logo
ಕನ್ನಡ ಸುದ್ದಿ  /  ಕರ್ನಾಟಕ  /  Gold Price: ಮತ್ತೆ ಏರುಗತಿಯತ್ತ ಚಿನ್ನದ ದರ; ಬೆಳ್ಳಿ ದರದಲ್ಲಿ ಕೊಂಚ ಇಳಿಕೆ; ಹೀಗಿದೆ ಇಂದಿನ ಚಿನ್ನ, ಬೆಳ್ಳಿ ಧಾರಣೆ

Gold Price: ಮತ್ತೆ ಏರುಗತಿಯತ್ತ ಚಿನ್ನದ ದರ; ಬೆಳ್ಳಿ ದರದಲ್ಲಿ ಕೊಂಚ ಇಳಿಕೆ; ಹೀಗಿದೆ ಇಂದಿನ ಚಿನ್ನ, ಬೆಳ್ಳಿ ಧಾರಣೆ

Reshma HT Kannada

Jun 07, 2023 06:00 AM IST

ರಾಜ್ಯದಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆಯಾಗಿದೆ

    • Gold and Silver Price in Karnataka: ರಾಜ್ಯದಲ್ಲಿ ಇಂದು ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿದೆ. ಬೆಳ್ಳಿ ದರ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್‌ ಚಿನ್ನದ ದರ ಗ್ರಾಂಗೆ 5,560 ಆಗಿದೆ. ಅದೇ ರೀತಿ 24 ಕ್ಯಾರೆಟ್‌ ಅಪರಂಜಿ ಚಿನ್ನದ ದರ ಇಂದು ಗ್ರಾಂಗೆ 6,065ರೂ ಆಗಿದೆ. ಬೆಳ್ಳಿ ದರ ಗ್ರಾಂಗೆ 73.50 ಇದೆ.
ರಾಜ್ಯದಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆಯಾಗಿದೆ
ರಾಜ್ಯದಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆಯಾಗಿದೆ (MINT_PRINT)

ಬೆಂಗಳೂರು: ರಾಜ್ಯದ ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ತುಸು ಏರಿಕೆ ಕಂಡಿದೆ. ಬೆಳ್ಳಿದಲ್ಲಿ ಇಂದು ಇಳಿಕೆಯಾಗಿದೆ. ಚಿನಿವಾರ ಪೇಟೆಯಲ್ಲಿ ದರದ ಏರಿಳಿತ ಸಾಮಾನ್ಯವಾಗಿದ್ದು, ಚಿನ್ನ ಖರೀದಿ ಮಾಡುವವರು ಕೊಂಚ ಯೋಚಿಸುವುದು ಉತ್ತಮ. ಇಂದು ಬೆಳ್ಳಿ ದರದಲ್ಲಿ ಇಳಿಕೆಯಾಗಿದ್ದು, ಬೆಳ್ಳಿ ಖರೀದಿಸುವವರು ಮನಸ್ಸು ಮಾಡಬಹುದು. ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 5,560 ರೂ., ಆಗಿದೆ. ನಿನ್ನೆ 5,530 ರೂ., ಇದ್ದು, ಇಂದು ಗ್ರಾಂಗೆ 30 ರೂ ಏರಿಕೆಯಾಗಿದೆ. ಇದೇ ರೀತಿ 24 ಕ್ಯಾರೆಟ್‌ ಅಪರಂಜಿ ಚಿನ್ನದ ದರ ಇಂದು 6,065 ರೂ ಇದೆ. ಬೆಳ್ಳಿ ದರ ಇಳಿಕೆಯಾಗಿದ್ದು, ಇಂದು ಗ್ರಾಂಗೆ 73.50 ರೂಪಾಯಿ ಇದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಒಂದು ದಿನ ಮುಂದೂಡಿಕೆ; ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಚಿವರು

Hassan Scandal: ಪ್ರಜ್ವಲ್‌ ರೇವಣ್ಣ ವಿಡಿಯೋ ವೈರಲ್‌ಗೆ ಸಿಎಂ, ಡಿಸಿಎಂ ಕಾರಣ: ವಕೀಲ ದೇವರಾಜೇಗೌಡ ಸ್ಪೋಟಕ ಮಾಹಿತಿ

Drought fund: ಮುಂಗಾರು 2023 ಬರ ಪರಿಹಾರ ವಿತರಣೆಗೆ ಕ್ಷಣಗಣನೆ, ಹಣ ಬಂದಿದೆಯೇ ಎಂದು ಹೀಗೆ ಪರೀಕ್ಷಿಸಿ

Indian Railways: ಬೇಸಿಗೆಗೆ ಹುಬ್ಬಳ್ಳಿ, ಬೆಳಗಾವಿಯಿಂದ ಉತ್ತರ ಭಾರತಕ್ಕೆ ವಿಶೇಷ ರೈಲು, ಅರಸೀಕೆರೆ 2 ರೈಲು ಸಂಚಾರ ರದ್ದು

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವು ಅಂತರರಾಷ್ಟ್ರೀಯ ಕಾರಣಗಳಿವೆ. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.

ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ವಿವಿಧ ನಗರಗಳಲ್ಲಿ ಇಂದು ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿದೆ. ಇದೇ ರೀತಿ ಹೊರರಾಜ್ಯಗಳಲ್ಲಿಯೂ ಚಿನ್ನದ ದರ ಏರಿಕೆ ಕಂಡಿದೆ.

22 ಕ್ಯಾರೆಟ್‌ ಚಿನ್ನದ ದರ (22 carat gold rate)

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,560 ರೂ ಇದೆ. ನಿನ್ನೆಯ 5,530 ರೂ ದರಕ್ಕೆ ಹೋಲಿಸಿದರೆ 30 ರೂ ಏರಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 44,480 ರೂ ಆಗಿದೆ. ನಿನ್ನೆಗಿಂತ ಇಂದು 240ರೂ ಏರಿಕೆ ಕಂಡಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 55,600 ರೂ. ಇದೆ. ನಿನ್ನೆಯ 55,300 ರೂ. ಗೆ ಹೋಲಿಸಿದರೆ 300 ರೂ. ಏರಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,56,000 ರೂ. ನೀಡಬೇಕು. ನಿನ್ನೆಯ 5,53,000 ರೂ.ಗೆ ಹೋಲಿಸಿದರೆ ಇಂದು 3000 ರೂ. ಏರಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ದರ (24 carat gold rate)

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 6,065 ರೂ. ಇದೆ. ನಿನ್ನೆಯ 6,033 ರೂ.ಗೆ ಹೋಲಿಸಿದರೆ 32 ರೂ. ಏರಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48,520 ರೂ. ನೀಡಬೇಕಾಗುತ್ತದೆ. ನಿನ್ನೆ 48,264 ರೂ. ಇತ್ತು. ಇಂದು 256 ರೂ ಹೆಚ್ಚಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 60,650 ರೂ. ಇದೆ. ನಿನ್ನೆಯ 60,330 ರೂ. ಗೆ ಹೋಲಿಸಿದರೆ 320 ರೂ. ಏರಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 6,06,500 ರೂ. ನೀಡಬೇಕು. ನಿನ್ನೆಯ 6,03,300 ರೂ.ಗೆ ಹೋಲಿಸಿದರೆ ಇಂದು 3,200 ರೂ. ಏರಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 55,650 ರೂ. ಇದೆ. ಮಂಗಳೂರು 55,650 ರೂ., ಮೈಸೂರಿನಲ್ಲಿ 55,650 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 56,000 ರೂ., ಮುಂಬೈನಲ್ಲಿ 55,600 ರೂ., ದೆಹಲಿಯಲ್ಲಿ 55,750 ರೂ., ಕೋಲ್ಕತಾದಲ್ಲಿ 55,600 ರೂ., ಹೈದರಾಬಾದ್‌ 55,600 ರೂ., ಕೇರಳ 55,600 ರೂ., ಪುಣೆ 55,600 ರೂ., ಅಹಮದಾಬಾದ್‌ 55,600 ರೂ., ಜೈಪುರ 55,750 ರೂ., ಲಖನೌ 55,750 ರೂ., ಕೊಯಮುತ್ತೂರು 56,000 ರೂ. ಇದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 61,700 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 61,100 ರೂ., ಮುಂಬೈನಲ್ಲಿ 60,650 ರೂ., ದೆಹಲಿಯಲ್ಲಿ 60,800 ರೂ., ಕೋಲ್ಕತಾದಲ್ಲಿ 60,650 ರೂ., ಹೈದರಾಬಾದ್‌ 60,650 ರೂ., ಕೇರಳ 60,650 ರೂ., ಪುಣೆ 60,650 ರೂ., ಅಹಮದಾಬಾದ್‌ 60,700 ರೂ., ಜೈಪುರ 60,800 ರೂ., ಲಖನೌ 60,800 ರೂ., ಕೊಯಮುತ್ತೂರು 61,100 ರೂ., ಮಧುರೈ 61,100, ವಿಜಯವಾಡ 60,650 ರೂ. ಇದೆ.

ಕರ್ನಾಟಕದಲ್ಲಿ ಇಂದು ಹೀಗಿದೆ ಬೆಳ್ಳಿ ದರ

ರಾಜ್ಯದಲ್ಲಿ ಇಂದು ಬೆಳ್ಳಿ ದರದಲ್ಲಿ ಕೊಂಚ ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 73.50 ರೂ., 8 ಗ್ರಾಂ ಬೆಳ್ಳಿಗೆ 588 ರೂ., 10 ಗ್ರಾಂ ಬೆಳ್ಳಿ ದರ 735 ರೂ., 10 ಗ್ರಾಂ ಬೆಳ್ಳಿಗೆ 7,350 ಮತ್ತು 1 ಕೆ.ಜಿ. ಬೆಳ್ಳಿ ದರ 73,500 ರೂಪಾಯಿ ಇದೆ.

    ಹಂಚಿಕೊಳ್ಳಲು ಲೇಖನಗಳು