logo
ಕನ್ನಡ ಸುದ್ದಿ  /  ಕರ್ನಾಟಕ  /  ಹಾಸನ ಲೈಂಗಿಕ ಹಗರಣ; ಕರ್ನಾಟಕ ಹೈಕೋರ್ಟ್‌ನಲ್ಲಿ ಎಫ್‌ಐಆರ್‌ ವಿರುದ್ಧ ಎಚ್ ಡಿ ರೇವಣ್ಣ ಅರ್ಜಿ, ಜಾಮೀನು ರದ್ದುಕೋರಿ ಎಸ್‌ಐಟಿ ಅರ್ಜಿ

ಹಾಸನ ಲೈಂಗಿಕ ಹಗರಣ; ಕರ್ನಾಟಕ ಹೈಕೋರ್ಟ್‌ನಲ್ಲಿ ಎಫ್‌ಐಆರ್‌ ವಿರುದ್ಧ ಎಚ್ ಡಿ ರೇವಣ್ಣ ಅರ್ಜಿ, ಜಾಮೀನು ರದ್ದುಕೋರಿ ಎಸ್‌ಐಟಿ ಅರ್ಜಿ

Umesh Kumar S HT Kannada

May 29, 2024 11:07 AM IST

google News

ಹಾಸನ ಲೈಂಗಿಕ ಹಗರಣ; ಕರ್ನಾಟಕ ಹೈಕೋರ್ಟ್‌ನಲ್ಲಿ ಎಫ್‌ಐಆರ್‌ ವಿರುದ್ಧ ಎಚ್ ಡಿ ರೇವಣ್ಣ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಅವರ ಜಾಮೀನು ರದ್ದುಕೋರಿ ಎಸ್‌ಐಟಿ ಕೂಡ ಅರ್ಜಿ ಸಲ್ಲಿಸಿದೆ.

  • ಹಾಸನ ಲೈಂಗಿಕ ಹಗರಣದ ಭಾಗವಾಗಿರುವ ಎರಡು ಕೇಸ್‌ಗಳ ಎಫ್‌ಐಆರ್‌ ವಿರುದ್ಧ ಎಚ್ ಡಿ ರೇವಣ್ಣ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ, ಎಚ್ ಡಿ ರೇವಣ್ಣ ಅವರ ಜಾಮೀನು ರದ್ದುಕೋರಿ ಎಸ್‌ಐಟಿ ಕೂಡ ಅರ್ಜಿ ಸಲ್ಲಿಸಿದೆ. ಈ ವಿದ್ಯಮಾನದ ಪೂರ್ಣ ವಿವರ ಇಲ್ಲಿದೆ.

ಹಾಸನ ಲೈಂಗಿಕ ಹಗರಣ; ಕರ್ನಾಟಕ ಹೈಕೋರ್ಟ್‌ನಲ್ಲಿ ಎಫ್‌ಐಆರ್‌ ವಿರುದ್ಧ ಎಚ್ ಡಿ ರೇವಣ್ಣ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಅವರ ಜಾಮೀನು ರದ್ದುಕೋರಿ ಎಸ್‌ಐಟಿ ಕೂಡ ಅರ್ಜಿ ಸಲ್ಲಿಸಿದೆ.
ಹಾಸನ ಲೈಂಗಿಕ ಹಗರಣ; ಕರ್ನಾಟಕ ಹೈಕೋರ್ಟ್‌ನಲ್ಲಿ ಎಫ್‌ಐಆರ್‌ ವಿರುದ್ಧ ಎಚ್ ಡಿ ರೇವಣ್ಣ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಅವರ ಜಾಮೀನು ರದ್ದುಕೋರಿ ಎಸ್‌ಐಟಿ ಕೂಡ ಅರ್ಜಿ ಸಲ್ಲಿಸಿದೆ.

ಬೆಂಗಳೂರು: ಹಾಸನ ಲೈಂಗಿಕ ಹಗರಣ (Hassan Sex Scandal) ದ ಭಾಗವಾಗಿರುವ ಒಂದು ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಕೇಸ್‌ನ ಆರೋಪಿಯಾಗಿರುವ ಶಾಸಕ ಎಚ್ ಡಿ ರೇವಣ್ಣ (HD Revanna) ಅವರ ಜಾಮೀನು ರದ್ದುಗೊಳಿಸುವಂತೆ ಕೋರಿ ಎಸ್‌ಐಟಿ ಅಧಿಕಾರಿಗಳು ಕರ್ನಾಟಕ ಹೈಕೋರ್ಟ್‌ (Karnataka High Court) ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆಯ ಅಪಹರಣ ಮಾಡಿದ್ದ ಆರೋಪದಲ್ಲಿ ಶಾಸಕ ಎಚ್‌. ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಪದ್ಮನಾಭನಗರದಲ್ಲಿ ಬಂಧಿಸಿತ್ತು. ಬಳಿಕ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಎಸ್‌ಐಟಿ ಅಧಿಕಾರಿಗಳು ಈಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವಂಥದ್ದು.

ಎಚ್ ಡಿ ರೇವಣ್ಣ ಜಾಮೀನ ರದ್ದುಗೊಳಿಸಲು ಎಸ್‌ಐಟಿ ನೀಡಿರುವ ಕಾರಣಗಳಿವು

1) ಎಚ್ ಡಿ ರೇವಣ್ಣ ಅವರ ವಿರುದ್ಧ ದಾಖಲಾಗಿರುವ ಅಪಹರಣ ಪ್ರಕರಣವು ಗಂಭೀರ ಸ್ವರೂಪದಿಂದ ಕೂಡಿದೆ. ಪ್ರಕರಣದಲ್ಲಿ ರೇವಣ್ಣ ಅವರ ಪಾತ್ರವೂ ಇದೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ.

2) ಆರೋಪಿಗೆ ಜಾಮೀನು ಲಭ್ಯವಾಗಿರುವುದರಿಂದ ರಾಜಕೀಯವಾಗಿ ಪ್ರಭಾವಿಯಾಗಿರುವ ಅವರು ತನಿಖೆ ಮೇಲೆ ಪ್ರಭಾವ ಬೀರಬಹುದು.

3) ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ಅಪಹರಣ ಪ್ರಕರಣದ ಆರೋಪಿಗಳ ಹಾಗೂ ಸಾಕ್ಷಿಗಳ ಹೆಚ್ಚಿನ ವಿಚಾರಣೆ ನಡೆಸಬೇಕಿದೆ. ಇದು ಬಹಳ ಗಂಭೀರ ಪ್ರಕರಣವಾಗಿದ್ದು, ಇದರಲ್ಲಿ ಆರೋಪಿಯಾಗಿರುವ ರೇವಣ್ಣ ಅವರಿಗೆ ನೀಡಲಾಗಿರುವ ಜಾಮೀನು ರದ್ದುಪಡಿಸಬೇಕು ಎಂದು ಎಸ್ ಐಟಿ ಪೊಲೀಸರು ಕೋರಿದ್ದಾರೆ.

ಲೈಂಗಿಕ ದೌರ್ಜನ್ಯ ಮತ್ತು ಸಂತ್ರಸ್ತೆಯ ಅಪಹರಣ ಕೇಸ್‌ಗಳಲ್ಲಿ ಎಚ್ ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2024ರ ಮೇ 13ರಂದು ಜಾಮೀನು ಮಂಜೂರು ಮಾಡಿತ್ತು.

ಎಫ್ಐಆರ್ ರದ್ದುಗೊಳಿಸಲು ಕೋರಿ ಎಚ್ ಡಿ ರೇವಣ್ಣ ಕೋರ್ಟ್‌ ಮೊರೆ

ಲೈಂಗಿಕ ಕಿರುಕುಳ, ಅತ್ಯಾಚಾರ ಕೇಸ್‌, ಸಂತ್ರಸ್ತೆ ಮನೆಗೆಲಸದಾಕೆಯನ್ನು ಅಪಹರಿಸಿದ ಆರೋಪ ಸಂಬಂಧ ಕೆ.ಆರ್. ನಗರ, ಹೊಳೆನರಸೀಪುರ ಠಾಣೆಗಳಲ್ಲಿ ದಾಖಲಾಗಿರುವ ಪ್ರತ್ಯೇಕ ಎಫ್‌ಐಆ‌ರ್‌ಗಳನ್ನು ರದ್ದುಪಡಿಸುವಂತೆ ಎಚ್‌.ಡಿ. ರೇವಣ್ಣ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಈ ಸಂಬಂಧ 2 ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ಸಲ್ಲಿಸಿದ್ದಾರೆ.

1) ತಮ್ಮಿಂದ ಯಾವುದೇ ಅಪರಾಧ ಆಗಿಲ್ಲ. ತಮ್ಮ ವಿರುದ್ಧ ದಾಖಲಾಗಿರುವ ದೂರು ರಾಜಕೀಯ ಪ್ರೇರಿತ ಮತ್ತು ದುರುದ್ದೇಶದಿಂದ ಕೂಡಿದ್ದು.

2) ದೂರಿನ ಅಂಶಗಳು ಕಟ್ಟುಕತೆಯಂತೆ ಇದೆ. ಅದರಲ್ಲಿ ಯಾವುದೇ ಹುರುಳಿಲ್ಲ. ಈ ಅಂಶಗಳನ್ನು ಆಧರಿಸಿದ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕು.

3) ಈ ಕ್ರಿಮಿನಲ್ ಅರ್ಜಿಗಳು ಇತ್ಯರ್ಥವಾಗುವ ಎಫ್‌ಐಆರ್ ಮತ್ತು ಪ್ರಕರಣದ ತನಿಖೆ, ಜನ ಪ್ರತಿನಿಧಿಗಳ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು.

ರೇವಣ್ಣ ಅವರು ತಮ್ಮ ಮಧ್ಯಂತರ ಮನವಿಯ ಕ್ರಿಮಿನಲ್ ದಾವೆಗಳಲ್ಲಿ, ಮಹಿಳೆಯ ಅಪಹರಣ ಪ್ರಕರಣದಲ್ಲಿ ವಿಶೇಷ ತನಿಖಾ ದಳ, ಕೆ. ಆರ್. ನಗರ ಠಾಣೆಯ ಪೊಲೀಸರು ಮತ್ತು ದೂರುದಾರ ಎಚ್‌. ಡಿ. ರಾಜು ಅವರನ್ನು ಪ್ರತಿವಾದಿ ಮಾಡಿದ್ದಾರೆ. ಹಾಗೆಯೇ, ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿರುವ ಹೊಳೆನರಸೀಪುರ ಠಾಣೆಯ ಪೊಲೀಸರು, ಸಿಟ್ ಮತ್ತು ಮತ್ತು ದೂರುದಾರ ಮಹಿಳೆಯನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ