logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿಗೆ 100 ಜನ ಬಂದ್ರೆ 5ಜನ ಮಾತ್ರ ವಾಪಸ್ ಹೋಗ್ತಾರೆ; ಬೆಳವಣಿಗೆ ಒತ್ತಡ ಹೀಗಿದೆ ನೋಡಿ ಅಂದ್ರು ಸಚಿವ ಎಂಬಿ ಪಾಟೀಲ್‌

ಬೆಂಗಳೂರಿಗೆ 100 ಜನ ಬಂದ್ರೆ 5ಜನ ಮಾತ್ರ ವಾಪಸ್ ಹೋಗ್ತಾರೆ; ಬೆಳವಣಿಗೆ ಒತ್ತಡ ಹೀಗಿದೆ ನೋಡಿ ಅಂದ್ರು ಸಚಿವ ಎಂಬಿ ಪಾಟೀಲ್‌

Umesh Kumar S HT Kannada

Nov 28, 2024 01:25 PM IST

google News

ಬೆಂಗಳೂರಿಗೆ 100 ಜನ ಬಂದ್ರೆ 5ಜನ ಮಾತ್ರ ವಾಪಸ್ ಹೋಗ್ತಾರೆ; ಬೆಳವಣಿಗೆ ಒತ್ತಡ ಹೀಗಿದೆ ನೋಡಿ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಹೇಳಿದ್ದಾರೆ.

  • Bengaluru City Growth: ಬೆಂಗಳೂರು ನಗರದ ಮೇಲೆ ಬೆಳವಣಿಗೆ ಒತ್ತಡ ಬಹಳ ಹೆಚ್ಚಿದೆ. ಈ ಬೆಳವಣಿಗೆಯ ಒತ್ತಡದ ಪ್ರಮಾಣ ಸೂಚಿಸುವುದಕ್ಕಾಗಿ, “ಬೆಂಗಳೂರಿಗೆ 100 ಜನ ಬಂದ್ರೆ 5ಜನ ಮಾತ್ರ ವಾಪಸ್ ಹೋಗ್ತಾರೆ” ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಸಂಚಾರ ದಟ್ಟಣೆ ಕುರಿತು ಅವರೇನು ಹೇಳಿದ್ರು - ಇಲ್ಲಿದೆ ಆ ವಿವರ.

ಬೆಂಗಳೂರಿಗೆ 100 ಜನ ಬಂದ್ರೆ 5ಜನ ಮಾತ್ರ ವಾಪಸ್ ಹೋಗ್ತಾರೆ; ಬೆಳವಣಿಗೆ ಒತ್ತಡ ಹೀಗಿದೆ ನೋಡಿ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಹೇಳಿದ್ದಾರೆ.
ಬೆಂಗಳೂರಿಗೆ 100 ಜನ ಬಂದ್ರೆ 5ಜನ ಮಾತ್ರ ವಾಪಸ್ ಹೋಗ್ತಾರೆ; ಬೆಳವಣಿಗೆ ಒತ್ತಡ ಹೀಗಿದೆ ನೋಡಿ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ, “ಬೆಂಗಳೂರಿಗೆ 100 ಜನ ಬಂದ್ರೆ 5ಜನ ಮಾತ್ರ ವಾಪಸ್ ಹೋಗ್ತಾರೆ” ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಬೆಂಗಳೂರಿನ ಮೇಲೆ ಇರುವ ಬೆಳವಣಿಗೆಯ ಒತ್ತಡವನ್ನು ವಿವರಿಸಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರು ನವೆಂಬರ್ 22 ರಂದು ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಬೆಂಗಳೂರು ತನ್ನ ಮೂಲಸೌಕರ್ಯಗಳ ಮೇಲೆ ಕ್ಷಿಪ್ರ ಬೆಳವಣಿಗೆಯ ಸ್ಥಳಗಳ ಅಪಾರ ಒತ್ತಡದ ಕಡೆಗೆ ಹೆಚ್ಚು ಗಮನ ಸೆಳೆಯುವಂತೆ ಮಾತನಾಡಿದರು ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಸಂಚಾರ ದಟ್ಟಣೆ ಮತ್ತು ಮಳೆ-ಪ್ರೇರಿತ ಅಡಚಣೆಗಳು ಸೇರಿದಂತೆ ಬೆಂಗಳೂರಿನ ಮೂಲಸೌಕರ್ಯ ಸವಾಲುಗಳು ಆಗಾಗ್ಗೆ ಗಮನಸೆಳೆಯುತ್ತವೆ. ಆದರೆ, ನಗರದಲ್ಲಿ ಅವೆಲ್ಲವೂ ಕ್ರಮೇಣ ಸುಧಾರಣೆಯಾಗುತ್ತ ಸಾಗುತ್ತದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಬೆಂಗಳೂರಿಗರ ನೆಲೆಯಷ್ಟೇ ಅಲ್ಲ, ದೇಶದೆಲ್ಲೆಡೆಯ ಜನರೂ ಇದ್ದಾರೆ ಇಲ್ಲಿ

"ಬೆಂಗಳೂರು ಬೆಂಗಳೂರಿಗರ ತವರು ಮಾತ್ರವಲ್ಲ. ಇದು ಉತ್ತರ ಪ್ರದೇಶ, ಉತ್ತರ ಭಾರತ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಅದರಾಚೆಗಿನ ವ್ಯಕ್ತಿಗಳನ್ನು ಆಕರ್ಷಿಸುತ್ತದೆ. ಅನೇಕ ಯುವಕರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಇಲ್ಲಿಗೆ ಬರುತ್ತಾರೆ. ನಾವು ವಲಸಿಗರಲ್ಲಿ ಹೆಚ್ಚಳವನ್ನು ಸಹ ನೋಡುತ್ತಿದ್ದೇವೆ. ಇದು ಕಡಿಮೆ ರಿವರ್ಸ್ ವಲಸೆಗೆ ಕಾರಣವಾಗಿದೆ, ಇದು ನಮ್ಮ ಮೂಲಸೌಕರ್ಯಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ”ಎಂದು ಸಚಿವ ಎಂಬಿ ಪಾಟೀಲ್ ವಿವರಿಸಿದ್ದಾಗಿ ಮನಿಕಂಟ್ರೋಲ್ ವರದಿ ಮಾಡಿದ್ದಾರೆ.

ಸಂಚಾರ ದಟ್ಟಣೆ ಇಲ್ಲಷ್ಟೇ ಅಲ್ಲ, ಬೇರೆ ಬೇರೆ ನಗರಗಳಲ್ಲೂ ಇವೆ. ಇತ್ತೀಚೆಗೆ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಯಾನ್‌ ಫ್ರಾನ್ಸಿಸ್ಕೋ ಹೋಗಿದ್ದರು. ಅಲ್ಲಿ ಅವರಿಗೆ ಕಾನ್ಸುಲ್ ಜನರಲ್‌ ನಿವಾಸಕ್ಕೆ ಡಿನ್ನರ್‌ ಹೋಗುವುದಕ್ಕೆ ಒಂದೂ ಮುಕ್ಕಾಲು ಗಂಟೆ ಬೇಕಾಯಿತು. ಆದರೂ ಅಲ್ಲಿನ ಜನ ಅದರ ಬಗ್ಗೆ ದೂರುವುದಿಲ್ಲ ಎಂದು ಸಂಚಾರ ದಟ್ಟಣೆ ಸಮಸ್ಯೆ ಹೊರಗೂ ಇದೆ ಎಂಬ ಹೋಲಿಕೆ ನೀಡಿದರು.

ವೇಗವಾಗಿ ಬೆಳೆಯುತ್ತಿರುವ 25 ಜಾಗತಿಕ ನಗರಗಳ ಪೈಕಿ ಬೆಂಗಳೂರು ಕೂಡ ಒಂದು. ಇಲ್ಲಿನ ಜನ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಕನ್ನಡೇತರರು ಇದ್ದಾರೆ. ಬೆಂಗಳೂರಿನ ಬೆಳವಣಿಗೆ ಅಂದರೆ ಅದು ಎರಡು ಅಲಗಿನ ಕತ್ತಿ ಇದ್ದ ಹಾಗೆ ಎಂದು ಸಚಿವ ಪಾಟೀಲ್ ವಿವರಿಸಿದ್ದಾಗಿ ವರದಿ ಹೇಳಿದೆ.

ಬೆಂಗಳೂರು ಜನಸಂಖ್ಯಾ ಬೆಳವಣಿಗೆ

ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ಪ್ರಕಾರ, ಬೆಂಗಳೂರು ನಗರದ ಜನಸಂಖ್ಯೆಯು2024 ರಲ್ಲಿ 1,40,08,300 ಎಂದು ಅಂದಾಜಿಸಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ, ಬೆಂಗಳೂರಿನ ಜನಸಂಖ್ಯೆಯು 1950 ರಲ್ಲಿ ಕೇವಲ 7,45,999 ಆಗಿತ್ತು. ಇದು ದಶಕಗಳಲ್ಲಿ ಆಗಿರುವ ಗಮನಾರ್ಹ ಜನಸಂಖ್ಯಾ ಬೆಳವಣಿಗೆಯನ್ನು ತೋರಿಸುತ್ತದೆ. ಇದಲ್ಲದೆ, ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ನಗರದ ಜನಸಂಖ್ಯೆಯು 2025 ರ ವೇಳೆಗೆ 18 ಮಿಲಿಯನ್ ತಲುಪಬಹುದು ಎಂದು ಊಹಿಸುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ