Kalaburagi News: ಮುಸ್ಲಿಂ ಆದರೆ ಬುರ್ಖಾ ಧರಿಸುವಂತೆ ಹೇಳಿದ ಬಸ್ ಚಾಲಕ ಅಮಾನತು
Jul 29, 2023 11:14 AM IST
ಮುಸ್ಲಿಂ ಆದರೆ ಬುರ್ಖಾ ಧರಿಸುವಂತೆ ಹೇಳಿದ ಕಲಬುರಗಿ ಬಸ್ ಡಿಪೋ 3ರ ಚಾಲಕನನ್ನು ಅಮಾನತು ಮಾಡಿದ್ದಾರೆ.
- ಕಲಬುರಗಿ ಬಸ್ ಡಿಪೋ 3ರ ಚಾಲಕ ಮೆಹಬೂಬ್ ಪಟೇಲ್ ಎಂಬ ಚಾಲಕ ಅಮಾನತುಗೊಂಡಿದ್ದಾರೆ. ನೀನು ಮುಸಲ್ಮಾನಳಾಗಿದ್ದರೆ ಬುರ್ಖಾ ಧರಿಸಿ ಮಾತನಾಡು ಎಂದು ವಿದ್ಯಾರ್ಥಿನಿಗೆ ಕೆಕೆಆರ್‌ಟಿಸಿ ಬಸ್ ಚಾಲಕ ಹೇಳಿದ್ದಾಗಿ ಜು.26 ರಂದು ಆರೋಪ ಕೇಳಿ ಬಂದಿತ್ತು.
ಕಲಬುರಗಿ: ನೀನು ಮುಸಲ್ಮಾನಳಾಗಿದ್ದರೆ ಬುರ್ಖಾ ಧರಿಸುವಂತೆ ವಿದ್ಯಾರ್ಥಿನಿಗೆ ಹೇಳಿ ಅನುಚಿತವಾಗಿ ವರ್ತಿಸಿದ ಕೆಕೆಆರ್‌ಟಿಸಿ ಬಸ್ ಚಾಲಕನನ್ನು ಕಲಬುರಗಿ ವಿಭಾಗದ ಡಿಸಿ ಶುಕ್ರವಾರ ಅಮಾನತು ಮಾಡಿದ್ದಾರೆ.
ಕಲಬುರಗಿ ಬಸ್ ಡಿಪೋ 3ರ ಚಾಲಕ ಮೆಹಬೂಬ್ ಪಟೇಲ್ ಎಂಬ ಚಾಲಕ ಅಮಾನತುಗೊಂಡಿದ್ದಾರೆ. ನೀನು ಮುಸಲ್ಮಾನಳಾಗಿದ್ದರೆ ಬುರ್ಖಾ ಧರಿಸಿ ಮಾತನಾಡು ಎಂದು ವಿದ್ಯಾರ್ಥಿನಿಗೆ ಕೆಕೆಆರ್‌ಟಿಸಿ ಬಸ್ ಚಾಲಕ ಹೇಳಿದ್ದಾಗಿ ಜು.26 ರಂದು ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಕಲಬುರಗಿ ಜಿಲ್ಲೆಯ ಕಮಲಾಪುರ ಬಸ್ ನಿಲ್ದಾಣದಲ್ಲಿ ಶಿಕ್ಷಕ ಮತ್ತು ಚಾಲಕನ ನಡುವೆ ನಡೆದ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಕಲಬುರಗಿ ಬಸ್ ಡಿಪೋ 3ರ ಚಾಲಕ ಮೆಹಬೂಬ್ ಪಟೇಲ್ ವಿರುದ್ದ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನಲೆ ಬುರ್ಖಾ ಧರಿಸಿ ಮಾತನಾಡುವಂತೆ ಮುಸ್ಲಿಂ ವಿದ್ಯಾರ್ಥಿನಿಗೆ ಹೇಳಿದ್ದ ಚಾಲಕನನ್ನು ಇದೀಗ ಕೆಕೆಆರ್‌ಟಿಸಿ ಕಲಬುರಗಿ ವಿಭಾಗದ ಡಿಸಿ ಅಮಾನತು ಮಾಡಿದ್ದಾರೆ.
ಜಿಲ್ಲೆಯ ಓಕಳಿ ಎಂಬ ಗ್ರಾಮಕ್ಕೆ ಹೋಗಲು ಬಸ್ ಹತ್ತುತ್ತಿದ್ದ ವಿದ್ಯಾರ್ಥಿನಿಯರ ಜೊತೆ ಚಾಲಕ ಮೆಹಬೂಬ್ ಪಟೇಲ್ ದರ್ಪದಿಂದ ವರ್ತಿಸಿದ್ದ. ಈ ವೇಳೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ನೀನು ಮುಸ್ಲಿಂ ಇದ್ದೀಯಾ ಅಲ್ವಾ, ಬುರ್ಖಾ ಧರಿಸಿ ಬಾ ಎಂದು ಹೇಳಿದ್ದ. ಇದಕ್ಕೆ ಶಿಕ್ಷಕರು ಮತ್ತು ಬಸ್ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದೀಗ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ ಆರೋಪದ ಮೇಲೆ ಕೆಕೆಆರ್‌ಟಿಸಿ ಕಲಬುರಗಿ ಡಿಸಿಯಿಂದ ಅಮಾನತ್ತು ಮಾಡಲಾಗಿದೆವೆಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ ರಾಚಪ್ಪ ಸ್ಪಷ್ಟಪಡಿಸಿದ್ದಾರೆ.