logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಪಿಸ್ತೂಲ್‌ ಕಸಿದು ಪರಾರಿಯಾದ ಕುಖ್ಯಾತ ಕಳ್ಳ ಖಾಜಪ್ಪ, ಅಫಜಲಪುರದಲ್ಲಿ ನಡೆದ ಘಟನೆ

Kalaburagi News: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಪಿಸ್ತೂಲ್‌ ಕಸಿದು ಪರಾರಿಯಾದ ಕುಖ್ಯಾತ ಕಳ್ಳ ಖಾಜಪ್ಪ, ಅಫಜಲಪುರದಲ್ಲಿ ನಡೆದ ಘಟನೆ

Praveen Chandra B HT Kannada

Jul 17, 2023 01:19 PM IST

google News

Kalaburagi News: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಪಿಸ್ತೂಲ್‌ ಕಸಿದು ಪರಾರಿಯಾದ ಕುಖ್ಯಾತ ಕಳ್ಳ ಖಾಜಪ್ಪ

    • Karnataka Crime News: ಕಳ್ಳ ಖಾಜಾನನ್ನ ಬಂಧಿಸಲು ಪ್ರಯತ್ನಿಸಿದ ವೇಳೆ ಅಫಜಲಪುರ ಪಿಎಸ್‌ಐ ಭೀಮರಾಯ್ ಅವರ ರಿವಾಲ್ವಾರ್‌ ಅನ್ನೇ ಕಸಿದುಕೊಂಡು ಪರಾರಿಯಾಗಿದ್ದಾನೆ.
Kalaburagi News: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಪಿಸ್ತೂಲ್‌ ಕಸಿದು ಪರಾರಿಯಾದ ಕುಖ್ಯಾತ ಕಳ್ಳ ಖಾಜಪ್ಪ
Kalaburagi News: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಪಿಸ್ತೂಲ್‌ ಕಸಿದು ಪರಾರಿಯಾದ ಕುಖ್ಯಾತ ಕಳ್ಳ ಖಾಜಪ್ಪ (HT_PRINT)

ಕಲಬುರಗಿ: ಅಫಜಲಪುರಕ್ಕೆ ಕುಖ್ಯಾತ ಕಳ್ಳನ ಹಿಡಿಯಲು ಬಂದ ಬೆಂಗಳೂರು ಸಿಸಿಬಿ ಪೊಲೀಸರ ಕೈಗೆ ಸಿಗದೆ ಕುಖ್ಯಾತ ಕಳ್ಳ ಖಾಜಾ ತಪ್ಪಿಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಈತ ಪಿಎಸ್‌ಐ ಭೀಮಾರಾಯ್‌ ಬಂಕಲಿ ಅವರ ಸರ್ವಿಸ್ ರಿವಾಲ್ವರ್‌ ಎಗರಿಸಿಕೊಂಡು ಪರಾರಿಯಾಗಿದ್ದು, ಪೊಲೀಸರಿಗೆ ಹೊಸ ತಲೆ ನೋವು ಉಂಟು ಮಾಡಿದೆ. ಬೆಂಗಳೂರು, ಕಲಬುರಗಿ, ಅಫಜಲಪುರ ಸೇರಿದಂತೆ ವಿವಿಧೆಡೆ ಈತ 20ಕ್ಕೂ ಹೆಚ್ಚು ಕಳ್ಳತನ ಮಾಡಿದ್ದು, ಈತನನ್ನು ಹಿಡಿಯಲು ಪೊಲೀಸರು ಶತಪ್ರಯತ್ನ ಮಾಡುತ್ತಿದ್ದಾರೆ. ಖುದ್ದು ಎಸ್ ಪಿ ಇಶಾಪಂತ್ ಅವರು ಈತನನ್ನು ಹಿಡಿಯಲು ಫೀಲ್ಡಿಗಿಳಿದಿದ್ದಾರೆ.

ಯಾರು ಈ ಖಾಜಪ್ಪ?

ಸದ್ಯ ಪೊಲೀಸರಿಗೆ ತಲೆನೋವಾಗಿರುವ ಖಾಜಪ್ಪ ಯಾನೆ ಖಾಜಾ ಖತರ್‌ನಾಕ್‌ ಕಳ್ಳನೆಂದೇ ಹೆಸರು ಮಾಡಿದ್ದಾನೆ. ಮಹಾರಾಷ್ಟ್ರ ಮೂಲದ ಈತ ಅಫಜಲಪುರ ತಾಲೂಕಿನ ಬಳ್ಳೂರ್ಗಿ ಗ್ರಾಮದಲ್ಲಿ ವಾಸವಿದ್ದ. ಅನೇಕ ಯುವಕರನ್ನು ಬಳಸಿಕೊಂಡು ದರೋಡೆ ಮಾಡಿರುವ ಈತ ಜೈಲಿಗೂ ಹೋಗಿ ಬಂದಿದ್ದಾನೆ. ಜೈಲಿಗೆ ಹೋಗಿ ಬಂದರೂ ಮತ್ತೆ ಕಳ್ಳತನವನ್ನೇ ಮುಂದುವರೆಸಿದ್ದು, ಈತನ ಪತ್ತೆಗೆ ಬೆಂಗಳೂರು ಸಿಸಿಬಿ ಪೊಲೀಸರು ಬಂದಿದ್ದರು.

ಘಟನೆಯ ವಿವರ

ಬೆಂಗಳೂರಿನಲ್ಲಿ ಹಲವು ಕಳ್ಳತನ ಮಾಡಿದ ಬಳಿಕ ಈತ ಪೊಲೀಸರಿಂದ ತಪ್ಪಿಸಿಕೊಂಡು ತನ್ನ ವಾಸಸ್ಥಳವಾದ ಬಳ್ಳೂರ್ಗಿ ಗ್ರಾಮಕ್ಕೆ ಬಂದಿದ್ದಾನೆ. ಈ ಕಳ್ಳನು ಅಫಜಲಪುರಕ್ಕೆ ಆಗಮಿಸಿದ್ದಾನೆ ಎಂಬ ಮಾಹಿತಿಯನ್ನು ಬೆಂಗಳೂರು ಪೊಲೀಸರು ನೀಡಿದ್ದರು. ತಕ್ಷಣ ಕಲಬುರಗಿ ಎಸ್‌ಪಿ ಇಶಾಪಂತ್‌ ಅವರು ಅಫಜಲಪುರ ಪಿಎಸ್ಐಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸುವಂತೆ ಸೂಚಿಸಿದ್ದಾರೆ. ಕಾರಿನಲ್ಲಿ ಆಗಮಿಸುತ್ತಿರುವ ಈತನನ್ನು ಪೊಲೀಸರು ಹಿಂಬಾಲಿಸಿದ್ದಾರೆ. ಈ ಸಂದರ್ಭದಲ್ಲಿ ತನ್ನನ್ನು ಬೆನ್ನಟ್ಟಿ ಬರುತ್ತಿದ್ದ ಪಿಎಸ್‌ಐ ಪಿಸ್ತೂಲ್‌ ಅನ್ನೇ ಎಗರಿಸಿದ್ದಾನೆ.

ಕಳ್ಳ ಖಾಜಾನನ್ನ ಬಂಧಿಸುವ ವೇಳೆ ಅಫಜಲಪುರ ಪಿಎಸ್‌ಐ ಭೀಮರಾಯ್ ಅವರ ರಿವಾಲ್ವಾರ್‌ ಅನ್ನೇ ಕಸಿದುಕೊಂಡು ಪರಾರಿಯಾಗಿದ್ದಾನೆ. ಈತನ ವಿರುದ್ಧ ಬೆಂಗಳೂರು ಅಫಜಲಪುರ ಕಲಬುರಗಿ , ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ 20 ಅಧಿಕ ಕಳ್ಳತನ ಪ್ರಕರಣ ದಾಖಲಾಗಿದೆ.

ಇದೀಗ ಈ ಘಟನೆ ಕುರಿತು ಅಫಜಲಪುರ ಶಾಸಕ ಎಂವೈ ಪಾಟೀಲ್‌ ಪ್ರತಿಕ್ರಿಯಿಸಿದ್ದಾರೆ. ಶೂನ್ಯ ವೇಳೆಯಲ್ಲಿ ಈ ಘಟನೆಯನ್ನು ಪ್ರಸ್ತಾಪಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಇದಕ್ಕಾಗಿ ಸ್ಪೀಕರ್‌ ಯುಟಿ ಖಾದರ್‌ಗೆ ಪತ್ರವನ್ನೂ ಬರೆದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ