logo
ಕನ್ನಡ ಸುದ್ದಿ  /  ಕರ್ನಾಟಕ  /  Ramanagar News: ಮೇಕೆದಾಟಿನಲ್ಲಿ ಈಜಲು ಹೋಗಿ ಮೂವರು ಯುವತಿಯರು ಸೇರಿ ಐವರ ದುರ್ಮರಣ

Ramanagar News: ಮೇಕೆದಾಟಿನಲ್ಲಿ ಈಜಲು ಹೋಗಿ ಮೂವರು ಯುವತಿಯರು ಸೇರಿ ಐವರ ದುರ್ಮರಣ

Umesha Bhatta P H HT Kannada

Apr 29, 2024 09:07 PM IST

google News

ಬೆಂಗಳೂರು ಸಮೀಪದ ಮೇಕೆದಾಟುವಿನಲ್ಲಿ ಮುಳುಗಿ ಐವರು ಮೃತಪಟ್ಟಿದ್ದಾರೆ.

    • ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಮೇಕೆದಾಟು ಬಳಿ ಕಾವೇರಿ ನದಿಯಲ್ಲಿ ಮುಳುಗಿ ಐವರು ಮೃತಪಟ್ಟಿದ್ದಾರೆ.
    • ವರದಿ: ಎಚ್‌.ಮಾರುತಿ. ಬೆಂಗಳೂರು
ಬೆಂಗಳೂರು ಸಮೀಪದ ಮೇಕೆದಾಟುವಿನಲ್ಲಿ ಮುಳುಗಿ ಐವರು ಮೃತಪಟ್ಟಿದ್ದಾರೆ.
ಬೆಂಗಳೂರು ಸಮೀಪದ ಮೇಕೆದಾಟುವಿನಲ್ಲಿ ಮುಳುಗಿ ಐವರು ಮೃತಪಟ್ಟಿದ್ದಾರೆ.

ರಾಮನಗರ: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಪ್ರವಾಸಕ್ಕೆ ಆಗಮಿಸಿ ಬೆಂಗಳೂರಿನ ಇಬ್ಬರು ಯುವಕರು ಮತ್ತು ಮೂವರು ಯುವತಿಯರು ಸೇರಿ ಐವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿದ್ದಾರೆ. ಬಿಸಿಲಿನಿಂದ ತಂಪು ಮಾಡಿಕೊಳ್ಳಲು ಈಜಲು ನದಿಗೆ ಇಳಿದಿದ್ದಾರೆ. ಆಗ ಹರ್ಷಿತ, ವರ್ಷಾ ಹಾಗೂ ಸ್ನೇಹ ಅಭಿಷೇಕ್ ಮತ್ತು ತೇಜಸ್ ಈಜುವಾಗ ಮುಳುಗಿ ಮೃತಪಟ್ಟ ದುರ್ದೈವಿ ವಿದ್ಯಾರ್ಥಿಗಳು. ಇವರಲ್ಲಿ ಕೆಲವರು ಪೀಣ್ಯ ಎರಡನೇ ಹಂತದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಮೇಕೆದಾಟು ಸಂಗಮದಲ್ಲಿ ಆಳವಾದ ಜಾಗದಲ್ಲಿ ಈಜಲು ಹೋಗಿದ್ದಾರೆ. ಆಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ‌ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಎಲ್ಲ ಐವರ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಟಿಟಿ ವಾಹನದಲ್ಲಿ ಒಟ್ಟು 12 ವಿದ್ಯಾರ್ಥಿಗಳು ಪ್ರವಾಸಕ್ಕೆ ಆಗಮಿಸಿದ್ದರು.

ಬೇಸಿಗೆಯ ಬಿಸಿ ತಾಳಲಾರದೆ, ಈ ವಿದ್ಯಾರ್ಥಿಗಳು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಾವೇರಿ ನದಿ ಹರಿಯುವ ಸಂಗಮಕ್ಕೆ ಪ್ರವಾಸ ಕೈಗೊಂಡಿದ್ದರು. ಅದೇ ರೀತಿ ಇದರಲ್ಲಿ 12 ಜನ ವಿದ್ಯಾರ್ಥಿಗಳು, ಟಿಟಿ ವಾಹನದಲ್ಲಿ ಮೇಕೆದಾಟಿಗೆ ತೆರಳಿದ್ದರು. ಈ ವೇಳೆ ಘಟನೆ ಸಂಭವಿಸಿದೆ.

ಬೆಂಗಳೂರಿನಿಂದ ಮೇಕೆದಾಟು ನೋಡಲೆಂದು ಹೋಗಿದ್ದ 12 ಕಾಲೇಜು ವಿದ್ಯಾರ್ಥಿಗಳ ಪೈಕಿ 5 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಅಭಿಷೇಕ್, ತೇಜಸ್, ಹರ್ಷಿತ್, ವರ್ಷಾ, ನೇಹ ಸಾವನ್ನಪ್ಪಿರುವ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಎಲ್ಲರೂ 20 ವರ್ಷದ ವಯಸ್ಸಿನವರು ಎಂದು ಗೊತ್ತಾಗಿದೆ.

(ವರದಿ: ಎಚ್. ಮಾರುತಿ, ಬೆಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ