logo
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಹುಬ್ಬಳ್ಳಿಯಿಂದ ರಿಷಿಕೇಶ, ಬೆಂಗಳೂರಿನಿಂದ ಗುಜರಾತ್‌ಗೆ ವಿಶೇಷ ರೈಲು, ಮಾಲ್ಡಾ ರೈಲು ವಿಸ್ತರಣೆ; ಯಾವಾಗ, ಎಷ್ಟು ದಿನ

Indian Railways: ಹುಬ್ಬಳ್ಳಿಯಿಂದ ರಿಷಿಕೇಶ, ಬೆಂಗಳೂರಿನಿಂದ ಗುಜರಾತ್‌ಗೆ ವಿಶೇಷ ರೈಲು, ಮಾಲ್ಡಾ ರೈಲು ವಿಸ್ತರಣೆ; ಯಾವಾಗ, ಎಷ್ಟು ದಿನ

Umesha Bhatta P H HT Kannada

Nov 10, 2024 11:35 AM IST

google News

ಭಾರತೀಯ ರೈಲ್ವೆಯು ಹುಬ್ಬಳ್ಳಿಯಿಂದ ರಿಷಿಕೇಷಕ್ಕೆ ವಿಶೇಷ ರೈಲು ಸೇವೆಯನ್ನು ವಿಸ್ತರಿಸಿದೆ.

    • Indian Railways Updates: ಭಾರತೀಯ ರೈಲ್ವೆಯು ಹುಬ್ಬಳ್ಳಿ, ಬೆಂಗಳೂರಿನಿಂದ ಗುಜರಾತ್‌, ಉತ್ತರಾಖಂಡಕ್ಕೆ ವಿಶೇಷ ರೈಲುಗಳನ್ನು ಓಡಿಸಲಿದ್ದು. ಈಗಾಗಲೇ ಇರುವ ರೈಲುಗಳ ಸೇವೆ ವಿಸ್ತರಣೆ ಮಾಡಿದೆ. 
ಭಾರತೀಯ ರೈಲ್ವೆಯು ಹುಬ್ಬಳ್ಳಿಯಿಂದ ರಿಷಿಕೇಷಕ್ಕೆ ವಿಶೇಷ ರೈಲು ಸೇವೆಯನ್ನು ವಿಸ್ತರಿಸಿದೆ.
ಭಾರತೀಯ ರೈಲ್ವೆಯು ಹುಬ್ಬಳ್ಳಿಯಿಂದ ರಿಷಿಕೇಷಕ್ಕೆ ವಿಶೇಷ ರೈಲು ಸೇವೆಯನ್ನು ವಿಸ್ತರಿಸಿದೆ.

ಬೆಂಗಳೂರು: ಛತ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ತೆರವುಗೊಳಿಸಲು, ನೈಋತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ - ಉತ್ತರಾಖಂಡ ರಾಜ್ಯದ ಯೋಗ ನಗರಿ ಋಷಿಕೇಶ ನಿಲ್ದಾಣಗಳ ನಡುವೆ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಿದೆ. ಇದಲ್ಲದೇ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಭಗತ್ ಕಿ ಕೋಠಿ ನಿಲ್ದಾಣಗಳ ನಡುವೆ 2 ಟ್ರಿಪ್ ವಿಶೇಷ ರೈಲು ಸೇವೆಯನ್ನೂ ವಿಸ್ತರಣೆ ಮಾಡಲಾಗಿದೆ.ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ಮಾಲ್ಡಾ-ಎಸ್‌ಎಂವಿಟಿ ಬೆಂಗಳೂರು-ಮಾಲ್ಡಾ ಟೌನ್ ನಿಲ್ದಾಣಗಳ ನಡುವೆ ಕಾಯ್ದಿರಿಸದ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಪೂರ್ವ ರೈಲ್ವೆ ತಿಳಿಸಿದೆ. ಪ್ರಯಾಣಿಕರು ಅಧಿಕೃತ ವೆಬ್ಸೈಟ್ (www.enquiry.indianrail.gov.in) ಗೆ ಭೇಟಿ ನೀಡಿ, NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಸಮಯವನ್ನು ಪರಿಶೀಲಿಸಬಹುದು ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ ನಿಲ್ದಾಣಗಳ ನಡುವೆ 3 ಟ್ರಿಪ್ ವಿಶೇಷ ರೈಲು ಸೇವೆ

ರೈಲು ಸಂಖ್ಯೆ 07363 ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು 2024ರ ನವೆಂಬರ್ 11 ರಿಂದ 25 ರವರೆಗೆ ಪ್ರತಿ ಸೋಮವಾರ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ರಾತ್ರಿ 8 :30 ಗಂಟೆಗೆ ಹೊರಟು, ಬುಧವಾರ ರಾತ್ರಿ 11.30 ಗಂಟೆಗೆ ಯೋಗ ನಗರಿ ಋಷಿಕೇಶ ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07364 ಯೋಗ ನಗರಿ ಋಷಿಕೇಶ-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 2024 ರ ನವೆಂಬರ್ 14 ರಿಂದ 28, ರವರೆಗೆ ಪ್ರತಿ ಗುರುವಾರ ಬೆಳಿಗ್ಗೆ 06:15 ಗಂಟೆಗೆ ಯೋಗ ನಗರಿ ಋಷಿಕೇಶ ನಿಲ್ದಾಣದಿಂದ ಹೊರಟು, ಶನಿವಾರ ಬೆಳಿಗ್ಗೆ 06:30 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ.

ಈ ರೈಲು ಎರಡು ದಿಕ್ಕುಗಳಲ್ಲಿ ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಚಾರ್ಡ್ ಲೈನ್, ಅಹ್ಮದ್ ನಗರ, ಕೋಪರ್ ಗಾಂವ್ , ಮನ್ಮಾಡ್ ಜಂ, ಭೂಸಾವಲ್ ಜಂ., ಹರ್ದಾ, ಇಟಾರ್ಸಿ ಜಂ., ರಾಣಿ ಕಮಲಾಪತಿ, ಬೀನಾ ಜಂ., ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ ನಿಲ್ದಾಣ, ಗ್ವಾಲಿಯರ್ ಜಂ., ಆಗ್ರಾ ಕ್ಯಾಂಟ್, ಮಥುರಾ ಜಂ., ಹಜರತ್ ನಿಜಾಮುದ್ದೀನ್ ಜಂ., ಘಾಜಿಯಾಬಾದ್ ಜಂ., ಮೀರತ್ ಸಿಟಿ ಜಂ., ಮುಜಾಫರ್ ನಗರ, ಡಿಯೋಬಂದ್, ತಾಪ್ರಿ ಜಂ., ರೂರ್ಕಿ ಮತ್ತು ಹರಿದ್ವಾರ ನಿಲ್ದಾಣಗಲ್ಲಿ ನಿಲುಗಡೆ ಇರಲಿವೆ.

ಈ ವಿಶೇಷ ರೈಲಿನಲ್ಲಿ 2ನೇ ದರ್ಜೆ ಹವಾನಿಯಂತ್ರಿತ-1, 3ನೇ ದರ್ಜೆ ಹವಾನಿಯಂತ್ರಿತ-4, ಸ್ಲೀಪರ್ ಕ್ಲಾಸ್-9, ಎಸ್ಎಲ್ಆರ್/ಡಿ ಮತ್ತು ಗಾರ್ಡ್ಸ್ ಬ್ರೇಕ್ ವ್ಯಾನ್ ಮತ್ತು ಜನರೇಟರ್ ಕಾರ್ ತಲಾ-1 ಬೋಗಿಗಳು ಸೇರಿದಂತೆ ಒಟ್ಟು 16 ಬೋಗಿಗಳು ಇರಲಿವೆ.

ಬೆಂಗಳೂರು-ಭಗತ್ ಕಿ ಕೋಠಿ ನಿಲ್ದಾಣಗಳ ನಡುವೆ 2 ಟ್ರಿಪ್ ವಿಶೇಷ ರೈಲು ಸೇವೆ ವಿಸ್ತರಣೆ

ರೈಲು ಸಂಖ್ಯೆ 06587 ಎಸ್ಎಂವಿಟಿ ಬೆಂಗಳೂರು-ಭಗತ್ ಕಿ ಕೋಠಿ ವಿಶೇಷ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ಸರ್ ಎಂ ವಿಶ್ವೇರಯ್ಯ ಟರ್ಮಿನಲ್ ನಿಲ್ದಾಣದಿಂದ 2024 ರ ನವೆಂಬರ್ 12 ಮತ್ತು 19 ರಂದು ಸಂಜೆ 5:45 ಗಂಟೆಗೆ ಹೊರಟು, ಮೂರನೇ ದಿನ ಮಧ್ಯಾಹ್ನ 12:45 ಗಂಟೆಗೆ ಭಗತ್ ಕಿ ಕೋಠಿ ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06588 ಭಗತ್-ಕಿ-ಕೋಠಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು 2024ರ ನವೆಂಬರ್ 15 ಮತ್ತು 22 ರಂದು ಭಗತ್-ಕಿ-ಕೋಠಿಯಿಂದ ಬೆಳಿಗ್ಗೆ 05 ಗಂಟೆಗೆ ಹೊರಟು, ಮರುದಿನ ರಾತ್ರಿ 11 :30 ಗಂಟೆಗೆ ಎಸ್ಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.

ಈ ರೈಲು ಎರಡು ದಿಕ್ಕಿನ ಮಾರ್ಗದಲ್ಲಿ, ಬಾಣಸವಾಡಿ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಸತಾರಾ, ಪುಣೆ, ಲೋನಾವಲ , ಕಲ್ಯಾಣ್, ವಸಾಯಿ ರೋಡ್, ವಾಪಿ, ಸೂರತ್, ವಡೋದರಾ ಜಂ., ಅಹಮದಾಬಾದ್ ಜಂ., ಮಹೇಶನಾ ಜಂ., ಪಾಲನ್‌ಪುರ್ ಜಂ., ಅಬು ರೋಡ್, ಪಿಂಡ್ವಾರಾ, ಜವಾಯಿ ಬಂದ್, ಫಲ್ನಾ, ಮಾರ್ವಾರ್ ಜಂ., ಪಾಲಿ ಮಾರ್ವಾರ್ ಮತ್ತು ಲುನಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಈ ವಿಶೇಷ ರೈಲು 2ನೇ ದರ್ಜೆ ಹವಾನಿಯಂತ್ರಿತ-4, 3ನೇ ದರ್ಜೆ ಹವಾನಿಯಂತ್ರಿತ-15 ಮತ್ತು ಬ್ರೇಕ್ ವ್ಯಾನ್ ಮತ್ತು ಜನರೇಟರ್ ಕಾರಗಳು-2 ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರಲಿದೆ.

ಮಾಲ್ಡಾ ಬೆಂಗಳೂರು-ಮಾಲ್ಡಾ ನಡುವೆ ಕಾಯ್ದಿರಿಸದ ವಿಶೇಷ ರೈಲು

ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ಮಾಲ್ಡಾ-ಎಸ್‌ಎಂವಿಟಿ ಬೆಂಗಳೂರು-ಮಾಲ್ಡಾ ಟೌನ್ ನಿಲ್ದಾಣಗಳ ನಡುವೆ ಕಾಯ್ದಿರಿಸದ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಪೂರ್ವ ರೈಲ್ವೆ ತಿಳಿಸಿದೆ. ವಿವರಗಳು ಈ ಕೆಳಗಿನಂತಿವೆ:

ರೈಲು ಸಂಖ್ಯೆ 03403 ಮಾಲ್ಡಾ-ಬೆಂಗಳೂರು ಕಾಯ್ದಿರಿಸದ ವಿಶೇಷ ರೈಲು 2024ರ ನವೆಂಬರ್ 11, ರಂದು ಸಂಜೆ 5:30 ಕ್ಕೆ ಮಾಲ್ಡಾದಿಂದ ಹೊರಟು ನವೆಂಬರ್ 13 ರಂದು ರಾತ್ರಿ 7:ಗಂಟೆಗೆ ಬೆಂಗಳೂರಿಗೆ ಆಗಮಿಸುತ್ತದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 03404 SMVT ಬೆಂಗಳೂರು-ಮಾಲ್ಡಾ ಕಾಯ್ದಿರಿಸದ ವಿಶೇಷ ರೈಲು 2024ರ ನವೆಂಬರ್ 14, ರಂದು ಬೆಳಿಗ್ಗೆ 07ಕ್ಕೆ ಬೆಂಗಳೂರಿನಿಂದ ಹೊರಟು ನವೆಂಬರ್ 16 ರಂದು ಬೆಳಿಗ್ಗೆ 8 ಕ್ಕೆ ಮಾಲ್ಡಾವನ್ನು ತಲುಪುತ್ತದೆ.

ರೈಲು ಎರಡೂ ದಿಕ್ಕುಗಳಲ್ಲಿ ನಿಲ್ದಾಣಗಳ ಮೂಲಕ ಚಲಿಸುತ್ತದೆ: ಭಾಗಲ್ಪುರ್, ಸುಲ್ತಂಗಂಜ್, ಜಮಾಲ್ಪುರ್ ಜೆಎನ್, ಕಿಯುಲ್ ಜೆಎನ್, ಅಸನ್ಸೋಲ್ ಜೆಎನ್, ಪುರುಲಿಯಾ ಜೆಎನ್, ವಿಜಯನಗರ ಜೆಎನ್, ವಿಜಯವಾಡ ಜೆಎನ್, ಕಟ್ಪಾಡಿ ಜಂ ಮೂಲಕ ಸಂಚರಿಸಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ