ಬೆಂಗಳೂರಿನ ಮಾಸ್ಟರ್‌ಪೀಸ್‌ ಇದು; 250 ಚದರ ಅಡಿ ಜಾಗದಲ್ಲಿ ಗಗನ ಚುಂಬಿ ಕಟ್ಟಡಾನಾ, ಸೋಷಿಯಲ್ ಮೀಡಿಯಾದಲ್ಲಿ ಬೆರಗಾದರು ಜನ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಮಾಸ್ಟರ್‌ಪೀಸ್‌ ಇದು; 250 ಚದರ ಅಡಿ ಜಾಗದಲ್ಲಿ ಗಗನ ಚುಂಬಿ ಕಟ್ಟಡಾನಾ, ಸೋಷಿಯಲ್ ಮೀಡಿಯಾದಲ್ಲಿ ಬೆರಗಾದರು ಜನ

ಬೆಂಗಳೂರಿನ ಮಾಸ್ಟರ್‌ಪೀಸ್‌ ಇದು; 250 ಚದರ ಅಡಿ ಜಾಗದಲ್ಲಿ ಗಗನ ಚುಂಬಿ ಕಟ್ಟಡಾನಾ, ಸೋಷಿಯಲ್ ಮೀಡಿಯಾದಲ್ಲಿ ಬೆರಗಾದರು ಜನ

ಬೆಂಗಳೂರು ನಗರದಲ್ಲಿ ಗಗನ ಚುಂಬಿ ಕಟ್ಟಡಗಳಿವೆ. ಆದರೆ ಅವು ಜನರ ಗಮನಸೆಳೆದಿದೆ. ಇಂಟರ್‌ನೆಟ್‌ನಲ್ಲಿ ಗಮನ ಸೆಳೆದ ಬೆಂಗಳೂರಿನ ಮಾಸ್ಟರ್‌ಪೀಸ್‌ ಇದು. 250 ಚದರ ಅಡಿ ಜಾಗದಲ್ಲಿ ಗಗನ ಚುಂಬಿ ಕಟ್ಟಡಾನಾ ಎಂದು ಹುಬ್ಬೇರಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಬೆರಗಾದರು ಜನ. ಬೇರೆ ಬೇರೆ ಕಟ್ಟಡಗಳನ್ನೂ ಹೋಲಿಸತೊಡಗಿದ್ದಾರೆ. ಅವುಗಳ ಕಡೆಗೊಂದು ನೋಟ ಇಲ್ಲಿದೆ.

ಬೆಂಗಳೂರಿನ ಮಾಸ್ಟರ್‌ಪೀಸ್‌ ಇದು; 250 ಚದರ ಅಡಿ ಜಾಗದಲ್ಲಿ ನಿರ್ಮಿಸಿದ್ದ ಕಟ್ಟಡ. ಈಗ ಅದನ್ನು ನೆಲಸಮಗೊಳಿಸಲಾಗಿದೆ.
ಬೆಂಗಳೂರಿನ ಮಾಸ್ಟರ್‌ಪೀಸ್‌ ಇದು; 250 ಚದರ ಅಡಿ ಜಾಗದಲ್ಲಿ ನಿರ್ಮಿಸಿದ್ದ ಕಟ್ಟಡ. ಈಗ ಅದನ್ನು ನೆಲಸಮಗೊಳಿಸಲಾಗಿದೆ.

ಬೆಂಗಳೂರು: ಮಹಾನಗರಗಳು ಅಚ್ಚರಿಯ ಆಗರ. ನಿತ್ಯೂ ಒಂದಿಲ್ಲೊಂದು ವಿಚಾರಗಳು ಬಹುಬೇಗ ಗಮನಸೆಳೆಯುತ್ತವೆ. ಇತ್ತೀಚೆಗೆ ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 9 ಜನ ಕಾರ್ಮಿಕರು ಮೃತ ಪಟ್ಟ ಘಟನೆಯ ನೆನಪು ಮರೆಯಾಗಿಲ್ಲ. ಅಕ್ರಮ ನಿರ್ಮಾಣಗಳು, ಅನುಮತಿ ಮೀರಿ ಹೆಚ್ಚುವರಿ ಹಂತಗಳನ್ನು ಕಟ್ಟುತ್ತಿರುವ ಕಟ್ಟಡಗಳನ್ನು ಗುರುತಿಸುವ ಸಮೀಕ್ಷೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದು (ಅಕ್ಟೋಬರ್ 28) ಶುರುಮಾಡಿದೆ. ಈಗಾಗಲೆ ಕೆಲವು ಕಟ್ಟಡಗಳನ್ನು ಗುರುತಿಸ ಅದರ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದೆ. ಕೆಲವರು ತಾವು ಕಟ್ಟಿದ ಕಟ್ಟಡವನ್ನು ತಾವೇ ಒಡೆಯುವ ಕೆಲಸಕ್ಕೆ ಮುಂದ್ಧಾಗಿದ್ದಾರೆ. ಇನ್ನು ಕೆಲವರು ಒಡೆಯುವುದಕ್ಕೆ ಬಿಬಿಎಂಪಿ ಅನುಮತಿ ನೀಡಿದ್ದಾರೆ. ಸಣ್ಣ ರಸ್ತೆಗಳಲ್ಲಿ ರಸ್ತೆ, ಚರಂಡಿಗಳನ್ನು ಅತಿಕ್ರಮಿಸಿ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನೂ ಬಿಬಿಎಂಪಿ ಗುರುತಿಸಲಾರಂಭಿಸಿದೆ. ಹೀಗೆ ಗುರುತಿಸುವಾಗ 250 ಚದರ ಅಡಿಯಲ್ಲಿ ನಿರ್ಮಿಸಲಾದ 5 ಮಹಡಿಯ ಕಟ್ಟಡ ಗಮನಸೆಳೆದಿದೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

250 ಚದರ ಅಡಿ ಜಾಗದಲ್ಲಿ 5 ಮಹಡಿ ಕಟ್ಟಡ ಇರುವುದೆಲ್ಲಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಂಜಪ್ಪ ಗಾರ್ಡನ್ಸ್ ಪ್ರದೇಶದಲ್ಲಿ 250 ಚದರ ಅಡಿ ಜಾಗದಲ್ಲಿ ಈ 5 ಮಹಡಿ ಕಟ್ಟಡ ನಿರ್ಮಿಸಲಾಗುತ್ತಿತ್ತು. ನಿರ್ಮಾಣ ಹಂತದ ಕಟ್ಟಡ ನಿರ್ಮಾಣಕ್ಕೆ ಸರಿಯಾದ ಅನುಮತಿ ಇರಲಿಲ್ಲ. ಹೀಗಾಗಿ ಅದನ್ನು ಕೆಡವಬೇಕು ಎಂದು ಅದರ ಮಾಲೀಕರಿಗೆ ತಿಳಿಸಿದ್ದು, ಅವರು ಅದನ್ನು ಕೆಡವಿದ್ದಾರೆ. ಅವಶೇಷಗಳನ್ನು ಅಲ್ಲಿಂದ ಸಾಗಿಸಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಕೆಲವರು ಈ ಕಟ್ಟಡವನ್ನು ಗಗನಚುಂಬಿ ಕಟ್ಟಡಕ್ಕೆ ಹೋಲಿಸಿದ್ದಾರೆ.

ಮಹೇಶ್ ಬಿಆರ್ ಎಂಬುವವರು ಇದನ್ನು ಬೆಂಗಳೂರಿನ ಮಾಸ್ಟರ್ ಪೀಸ್ ಎಂದು ಲೇವಡಿ ಮಾಡಿದ್ದಾರೆ. ಬೆಂಗಳೂರಿನ ಎರಡು ಮಾಸ್ಟರ್ ಪೀಸ್‌ಗಳನ್ನು ಉಲ್ಲೇಖಿಸಿರುವ ಅವರು ಮೊದಲನೇಯದ್ದು ಅತ್ಯಂತ ಸಪೂರ ಬ್ರಿಗೇಡ್ ಸ್ಕೈ ಟವರ್ ಅನ್ನು ಉಲ್ಲೇಖಿಸಿದ್ದಾರೆ. ಇದು ಲಾಲ್‌ಬಾಗ್ ರಸ್ತೆಯ ಕಾವೇರಿ ಥಿಯೆಟರ್‌ ಜಾಗದಲ್ಲಿದೆ. ಇದರ ನಿರ್ಮಾಣಕ್ಕೆ ಅನುಮತಿ ಇದೆ. ಇನ್ನೊಂದು ಕೆಆರ್‌ಪುರಂ ಸಮೀಪ 250 ಚದರ ಅಡಿಯಲ್ಲಿ ನಿರ್ಮಾಣವಾಗುತ್ತಿತ್ತು. ಈಗ ಅದನ್ನು ಕೆಡವಲಾಗಿದೆ. ಸ್ಲಿಮ್ ಆಗಿರುವ ಕಟ್ಟಡಗಳನ್ನು ಒಮ್ಮೆ ಪರಿಶೀಲಿಸಬೇಕಾದ್ದು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಅವರ ಟ್ವೀಟ್ ಇಲ್ಲಿದೆ-

ಬುರ್ಜ್ ಖಲೀಫಾ, ಆಂಟಿಲಿಯಾಗೆ ಹೋಲಿಕೆ

ಬೆಂಗಳೂರಿನ ಈ ಕಟ್ಟಡವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ವಿವಿಧ ರಚನೆಗಳಿಗೆ ಹೋಲಿಸತೊಡಗಿದ್ದಾರೆ. ದುಬೈನ ಬುರ್ಜ್‌ ಖಲೀಫಾ, ಅಂಬಾನಿ ಕುಟುಂಬದ ನಿವಾಸ ಮುಂಬೈನ ಆಂಟಿಲಿಯಾಗೆ ಪ್ರತಿಸ್ಪರ್ಧಿಯಾದ ಲಿಫ್ಟಿಲಿಯಾ ಎಂದು ಲೇವಡಿ ಮಾಡಿದ್ದಾರೆ.

ಇನ್ನೊಬ್ಬರು, ಬೆಂಗಳೂರಿನಲ್ಲಿ ಅಂತಹ ಸಾವಿರಾರು ಕಟ್ಟಡಗಳಿವೆ. ನಮ್ಮ ಅಪಾರ್ಟ್‌ಮೆಂಟ್‌ ಪಕ್ಕದಲ್ಲೇ ಸರಿಯಾದ ಅನುಮತಿ ಇಲ್ಲದೇ ಒಂದು ಕಟ್ಟಡ ನಿರ್ಮಾಣವಾಗುತ್ತಿದೆ. ಅಕ್ರಮ ನಿರ್ಮಾಣಗಳಿಂದ ಬೆಂಗಳೂರನ್ನು ದೇವರೇ ಕಾಪಾಡಬೇಕಷ್ಟೆ ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಭಾರೀ ಮಳೆ ಸುರಿಯುತ್ತಿದ್ದಾಗ ಸಂಭವಿಸಿದ ಬಾಬುಸಾಪಾಳ್ಯ ಕಟ್ಟಡ ಕುಸಿತವು ಒಂಬತ್ತು ಜೀವಗಳನ್ನು ಬಲಿ ತೆಗೆದುಕೊಂಡಿತು. ಇದಾದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿತು. ಅಕ್ರಮ ಕಟ್ಟಡ ನಿರ್ಮಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು. ಅದರಂತೆ ಇಂದಿನಿಂದ ಅಕ್ರಮ ಕಟ್ಟಡಗಳ ಸಮೀಕ್ಷೆ ಶುರುವಾಗಿದೆ.

ಹೊರಮಾವು ಮತ್ತು ಹೆಣ್ಣೂರು ಭಾಗದಲ್ಲಿ ಸೂಕ್ತ ನಿಯಮಾವಳಿಗಳನ್ನು ಪಾಲಿಸದೆ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯವನ್ನು ಬಿಬಿಎಂಪಿ ಈಗಾಗಲೇ ಆರಂಭಿಸಿದೆ. ಈ ಹಿಂದೆ ಇಂತಹ ಕಟ್ಟಡಗಳನ್ನು ನಿರ್ಮಿಸಿದ ಅನೇಕ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿತ್ತು.

Whats_app_banner