logo
ಕನ್ನಡ ಸುದ್ದಿ  /  Karnataka  /  Jet Airways Ceo Calls Indian Metro Stations 'Artless Concrete Eyesores', Gets Trolled

Indian metro stations: ನಮ್ಮ ಮೆಟ್ರೋವನ್ನು ಕಲಾಹೀನ ಕಾಂಕ್ರೀಟ್‌ ಕಣ್ಣಗುಡ್ಡೆ ಎಂದ ಸಂಜೀವ್‌ ಕಪೂರ್‌, ನೆಟ್ಟಿಗರಿಂದ ತರಾಟೆ

Praveen Chandra B HT Kannada

Mar 19, 2023 06:27 PM IST

Indian metro stations: ನಮ್ಮ ಮೆಟ್ರೋವನ್ನು ಕಲಾಹೀನ ಕಾಂಕ್ರೀಟ್‌ ಕಣ್ಣಗುಡ್ಡೆ ಎಂದ ಸಂಜೀವ್‌ ಕಪೂರ್‌, ನೆಟ್ಟಿಗರಿಂದ ಟ್ರೋಲ್‌

    • artless concrete eyesores: ಬೆಂಗಳೂರು ಮೆಟ್ರೋ ನಿಲ್ದಾಣವೊಂದರ ಫೋಟೋದ ಜತೆಗೆ ದುಬೈನ ಮೆಟ್ರೋ ನಿಲ್ದಾಣವನ್ನು ಹೋಲಿಸಿ ಇವರು ತನ್ನ ಅಭಿಪ್ರಾಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.
Indian metro stations: ನಮ್ಮ ಮೆಟ್ರೋವನ್ನು ಕಲಾಹೀನ ಕಾಂಕ್ರೀಟ್‌ ಕಣ್ಣಗುಡ್ಡೆ ಎಂದ ಸಂಜೀವ್‌ ಕಪೂರ್‌, ನೆಟ್ಟಿಗರಿಂದ ಟ್ರೋಲ್‌
Indian metro stations: ನಮ್ಮ ಮೆಟ್ರೋವನ್ನು ಕಲಾಹೀನ ಕಾಂಕ್ರೀಟ್‌ ಕಣ್ಣಗುಡ್ಡೆ ಎಂದ ಸಂಜೀವ್‌ ಕಪೂರ್‌, ನೆಟ್ಟಿಗರಿಂದ ಟ್ರೋಲ್‌

ಬೆಂಗಳೂರು: ಭಾರತದ ಮೆಟ್ರೋ ನಿಲ್ದಾಣಗಳು ಕಲಾಹೀನ ಕಾಂಕ್ರೀಟ್‌ ಕಣ್ಣಗುಡ್ಡೆಯೆಂದು ಟ್ವೀಟ್‌ ಮಾಡಿದ್ದ ಜೆಟ್‌ ಏರ್‌ವೇಸ್‌ ಸಿಇಒ ಸಂಜೀವ್‌ ಕಪೂರ್‌ಗೆ ಟ್ವಿಟ್ಟರ್‌ನಲ್ಲಿ ಜನರು ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ. ಬೆಂಗಳೂರು ಮೆಟ್ರೋ ನಿಲ್ದಾಣವೊಂದರ ಫೋಟೋದ ಜತೆಗೆ ದುಬೈನ ಮೆಟ್ರೋ ನಿಲ್ದಾಣವನ್ನು ಹೋಲಿಸಿ ಇವರು ತನ್ನ ಅಭಿಪ್ರಾಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.

ಟ್ರೆಂಡಿಂಗ್​ ಸುದ್ದಿ

ಶ್ರೀನಿವಾಸ್ ಪ್ರಸಾದ್ ಮತ್ತು ಆರೆಸ್ಸೆಸ್; ಸಂವತ್ಸರ ಮೀರಿದ ಒಡನಾಟ, ಅಗಲಿದ ನಾಯಕನಿಗೆ ಲೇಖಕ ವಾದಿರಾಜ ಸಾಮರಸ್ಯ ಅಕ್ಷರ ನಮನ

Hassan Sex Scandal; ಪ್ರಜ್ವಲ್ ರೇವಣ್ಣ ಅಷ್ಟೇ ಅಲ್ಲಅವರ ಅಪ್ಪ ರೇವಣ್ಣ ಉಚ್ಚಾಟನೆಗೂ ಹೆಚ್ಚಿದ ಒತ್ತಡ

ಕರ್ನಾಟಕ ಹವಾಮಾನ ಏಪ್ರಿಲ್‌ 30; ಬಾಗಲಕೋಟೆ, ಕಲಬುರಗಿ, ಬೆಳಗಾವಿ, ರಾಯಚೂರು ಸೇರಿ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌

Bangalore Crime: ಬೆಂಗಳೂರಲ್ಲಿ ತಾಯಿ ಮಗಳ ಜಗಳ, ಮಗಳನ್ನು ಕೊಂದಳಾ ತಾಯಿ, ತಲಾಖ್ ನೀಡಿಯೂ ಪತ್ನಿ ಕೊಲೆ

ಭಾರತೀಯ ಮೂಲಸೌಕರ್ಯವನ್ನು ದುಬೈನೊಂದಿಗೆ ಹೋಲಿಸಿ, ಜೆಟ್ ಏರ್‌ವೇಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಂಜೀವ್ ಕಪೂರ್ ಅವರು ಮಾರ್ಚ್ 18 ರಂದು ಭಾರತೀಯ ಮೆಟ್ರೋ ನಿಲ್ದಾಣಗಳನ್ನು 'ಕಲಾಹೀನ ಕಾಂಕ್ರೀಟ್ ಕಣ್ಣುಗಳು' ಎಂದು ಟ್ವೀಟ್‌ ಮಾಡಿದ್ದರು. ಭಾರತೀಯ ಮೆಟ್ರೋ ನಿಲ್ದಾಣಗಳ ಸೌಂದರ್ಯದ ಕುರಿತು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು. ಇದು ಟ್ವಿಟರ್ ಬಳಕೆದಾರರ ಕೋಪಕ್ಕೆ ಕಾರಣವಾಯಿತು.

"ಬೆಂಗಳೂರು, ಗುರುಗ್ರಾಮ, ಕೋಲ್ಕೊತ್ತಾ.... ಯಾಕೆ ನಾವು ಓವರ್‌ಗ್ರೌಂಡ್‌/ಓವರ್‌ ಹೆಡ್‌ ಮೆಟ್ರೋ ನಿಲ್ದಾಣಗಳನ್ನು ಕಲೆಯಿಲ್ಲದ ಕಾಂಕ್ರೀಟ್‌ ಕಣ್ಣುಗಳಂತೆ ನಿರ್ಮಿಸಲಾಗಿದೆ. ? ಬೆಂಗಳೂರಿಗೆ (ಎಡ) ಹೋಲಿಸಿದರೆ ದುಬೈ (ಬಲ) ಮೆಟ್ರೋ ನಿಲ್ದಾಣವನ್ನು ಒಮ್ಮೆ ನೋಡಿ. ದುಬೈ ನಿಲ್ದಾಣವನ್ನು ಬಹುಶಃ ಹತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದೆ" ಎಂದು ಅವರು ಟ್ವೀಟ್‌ ಮಾಡಿದ್ದರು.

ಇಷ್ಟು ಮಾತ್ರವಲ್ಲದೆ ಬೆಂಗಳೂರು ಮತ್ತು ದುಬೈ ಮೆಟ್ರೋ ನಿಲ್ದಾಣಗಳ ಫೋಟೊಗಳನ್ನು ಅಕ್ಕಪಕ್ಕದಲ್ಲಿ ಹಂಚಿಕೊಂಡಿದ್ದರು.

ಆದರೆ, ಟ್ವಿಟ್ಟರ್‌ ಬಳಕೆದಾರರಿಗೆ ಕಪೂರ್‌ ಟ್ವೀಟ್‌ ಸಹ್ಯವಾಗಿಲ್ಲ. ಬೆಂಗಳೂರು, ದೆಹಲಿ ಹೈದರಾಬಾದ್‌ನ ವಿವಿಧ ಸುಂದರ ಮೆಟ್ರೋ ನಿಲ್ದಾಣಗಳನ್ನು ಜನರು ಹಂಚಿಕೊಂಡಿದ್ದಾರೆ.

"ಈ ಜನರಿಗೆ ತನ್ನ ಸ್ವಂತ ದೇಶದ ಕುರಿತು ಹೊಗಳಲು ತಿಳಿದಿಲ್ಲ" ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಟೀಕಿಸಿದ್ದಾರೆ.

"ಸಾರಿಗೆ ಸುಂದರವಾಗಿರಬೇಕಾಗಿಲ್ಲ. ನೀವು ನಗರೀಕರಣ ಮತ್ತು ನಗರ ಯೋಜನೆಗಳ ಬಗ್ಗೆ ಹೆಚ್ಚು ಓದಿದ್ದರೆ ನೀವು ದುಬೈ ಅನ್ನು ಎಂದಿಗೂ ಅಭಿನಂದಿಸುವುದಿಲ್ಲ. ಆ ನಗರದ ನಗರ ಯೋಜನೆ ದುಃಸ್ವಪ್ನವಾಗಿದೆ" ಎಂದು ಇನ್ನೊಬ್ಬರು ಬಳಕೆದಾರರು ಮಾರುತ್ತರ ನೀಡಿದ್ದಾರೆ.

ಇನ್ನೊಬ್ಬ ಬಳಕೆದಾರರು ನಮ್ಮ ಕಲಾತ್ಮಕ ಪೇಟಿಂಗ್‌ಗಳಿರುವ ಬೆಂಗಳೂರು ಮೆಟ್ರೋ ನಿಲ್ದಾಣವೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ಚರ್ಚ್‌ ಸ್ಟ್ರೀಟ್‌ ಮೆಟ್ರೋ ನಿಲ್ದಾಣವಾಗಿದ್ದು, ಇದನ್ನು ಗಮನಿಸಿ ಎಂದಿದ್ದಾರೆ.

ರಾಹುಲ್‌ ಕಪೂರ್‌ ಎಂಬ ಇನ್ನೊಬ್ಬ ಬಳಕೆದಾರರು ದೆಹಲಿಯ ವಿವಿಧ ಸುಂದರ ಮೆಟ್ರೋ ನಿಲ್ದಾಣಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ವಿಶಾಲ್‌ ಎನ್ನುವವರು ಹೈದರಾಬಾದ್‌ ಮೆಟ್ರೋ ನಿಲ್ದಾಣವೊಂದರ ಫೋಟೊ ಹಂಚಿಕೊಂಡಿದ್ದಾರೆ. ಇನ್ನೂ ಹಲವು ಬಳಕೆದಾರರು ಹಲವು ಫೋಟೊ ಹಂಚಿಕೊಂಡು ಸಂಜೀವ್‌ ಕಪೂರ್‌ ಅವರ ಅಭಿಪ್ರಾಯವು ಯಾಕೆ ತಪ್ಪು ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದೇ ಸಮಯದಲ್ಲಿ ಕೆಲವು ಸೋಷಿಯಲ್‌ ಮೀಡಿಯಾ ಬಳಕೆದಾರರು ಸಂಜೀವ್‌ ಕಪೂರ್‌ ಅಭಿಪ್ರಾಯಕ್ಕೆ ಹೌದೌದು ಎಂದಿದ್ದಾರೆ. "ನಮ್ಮ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳು ಪರಿಸರ ಸ್ನೇಹಿಯಾಗಿಲ್ಲ, ಸುಂದರವಾಗಿಲ್ಲ " ಎಂದು ಒಬ್ಬರು ಬರೆದಿದ್ದಾರೆ. "ನಮ್ಮ ಮೆಟ್ರೋ ಸ್ಟೇಷನ್‌ಗಳು ಕಲಾತ್ಮಕವಾಗಿಲ್ಲ. ನಿಲ್ದಾಣಗಳಲ್ಲಿ ಭಾರತದ ಸುಂದರ ಸಾಂಸ್ಕೃತಿಕ ಪರಂಪರೆಯನ್ನು ತೋರಿಸಬಹುದು" ಎಂದು ಇನ್ನೊಬ್ಬರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು