logo
ಕನ್ನಡ ಸುದ್ದಿ  /  ಕರ್ನಾಟಕ  /  Railway Recruitment: ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ; ಭಾರತೀಯ ರೈಲ್ವೆಯಲ್ಲಿ 60 ಸಾವಿರ ಹುದ್ದೆಗಳ ನೇಮಕಾತಿ, ಕನ್ನಡದಲ್ಲೇ ಪರೀಕ್ಷೆ

Railway Recruitment: ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ; ಭಾರತೀಯ ರೈಲ್ವೆಯಲ್ಲಿ 60 ಸಾವಿರ ಹುದ್ದೆಗಳ ನೇಮಕಾತಿ, ಕನ್ನಡದಲ್ಲೇ ಪರೀಕ್ಷೆ

Umesha Bhatta P H HT Kannada

Oct 29, 2024 02:30 PM IST

google News

ಭಾರತೀಯ ರೈಲ್ವೆಯು 60000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಕನ್ನಡದಲ್ಲೇ ಪ್ರವೇಶ ಪರೀಕ್ಷೆ ಇರಲಿದೆ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.

    • ಭಾರತೀಯ ರೈಲ್ವೆಯು ಸದ್ಯದಲ್ಲೇ 60000 ವಿವಿಧ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಲಿದೆ. ಪ್ರವೇಶ ಪರೀಕ್ಷೆಗಳನ್ನು ಕನ್ನಡದಲ್ಲೂ ಕಡ್ಡಾಯವಾಗಿ ನಡೆಸಲು ಮುಂದಾಗಿದೆ. 
ಭಾರತೀಯ ರೈಲ್ವೆಯು 60000  ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಕನ್ನಡದಲ್ಲೇ ಪ್ರವೇಶ ಪರೀಕ್ಷೆ ಇರಲಿದೆ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.
ಭಾರತೀಯ ರೈಲ್ವೆಯು 60000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಕನ್ನಡದಲ್ಲೇ ಪ್ರವೇಶ ಪರೀಕ್ಷೆ ಇರಲಿದೆ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.

ಮೈಸೂರು: ಭಾರತೀಯ ರೈಲ್ವೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನೇಮಕಾತಿ ಪ್ರಮಾಣ ಕಡಿಮೆಯಾಗಿದೆ. ಇದರ ನಡುವೆಯೇ ಭಾರತೀಯ ರೈಲ್ವೆಯು ಬರೋಬ್ಬರಿ 60 ಸಾವಿರ ಹುದ್ದೆಗಳನ್ನು ನೇಮಕಾತಿ ನೇಮಕಾತಿಗಳನ್ನು ಸದ್ಯದಲ್ಲೇ ಮಾಡಿಕೊಳ್ಳಲಿದೆ. ಈ ಹುದ್ದೆಗಳಿಗೆ ವಿವಿಧ ಭಾಷೆಗಳಲ್ಲಿ ಪರೀಕ್ಷೆಗಳು ಇರಲಿವೆ. ಕನ್ನಡದಲ್ಲಿಯೂ ಈ 60 ಸಾವಿರ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಕಡ್ಡಾಯವಾಗಿ ಆಯೋಜಿಸಲಾಗುವುದು. ಇದರಿಂದ ಉತ್ತರ ಭಾರತೀಯರು ಹಾಗೂ ದಕ್ಷಿಣ ಭಾರತದ ರಾಜ್ಯಗಳ ನಡುವೆ ಸ್ಪರ್ಧೆ ನೀಡಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ರೈಲ್ವೆ ಉದ್ಯೋಗ ಪಡೆಯಲು ನೆರವಾಗಲಿದೆ. ಈ ಹಿಂದೆ ಸೀಮಿತ ಹುದ್ದೆಗಳಿಗೆ ಮಾತ್ರ ಕನ್ನಡದಲ್ಲಿ ಪ್ರವೇಶ ಪರೀಕ್ಷೆಗಳು ನಡೆಯುತ್ತಿದ್ದವು. ಕನ್ನಡದವರೇ ಆದ ತುಮಕೂರು ಸಂಸದ, ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮೈಸೂರಿನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.

ಭಾರತೀಯ ರೈಲ್ವೆ ಇಲಾಖೆಯಲ್ಲಿ ಈ ವರ್ಷ 60 ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂಬುದು ಕೇಂದ್ರ ಸರ್ಕಾರದ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣ ಅವರು ನೀಡಿದ ವಿವರಣೆ.

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಿಜ್ಞಾನ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಉದ್ಯೋಗಗಳಲ್ಲಿ ಆಯ್ಕೆಯಾದ 51000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳ ವಿತರಣೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ರೋಜಗಾರ್ ಯೋಜನೆಯನ್ನು ಜಾರಿಗೆ ತಂದರು. 2014 ರಿಂದ 12 ಆವೃತ್ತಿಯಲ್ಲಿ ಉದ್ಯೋಗ ಮೇಳವನ್ನು ಮಾಡಿ ಇಲ್ಲಿಯವರೆಗೆ 14 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇದರಿಂದ ಪ್ರತಿಭಾವಂತರಿಗೆ ಉದೋಗಗಳನ್ನು ನೀಡಲಾಗುತ್ತಿದೆ. ರೈಲ್ವೆ ಇಲಾಖೆಯಲ್ಲಿ 2014 ರಿಂದ ಇಲ್ಲಿಯವರೆಗೆ ಮಿಶನ್ ಮೋಡ್ ನಲ್ಲಿ 5.2 ಲಕ್ಷ ಉದ್ಯೋಗಳನ್ನು ನೀಡಲಾಗಿದೆ. ಸದ್ಯವೇ ಇನ್ನೂ 60 ಸಾವಿರ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಪರೀಕ್ಷೆಗಳು ಕನ್ನಡದಲ್ಲೂ ಇರಲಿವೆ ಎಂದು ವಿವರಿಸಿದರು.

ಅಂಚೆ ಇಲಾಖೆಯಲ್ಲಿ ಹೆಚ್ಚಿನ ನೇಮಕಾತಿಗಳು ನಡೆಯುತ್ತಿವೆ. ಭಾರತದಲ್ಲಿ ಕರ್ನಾಟಕ ಸಾಂಸ್ಕೃತಿಕ ರಾಜ್ಯ, ಕರ್ನಾಟಕದಲ್ಲಿ ಮೈಸೂರು ಸಾಂಸ್ಕೃತಿಕ ರಾಜಧಾನಿ.ಪ್ರಧಾನ ಮಂತ್ರಿ ಜನ ಧನ್ ಯೋಜನೆಯಡಿ ಸೌಲಭ್ಯ, ಆರೋಗ್ಯ ಸೌಲಭ್ಯ ಹೆಚ್ಚಿಸಲು ಆಯುಷ್ಮಾನ್‌ ಭಾರತ್ ಯೋಜನೆ, ಮುದ್ರ ಯೋಜನೆ, ಬೇಟಿ ಬಚಾವ್ ಬೇಟಿ ಪಡವೋ ಯೋಜನೆ, ಮುಂತಾದ ಯೋಜನೆಗಳನ್ನು ಜಾರಿಗೆ ನರೇಂದ್ರ ಮೋದಿಯವರ ಸರ್ಕಾರ ಜಾರಿಗೆ ತಂದು ಅಭಿವೃದ್ದಿ ಮಾಡಿದೆ. ವಾಕ್ ಮತ್ತು ಶ್ರವಣ ಸಂಸ್ಥೆಗೆ 150 ಕೋಟಿ ಅನುಧಾನ ನೀಡಿ ಇದರ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ ಎಂದರು

ದೇಶಕ್ಕೆ ತನ್ನದೇ ಅದ ಪರಂಪರೆ ಇದೆ ಇತಿಹಾಸ ಇದೆ. ಪ್ರತಿಯೊಬ್ಬರೂ ದೇಶ ಪ್ರೇಮವನ್ನು ಬೆಳೆಸಿಕೊಳ್ಳಿ. ಉದೋಗವನ್ನು ಪಡೆದ 51 ಸಾವಿರ ಅಭ್ಯರ್ಥಿಗಳಿಗೆ ಶುಭವಾಗಲಿ. ಮೈಸೂರು ವಿಭಾಗದಲ್ಲಿ 171 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗುತ್ತಿದೆ ಎನ್ನುವುದು ಸಚಿವ ಸೋಮಣ್ಣ ನೀಡಿದ ಸೂಚನೆ.

ಕಳೆದ 10 ವರ್ಷಗಳಲ್ಲಿ ಪ್ರಧಾನ ಮಂತ್ರಿ ಗಳು ವಿಕಸಿತ ಭಾರತಕ್ಕೆ ಅಡಿಪಾಯ ಇಟ್ಟಿದ್ದಾರೆ. ವಿಕಸಿತ ಭಾರತ 2047 ಕ್ಕೇ ಅಭಿವೃದ್ದಿ ಗುರಿಯನ್ನು ರೂಪಿಸಿದ್ದಾರೆ. ಸರ್ಕಾರದ ಹಲವು ಇಲಾಖೆಗಳು ದೇಶದ ಅಭಿವೃದ್ದಿ ಹಾಗೂ ಉದ್ಯೋಗ ನೀಡುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ. ಭಾರತ ಉತ್ತಮ ಭವಿಷ್ಯವನ್ನು ಹೊಂದಿದ್ದು, ವಿಕಸಿತ ಭಾರತದ ಅಬಿವೃದ್ದಿಗೆ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ಮನವಿ ಮಾಡಿದವರು ಕೊಡಗು ಮೈಸೂರು ಲೋಕಸಭಾ ಸಂಸದರಾದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ