logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಜೆಎನ್‌-1 ಆತಂಕದ ನಡುವೆಯೇ ಕೋವಿಡ್ ಸೋಂಕಿತರೊಬ್ಬರ ಸಾವು, ಕಳವಳ ಬೇಡ, ಮುಂಜಾಗ್ರತಾ ಕ್ರಮ ತಗೊಳ್ಳಬೇಕಾದ್ದು ಅವಶ್ಯ

ಕರ್ನಾಟಕದಲ್ಲಿ ಜೆಎನ್‌-1 ಆತಂಕದ ನಡುವೆಯೇ ಕೋವಿಡ್ ಸೋಂಕಿತರೊಬ್ಬರ ಸಾವು, ಕಳವಳ ಬೇಡ, ಮುಂಜಾಗ್ರತಾ ಕ್ರಮ ತಗೊಳ್ಳಬೇಕಾದ್ದು ಅವಶ್ಯ

HT Kannada Desk HT Kannada

Dec 20, 2023 05:45 PM IST

google News

ಕರ್ನಾಟಕದಲ್ಲಿ ಜೆಎನ್‌-1 ಆತಂಕದ ನಡುವೆಯೇ ಕೋವಿಡ್ ಸೋಂಕಿತರೊಬ್ಬರ ಸಾವು ಸಂಭವಿಸಿದೆ. ಆದರೆ ಈ ವಿಚಾರದಲ್ಲಿ ದಿಗಿಲುಗೊಳ್ಳುವುದು ಬೇಕಾಗಿಲ್ಲ. ಮುಂಜಾಗ್ರತಾ ಕ್ರಮ ತಗೊಳ್ಳಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

  • ಜೆಎನ್‌ 1 ಸೋಂಕಿನ ಕಳವಳ ಹೆಚ್ಚಾಗಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ. ಈ ನಡುವೆ, ಕೋವಿಡ್ ಟೆಸ್ಟ್ ಶುರುಮಾಡಿರುವ ಸರ್ಕಾರ, ಶನಿವಾರದ ವೇಳೆ ನಿತ್ಯವೂ 5,000 ಟೆಸ್ಟ್ ನಡೆಸುವುದಾಗಿ ಹೇಳಿದೆ.

ಕರ್ನಾಟಕದಲ್ಲಿ ಜೆಎನ್‌-1 ಆತಂಕದ ನಡುವೆಯೇ ಕೋವಿಡ್ ಸೋಂಕಿತರೊಬ್ಬರ ಸಾವು ಸಂಭವಿಸಿದೆ. ಆದರೆ ಈ ವಿಚಾರದಲ್ಲಿ ದಿಗಿಲುಗೊಳ್ಳುವುದು ಬೇಕಾಗಿಲ್ಲ.  ಮುಂಜಾಗ್ರತಾ ಕ್ರಮ ತಗೊಳ್ಳಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಜೆಎನ್‌-1 ಆತಂಕದ ನಡುವೆಯೇ ಕೋವಿಡ್ ಸೋಂಕಿತರೊಬ್ಬರ ಸಾವು ಸಂಭವಿಸಿದೆ. ಆದರೆ ಈ ವಿಚಾರದಲ್ಲಿ ದಿಗಿಲುಗೊಳ್ಳುವುದು ಬೇಕಾಗಿಲ್ಲ. ಮುಂಜಾಗ್ರತಾ ಕ್ರಮ ತಗೊಳ್ಳಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಜೆಎನ್‌ 1 ಸೋಂಕಿನ ಕಳವಳ ಹೆಚ್ಚಾಗಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ. ಕರ್ನಾಟಕದ ಆರೋಗ್ಯ ಇಲಾಖೆ ಇದನ್ನು ದೃಢಪಡಿಸಿದೆ. ಆದಾಗ್ಯೂ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಈ ಕುರಿತು ಕಳವಳ ಬೇಡ. ಸ್ವಲ್ಪ ಮುಂಜಾಗ್ರತಾ ಕ್ರಮವಹಿಸಿದರೆ ಸಾಕು ಎಂದು ಧೈರ್ಯತುಂಬಿದ್ದಾರೆ.

ಬೆಂಗಳೂರಿನಲ್ಲಿ ಐದು ದಿನಗಳ ಹಿಂದೆ ಕೋವಿಡ್ 19 ಸೋಂಕು ದೃಢಪಟ್ಟ ವ್ಯಕ್ತಿ ಮೃತಪಟ್ಟಿದ್ದಾರೆ. ಅವರ ಮರಣಕ್ಕೆ ಕಾರಣ ಜೆಎನ್‌ 1 ವೇರಿಯೆಂಟ್ ಅಥವಾ ಬೇರಾವುದಾದರೂ ಇರಬಹುದಾ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ (ಡಿ.20) ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ್ದಾರೆ. ಚಾಮರಾಜಪೇಟೆ ನಿವಾಸಿ 64 ವರ್ಷದ ವ್ಯಕ್ತಿಯೊಬ್ಬರು ಮಲ್ಲಿಗೆ ಆಸ್ಪತ್ರೆಗೆ ಡಿಸೆಂಬರ್ 14ರಂದು ದಾಖಲಾಗಿದ್ದರು. ಅವರು ಮಾರನೇ ದಿನವೇ ಮೃತಪಟ್ಟಿದ್ದಾರೆ. ಅವರಿಗೆ ಹೈಪರ್‌ಟೆನ್ಶನ್‌, ಶ್ವಾಸಕೋಶದ ಅನಾರೋಗ್ಯ ವಿಶೇಷವಾಗಿ ಅಸ್ತಮಾ ಮತ್ತು ಕ್ಷಯದ ಸಮಸ್ಯೆಗಳಿದ್ದವು. ಕಾರ್ಡಿಯೋಜೆನಿಕ್ ಶಾಕ್‌ ಆಗಿತ್ತು ಅವರಿಗೆ. ಅದೇ ರೀತಿ ನ್ಯುಮೋನಿಯಾ ಮತ್ತು ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು ಎಂದು ಸಚಿವರು ತಿಳಿಸಿದರು.

ಅವರು ಮೃತಪಟ್ಟಿರುವುದು ಜೆಎನ್‌ 1 ವೇರಿಯೆಂಟ್‌ನಿಂದಲೋ ಅಲ್ಲವೋ ಎಂಬುದನ್ನು ದೃಢಪಡಿಸುವುದು ಆರೋಗ್ಯ ಇಲಾಖೆಗೆ ಸಾಧ್ಯವಾಗಿಲ್ಲ. ದೇಶದಲ್ಲಿ ಪತ್ತೆಯಾಗಿರುವ ಹೊಸ ವೇರಿಯೆಂಟ್ ಕುರಿತು ದಿಗಿಲುಬೀಳಬೇಕಾದ್ದು ಏನೂ ಇಲ್ಲ. ಆದಾಗ್ಯೂ, ಎಚ್ಚರದಿಂದ ಇರಬೇಕಾದ್ದು ಅವಶ್ಯ ಎಂದು ಹೇಳಿದರು.

ಸರ್ಕಾರಿ ಮತ್ತು ಖಾಸಗಿ ಸೇರಿ ಎಲ್ಲ ಆಸ್ಪತ್ರೆಗಳಲ್ಲೂ ಮಾಸ್ಕ್ ಧರಿಸಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗಿದೆ. ಅವರು ಹೆಚ್ಚು ಅಪಾಯವನ್ನು ಎದುರಿಸುತ್ತಾರೆ ಎಂಬ ಕಾರಣಕ್ಕೆ ಈ ಆದೇಶ ನೀಡಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಕರ್ನಾಟಕದಲ್ಲಿ 1020 ಜನರಿಗೆ ಕೋವಿಡ್‌ ಟೆಸ್ಟ್ ಮಾಡಲಾಗಿದೆ. ನಿತ್ಯವೂ ಕೋವಿಡ್ ಟೆಸ್ಟ್ ನಡೆಯಲಿದ್ದು, ಶನಿವಾರದ ವೇಳೆ ಈ ಸಂಖ್ಯೆ 5000ಕ್ಕೆ ಏರಲಿದೆ ಎಂದು ಸಚಿವರು ತಿಳಿಸಿದರು.

ಕೋವಿಡ್ ಸೋಂಕು ಪರೀಕ್ಷೆಯನ್ನು ಯಾರಿಗೆಲ್ಲ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶೀತ, ಜ್ವರ, ಕೆಮ್ಮು ಸೇರಿ ಕೊರೊನಾ ಗುಣಲಕ್ಷಣ ಹೊಂದಿರುವವರು, ತೀವ್ರ ಉಸಿರಾಟ ಸಮಸ್ಯೆ ಹೊಂದಿರುವವರು, ಹೊರ ದೇಶಗಳಿಂದ, ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸಿ ಸೋಂಕು ಲಕ್ಷಣ ಹೊಂದಿದವರು, ವಿಶೇಷವಾಗಿ ಕೇರಳದಿಂದ ಬರುವವರ ಪೈಕಿ ಸೋಂಕು ಲಕ್ಷಣ ಉಳ್ಳವರು, ಹೃದ್ರೋಗ ಸೇರಿ ವಯೋಸಹಜ ಕಾಯಿಲೆ ಹಾಗೂ ವಿಷಮ ಶೀತ ಜ್ವರ ಲಕ್ಷಣ ಹೊಂದಿರುವವರು, ದೀರ್ಘ ಕಾಲದ ಅನಾರೋಗ್ಯ ಸಮಸ್ಯೆ ಹೊಂದಿರುವವರನ್ನು ಕೋವಿಡ್ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸದ್ಯದ ದತ್ತಾಂಶ ಪ್ರಕಾರ ಇಡೀ ದೇಶದಲ್ಲಿ ಜೆಎನ್‌ 1 ಕೇಸ್‌ನ 20 ಪ್ರಕರಣಗಳಷ್ಟೇ ದಾಖಲಾಗಿವೆ. ಇದರಲ್ಲಿ ಗೋವಾದಲ್ಲಿ 18, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ತಲಾ 1 ಪ್ರಕರಣಗಳಿವೆ.

ಇನ್ನೊಂದು ವರದಿ ಪ್ರಕಾರ, ಕಳೆದ ಎರಡು ವಾರಗಳ ಅವಧಿಯಲ್ಲಿ ದೇಶದಲ್ಲಿ ಕೋವಿಡ್ ಸೋಂಕಿತರ 16 ಸಾವುಗಳು ಸಂಭವಿಸಿವೆ. ಈ ಪೈಕಿ ಕೇರಳದಲ್ಲಿ ನಿನ್ನೆವರೆಗೂ 5 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲರೂ ಗಂಭೀರ ಸ್ವರೂಪದ ಬೇರೆಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು. ಆದರೆ, ಮೃತಪಟ್ಟ ವೇಳೆ ಅವರಿಗೆ ಕೋವಿಡ್ ಸೋಂಕು ಇತ್ತು ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ