logo
ಕನ್ನಡ ಸುದ್ದಿ  /  ಕರ್ನಾಟಕ  /  ಹಾಸನ ಕಿತ್ತಾನೆ ಬಳಿ ರಸ್ತೆ ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್‌ ದುರ್ಮರಣ

ಹಾಸನ ಕಿತ್ತಾನೆ ಬಳಿ ರಸ್ತೆ ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್‌ ದುರ್ಮರಣ

Rakshitha Sowmya HT Kannada

Dec 01, 2024 11:24 PM IST

google News

ಐಪಿಎಸ್‌ ಅಧಿಕಾರಿ ಹರ್ಷವರ್ಧನ್‌̧ ಬಲಚಿತ್ರದಲ್ಲಿ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಜೀಪ್

  • ಹಾಸನ: ಪ್ರೊಬೆಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದ ಮಧ್ಯಪ್ರದೇಶ ಮೂಲದ ಐಪಿಎಸ್‌ ಅಧಿಕಾರಿ ಹರ್ಷವರ್ಧನ್‌ ಕಿತ್ತಾನೆ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಹರ್ಷವರ್ಧನ್‌ ಸಾವನ್ನಪ್ಪಿದ್ದಾರೆ.  

 ಐಪಿಎಸ್‌ ಅಧಿಕಾರಿ ಹರ್ಷವರ್ಧನ್‌̧  ಬಲಚಿತ್ರದಲ್ಲಿ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಜೀಪ್
ಐಪಿಎಸ್‌ ಅಧಿಕಾರಿ ಹರ್ಷವರ್ಧನ್‌̧ ಬಲಚಿತ್ರದಲ್ಲಿ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಜೀಪ್

ಹಾಸನ: ಮೈಸೂರಿನ ಕೆಪಿಎನಿಂದ ಹಾಸನ ಜಿಲ್ಲಾ ಎಸ್‌ಪಿ ಕಚೇರಿಗೆ ಸೇವೆಗೆ ವರದಿ ಮಾಡಿಕೊಳ್ಳಲು ಬರುತ್ತಿದ್ದ ಮಧ್ಯಪ್ರದೇಶ ಮೂಲದ ಹರ್ಷವರ್ಧನ್‌ ಎಂಬ ಯುವ ಪ್ರೊಬೆಷನರಿ ಐಪಿಎಸ್ ಅಧಿಕಾರಿಯೊಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಹಾಸನ ಕಿತ್ತಾನೆ ಗಡಿ ಭಾಗದಲ್ಲಿ ನಡೆದಿದೆ.

ಕಿತ್ತಾನೆ ಗಡಿ ಬಳಿ ಅಪಘಾತ

ಪ್ರೊಬೆಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದ ಹರ್ಷವರ್ಧನ್‌ ಭಾನುವಾರ ಸಂಜೆ ಸೇವೆಗೆ ವರದಿ ಮಾಡಿಕೊಳ್ಳಲು ಮೈಸೂರು ಹೊಳೆ ನರಸೀಪುರ ಕಡೆಯಿಂದ KA-13-G-1386 ಜೀಪ್‌ನಲ್ಲಿ ಹಾಸನ ನಗರಕ್ಕೆ ಬರುತ್ತಿದ್ದರು. ಕೆಲವೇ ನಿಮಿಷಗಳಲ್ಲಿ ಹಾಸನ ತಲುಪಬೇಕು ಅನ್ನುವಷ್ಟರಲ್ಲಿ ಕಿತ್ತಾನೆ ಗಡಿ ಬಳಿ ಹರ್ಷಬರ್ಧನ್‌ ಪ್ರಯಾಣಿಸುತ್ತಿದ್ದ ಜೀಪ್‌ನ ಟಯರ್ ಸಿಡಿದು ವಾಹನ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಜೀಪ್ ನಜ್ಜುಗುಜ್ಜಾಗಿದೆ. ಇದರಿಂದ ಐಪಿಎಸ್ ಅಧಿಕಾರಿ ಅವರ ತಲೆಗೆ ಪೆಟ್ಟುಬಿದ್ದು ತೀವ್ರ ರಕ್ತಸ್ರಾವ ಆಗಿದೆ. ಚಾಲಕ ಮಂಜೇಗೌಡ ಎಂಬುವರಿಗೂ ಗಾಯಗಳಾಗಿವೆ.

ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಹರ್ಷವರ್ಧನ್‌

ಅಪಘಾತವನ್ನು ಗಮನಿಸಿದ ಸ್ಥಳೀಯರು ಕೂಡಲೇ ರಕ್ತಸ್ರಾವವಾಗಿ ಬಿದ್ದಿದ್ದ ಅಧಿಕಾರಿ ಮತ್ತು ಚಾಲಕನನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಐಪಿಎಸ್ ಅಧಿಕಾರಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಾಸನ ಪೊಲೀಸ್ ಇಲಾಖೆ, ಹರ್ಷವರ್ಧನ್‌ ಅವರ ಚಿಕಿತ್ಸೆ ಉಸ್ತುವಾರಿ ವಹಿಸಿಕೊಂಡಿತ್ತು. ಹಾಸನ ಎಸ್‌ಪಿ ಮೊಹಮದ್ ಸುಜಿತಾ, ಎಎಸ್‌ಪಿಗಳಾದ ತಮ್ಮಯ್ಯ, ವೆಂಕಟೇಶ ನಾಯ್ದು ಈ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದರು. ಸುದ್ದಿ ತಿಳಿದ ಕೂಡಲೇ ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

2023ರ ಬ್ಯಾಚ್‌ನ ಹರ್ಷವರ್ಧನ್‌ ಬಿಇ ಸಿವಿಲ್‌ ಇಂಜಿನಿಯರಿಂಗ್‌ ಓದಿಕೊಂಡಿದ್ದರು. ಮೈಸೂರು ಪೊಲೀಸ್ ತರಬೇತಿ ಕೇಂದ್ರದಲ್ಲಿ 4 ವಾರಗಳ ಕಾಲ ತರಬೇತಿ ಪೂರ್ಣಗೊಳಿಸಿದ್ದ ಹರ್ಷ 6 ತಿಂಗಳು ಹಾಸನದಲ್ಲಿ ಡಿಸ್ಟ್ರಿಕ್ಟ್ ಪ್ರಾಕ್ಟಿಕಲ್ ಟ್ರೈನಿಂಗ್ ಪಡೆಯಬೇಕಿತ್ತು.

 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ