದರೂ ಪ್ರಾರಂಭೋತ್ಸವ, ಪರಿಚಯ ಇತ್ಯಾದಿಗಳು ನಾಳೆ ಅಥವಾ ನಾಡಿದ್ದು ನಡೆಯಬಹುದು. ಇಂತಹ ಸಮಯದಲ್ಲಿ ನಿಮ್ಮ ಪರಿಚಯ ತಿಳಿಸಿ (Self Introduction) ಎಂದು ಶಿಕ್ಷಕರು ಹೇಳಬಹುದು. ಈ ಕುರಿತು ಈಗಾಗಲೇ ಮಕ್ಕಳು ಪ್ರ್ಯಾಕ್ಟಿಸ್‌ ಮಾಡುತ್ತಿದ್ದಾರೆ. ಇಂಗ್ಲಿಷ್‌ನಲ್ಲಿ ಸ್ವಯಂ ಪರಿಚಯ ಮಾಡಿಕೊಳ್ಳುವುದು ಹೇಗೆ? (Self Introduction in English) ಎಂದು ಹುಡುಕುವವರಿಗೆ ಮಾತ್ರವಲ್ಲದೆ ಕಸ್ತೂರಿ ಕನ್ನಡದಲ್ಲಿಯೂ ತಮ್ಮನ್ನು ತಾವು ಪರಿಚಯಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.

ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಗೆ ಹಲವು ಕೌಶಲಗಳನ್ನು ಕಲಿಸಿಕೊಡುವ ತಾಣ. ಸೆಲ್ಫ್‌ ಇಂಟ್ರಡಕ್ಷನ್‌ ಅಥವಾ ಸ್ವಯಂ ಪರಿಚಯವೂ ನಿಮ್ಮ ಕೌಶಲವನ್ನು ಪ್ರದರ್ಶಿಸಲು ಅವಕಾಶವಾಗಿದೆ. ಸಂಕ್ಷಿಪ್ತವಾಗಿ ಟೀಚರ್‌ ಮುಂದೆ ನಿಮ್ಮನ್ನು ಪರಿಚಯಿಸಿಕೊಳ್ಳಲು ತಿಳಿದಿರಬೇಕು.

ಧೈರ್ಯವಾಗಿ ನಿಮ್ಮನ್ನು ನೀವು ಪರಿಚಯಿಸಿಕೊಳ್ಳಿ

ವಿದ್ಯಾರ್ಥಿಗಳು ಧೈರ್ಯವಾಗಿ, ಸ್ಪಷ್ಟವಾಗಿ ಮತ್ತು ಅತ್ಯುತ್ತಮವಾಗಿ ತಮ್ಮನ್ನು ತಾವು ಪರಿಚಯ ಮಾಡಿಕೊಳ್ಳಬೇಕು. ಜತೆಗೆ, ಸಂಕ್ಷಿಪ್ತವಾಗಿ, ಸುಂದರವಾಗಿ ನಿಮ್ಮನ್ನು ನೀವು ಪ್ರೆಸೆಂಟ್‌ ಮಾಡುವುದು ತಿಳಿದಿರಬೇಕು. ಇದರಿಂದ ಶಿಕ್ಷಕರಿಗೆ ನಿಮ್ಮ ವ್ಯಕ್ತಿತ್ವ ಮತ್ತು ಇತರೆ ಗುಣಗಳು ತಿಳಿಯುತ್ತವೆ. ನಿಮ್ಮನ್ನು ಇತರರು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ನೀವು ನಿಮ್ಮನ್ನು ಸರಿಯಾಗಿ ಪರಿಚಯಿಸಿಕೊಳ್ಳಬೇಕು.

ಸ್ವಯಂ ಪರಿಚಯ ಮಾದರಿಗಳು ( Student Self Introduction Samples)

ನನ್ನ ಹೆಸರು ಎಂದು ಆರಂಭಿಸಿ ತಡಬಡಯಿಸುವುದು ಬೇಡ. ಹೆಸರು ಹೇಳಿದ ಬಳಿಕ ಮುಂದೇನೂ ಹೇಳಬೇಕು ಇತ್ಯಾದಿಗಳ ಕುರಿತು ತಿಳಿದಿರಬೇಕು. ಇಲ್ಲೊಂದಿಷ್ಟು ಉದಾಹರಣೆ ನೀಡಲಾಗಿದೆ. ಇದು ಮಾದರಿಯಷ್ಟೇ, ಇದಕ್ಕಿಂತಲೂ ಉತ್ತಮವಾಗಿ ನಿಮ್ಮನ್ನು ನೀವು ಪರಿಚಯಿಸಿಕೊಳ್ಳಲು ಯತ್ನಿಸಿ.

ಸ್ಯಾಂಪಲ್‌ 1

ನನ್ನ ಹೆಸರು ಮೇಘನಾ.‌ ನಾನು ಬೆಂಗಳೂರಿನ .. (ಶಾಲೆ ಹೆಸರು) ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದೇನೆ. ನಾನು ... ಗ್ರಾಮದಿಂದ ಬಂದಿದ್ದೇನೆ. ನನ್ನ ತಂದೆಯ ಹೆಸರು.... ನನ್ನ ತಾಯಿಯ ಹೆಸರು.... ನಾನು ಬೆಂಗಳೂರಿನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದೇನೆ. ಪುಸ್ತಕ ಓದುವುದು ನನ್ನ ಹವ್ಯಾಸ. ಭವಿಷ್ಯದಲ್ಲಿ ನಾನು ಐಎಎಸ್‌ ಅಧಿಕಾರಿಯಾಗಬೇಕೆಂದು ಬಯಸಿದ್ದೇನೆ.

My Name Meghana. I am a student of class 10 studying in Bengaluru. Basically, I am from a small village of (ನಿಮ್ಮ ಊರಿನ ಹೆಸರು). My father’s name is [ ತಂದೆಯ ಹೆಸರು] and my mother’s name is [ತಾಯಿಯ ಹೆಸರು]. I stay in a hostel in Bengaluru. My hobby is reading books. In the future, I desire to become an IAS officer.

ಸ್ಯಾಂಪಲ್‌ 2

ಹಲೋ ಸರ್‌/ಮೇಡಂ

ನನ್ನ ಹೆಸರು ಜಯರಾಜ್‌, ನಾನು ಹುಟ್ಟಿ ಬೆಳೆದಿರುವುದು ಮಂಗಳೂರಿನಲ್ಲಿ. ನನಗೆ ನನ್ನನ್ನು ಪರಿಚಯಿಸಲು ಸಿಕ್ಕ ಈ ಅವಕಾಶಕ್ಕಾಗಿ ಧನ್ಯವಾದ ತಿಳಿಸುತ್ತೇನೆ. ನಾನು ಮಂಗಳೂರಿನ... ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ್ದೇನೆ. ನಾನು ನನ್ನ ಭವಿಷ್ಯದ ಕುರಿತು ಅತ್ಯುತ್ತಮ ಭರವಸೆ ಹೊಂದಿದ್ದು, ರಾಜಕಾರಣಿಯಾಗಲು ಬಯಸಿದ್ದೇನೆ.

Hello Sir/madam, I am Jayaraj, born and brought up in Bangalore. I feel fortunate to get the opportunity to introduce myself. I have graduated from Bengaluru college with 85% aggregate marks. I believe one can get success only when they are determined towards their career goal with full enthusiasm. In this way, I want to obtain a balanced life and achieve greater heights.

ಸ್ಯಾಂಪಲ್‌ 3

ಗುಡ್‌ ಮಾರ್ನಿಂಗ್‌ (ಸಮಯ ನೋಡಿಕೊಂಡು ತಿಳಿಸಿ), ನನ್ನ ಹೆಸರು ರೇಷ್ಮಾ ರಕ್ಷಿತಾ, ನಾನು ನನ್ನ ಕುರಿತು ತಿಳಿಸಲು ಸಂತೋಷಪಡುತ್ತೇನೆ. ನಾನು ಮೂಲತಃ ಮೈಸೂರಿನವಳು. ಆದರೆ, ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ... ಶಾಲೆಯಲ್ಲಿ ಪೂರೈಸಿದ್ದೇನೆ. ಹತ್ತನೇ ತರಗತಿಯಲ್ಲಿ ಶೇಕಡ 95 ಅಂಕ ಪಡೆದಿದ್ದೇನೆ. ಇಲ್ಲಿ ನಿಮ್ಮೆಲ್ಲರ ಜತೆ ಶ್ರದ್ಧೆಯಿಂದ ಅಧ್ಯಯನ ನಡೆಸಲು ಮತ್ತು ಪ್ರತಿಭೆ ಪ್ರದರ್ಶಿಸಲು ಆಗಮಿಸಿದ್ದೇನೆ. ಭವಿಷ್ಯದಲ್ಲಿ ಎಂಜಿನಿಯರ್‌ ಆಗಲು ಬಯಸಿದ್ದೇನೆ. ಬರೆಯುವುದು ಮತ್ತು ಹಾಡುವುದು ನನಗಿಷ್ಟ. ಹಳೆಯ ಹಾಡುಗಳನ್ನು ಕೇಳುವುದನ್ನು ಖುಷಿಪಡುತ್ತೇನೆ.

Good morning, My name is Reshma Rakshitha and it is a pleasure to introduce myself to you. Basically, I belong to Mysuru but currently, I am staying in Bengaluru. I did my schooling at Mysuru Public school and scored 95% in 10. I had a career goal to become an Engineer which was fixed in mind from the very beginning. Now, I am here fulfilling my goal. Apart from studies, I love to write and sing. Listening to old melodies gives me happiness.

ಇವು ಕೆಲವು ಸ್ಯಾಂಪಲ್‌ ಅಷ್ಟೇ, ಇದಕ್ಕಿಂತಲೂ ಉತ್ತಮವಾಗಿ ಹೇಗೆ ನಿಮ್ಮನ್ನು ನೀವು ಪರಿಚಯಿಸಿಕೊಳ್ಳಬಹುದು ಎಂದು ಕನ್ನಡಿ ಮುಂದೆ ಅಥವಾ ಹೆತ್ತವರ ಮುಂದೆ ಪ್ರದರ್ಶಿಸಿ. ಗುಡ್‌ಲಕ್‌.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ