logo
ಕನ್ನಡ ಸುದ್ದಿ  /  Karnataka  /  Kannada Rajyotsava Belagavi: 10,000 Feet Long Kannada Flag March In Belagavi Tomorrow

Kannada Rajyotsava Belagavi: ಬೆಳಗಾವಿಯಲ್ಲಿ ನಾಳೆ 10,000 ಅಡಿ ಉದ್ದದ ಕನ್ನಡ ಬಾವುಟ, 50 ಸಾವಿರ ಜನರಿಗೆ ಹೋಳಿಗೆಯೂಟ

HT Kannada Desk HT Kannada

Oct 31, 2022 06:26 PM IST

ಬೆಳಗಾವಿಯಲ್ಲಿ ನಾಳೆ 10,000 ಅಡಿ ಉದ್ದದ ಕನ್ನಡ ಬಾವುಟ, 50 ಸಾವಿರ ಜನರಿಗೆ ಹೋಳಿಗೆಯೂಟ

    • ಕನ್ನಡ ಮನಸುಗಳು ಎಂಬ ಕನ್ನಡ ಸಂಘಟನೆಯಿಂದ ಬೆಳಗಾವಿಯ ಚೆನ್ನಮ್ಮ ಸರ್ಕಲ್​ನಿಂದ ಸುಮಾರು 3200 ಮೀಟರ್ ಉದ್ದದ ಕನ್ನಡ ಬಾವುಟ ಪ್ರದರ್ಶನ ನಡೆಯಲಿದೆ. ಇದೇ ಸಂಘಟನೆ ಈ ಹಿಂದೆ ಬೆಂಗಳೂರಿನಲ್ಲಿ 2040 ಮೀಟರ್ ಉದ್ದದ ಕನ್ನಡ ಬಾವುಟ ಪ್ರದರ್ಶನ ಮಾಡಿತ್ತು.
ಬೆಳಗಾವಿಯಲ್ಲಿ ನಾಳೆ 10,000 ಅಡಿ ಉದ್ದದ ಕನ್ನಡ ಬಾವುಟ, 50 ಸಾವಿರ ಜನರಿಗೆ ಹೋಳಿಗೆಯೂಟ
ಬೆಳಗಾವಿಯಲ್ಲಿ ನಾಳೆ 10,000 ಅಡಿ ಉದ್ದದ ಕನ್ನಡ ಬಾವುಟ, 50 ಸಾವಿರ ಜನರಿಗೆ ಹೋಳಿಗೆಯೂಟ (twitter)

ಬೆಳಗಾವಿ: ನಾಳೆ ಕರ್ನಾಟಕದ ಮುಕುಟ ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ನಡೆಯಲಿದೆ. ವಿಶೇಷವೆಂದರೆ, ನಾಳೆ 50 ಸಾವಿರ ಜನರಿಗೆ ಹೋಳಿಗೆಯೂಟವೂ ಇದೆ. ಜತೆಗೆ, ಕನ್ನಡ ಮನಸುಗಳ ತಂಡವು 10 ಸಾವಿರ ಅಡಿ ಉದ್ದದ ಬೃಹತ್‌ ಕನ್ನಡ ಧ್ವಜವನ್ನು ಮೆರವಣಿಗೆ ಮಾಡಲಿದೆ. ಇದು ಲಂಡನ್‌ ಬುಕ್‌ ಆಫ್‌ ರೆಕಾರ್ಡ್‌ಗೆ ಸೇರುವ ನಿರೀಕ್ಷೆಯಿದೆ.

ಟ್ರೆಂಡಿಂಗ್​ ಸುದ್ದಿ

Vijayanagara News: ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್‌ ಪತ್ನಿ ರುದ್ರಾಂಬ ನಿಧನ

Ramanagar News: ಮೇಕೆದಾಟಿನಲ್ಲಿ ಈಜಲು ಹೋಗಿ ಮೂವರು ಯುವತಿಯರು ಸೇರಿ ಐವರ ದುರ್ಮರಣ

Railway News: ಬೆಂಗಳೂರು ಬಿಲಾಸ್‌ಪುರಕ್ಕೆ ವಿಶೇಷ ಬೇಸಿಗೆ ರೈಲು, ಮೇ ತಿಂಗಳ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Holiday Declared: ಶ್ರೀನಿವಾಸಪ್ರಸಾದ್‌ ನಿಧನ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ನಾಳೆ ಸರ್ಕಾರಿ ಕಚೇರಿಗಳಿಗೆ ರಜೆ

ಈಗಾಗಲೇ ಕನ್ನಡ ಮನಸುಗಳ ತಂಡವು ಬೆಳಗಾವಿಯಲ್ಲಿದೆ. ಕನ್ನಡ ಮನಸುಗಳು ಎಂಬ ಕನ್ನಡ ಸಂಘಟನೆಯಿಂದ ಬೆಳಗಾವಿಯ ಚೆನ್ನಮ್ಮ ಸರ್ಕಲ್​ನಿಂದ ಸುಮಾರು 3200 ಮೀಟರ್ ಉದ್ದದ ಕನ್ನಡ ಬಾವುಟ ಪ್ರದರ್ಶನ ನಡೆಯಲಿದೆ. ಇದೇ ಸಂಘಟನೆ ಈ ಹಿಂದೆ ಬೆಂಗಳೂರಿನಲ್ಲಿ 2040 ಮೀಟರ್ ಉದ್ದದ ಕನ್ನಡ ಬಾವುಟ ಪ್ರದರ್ಶನ ಮಾಡಿತ್ತು.

ಬೆಳಗಾವಿಯಲ್ಲಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವೆಂದರೆ ಅದ್ಧೂರಿ ಸಮಾರಂಬ. ಗಡಿನಾಡು, ಕುಂದಾನಗರಿಯಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಜನರು ಆಗಮಿಸುತ್ತಾರೆ. ಈ ಬಾರಿ ರಾಜ್ಯೋತ್ಸವವದಲ್ಲಿ ಭಾಗಿಯಾಗುವವರಿಗೆ ಹೋಳಿಗೆ ಊಟ ನೀಡಲಾಗುತ್ತದೆ. ಸುಮಾರು ಐವತ್ತು ಸಾವಿರ ಜನರು ಹೋಳಿಗೆಯೂಟ ಸವಿಯಲ್ಲಿದ್ದಾರೆ.

ಕಳೆದೆರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಕಳೆಗುಂದಿತ್ತು. ಆದರೆ, ಈ ವರ್ಷ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹೋಳಿಗೆ ಊಟದ ಜತೆಗೆ ಬದನೆಕಾಯಿ ಪಲ್ಯ, ಅನ್ನ-ಸಾಂಬಾರು ಇರಲಿದೆ ಎಂದು ಬೆಳಗಾವಿಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಹುಕ್ಕೇರಿ ತಾಲೂಕಿನ ಯಮಕನಮರಡಿಯ 200 ಬಾಣಸಿಗರು ಊಟ ಸಿದ್ಧಪಡಿಸುತ್ತಿದ್ದು, ನಾಳೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಲು ಸಕಲ ಸಿದ್ಧತೆಗಳು ನಡೆದಿವೆ. 150 ಜನ ಹೆಣ್ಣಮಕ್ಕಳಿಂದ ಹೋಳಿಗೆ, 50 ಪುರುಷರಿಂದ ಅನ್ನ-ಸಾಂಬರು, ಪಲ್ಯ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಕನ್ನಡ ಮನಸುಗಳು ಎಂಬ ಕನ್ನಡ ಸಂಘಟನೆಯಿಂದ ಬೆಳಗಾವಿಯ ಚೆನ್ನಮ್ಮ ಸರ್ಕಲ್​ನಿಂದ ಸುಮಾರು 3200 ಮೀಟರ್ ಉದ್ದದ ಕನ್ನಡ ಬಾವುಟ ಪ್ರದರ್ಶನ ನಡೆಯಲಿದೆ. ಈ ಮೂಲಕ ಲಂಡನ್ ಬುಕ್ ಆಫ್ ರೆಕಾರ್ಡ್ ಸೇರಲಿದೆ. ಇದೇ ಸಂಘಟನೆ ಈ ಹಿಂದೆ ಬೆಂಗಳೂರಿನಲ್ಲಿ 2040 ಮೀಟರ್ ಉದ್ದದ ಕನ್ನಡ ಬಾವುಟ ಪ್ರದರ್ಶನ ಮಾಡಿತ್ತು.

ಬೆಳಗಾವಿ ಚೆನ್ನಮ್ಮ ವೃತ್ತದಿಂದ ಬೃಹತ್ ೧೦.೦೦೦ ಬಾವುಟ ಮೆರವಣಿಗೆಯು ನಾಳೆ ಆರಂಭಗೊಳ್ಳಲಿದೆ. ಈ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆ.

ಬೆಳಗಾವಿ ನಗರದ ವಿವಿಧ ಬಡಾವಣೆಯಲ್ಲಿ ಪೊಲೀಸ್ ಅಧಿಕಾರಿಗಳ ರೌಂಡ್ಸ್‌ ಹೊಡೆದಿದ್ದು, ಪೊಲೀಸರ ರೂಟ್ ಮಾರ್ಚ್ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಂ.ಇ.ಎಸ್ ಪುಂಡರಿಂದ ಕರಾಳ ದಿನಾಚರಣೆಗೆ ಕರೆ ಹಿನ್ನೆಲೆ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಮೂವರು ಡಿಸಿಪಿ, 12 ಎಸಿಪಿ, 52 ಇನ್ಸ್‌ಪೆಕ್ಟರ್, 2500 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಹಾಗೇ 9 ಸಿಎಆರ್ ತುಕಡಿ, 10 ಕೆಎಸ್‌ಆರ್‌ಪಿ ತುಕಡಿ, 500 ಗೃಹರಕ್ಷಕ ದಳ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. 35 ವಿಡಿಯೋ ಕ್ಯಾಮರಾ, 300 ಸಿಸಿ ಕ್ಯಾಮರಾ, 8 ಡ್ರೋನ್ ಕ್ಯಾಮರಾಗಳನ್ನು ಕಣ್ಗಾವಲಾಗಿ ಇವೆ ಎಂದು ವರದಿಗಳು ತಿಳಿಸಿವೆ.

    ಹಂಚಿಕೊಳ್ಳಲು ಲೇಖನಗಳು