logo
ಕನ್ನಡ ಸುದ್ದಿ  /  Karnataka  /  Hijab Row In Karnataka Supreme Court On Wednesday Said That It Would Take A Call On Listing The Hijab Case

Hijab row in Karnataka: ಮಾ.9ಕ್ಕೆ ಪರೀಕ್ಷೆ ಶುರು; ಹಿಜಾಬ್‌ ಧರಿಸಿ ಪರೀಕ್ಷೆಗೆ ಅವಕಾಶ ಕೋರಿ ಮತ್ತೆ ಮೊರೆ - ನೋಡೋಣ ಎಂದ ಸುಪ್ರೀಂ ಕೋರ್ಟ್‌

HT Kannada Desk HT Kannada

Feb 22, 2023 12:37 PM IST

ಭಾರತದ ಸುಪ್ರೀಂ ಕೋರ್ಟ್‌

  • Hijab row in Karnataka: ವಾರ್ಷಿಕ ಪರೀಕ್ಷೆಗಳು ಮಾ.9ಕ್ಕೆ ನಡೆಯಲಿದ್ದು, ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮತ್ತೆ ಮೊರೆ ಹೋಗಿದ್ದಾರೆ. ವಿಚಾರಣೆಯ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ನ್ಯಾಯಪೀಠ ಇಂದು ಹೇಳಿತು.

ಭಾರತದ ಸುಪ್ರೀಂ ಕೋರ್ಟ್‌
ಭಾರತದ ಸುಪ್ರೀಂ ಕೋರ್ಟ್‌ (ANI)

ಕರ್ನಾಟಕದ ಹಿಜಾಬ್‌ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಅಂತಿಮ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಜ್ಜಾಗುತ್ತಿರುವಾಗ ಈ ವಿಚಾರವಾಗಿ ವಿದ್ಯಾರ್ಥಿನಿಯರ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಿಜಾಬ್‌ ಧರಿಸಿಕೊಂಡೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಅವರು ಕೋರ್ಟ್‌ ಮುಂದೆ ಇರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hassan Sex Scandal: ಪ್ರಜ್ವಲ್‌ ರೇವಣ್ಣ ಹಾಸನ ಚುನಾವಣಾ ಟಿಕೆಟ್‌ಗೆ ಸಂವಹನದ ಕೊರತೆಯೇ ಕಾರಣ ಎಂದ ಬಿಜೆಪಿ ನಾಯಕ

BWSSB News: ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸುತ್ತಿರುವವರಿಗೆ ಮೇ 1 ರಿಂದ ನೋಟಿಸ್‌ ನೀಡಲು ಜಲಮಂಡಳಿ ನಿರ್ಧಾರ

ದಕ್ಣಿಣ ಕನ್ನಡದಲ್ಲಿ ಕೃಷಿ ರಕ್ಷಣೆಗೆ ಮಾತ್ರ ಆಯುಧ, ಚುನಾವಣೆಗೆ ಠಾಣೆಗಳಲ್ಲಿರಿಸಿದ ಶಸ್ತ್ರಾಸ್ತ್ರ ಹಿಂಪಡೆಯಲು ಜಿಲ್ಲಾಧಿಕಾರಿ ಆದೇಶ

Hassan Sex Scandal: ಬಿಜೆಪಿ ನಾಯಕನಿಗೆ ನಾನು ಮೊದಲು ಪೆನ್‌ಡ್ರೈವ್ ಕೊಟ್ಟಿದ್ದು, ಕಾಂಗ್ರೆಸ್‌ನವರಿಗೆ ಕೊಟ್ಟಿಲ್ಲ; ಕಾರ್ ಚಾಲಕನ ಹೇಳಿಕೆ

ಕರ್ನಾಟಕದಲ್ಲಿ ಹಿಜಾಬ್ ಸಮಸ್ಯೆಯ ಕುರಿತು ಅದರ ವಿಭಜಿತ ತೀರ್ಪಿನ ಬಗ್ಗೆ ವಕೀಲರು ಸುಪ್ರೀಂ ಕೋರ್ಟ್‌ನ ಗಮನಸೆಳೆದರು. ಈ ವಿಭಜಿತ ತೀರ್ಪಿನ ಕಾರಣವೇ ಹುಡುಗಿಯರು ಹಿಜಾಬ್ ಧರಿಸಿ ಕಾಲೇಜುಗಳಿಗೆ ಪ್ರವೇಶಿಸಲು ಅನುಮತಿಸಲಾಗುತ್ತಿಲ್ಲ ಎಂದು ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಪೀಠ ವಿಚಾರಣೆಗೆ ಪರಿಗಣಿಸಿದೆ.

ಮಾರ್ಚ್ 9 ರಂದು ಪರೀಕ್ಷೆಗಳು ಪ್ರಾರಂಭವಾಗಲಿವೆ ಎಂದು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಆಗ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ಈ ಕೇಸ್‌ ಅನ್ನು ವಿಚಾರಣೆಗೆ ಪರಿಗಣಿಸುವ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಈ ಪ್ರಕರಣವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ವಕೀಲ ಶಾದನ್ ಫರಾಸತ್ ಪ್ರಸ್ತಾಪಿಸಿದ್ದು, ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದಿಂದಾಗಿ ಹುಡುಗಿಯರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಹುಡುಗಿಯರು ಈಗಾಗಲೇ ಒಂದು ವರ್ಷವನ್ನು ಕಳೆದುಕೊಂಡಿದ್ದಾರೆ ಮತ್ತು ಮುಂಬರುವ ಪರೀಕ್ಷೆಗಳು ಮಾರ್ಚ್ 9 ರಂದು ನಡೆಯುತ್ತಿವೆ ಎಂದು ಫರಾಸತ್ ನ್ಯಾಯಾಲಯಕ್ಕೆ ತಿಳಿಸಿದರು.

ಈ ಪ್ರಕರಣವನ್ನು ಈ ಹಿಂದೆ ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ ಅವರು ಜನವರಿ 23 ರಂದು ಪ್ರಸ್ತಾಪಿಸಿದರು. ಈ ತಿಂಗಳು ಪ್ರಾಯೋಗಿಕ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ, ಅದಕ್ಕಾಗಿ ಪ್ರಕರಣದಿಂದ ತೊಂದರೆಗೀಡಾದ ಮುಸ್ಲಿಂ ವಿದ್ಯಾರ್ಥಿನಿಯರು ಹಾಜರಾಗಲು ತೀರ್ಮಾನಿಸಿದ್ದಾರೆ. ಆದ್ದರಿಂದ, ಈ ವಿಷಯದಲ್ಲಿ ಮಧ್ಯಂತರ ನಿರ್ದೇಶನಗಳ ಅಗತ್ಯವಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಆ ಸಮಯದಲ್ಲಿ, ತ್ರಿಸದಸ್ಯ ಪೀಠವು ಶೀಘ್ರದಲ್ಲೇ ವಿಚಾರಣೆ ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ನ್ಯಾಯಾಲಯವು ಅರ್ಜಿದಾರರಿಗೆ ಭರವಸೆ ನೀಡಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು, ಕಾಲೇಜು ಕ್ಯಾಂಪಸ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಲು ರಾಜ್ಯದ ಸರ್ಕಾರಿ ಕಾಲೇಜುಗಳಿಗೆ ಪರಿಣಾಮಕಾರಿಯಾಗಿ ಅಧಿಕಾರ ನೀಡಿದ ಸರ್ಕಾರಿ ಆದೇಶವನ್ನು (ಜಿಒ) ಪ್ರಶ್ನಿಸಿ ವಿಭಜಿತ ತೀರ್ಪು ನೀಡಿತ್ತು. ಈ ನಿಷೇಧವನ್ನು ಆರಂಭದಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು, ಅದು ರಾಜ್ಯದ ನಿಷೇಧವನ್ನು ಎತ್ತಿಹಿಡಿದಿತ್ತು.

ಗಮನಿಸಬಹುದಾದ ಸುದ್ದಿ

ಪ್ರತಿ ವರ್ಷ 5 ಸೆಂಟಿ ಮೀಟರ್‌ ಚಲಿಸುತ್ತಿದೆ ಭಾರತದ ಟೆಕ್ಟೋನಿಕ್‌ ಪ್ಲೇಟ್‌; ಹಿಮಾಲಯ ಭಾಗದಲ್ಲಿ ಭೂಕಂಪದ ಆತಂಕ

ಭಾರತೀಯ ಟೆಕ್ಟೋನಿಕ್ ಪ್ಲೇಟ್ ಪ್ರತಿ ವರ್ಷ ಸುಮಾರು 5 ಸೆಂಟಿಮೀಟರ್ ಚಲಿಸುತ್ತಿದೆ. ಇದು ಹಿಮಾಲಯದ ಉದ್ದಕ್ಕೂ ಒತ್ತಡದ ಶೇಖರಣೆಗೆ ಕಾರಣವಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಭೂಕಂಪಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಪ್ರಮುಖ ಹವಾಮಾನ ವಿಜ್ಞಾನಿ ಮತ್ತು ಭೂವಿಜ್ಞಾನ ತಜ್ಞರು ಎಚ್ಚರಿಸಿದ್ದಾರೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

US Visa: ಭಾರತವೇ ನಂಬರ್‌ 1, ಭಾರತಕ್ಕೇ ಆದ್ಯತೆ, 36% ಹೆಚ್ಚುವರಿ ವೀಸಾ ಕೊಟ್ಟಿದ್ದೇವೆ- ಎಂದ ಅಮೆರಿಕ ವೀಸಾ ಅಧಿಕಾರಿಗಳು

ಈಗ ನಮ್ಮ ಮೊದಲ ಆದ್ಯತೆ ಭಾರತ. ನಾವೀಗ ಕೋವಿಡ್‌ ಸಂಕಷ್ಟದಿಂದ ಹೊರಬಂದಿದ್ದೇವೆ. ಭಾರತದಲ್ಲಿ ಯಾರಾದರೂ ಅಮೆರಿಕ ವೀಸಾದ ಅಪಾಯಿಂಟ್‌ಮೆಂಟ್‌ ಅಥವಾ ವೀಸಾಗಾಗಿ ಕಾಯಬೇಕು ಎಂದಿಲ್ಲ. ಅದನ್ನು ನಾವು ಬಯಸುವುದೂ ಇಲ್ಲ ಎಂದು ಬ್ಯೂರೋ ಆಫ್ ಕಾನ್ಸುಲರ್ ಅಫೇರ್ಸ್‌ನ ವೀಸಾ ಸೇವೆಗಳ ಉಪ ಸಹಾಯಕ ಕಾರ್ಯದರ್ಶಿ ಜೂಲಿ ಸ್ಟಫ್ಟ್ ಹೇಳಿದರು. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು