logo
ಕನ್ನಡ ಸುದ್ದಿ  /  ಕರ್ನಾಟಕ  /  Rahul Gandhi: ದ್ವೇಷದ ಮುಂದೆ ಪ್ರೀತಿಗೆ ಜಯ; ಬಿಜೆಪಿ ಬಂಡವಾಳಶಾಹಿ ನೀತಿ ಎದುರು ಜನಬಲದ ಗೆಲುವು ಎಂದ ರಾಹುಲ್ ಗಾಂಧಿ

Rahul Gandhi: ದ್ವೇಷದ ಮುಂದೆ ಪ್ರೀತಿಗೆ ಜಯ; ಬಿಜೆಪಿ ಬಂಡವಾಳಶಾಹಿ ನೀತಿ ಎದುರು ಜನಬಲದ ಗೆಲುವು ಎಂದ ರಾಹುಲ್ ಗಾಂಧಿ

Jayaraj HT Kannada

May 13, 2023 05:23 PM IST

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ

    • ಕರ್ನಾಟಕದಲ್ಲಿ ದ್ವೇಷದ ಮುಂದೆ ಪ್ರೀತಿ ಗೆದ್ದಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ದೇಶದ ಇತರ ಎಲ್ಲ ರಾಜ್ಯಗಳಲ್ಲಿಯೂ ಮುಂದೆ ಇದೇ ರೀತಿ ಆಗುತ್ತದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ (Sanchit Khanna/ Hindustan Times)

ಕರ್ನಾಟಕದ ಗೆಲುವನ್ನು ಜನತೆಯ ಗೆಲುವು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ. ತಮ್ಮ ಸ್ವಾರ್ಥದಿಂದಾಗಿ ತಮಗೆ ಬೇಕಾದವರಿಗೆ ಅಧಿಕಾರ ನೀಡುವ ಬಿಜೆಪಿಯ ಬಂಡವಾಳಶಾಹಿ ನೀತಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ರಾಹುಲ್‌ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದ ಎರಡನೇ ಹಂತದ ಮತದಾನ, 4 ಸಚಿವರ ಮಕ್ಕಳಿಗೆ ಸತ್ವ ಪರೀಕ್ಷೆ

108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಒಂದು ದಿನ ಮುಂದೂಡಿಕೆ; ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಚಿವರು

Hassan Scandal: ಪ್ರಜ್ವಲ್‌ ರೇವಣ್ಣ ವಿಡಿಯೋ ವೈರಲ್‌ಗೆ ಸಿಎಂ, ಡಿಸಿಎಂ ಕಾರಣ: ವಕೀಲ ದೇವರಾಜೇಗೌಡ ಸ್ಪೋಟಕ ಮಾಹಿತಿ

Drought fund: ಮುಂಗಾರು 2023 ಬರ ಪರಿಹಾರ ವಿತರಣೆಗೆ ಕ್ಷಣಗಣನೆ, ಹಣ ಬಂದಿದೆಯೇ ಎಂದು ಹೀಗೆ ಪರೀಕ್ಷಿಸಿ

ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ, ದ್ವೇಷದ ಮುಂದೆ ಪ್ರೀತಿ ಗೆದ್ದಿದೆ ಎಂದು ಹೇಳಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ದೇಶದ ಇತರ ಎಲ್ಲ ರಾಜ್ಯಗಳಲ್ಲಿಯೂ ಮುಂದೆ ಇದೇ ರೀತಿ ಆಗುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಗೆಲುವಿನ ಬಳಿಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಹೀಗಿವೆ.

1. ನಾವು ಕರ್ನಾಟಕ ಚುನಾವಣೆಯಲ್ಲಿ ಪ್ರೀತಿಯಿಂದ ಸ್ಪರ್ಧಿಸಿದ್ದೇವೆಯೇ ಹೊರತು ದ್ವೇಷದಿಂದಲ್ಲ. 'ನಫ್ರತ್ ಕಾ ಬಜಾರ್ ಮುಚ್ಚಲ್ಪಟ್ಟಿದೆ', 'ಮೊಹಬ್ಬತ್ ಕಿ ದುಕಾನ್' ತೆರೆದಿದೆ.

2. ಬಡವರ ಬಲವು ಬಂಡವಾಳಶಾಹಿಗಳ ಶಕ್ತಿಯನ್ನು ಸೋಲಿಸಿದೆ. ಮುಂದೆ ಎಲ್ಲಾ ರಾಜ್ಯಗಳಲ್ಲಿಯೂ ಇದೇ ರೀತಿ ಆಗಲಿದೆ.

3. ಕರ್ನಾಟಕ ಚುನಾವಣೆಯಲ್ಲಿ ಒಂದು ಕಡೆ ಕ್ರೂರ ಬಂಡವಾಳಶಾಹಿಗಳ ಶಕ್ತಿ ಇತ್ತು. ಇದೇ ವೇಳೆ ಇನ್ನೊಂದು ಕಡೆ ಬಡವರ ಬಲ ಇತ್ತು.

4. ನಾನು ಕರ್ನಾಟಕದ ಜನರು, ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಧನ್ಯವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

    ಹಂಚಿಕೊಳ್ಳಲು ಲೇಖನಗಳು