logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi Crime: 51 ಲಕ್ಷ ಮೌಲ್ಯದ 48 ಲೀಟರ್‌ ಗೋವಾ ಲಿಕ್ಕರ್‌ ವಶಪಡಿಸಿಕೊಂಡ ಕಲಬುರಗಿ ಅಬಕಾರಿ ಅಧಿಕಾರಿಗಳು

Kalaburagi Crime: 51 ಲಕ್ಷ ಮೌಲ್ಯದ 48 ಲೀಟರ್‌ ಗೋವಾ ಲಿಕ್ಕರ್‌ ವಶಪಡಿಸಿಕೊಂಡ ಕಲಬುರಗಿ ಅಬಕಾರಿ ಅಧಿಕಾರಿಗಳು

HT Kannada Desk HT Kannada

Dec 28, 2023 10:37 PM IST

google News

ಬಸ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ಕಲಬುರಗಿ ಅಬಕಾರಿ ಅಧಿಕಾರಿಗಳ ತಂಡ ವಶಪಡಿಸಿಕೊಂಡಿತು.

  • ಹೊಸ ವರ್ಷಾಚರಣೆಗೆ ಮಾರಾಟ ಮಾಡುವುದಕ್ಕಾಗಿ ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ 51 ಲಕ್ಷ ಮೌಲ್ಯದ 48 ಲೀಟರ್‌ ಗೋವಾ ಲಿಕ್ಕರ್‌ ಅನ್ನು ಕಲಬುರಗಿ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡರು.  6 ಜನರನ್ನು ಬಂಧಿಸಿ ವಾಹನವನ್ನು ಕೂಡ ವಶಪಡಿಸಿಕೊಂಡಿದ್ದಾರೆ. 

ಬಸ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ಕಲಬುರಗಿ ಅಬಕಾರಿ ಅಧಿಕಾರಿಗಳ ತಂಡ ವಶಪಡಿಸಿಕೊಂಡಿತು.
ಬಸ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ಕಲಬುರಗಿ ಅಬಕಾರಿ ಅಧಿಕಾರಿಗಳ ತಂಡ ವಶಪಡಿಸಿಕೊಂಡಿತು.

ಕಲಬುರಗಿ: ಹೊಸ ವರ್ಷಕ್ಕೆ ಗೋವಾದಿಂದ ವಿವಿಧ ಬ್ಯಾಂಡ್‌ಗಳ ಮದ್ಯವನ್ನು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದ 6 ಜನರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಖಚಿತ ಮಾಹಿತಿ ಮೇರೆಗೆ ಗುರುವಾರ ಬೆಳಗ್ಗೆ 3 ತಂಡಗಳಲ್ಲಿ ವಿವಿಧೆಡೆ ದಾಳಿ ಮಾಡಿದ ಕಲಬುರಗಿ ಅಬಕಾರಿ ಪೊಲೀಸರು ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ 51 ಲಕ್ಷ ಮೌಲ್ಯದ 48 ಲೀಟರ್‌ ಗೋವಾ ಲಿಕ್ಕರ್‌ ಹಾಗೂ ಲಿಕ್ಕರ್‌ ಸಾಗಿಸೋಕೆ ಬಳಸಲಾಗಿದ್ದ ಒಂದು ಲಕ್ಸುರಿ ಬಸ್‌ ಜೊತೆಗೆ ಎರಡು ಬೈಕ್‌ಗಳನ್ನು ವಶಪಡಿಸಿದ್ದಾರೆ. ಅದೇ ರೀತಿ 6 ಜನರನ್ನು ಬಂಧಿಸಿದ್ದಾರೆ.

ಸಂಗಣ್ಣ ಶಟಗಾರ ಸಂತ್ರಾಸವಾಡಿ, ವಿಜಯ ಸಿದ್ದಗುರು ಕಲಬುರಗಿ, ಸತೀಶ್ ಸಾಲಿ ಕಲ್ಲಹಂಗರಗಾ, ಚಂದ್ರಕಾಂತ್ ಚಿಕ್ಕೆ ಬಾಚನಾಳ, ನಿತ್ಯ ಆನಂದ ಕಾಂಬಳೆ, ಏಕಲೂರ್ ಬಸವಕಲ್ಯಾಣ, ವಾಮನರಾವ್ ಮರಗುತ್ತಿ ತಾಂಡಾ ಎಂಬುವವರು ಬಂಧಿತರು.

ಈ ಆರು ಆರೋಪಿಗಳು ಕಳೆದ ಹಲವಾರು ತಿಂಗಳಿಂದ ಈ ಯೋಜನೆ ರೂಪಿಸಿ ಜಾರಿಗೊಳಿಸುವುದಕ್ಕೆ ಚಿಂತನೆ ನಡೆಸಿದ್ದರು. ಗೋವಾದಲ್ಲಿ ಕಡಿಮೆ ಬೆಲೆಗೆ ಲಿಕ್ಕರ್ ಸಿಗುತ್ತದೆ. ಅದನ್ನು ಅಕ್ರಮವಾಗಿ ತಂದು ಮಾರಾಟ ಮಾಡಿದರೆ ಹೆಚ್ಚಿನ ಆದಾಯ ಮಾಡಬಹುದು ಯೋಚಿಸಿದ್ದರು. ಅದರೆ ಈಗ ಇವರು ಪೊಲೀಸರ ಅತಿಥಿಯಾಗಿದ್ದು, ಸದ್ಯ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಕಲಬುರಗಿ ಅಬಕಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗೋವಾ-ಕರ್ನಾಟಕ ಗಡಿಯಲ್ಲಿ ಅಷ್ಟು ಬಿಗಿ ಭದ್ರತೆ ಇದ್ದರೂ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ಮದ್ಯ ಸಾಗಾಟ ಅಗುತ್ತಿರುವುದು ಹೇಗೆ ಎನ್ನುವ ಅನುಮಾನ ಕಾಡುತ್ತಿದೆ. ಇದರ ಹಿಂದೆ ಏನಾದರೂ ದೊಡ್ಡ ಜಾಲವೇನಾದರೂ ಇದೆಯಾ ಎಂಬುದರ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

ಬಾವಿಗೆ ಬಿದ್ದು ಮೃತಪಟ್ಟ ಅಂಧ ಯುವತಿ

ಕಲಬುರಗಿ: ಕಬ್ಬು ಕಟಾವಿಗೆ ಬಂದಿದ್ದ ಅಂಧ ಯುವತಿಯೊಬ್ಬಳು ಹೊಲದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸಾವಿಗೀಡಾದ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ನಡೆದಿದೆ.

ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದ ನಿವಾಸಿ ಕಾಜಲ್‌ ಲಕ್ಷ್ಮಣ (21) ಎಂಬ ಯುವತಿ ಸಾವಿಗೀಡಾಗಿದ್ದಾಳೆ. ಈ ಯುವತಿ ತನ್ನ ತಂಡದ ಜೊತೆಗೆ ಪ್ರತಿ ವರ್ಷವೂ ಕಬ್ಬು ಕಟಾವು ಮಾಡಲು ಬಂದಿದ್ದಳು. ಸಕ್ಕರೆ ಕಾರ್ಖಾನೆಯಿಂದ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಒಂದೊಂದು ತಾಲೂಕಿನ ಗ್ರಾಮಗಳ ರೈತರ ಹೊಲಗಳಿಗೆ ಈ ಕಾರ್ಮಿಕರು ಹೋಗುವುದು ವಾಡಿಕೆ. ಅದರಂತೆ ಈ ಯುವತಿಯೂ ತಂಡದ ಜತೆಗಿದ್ದಳು.

ದಸ್ತಾಪುರ ಗ್ರಾಮದ ರೈತ ಅಂಬಾರಾಯ ಅವರ ಹೊಲಕ್ಕೆ ಕಬ್ಬು ಕಟಾವು ಮಾಡಲು ಹೋಗಿದ್ದ ವೇಳೆ ಬಾವಿಗೆ ಬಿದ್ದಿರುವ ಈ ಅಂಧ ಯುವತಿ ಕಾಜಲಳನ್ನು ಜೋಪಡಿಯಲ್ಲಿ ಇರುವಂತೆ ಹೇಳಿ ಹೋಗಿದ್ದರು. ಕೆಲಸ ಮುಗಿಸಿ ಮರಳಿ ಬಂದಾಗ ಯುವತಿ ಕಾಣದೆ ಇರೋದನ್ನು ಕಂಡು ಗಾಬರಿಗೊಂಡ ತಂದೆ ತಾಯಿ ಎಲ್ಲ ಕಡೆ ಹುಡುಕಿದ್ದರು, ಸಿಗದೆ ಇದ್ದ ಸಮಯದಲ್ಲಿ ಮಹಾಂಗಾವ ಠಾಣೆಯಲ್ಲಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಬಂದು ಸ್ಥಳ ಪರಿಶೀಲಿಸಿದಾಗ ಕಬ್ಬು ಕಟಾವು ಮಾಡುವ ತಂಡದವರ ಜೋಪಡಿ ಪಕ್ಕದಲ್ಲಿ ಇರುವ ಬಾವಿಯಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಳು. ಕಣ್ಣು ಕಾಣದೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ