logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget 2023: ಬೆಂಗಳೂರಿಗೆ ಭರಪೂರ ಕೊಡುಗೆಗಳು; ಪ್ರಗತಿಯಲ್ಲಿರುವ ಯೋಜನೆಗಳಿಗೆ 40 ಸಾವಿರ ಕೋಟಿ ಅನುದಾನ ಘೋಷಣೆ

Karnataka Budget 2023: ಬೆಂಗಳೂರಿಗೆ ಭರಪೂರ ಕೊಡುಗೆಗಳು; ಪ್ರಗತಿಯಲ್ಲಿರುವ ಯೋಜನೆಗಳಿಗೆ 40 ಸಾವಿರ ಕೋಟಿ ಅನುದಾನ ಘೋಷಣೆ

HT Kannada Desk HT Kannada

Jul 07, 2023 09:34 PM IST

google News

ಬೆಂಗಳೂರಿಗೆ ಭರಪೂರ ಕೊಡುಗೆಗಳನ್ನು ನೀಡಿದ ಸಿದ್ದರಾಮಯ್ಯ

    • Bengaluru City: ಬೆಂಗಳೂರಿಗೆ ಭರ್ಜರಿ ಕೊಡುಗೆಗಳನ್ನು ನೀಡಿದ್ದು ಅದರಲ್ಲಿ ನಗರೋತ್ಥಾನ, ಅಧಿಕ ಸಾಂದ್ರತೆಯ ಕಾರಿಡಾರ್, ವೈಟ್ ಟಾಪಿಂಗ್ ರಸ್ತೆ, ತ್ಯಾಜ್ಯ ನಿರ್ವಹಣೆ, ರಾಜಕಾಲುವೆಗಳ ತೆರವು ಮತ್ತು ದುರಸ್ತಿ, ರಸ್ತೆ ಗುಂಡಿ ಮುಚ್ಚುವುದು ಇವುಗಳಿಗೆ ಒತ್ತುಕೊಡಲಾಗಿದೆ. ಸದ್ಯ ಪ್ರಗತಿಯಲ್ಲಿರುವ ಯೋಜನೆಗಳಿಗೆ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಬೆಂಗಳೂರಿಗೆ ಭರಪೂರ ಕೊಡುಗೆಗಳನ್ನು ನೀಡಿದ ಸಿದ್ದರಾಮಯ್ಯ
ಬೆಂಗಳೂರಿಗೆ ಭರಪೂರ ಕೊಡುಗೆಗಳನ್ನು ನೀಡಿದ ಸಿದ್ದರಾಮಯ್ಯ

ಬೆಂಗಳೂರು: ನಗರೋತ್ಥಾನ, ಅಧಿಕ ಸಾಂದ್ರತೆಯ ಕಾರಿಡಾರ್, ವೈಟ್ ಟಾಪಿಂಗ್ ರಸ್ತೆ, ತ್ಯಾಜ್ಯ ನಿರ್ವಹಣೆ, ರಾಜಕಾಲುವೆಗಳ ತೆರವು ಮತ್ತು ದುರಸ್ತಿ, ರಸ್ತೆ ಗುಂಡಿ ಮುಚ್ಚುವುದು ಹಾಗೂ ಸದ್ಯ ಪ್ರಗತಿಯಲ್ಲಿರುವ ಯೋಜನೆಗಳಿಗೆ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಸಂಚಾರ ದಟ್ಟಣೆ ನಿವಾರಣೆಗೆ ನಮ್ಮ ಮೆಟ್ರೊ ಯೋಜನೆ ಹಾಗೂ ಉಪನಗರ ರೈಲು ಯೋಜನೆಗಳಿಗಾಗಿ 30 ಸಾವಿರ ಕೋಟಿ ನೀಡುವುದಾಗಿ ಹೇಳಿದೆ. ಬೈಯಪ್ಪನಹಳ್ಳಿ ಪ್ರದೇಶದಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ತಲುಪಲು ಅನುಕೂಲವಾಗುವಂತೆ ಬೈಯಪ್ಪನಹಳ್ಳಿ- ಕೃಷ್ಣರಾಜಪುರ, ಕೆಂಗೇರಿ- ಚಕ್ಕಘಟ್ಟ, ನಾಗಸಂದ್ರ- ಮಾದಾವರ, ಆರ್.ವಿ.ರಸ್ತೆ- ಬೊಮ್ಮಸಂದ್ರ ಸೇರಿದಂತೆ ಒಟ್ಟು 27 ಕಿ.ಮೀ. ಉದ್ದದ ನೂತನ ಮೆಟ್ರೋ ಮಾರ್ಗ ಆರಂಭಕ್ಕೆ ಕ್ರಮ 7263 ಕೋಟಿ ವೆಚ್ಚದ ಮೇಲ್ವೇತುವೆ ನಿರ್ಮಾಣಕ್ಕೆ ಯೋಜಿಸಲಾಗಿದೆ.

ಮೂರು ವರ್ಷಗಳಲ್ಲಿ ಈಗಿರುವ 70 ಕಿ.ಮೀ. ಮೆಟ್ರೊ ಸಂಪರ್ಕ ಜಾಲವನ್ನು 176 ಕಿ.ಮೀಗೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. 2026ರಲ್ಲಿ ವಿಮಾನನಿಲ್ದಾಣ ಮೆಟ್ರೊ ಲೈನ್ ಕಾರ್ಯಾರಂಭ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಮೇಲ್ದರ್ಜೆಗೆ 71411ಕೋಟಿ ಅನುದಾನ, 100 ಕಿ.ಮೀ. ರಸ್ತೆಗಳ ವೈಟ್ ಟಾಪಿಂಗ್‌ಗೆ 3800 ಕೋಟಿ ಅನುದಾನ ಘೋಷಿಸಲಾಗಿದೆ. ಅಧಿಕ ಸಂಚಾರ ದಟ್ಟಣೆ ಇರುವ 192 ಕಿ.ಮೀ. ಉದ್ದದ 12 ಪ್ರಮುಖ ರಸ್ತೆಗಳಾದ 'ಹೈ ಡೆನ್ಸಿಟಿ ಕಾರಿಡಾರ್' ಅಭಿವೃದ್ಧಿಗೆ 7273 ಕೋಟಿ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಜತೆಗೆ ರಾಜಕಾಲುವೆ ಒತ್ತುವರಿಯನ್ನು ಕಂದಾಯ ಇಲಾಖೆ ಗುರುತಿಸಿದ ಸ್ಥಳಗಳಲ್ಲಿ ತೆರವಿಗೆ ಕ್ರಮ ವಹಿಸುವುದಾಗಿಯೂ ಬಜೆಟ್‌ನಲ್ಲಿ ಹೇಳಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ