Income Tax: ಆದಾಯ ತೆರಿಗೆ ರಿಟರ್ನ್ ಆನ್‌ಲೈನ್‌ನಲ್ಲಿ ಸಲ್ಲಿಕೆ ಹೇಗೆ? ಕೊನೆಯ ದಿನ ಗಡಿಬಿಡಿ ಮಾಡಿಕೊಳ್ಳಬೇಡಿ, ಇಲ್ಲಿದೆ ಸಿಂಪಲ್ ಟ್ರಿಕ್ಸ್
Jul 31, 2022 08:46 AM IST
ಆದಾಯ ತೆರಿಗೆ ರಿಟರ್ನ್ ಆನ್‌ಲೈನ್‌ನಲ್ಲಿ ಸಲ್ಲಿಕೆ ಹೇಗೆ?
- 2021-22ನೇ ಸಾಲಿನ ವೈಯಕ್ತಿಕ ಆದಾಯ ತೆರಿಗೆ (income tax) ಪಾವತಿದಾರರು ರಿಟರ್ನ್ ಸಲ್ಲಿಸಲು ಈಗಿನ ಆನ್‌ಲೈನ್ ವ್ಯವಸ್ಥೆ ಅತ್ಯಂತ ಸರಳವಾಗಿದೆ. ಆನ್ಲೈನ್ನಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಹೇಗೆ ಎಂಬ ಮಾಹಿತಿ ಇಲ್ಲಿದೆ. ಆದಾಯ ತೆರಿಗೆ ರಿಟರ್ನ್ಸ್ (ITR Return Filling) ಸಲ್ಲಿಸಲು ಇಂದು ಅಂದರೆ ಜುಲೈ 31 ಕೊನೆಯ ದಿನ (ITR filing last date 2022). ಈ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ, ಹೆಚ್ಚಿನ ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
ಬೆಂಗಳೂರು: ಆದಾಯ ತೆರಿಗೆ ರಿಟರ್ನ್ಸ್ (ITR Return Filling) ಸಲ್ಲಿಸಲು ಇಂದು ಅಂದರೆ ಜುಲೈ 31 ಕೊನೆಯ ದಿನ (ITR filing last date 2022). ಈ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ, ಹೆಚ್ಚಿನ ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಹೀಗಾಗಿ, ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇಂದು ಎಲ್ಲರೂ ಮುಂದಾಗಿದ್ದಾರೆ. ಭಾರತದ ಆದಾಯ ತೆರಿಗೆ ಕಾನೂನು ಪ್ರಕಾರ ಯಾರ ಅಕೌಂಟ್ ಅಡಿಟ್ ಮಾಡುವ ಅವಶ್ಯಕತೆ ಇಲ್ಲದವರು ಐಟಿ ರಿಟರ್ನ್ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ಕೊನೆಯ ದಿನದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಒಂದಿಷ್ಟು ಗಡಿಬಿಡಿ ಸಹಜ. ಆದರೆ, ಗಡಿಬಿಡಿ ಮಾಡಿಕೊಳ್ಳದೆ ಸರಳವಾಗಿ ಐಟಿಆರ್ ಫೈಲ್ ಮಾಡುವುದು ಹೇಗೆ ಎಂಬ ಮಾಹಿತಿ ಕನ್ನಡದಲ್ಲಿ ಇಲ್ಲಿ ನೀಡಲಾಗಿದೆ. 2021-22ನೇ ಸಾಲಿನ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರು ರಿಟರ್ನ್ ಸಲ್ಲಿಸಲು ಈಗಿನ ಆನ್‌ಲೈನ್ ವ್ಯವಸ್ಥೆ ಅತ್ಯಂತ ಸರಳವಾಗಿದೆ. ಆನ್ಲೈನ್ನಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯುವ ಮೊದಲು ತೆರಿಗೆ ಸ್ಲಾಬ್‌ಗಳನ್ನುtax (slab 2022) ತಿಳಿದುಕೊಳ್ಳೋಣ.
ಆದಾಯ ತೆರಿಗೆ ಸ್ಲಾಬ್ 2022
- 2,50,000 ರೂ.ವರೆಗಿನ ಆದಾಯ ಇರುವವರು ಹಳೆಯ ಮತ್ತು ಹೊಸ ತೆರಿಗೆ ಪದ್ದತಿಯಲ್ಲಿ ಯಾವುದೇ ತೆರಿಗೆ ಪಾವತಿಸಬೇಕಿಲ್ಲ.
-2,50,001 ರಿಂದ 5,00,000 ರೂ.ವರೆಗಿನ ಆದಾಯ ಇರುವವರು ಹಳೆ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ಶೇಕಡ 5ರಷ್ಟು ಆದಾಯ ತೆರಿಗೆ ಪಾವತಿಸಬೇಕು.
- 5,00,001 - 7,50,000 ರೂ.ವರೆಗಿನ ಆದಾಯ ಇರುವವರು ಹೊಸ ತೆರಿಗೆ ಪದ್ಧತಿ ಪ್ರಕಾರ 5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ಶೇಕಡ 10 ಮತ್ತು ಹಳೆ ತೆರಿಗೆ ಪದ್ಧತಿ ಪ್ರಕಾರ 5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ಶೇಕಡ 20ರಷ್ಟನ್ನು ಆದಾಯ ತೆರಿಗೆಯಾಗಿ ಪಾವತಿಸಬೇಕು.
- 7,50,001 - 10,00,000 ರೂ. ಆದಾಯ ಇರುವವರು ಹೊಸ ತೆರಿಗೆ ಪದ್ಧತಿ ಪ್ರಕಾರ 7.5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ಶೇಕಡ 15 ಮತ್ತು ಹಳೆ ತೆರಿಗೆ ಪದ್ಧತಿ ಪ್ರಕಾರ 7.5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ಶೇಕಡ 20ರಷ್ಟನ್ನು ಆದಾಯ ತೆರಿಗೆಯಾಗಿ ಪಾವತಿಸಬೇಕು.
- 10,00,001 - 12,50,000 ರೂ. ಆದಾಯ ಇರುವವರು ಹೊಸ ತೆರಿಗೆ ಪದ್ಧತಿ ಪ್ರಕಾರ 10 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ಶೇಕಡ 20 ಮತ್ತು ಹಳೆ ತೆರಿಗೆ ಪದ್ಧತಿ ಪ್ರಕಾರ 10 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ಶೇಕಡ 30ರಷ್ಟನ್ನು ಆದಾಯ ತೆರಿಗೆಯಾಗಿ ಪಾವತಿಸಬೇಕು.
- 12,50,001 - 15,00,000 ರೂ. ಆದಾಯ ಇರುವವರು ಹೊಸ ತೆರಿಗೆ ಪದ್ಧತಿ ಪ್ರಕಾರ 12.5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ಶೇಕಡ 25 ಮತ್ತು ಹಳೆ ತೆರಿಗೆ ಪದ್ಧತಿ ಪ್ರಕಾರ 12.5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ಶೇಕಡ 30ರಷ್ಟನ್ನು ಆದಾಯ ತೆರಿಗೆಯಾಗಿ ಪಾವತಿಸಬೇಕು.
- 15,00,000 ರೂ. ಆದಾಯ ಇರುವವರು ಹಳೆ ಮತ್ತು ಹೊಸ ತೆರಿಗೆ ಪದ್ಧತಿ ಪ್ರಕಾರ 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ಶೇಕಡ 30ರಷ್ಟನ್ನು ಆದಾಯ ತೆರಿಗೆಯಾಗಿ ಪಾವತಿಸಬೇಕು.
ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ?
ಮೊದಲೆಲ್ಲ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಎಂದರೆ ತುಂಬಾ ಕಷ್ಟದಾಯಕ ಕೆಲಸವಾಗಿತ್ತು. ಈಗಿನ ಇ-ಫೈಲಿಂಗ್ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅತ್ಯಂತ ಸುಲಭವಾದ ಕೆಲಸವಾಗಿದೆ. ಐಟಿ ರಿಟರ್ನ್ ಸಲ್ಲಿಕೆಗೆ ಹೆಚ್ಚು ಸಮಯವೂ ಬೇಕಾಗಿಲ್ಲ.
-ITR - 1 ಸಲ್ಲಿಸಲು ಮೊದಲು https://eportal.incometax.gov.in/ ವೆಬ್‌ಸೈಟ್‌ಗೆ ಹೋಗಿ.
- ಯೂಸರ್ ನೇಮ್ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ, ಪಾಸ್ವರ್ಡ್ ಮರೆತಿದ್ದರೆ ಫರ್ಗಟ್ ಪಾಸ್ವರ್ಡ್ ನೀಡಿ.
- ಲಾಗಿನ್ ಆದ ಬಳಿಕ ಕಾಣಿಸುವ ಡ್ಯಾಷ್‌ಬೋರ್ಡ್‌ನಲ್ಲಿ ಇ-ಫೈಲ್ ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ ಇನ್‌ಕಾಂ ಟ್ಯಾಕ್ಸ್ ರಿಟರ್ನ್‌ನಲ್ಲಿ ಫೈಲ್ ಇನ್‌ಕಾಂ ಟ್ಯಾಕ್ಸ್ ರಿಟರ್ನ್ ಆಯ್ಕೆಯನ್ನು ಕ್ಲಿಕ್ ಮಾಡಿ.
- ಅಸೆಸ್‌ಮೆಂಟ್ ವರ್ಷ ಆಯ್ಕೆಯಲ್ಲಿ 2021 – 22 ಕ್ಲಿಕ್ ಮಾಡಿ.
- ಮೋಡ್ ಆಫ್ ಫೈಲಿಂಗ್‌ನಲ್ಲಿ "ಆನ್‌ಲೈನ್ʼʼ ಆಯ್ಕೆಯನ್ನು ಕ್ಲಿಕ್ ಮಾಡಿ. ಎಲ್ಲಾದರೂ ಈ ಹಿಂದೆ ಅರ್ಧ ಫೈಲಿಂಗ್ ಮಾಡಿ ಸೇವ್ ಕೊಟ್ಟಿದ್ದರೆ ರೆಸ್ಯೂಂ ಫೈಲಿಂಗ್ ಅನ್ನು ಕ್ಲಿಕ್ ಮಾಡಿ ಮುಂದುವರೆಯಿರಿ.
- ಸ್ಟೇಟಸ್‌ನಲ್ಲಿ ನೀವು ಇಂಡಿವ್ಯೂಜಲ್ ಆಯ್ಕೆ ಮಾಡಿಕೊಳ್ಳಬಹುದು.
- ಯಾವ ಐಟಿಆರ್ ಫಾರ್ಮ್ ಎಂಬ ಆಯ್ಕೆ ಮುಂದೆ ಬರುತ್ತದೆ. ನೀವು ಯಾವ ಬಗೆಯ ಫಾರ್ಮ್ ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳುವ ಆಯ್ಕೆಯೂ ಇದೆ. ಬಹುತೇಕ ವೇತನದಾರರಿಗೆ ಐಟಿಆರ್ ಫಾರ್ಮ್ 1 ಇರುತ್ತದೆ.
- ಐಟಿಆರ್ ಫಾರ್ಮ್ ಆಯ್ಕೆ ಮಾಡಿಕೊಂಡ ಬಳಿಕ ಲೆಟ್ಸ್ ಗೆಟ್ ಸ್ಟಾರ್ಟೆಡ್ ಎಂಬ ಆಯ್ಕೆ ಕ್ಲಿಕ್ ಮಾಡಿ.
- ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಬೇಕು. ಅವುಗಳನ್ನು ಓದಿಕೊಂಡು ಟಿಕ್ ಮಾಡಿ. ಕಂಟಿನ್ಯೂ ಕ್ಲಿಕ್ ಮಾಡಿ. ಕಂಟಿನ್ಯೂ ಕ್ಲಿಕ್ ಮಾಡುವ ಮೊದಲು ಒಮ್ಮೆ ಫೈಲ್ ಮಾಡಿರುವ ಮಾಹಿತಿಗಳನ್ನು ಅವಲೋಕಿಸಿ ಮುಂದುವರೆಯಿರಿ.
- ಈ ಮೊದಲೇ ಫೈಲ್ ಮಾಡಲಾದ ಮಾಹಿತಿಗಳನ್ನು ಪರಿಶೀಲಿಸಿ. ಏನಾದರೂ ಬದಲಾವಣೆ ಇದ್ದರೆ ಸೇರಿಸಬಹುದು.
- ವಿವಿಧ ವಿಭಾಗಗಳಲ್ಲಿ ನಿಮ್ಮ ಆದಾಯ ಮತ್ತು ಕಡಿತ ವಿವರವನ್ನು ಬರೆಯಿರಿ. ಬಳಿಕ ಪ್ರೊಸೀಡ್ ಕ್ಲಿಕ್ ಮಾಡಿ.
- ಎಲ್ಲಾದರೂ ನೀವು ಟ್ಯಾಕ್ಸ್ ಸಲ್ಲಿಸಬೇಕಿದ್ದರೆ ಪೇ ನೌ ಅಥವಾ ಪೇ ಲೇಟರ್ (ಈಗಲೇ ಪಾವತಿಸಿ ಅಥವಾ ಮುಂದೆ ಪಾವತಿಸಿ) ಎಂಬ ಆಯ್ಕೆಗಳಲ್ಲಿ ಕ್ಲಿಕ್ ಮಾಡಿ.
-ಪೇ ನೌ ಆಯ್ಕೆ ಮಾಡಿದರೆ ಬಿಎಸ್‌ಆರ್ ಕೋಡ್ ಮತ್ತು ಚಲನ್ ಸೀರಿಯಲ್ ಸಂಖ್ಯೆಯನ್ನು ಎಚ್ಚರಿಕೆಯಿಂದ ನಮೂದಿಸಿ.
- ಬಳಿಕ ಪ್ರಿವ್ಯೂ ಮತ್ತು ಸಬ್‌ಮಿಟ್ ಯುವರ್ ರಿಟರ್ನ್ ಕ್ಲಿಕ್ ಮಾಡಿ.
- ನಿಮಗೆ ಯಾವುದೇ ತೆರಿಗೆ ಪಾವತಿ ಅವಶ್ಯಕತೆ ಇಲ್ಲದಿದ್ದರೆ ಅಥವಾ ನಿಮಗೆ ರಿಫಂಡ್ ಅರ್ಹತೆಯಿದ್ದರೆ ಪ್ರಿವ್ಯೂ ರಿಟರ್ನ್ ಬಟನ್ ಕ್ಲಿಕ್ ಮಾಡಿ. ಬಳಿಕ ಪ್ರಿವ್ಯೂ ಆಂಡ್ ಸಬ್‌ಮಿಟ್ ಬಟನ್ ಕಾಣಿಸಿಕೊಳ್ಳುತ್ತದೆ.
- ಪ್ರೊಸೀಡ್ ಟು ವ್ಯಾಲಿಡೇಷನ್ ಕ್ಲಿಕ್ ಮಾಡಿ. ಸ್ಥಳ ಕ್ಲಿಕ್ ಮಾಡಿ. ಸಬ್‌ಮಿಟ್ ಮಾಡಿ.
- ಪ್ರೊಸೀಡ್ ಟು ವೆರಿಫಿಕೇಷನ್ ಕ್ಲಿಕ್ ಮಾಡಿ
-ವೆರಿಫಿಕೇಷನ್‌ಗೆ ಸೂಕ್ತ ಆಯ್ಕೆ ಕ್ಲಿಕ್ ಮಾಡಿ ಮುಂದುವರೆಯಿರಿ. ಇ-ವೇರಿಫಿಕೇಷನ್ ಮಾಡುವುದು ಕಡ್ಡಾಯವಾಗಿರುತ್ತದೆ.
- ವೇರಿಫಿಕೇಷನ್ ಪೂರ್ಣಗೊಂಡ ಬಳಿಕ ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕಾರ್ಯ ಪೂರ್ಣಗೊಳ್ಳುತ್ತದೆ.
ವಿಭಾಗ