logo
ಕನ್ನಡ ಸುದ್ದಿ  /  ಕರ್ನಾಟಕ  /  ಹುಬ್ಬಳ್ಳಿ ಕ್ರೈಮ್: ಮೂವರು ಅಂತರಜಿಲ್ಲಾ ಮನೆಗಳ್ಳರ ಬಂಧನ; ಬೈಕ್ ಏರಿ ಪೊಲೀಸ್ ಕಮಿಷನರ್ ನಗರ ಸಂಚಾರ

ಹುಬ್ಬಳ್ಳಿ ಕ್ರೈಮ್: ಮೂವರು ಅಂತರಜಿಲ್ಲಾ ಮನೆಗಳ್ಳರ ಬಂಧನ; ಬೈಕ್ ಏರಿ ಪೊಲೀಸ್ ಕಮಿಷನರ್ ನಗರ ಸಂಚಾರ

Jayaraj HT Kannada

Oct 27, 2024 01:52 PM IST

google News

ಹುಬ್ಬಳ್ಳಿ ಕ್ರೈಮ್: ಮೂವರು ಅಂತರಜಿಲ್ಲಾ ಮನೆಗಳ್ಳರ ಬಂಧನ; ಪೊಲೀಸ್ ಕಮಿಷನರ್ ನಗರ ಸಂಚಾರ

    • Hubli Crime News: ಕುಖ್ಯಾತ ಅಂತರಜಿಲ್ಲಾ ಮನೆಕಳ್ಳರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ, ನಗರದಲ್ಲಿ ಕಳೆದ ಹಲವಾರು ದಿನಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ತಡೆಗಟ್ಟಲು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್‌, ನಗರದಲ್ಲಿ ರಾತ್ರಿ ಬೈಕ್ ಮೇಲೆ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಹುಬ್ಬಳ್ಳಿ ಕ್ರೈಮ್: ಮೂವರು ಅಂತರಜಿಲ್ಲಾ ಮನೆಗಳ್ಳರ ಬಂಧನ; ಪೊಲೀಸ್ ಕಮಿಷನರ್ ನಗರ ಸಂಚಾರ
ಹುಬ್ಬಳ್ಳಿ ಕ್ರೈಮ್: ಮೂವರು ಅಂತರಜಿಲ್ಲಾ ಮನೆಗಳ್ಳರ ಬಂಧನ; ಪೊಲೀಸ್ ಕಮಿಷನರ್ ನಗರ ಸಂಚಾರ

ಹುಬ್ಬಳ್ಳಿ: ಮನೆ ಕಳ್ಳತನ ಮಾಡುತ್ತಿದ್ದ ಮೂವರು ಅಂತರಜಿಲ್ಲಾ ಕಳ್ಳರನ್ನು ಹಳೇ ಹುಬ್ಬಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಳ್ಳರಿಂದ ನಗದು ಸೇರಿದಂತೆ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಮಿಶ್ರೀಕೋಟಿಯ ಯುನುಸ್ ಅಬ್ದುಲ್ ಖಾದರ (62), ಆನಂದ ನಗರದ ಸಿದ್ದಪ್ಪ ಯಮನಪ್ಪ ವಾಲ್ಮಿಕಿ (27) ಹಾಗೂ ಮಯೂರ ನಗರದ ಉಮೇಶ ಲಕ್ಷ್ಮಣ(32) ಎಂಬುವರನ್ನು ಬಂಧಿಸಿರುವ ಪೊಲೀಸರು ಅವರಿಂದ 200 ಗ್ರಾಂ ಬಂಗಾರದ ಒಡವೆ, 200 ಗ್ರಾಂ ತೂಕದ ಬೆಳ್ಳಿ ಒಡವೆ, ಒಂದು ಮೊಬೈಲ್ ಹಾಗೂ 45 ಸಾವಿರ ರೂಪಾಯಿ ನಗದು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತರ ವಿರುದ್ಧ ಹುಬ್ಬಳ್ಳಿ, ಗದಗ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಎಸ್ಎಚ್ ಯಳ್ಳೂರ ನೇತೃತ್ವದಲ್ಲಿ ಕೆವಿ ಬಂಡಿಯವರ ಹಾಗೂ ಸಿಬ್ಬಂದಿ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಕ್ ಏರಿ ರಾತ್ರಿ ವೇಳೆ ಪೊಲೀಸ್ ಕಮಿಷನರ್ ನಗರ ಸಂಚಾರ

ಛೋಟಾ ಮುಂಬೈನ ಕುಖ್ಯಾತಿ ಹೊಂದಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳೆದ ಹಲವಾರು ದಿನಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ತಡೆಗಟ್ಟಲು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಹಾಗೂ ಅವರ ತಂಡ ಅವಳಿ ನಗರದಲ್ಲಿ ಮತ್ತೊಂದು ಮಹತ್ವದ ಕಾರ್ಯ ಕೈಗೆತ್ತಿಕೊಂಡಿದೆ.

ಹುಬ್ಬಳ್ಳಿಯ ದಕ್ಷಿಣ ವಿಭಾಗದಲ್ಲಿ ಶನಿವಾರ ರಾತ್ರಿ ಬೈಕ್ ಮೇಲೆ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಅವರಿಂದ ಮೆಚ್ಚುಗೆ ಗಳಿಸಿದರು. ಜೊತೆಗೆ ತಪ್ಪು ಮಾಡುತ್ತಿದ್ದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡು ಬಿಸಿ ಮುಟ್ಟಿಸಿದರು.

ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ಡಿಸಿಪಿಗಳಾದ ಮಹಾನಿಂಗ್ ನಂದಗಾವಿ, ಆರ್ ರವೀಶ್ ಅವರಿಗೆ ಎಸಿಪಿ ಶಿವಪ್ರಕಾಶ್ ನಾಯ್ಕ ಹಾಗೂ ಉಮೇಶ್ ಚಿಕ್ಕಮಠ ಸಾಥ್ ನೀಡಿದರು. ಅವರೊಂದಿಗೆ ಖಾಕಿಪಡೆ ಕೂಡ ಬೈಕಿನಲ್ಲಿ ಕಾರ್ಯಾಚರಣೆ ನಡೆಸಿದರು. ಹಳೇ ಹುಬ್ಬಳ್ಳಿ, ಕಸಬಾ ಪೇಟೆ, ಘಂಟಿಕೇರಿ, ಬೆಂಡಿಗೇರಿ, ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ಚೆಕಪೋಸ್ಟ್ ಮೂಲಕ ವಾಹನ ತಪಾಸಣೆ ನಡೆಸಲಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ