ಕನ್ನಡ ಸುದ್ದಿ  /  ಕರ್ನಾಟಕ  /  ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಟಿಕೆಟ್ ಬುಕ್, ಧ್ವನಿ ಪರೀಕ್ಷೆ ನಡೆಸಲು ಎಸ್‌ಐಟಿ ಸಜ್ಜು, ಇನ್ನೂ 5 ವಿದ್ಯಮಾನಗಳ ವಿವರ

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಟಿಕೆಟ್ ಬುಕ್, ಧ್ವನಿ ಪರೀಕ್ಷೆ ನಡೆಸಲು ಎಸ್‌ಐಟಿ ಸಜ್ಜು, ಇನ್ನೂ 5 ವಿದ್ಯಮಾನಗಳ ವಿವರ

ಹಾಸನ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಕೇಸ್ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರು ಎಸ್‌ಐಟಿ ಎದುರು ಮೇ 31 ರಂದು ಹಾಜರಾಗಲಿದ್ದಾರೆ. ಅವರ ರಿಟರ್ನ್‌ ಟಿಕೆಟ್ ಬುಕ್ ಆಗಿದೆ ಎಂಬ ಸುದ್ದಿ ಹರಡಿದೆ. ಪ್ರಜ್ವಲ್‌ ಅವರ ಧ್ವನಿ ಪರೀಕ್ಷೆ ನಡೆಸಲು ಎಸ್‌ಐಟಿ ಸಜ್ಜುಗೊಂಡಿದ್ದು, ಇದಕ್ಕೆ ಸಂಬಂಧಿಸಿದ ಇನ್ನೂ 5 ವಿದ್ಯಮಾನಗಳ ವಿವರ.

ಹಾಸನ ಲೈಂಗಿಕ ಹಗರಣ; ಸಂಸದ ಪ್ರಜ್ವಲ್ ರೇವಣ್ಣ ಅವರ ರಿಟರ್ನ್ ಟಿಕೆಟ್ ಬುಕ್ ಆಗಿದೆ ಎಂದು ಸುದ್ದಿ ಹರಡಿದೆ. ಅವರ ಧ್ವನಿ ಪರೀಕ್ಷೆ ನಡೆಸಲು ಎಸ್‌ಐಟಿ ಸಜ್ಜುಗೊಂಡಿದೆ.
ಹಾಸನ ಲೈಂಗಿಕ ಹಗರಣ; ಸಂಸದ ಪ್ರಜ್ವಲ್ ರೇವಣ್ಣ ಅವರ ರಿಟರ್ನ್ ಟಿಕೆಟ್ ಬುಕ್ ಆಗಿದೆ ಎಂದು ಸುದ್ದಿ ಹರಡಿದೆ. ಅವರ ಧ್ವನಿ ಪರೀಕ್ಷೆ ನಡೆಸಲು ಎಸ್‌ಐಟಿ ಸಜ್ಜುಗೊಂಡಿದೆ.

ಬೆಂಗಳೂರು: ಹಾಸನ ಲೈಂಗಿಕ ಹಗರಣ ಬಹಿರಂಗವಾಗಿ ಒಂದು ತಿಂಗಳು ಕಳೆದು ಹೋಗಿದ್ದು, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಕೇಸ್ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಮೇ 31 ರಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಕುರಿತು ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ ಕಾರಣ, ಅವರ ಆಗಮನವಾದ ಕೂಡಲೇ ಧ್ವನಿಪರೀಕ್ಷೆ ಸೇರಿ ತನಿಖೆ ಮುಂದುವರಿಸಲು ಎಸ್‌ಐಟಿ ಸಜ್ಜಾಗತೊಡಗಿದೆ.

ಟ್ರೆಂಡಿಂಗ್​ ಸುದ್ದಿ

ಈ ನಡುವೆ, ಸಂಸದ ರೇವಣ್ಣ ಅವರು ಜರ್ಮನಿಯ ಮ್ಯೂನಿಚ್‌ನಿಂದ ಭಾರತಕ್ಕೆ ಮೇ 31ರಂದು ವಾಪಸ್ ಬರುವುದಕ್ಕೆ ಟಿಕೆಟ್ ಬುಕ್ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ. ಲುಫ್ತಾನ್ಸಾ ವಿಮಾನದಲ್ಲಿ ಮ್ಯೂನಿಚ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಅವರು ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡು ಬಾರಿ ಅವರ ವಿಮಾನದ ಟಿಕೆಟ್‌ಗಳ ಇಮೇಜ್ ವೈರಲ್ ಆಗಿತ್ತು. ಆದರೆ ಈ ಬಾರಿ ಟಿಕೆಟ್ ಇಮೇಜ್ ಬಹಿರಂಗವಾಗಿಲ್ಲ.

ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಹೇಳಿಕೆ ಕಾರಣ, ಎಸ್‌ಐಟಿ ತಂಡ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ.

ಪ್ರಜ್ವಲ್ ರೇವಣ್ಣ ಆಗಮನದ ನಿರೀಕ್ಷೆ; 5 ಮುಖ್ಯ ವಿದ್ಯಮಾನಗಳು

1) ಪ್ರಜ್ವಲ್ ರೇವಣ್ಣ ಅವರು ಮೇ 31ಕ್ಕೆ ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುವುದಾಗಿ ಹೇಳಿಕೆ ನೀಡಿದ ವಿಡಿಯೋ ಎಲ್ಲಿ ಮಾಡಿದ್ದು, ಎಲ್ಲಿಂದ ಬಂತು ಎಂಬುದು ಸದ್ಯದ ಕುತೂಹಲದ ಪ್ರಶ್ನೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಎಸ್ಐಟಿ ತಂಡ ಪ್ರಯತ್ನಿಸುತ್ತಿದೆ.

2) ಅಶ್ಲೀಲ ವಿಡಿಯೋಗಳಲ್ಲಿ ಇರುವ ಪುರುಷ ಧ್ವನಿ ಯಾರದ್ದು?- ಇದಕ್ಕೆ ಉತ್ತರ ಕಂಡುಕೊಳ್ಳಲು ಎಸ್‌ಐಟಿ ತಂಡ ಪ್ರಯತ್ನಿಸಿದೆ. ಹೀಗಾಗಿ, ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗುತ್ತಿದ್ದಂತೆ ಅವರ ಧ್ವನಿ ಪರೀಕ್ಷೆ ನಡೆಸಲು ಎಸ್‌ಐಟಿ ತಂಡ ಸಿದ್ಧತೆ ನಡೆಸಿದೆ. ಇದು ದೃಢಪಟ್ಟರೆ ಪ್ರಜ್ವಲ್ ವಿರುದ್ಧದ ಕೇಸ್‌ ಬಿಗಿಯಾಗಲಿದೆ.

3) ಅಶ್ಲೀಲ ವಿಡಿಯೋಗಳಲ್ಲಿ ಮಹಿಳೆಯರ ಮುಖ ಪರಿಚಯ ಸಿಗುವಂತೆ ಇದ್ದು, ಪುರುಷ ಧ್ವನಿ ಮಾತ್ರ ಇದೆ. ಪೆನ್‌ಡ್ರೈವ್ ಈಗ ಎಫ್‌ಎಸ್‌ಎಲ್‌ ಪರೀಕ್ಷೆಗೆ ಒಳಗಾಗಿದ್ದು, ವರದಿ ತಯಾರಾಗಬೇಕಷ್ಟೆ ಎಂದು ಎಸ್‌ಐಟಿ ಮೂಲಗಳು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

4) ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲಿರುವ ಎಸ್‌ಐಟಿ ತಂಡ, ಬಳಿಕ ಅವರನ್ನು ವಿವಿಧ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದೆ. ಈ ಎಲ್ಲ ವೈದ್ಯಕೀಯ ಪರೀಕ್ಷೆಗಳು ಬೌರಿಂಗ್ ಅಥವಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಯುವ ಸಾಧ್ಯತೆ ಇದೆ.

5) ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿದ್ದ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಾಸನದ ಚೇತನ್ ಮತ್ತು ನವೀನ್ ಗೌಡ ಅವರನ್ನು ಎಸ್‌ಐಟಿ ತಂಡ ನಿನ್ನೆ (ಮೇ 28) ಬಂಧಿಸಿದೆ. ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಬಂದ ಅವರನ್ನು ಎಸ್‌ಐಟಿ ತಂಡ ಅಲ್ಲೇ ಬಂಧಿಸಿದೆ.

ಪೆನ್‌ಡ್ರೈವ್ ಕೇಸ್‌, ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಜೂನ್ 3ಕ್ಕೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಫೋಟೋ ಹಾಗೂ ವಿಡಿಯೋ ಹಂಚಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ನಾಲ್ವರು ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜೂ.3ಕ್ಕೆ ಮು೦ದೂಡಿದೆ.

ಆರೋಪಿಗಳಾದ ನವೀನ್ ಗೌಡ ಅಲಿಯಾಸ್ ಎನ್. ಆರ್. ನವೀನ್ ಕುಮಾರ್, ಎನ್. ಕಾರ್ತಿಕ್, ಬಿ.ಸಿ. ಚೇತನ್ ಕುಮಾರ್ ಮತ್ತು ಎಚ್.ಪಿ. ಪುಟ್ಟರಾಜು ನಿರೀಕ್ಷಣಾ ಜಾಮೀನು ಕೋರಿ ಹೈಕೋಟ್ ೯ಗೆ ಪ್ರತ್ಯೇಕ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಏನಿದು ಪ್ರಕರಣ?: ಆರೋಪಿ ನವೀನ್ ಗೌಡ ಹಾಗೂ ಇತರರು ಏ.21ರಂದು ಸಂಜೆ 6.30ಕ್ಕೆ ಪ್ರಜ್ವಲ್ ರೇವಣ್ಣ ಅವರದ್ದು ಎಂದು ಆರೋಪಿಸಿರುವ ಅಶ್ಲೀಲ ಭಾವಚಿತ್ರ ಮತ್ತು ವಿಡಿಯೋ ಒಳಗೊಂಡ ಸಿಡಿ ಹಾಗೂ ಪೆನ್‌ ಡ್ರೈವ್‌ಗಳನ್ನು ಹಾಸನದಲ್ಲಿ ಮನೆಮನೆಗೆ ತೆರಳಿ ಹಂಚಿದ್ದಾರೆ ಎಂದು ಆರೋಪಿಸಿ ಪ್ರಜ್ವಲ್ ರೇವಣ್ಣ ಅವರ ಚುನಾವಣಾ ಏಜೆಂಟ್ ಆಗಿದ್ದ ಪೂರ್ಣಚಂದ್ರ ಎಂಬುವವರು ಏಪ್ರಿಲ್‌ 23 ರಂದು ಹಾಸನದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಈ ದೂರು ದಾಖಲಾದ ಕಾರಣ, ನವೀನ್ ಗೌಡ ಹಾಗೂ ಇತರರ ವಿರುದ್ಧ ಈ ಬಗ್ಗೆ ಎಫ್‌ ಐಆರ್ ದಾಖಲಾಗಿತ್ತು.

ಕಾಂಗ್ರೆಸ್ ಕಾರ್ಯಕರ್ತರಾಗಿ ಗುರುತಿಸಿಕೊ೦ಡಿದ್ದ ನವೀನ್ ಗೌಡ, ಚೇತನ್ ಹಾಗೂ ಪುಟ್ಟ ಆಲಿಯಾಸ್ ಪುಟ್ಟರಾಜ್ ಅವರು ಪ್ರಕರಣ ದಾಖಲಾದ ಮೇಲೆ ತಲೆಮರೆಸಿಕೊಂಡಿದ್ದರು. ಪ್ರಜ್ವಲ್ ಆಶ್ಲೀಲ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ನವೀನ್ ಗೌಡ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ. ಜೊತೆಗೆ ಪ್ರಜ್ವಲ್ ರೇವಣ್ಣ ವಿಡಿಯೋ ನೋಡಲು ಈ ವಾಟ್ಸ್‌ಆ್ಯಪ್ ಚಾನೆಲ್ ಈ ಫಾಲೋ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿಕೊಂಡಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಟಿ20 ವರ್ಲ್ಡ್‌ಕಪ್ 2024