logo
ಕನ್ನಡ ಸುದ್ದಿ  /  ಕರ್ನಾಟಕ  /  Bjp Mla Honey Trap Case: ಹನಿಟ್ರ್ಯಾಪ್‌ ಬಲೆಗೆ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ?; ಅಪರಿಚಿತ ಯುವತಿ ವಿರುದ್ಧ ದೂರು ದಾಖಲು

BJP MLA honey trap case: ಹನಿಟ್ರ್ಯಾಪ್‌ ಬಲೆಗೆ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ?; ಅಪರಿಚಿತ ಯುವತಿ ವಿರುದ್ಧ ದೂರು ದಾಖಲು

HT Kannada Desk HT Kannada

Nov 02, 2022 01:40 PM IST

google News

ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್.‌ ತಿಪ್ಪಾರೆಡ್ಡಿ.

  • BJP MLA honey trap case: ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ಹನಿಟ್ರ್ಯಾಪ್‌ಗೆ ಸಿಲುಕಿಸುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಅಪರಿಚಿತ ಯುವತಿ ವಿರುದ್ಧ ಅವರೇ ಸೈಬರ್‌ ಠಾಣೆಗೆ ದೂರು ದಾಖಲಿಸಿದ್ದಾರೆ. ಹನಿಟ್ರ್ಯಾಪ್‌ಗೆ ಸಿಲುಕಿಸುವ ಪ್ರಯತ್ನ ಹೇಗಾಯಿತು? ಇಲ್ಲಿದೆ ವಿವರ. 

ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್.‌ ತಿಪ್ಪಾರೆಡ್ಡಿ.
ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್.‌ ತಿಪ್ಪಾರೆಡ್ಡಿ. (ANI)

ಚಿತ್ರದುರ್ಗ: ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರನ್ನು ಹನಿಟ್ರ್ಯಾಪ್​ಗೆ​ ಬೀಳಿಸುವ ವಿಫಲ ಪ್ರಯತ್ನ ನಡೆದಿದೆ. ವಿಡಿಯೋ ಕಾಲ್​ ಮಾಡಿ ಶಾಸಕರನ್ನು ಹನಿಟ್ರ್ಯಾಪ್​ ಮಾಡಲು ಯತ್ನಿಸಲಾಗಿತ್ತು. ಆದರೆ ತತ್‌ಕ್ಷಣವೇ ಜಾಗೃತರಾದ ಅವರು ಈ ಕುರಿತು ಚಿತ್ರದುರ್ಗ ಸೈಬರ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಚಾರವನ್ನು ಮಾಧ್ಯಮದವರ ಜತೆಗೆ ಹಂಚಿಕೊಂಡಿರುವ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಕೊಟ್ಟಿರುವ ವಿವರಣೆ ಹೀಗಿದೆ -

ವಿಡಿಯೋ ಕಾಲ್‌ ಒಂದು ಬಂತು. ಅದನ್ನು ರಿಸೀವ್‌ ಮಾಡಿದಾಗ ಯುವತಿಯೊಬ್ಬಳು ಅಶ್ಲೀಲವಾಗಿ ಖಾಸಗಿ ಅಂಗಾಂಗ ತೋರಿಸಿದ್ದಳು. ಬೆಚ್ಚಿಬಿದ್ದು, ಕರೆ ಕಟ್‌ ಮಾಡಿ ಮೊಬೈಲ್‌ ಪಕ್ಕಕ್ಕೆ ಇರಿಸಿದ್ದೆ. ಇದಾಗಿ, ಆ ಅಶ್ಲೀಲ ವಿಡಿಯೋವನ್ನು ವಾಟ್ಸ್‌ಆಪ್‌ ಮೂಲಕ ನನ್ನ ನಂಬರಿಗೆ ರವಾನಿಸಿದ್ದಾರೆ.

ಕೂಡಲೇ ಆಪ್ತರನ್ನು ಕರೆದು ವಾಟ್ಸ್‌ಆಪ್‌ ವಿಡಿಯೋ ಕರೆ ಬಂದ ನಂಬರ್‌ ಬ್ಲಾಕ್‌ ಮಾಡಿಸಿದ್ದೇನೆ. ನಂತರ ಸೈಬರ್‌ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ಶುರುಮಾಡಿದ್ದಾರೆ. ಅದು ರಾಜಸ್ಥಾನ ಅಥವಾ ಒಡಿಶಾದಿಂದ ಬಂದ ಕರೆ ಎಂಬುದು ಪ್ರಾಥಮಿಕ ಮಾಹಿತಿ.

ಅಪರಿಚಿತ ಯುವತಿ ವಿಡಿಯೋ ಕರೆ ಮಾಡಿದ್ದಳು. ಕ್ಷೇತ್ರದ ಜನರೋ ಅಥವಾ ಇನ್ಯಾರೋ ಇರಬೇಕು ಎಂದು ಕರೆ ಸ್ವೀಕರಿಸಿದ್ದೆ. ಅವರ ಬಾಷೆ ಅರ್ಥವಾಗಿರಲಿಲ್ಲ. ಎರಡುಸಲ ಈ ರೀತಿ ಆಗಿತ್ತು. ಕೂಡಲೇ ಪತ್ನಿಯನ್ನು ಕರೆದು ನಂಬರ್‌ ಬ್ಲಾಕ್‌ ಮಾಡಿಸಿದ್ದೆ. ಕೂಡಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಮಾಹಿತಿ ನೀಡಿದ್ದೆ.

ಈಗ ತನಿಖೆ ಎಲ್ಲಿವರೆಗೆ ಬಂದಿದೆ ಎಂಬುದು ಗೊತ್ತಿಲ್ಲ. ಆ ಕುರಿತು ವಿಚಾರಿಸಿಲ್ಲ. ಈ ಘಟನೆಯಲ್ಲಿ ನನಗೆ ಯಾರ ಮೇಲೂ ಅನುಮಾನ ಇಲ್ಲ. ನನಗೆ ಯಾರೂ ವಿರೋಧಿಗಳೂ ಇಲ್ಲ ಎಂದು ತಿಪ್ಪಾರೆಡ್ಡಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅಪರಾಧ ಸುದ್ದಿಗಳು

ಹೊನ್ನಾಳಿ ಶಾಸಕ ರೇಣುಕಾಚಾರ್ಯರ ತಮ್ಮನ ಮಗ ನಾಪತ್ತೆ

Chandrashekhar missing case: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (Honnali BJP MLA MP Renukacharya) ಅವರ ಸಹೋದರನ ಪುತ್ರ ಚಂದ್ರಶೇಖರ್‌ ಭಾನುವಾರ ನಾಪತ್ತೆಯಾಗಿದ್ದಾರೆ. ಅವರ ಸುಳಿವು ಸಿಗದೆ ಸಂಕಟದಲ್ಲಿದೆ ಕುಟುಂಬ. ಶಾಸಕ ರೇಣುಕಾಚಾರ್ಯ ಕೂಡ ಕಳವಳಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

Fake Raid in Shivamogga: ಸರ್ಕಾರಿ ವಾಹನದಲ್ಲೇ ಬಂದು ವಸೂಲಿಗೆ ಇಳಿದ; ಜನರ ಪ್ರಶ್ನೆಗಳಿಗೆ ಅಂಜಿ ಓಡಿ ಹೋದ!; ಸ್ಕಾರ್ಪಿಯೋ ಈಗ ಪೊಲೀಸ್‌ ವಶ

ಆತ ಬಂದದ್ದು ಸರ್ಕಾರಿ ವಾಹನದಲ್ಲೇ. ವಸೂಲಿಗೂ ಇಳಿದ. ಜನರ ಪ್ರಶ್ನೆಗಳನ್ನು ಎದುರಿಸಲಾಗದೆ ತತ್ತರಿಸಿ ಅಲ್ಲಿಂದ ಕಾಲ್ಕಿತ್ತ. ಸ್ಕಾರ್ಪಿಯೋ ಈಗ ಪೊಲೀಸ್‌ ವಶದಲ್ಲಿದೆ. ಕುತೂಹಲಕಾರಿ ಪ್ರಕರಣ ಹಲವು ಸಂದೇಹಗಳನ್ನು ಹುಟ್ಟುಹಾಕಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ