logo
ಕನ್ನಡ ಸುದ್ದಿ  /  Karnataka  /  Karnataka Election News In Kannada Hassan Jds Candidate Swaroop Wins In Hassan Against Preetham Gowda Jra

Hassan Result: ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್‌ಗೆ ಗೆಲುವು; ಬಿಜೆಪಿ ಹಾಲಿ ಶಾಸಕ ಪ್ರೀತಂ ಗೌಡಗೆ ಸೋಲು

Jayaraj HT Kannada

May 13, 2023 11:35 AM IST

ಸ್ವರೂಪ್‌, ಪ್ರೀತಂ ಗೌಡ

    • ಹಾಸನದಲ್ಲಿ ಹಾಲಿ ಶಾಸಕ ಬಿಜೆಪಿಯ ಪ್ರೀತಂ ಗೌಡ ಅವರ ವಿರುದ್ಧ ಜೆಡಿಎಸ್‌ನ ಸ್ವರೂಪ್‌ ಗೆಲುವು ಸಾಧಿಸಿದ್ದಾರೆ. ಹಾಲಿ ಶಾಸಕ ಬಿಜೆಪಿಯ ಪ್ರೀತಂ ಗೌಡ ಸೋತಿದ್ದಾರೆ.
ಸ್ವರೂಪ್‌, ಪ್ರೀತಂ ಗೌಡ
ಸ್ವರೂಪ್‌, ಪ್ರೀತಂ ಗೌಡ

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಸ್ವರೂಪ್‌ ಗೆಲುವು ಸಾಧಿಸಿದ್ದಾರೆ. ಹಾಲಿ ಶಾಸಕ ಬಿಜೆಪಿಯ ಪ್ರೀತಂ ಗೌಡ ಸೋತಿದ್ದಾರೆ. ಭವಾನಿ ರೇವಣ್ಣ ಸ್ಪರ್ಧೆಯ ವಿಚಾರವಾಗಿ ಉದ್ಭವಿಸಿದ್ದ ಗೊಂದಲದ ಕಾರಣ ಈ ಕ್ಷೇತ್ರ ಎಲ್ಲರ ಗಮನ ಸೆಳೆದಿತ್ತು. ಬಿಜೆಪಿಯ ಪ್ರೀತಂ ಗೌಡ ಅವರು ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದು, ಹಾಗೂ ದೇವೇಗೌಡರ ಕುಟುಂಬ ಒಗ್ಗೂಡಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಬೆನ್ನಿಗೆ ನಿಂತಿದ್ದು ಈ ಗೆಲುವಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದಲಿತರಿಗೆ ಆರ್ಥಿಕ ಶಕ್ತಿ ನೀಡುವ ಎಸ್ಸಿಪಿ ಟಿಎಸ್‌ಪಿ ಜಾರಿ ಮಾಡಿ: ಸಿದ್ದರಾಮಯ್ಯ ಸವಾಲು

Nutmeg price: ಜಾಯಿಕಾಯಿ-ಜಾಯಿಪತ್ರಿ ದರ ಕುಸಿತ, ಕರ್ನಾಟಕದ ಬೆಳೆಗಾರರಿಗೆ ಆತಂಕ

Udupi News: ಸಣ್ಣ ಮಳೆಯ ಬಳಿಕ ಉಡುಪಿಯಲ್ಲಿ ಡೆಂಗ್ಯೂ ಭೀತಿ, ವಲಸೆ ಕಾರ್ಮಿಕರ ಆರೋಗ್ಯದ ಮೇಲೆ ನಿಗಾ

Bangalore News: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಎನ್‌ಐಎ ನ್ಯಾಯಾಲಯ

ಜೆಡಿಎಸ್ ನ ಎಚ್‌ಡಿ ರೇವಣ್ಣ ಹಾಗೂ ಬಿಜೆಪಿಯ ಪ್ರೀತಂಗೌಡ ಅವರ ನಡುವಿನ ತೀವ್ರ ರಾಜಕೀಯ ಜಟಾಪಟಿ ಕಾರಣದಿಂದ ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರೀತಂಗೌಡ ಅವರು ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ವಿರುದ್ಧ 8000 ಕ್ಕೂ ಅಧಿಕ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.

ಪ್ರಥಮ ಬಾರಿಗೆ ಕಣಕ್ಕಿಳಿದಿದ್ದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ವಿಜಯ ಪತಾಕೆ ಹಾರಿಸಿದ್ದಾರೆ. ಆ ಮೂಲಕ ಕಳೆದ ಚುನಾವಣೆಯಲ್ಲಿ ತಮ್ಮ ತಂದೆ ಎಚ್ಎಸ್ ಪ್ರಕಾಶ್ ಅವರನ್ನು ಸೋಲಿಸಿದ್ದ ಪ್ರೀತಂಗೌಡ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

ರೇವಣ್ಣ ತಮ್ಮ ವಿರುದ್ಧ ಸ್ಪರ್ಧಿಸಿದರೆ 50 ಸಾವಿರ ಮತಗಳ ಅಂತರದ ಗೆಲುವು ಸಾಧಿಸುವುದಾಗಿ ಪಂಥಾಹ್ವಾನ ನೀಡಿದ್ದ ಪ್ರೀತಂಗೌಡರಿಗೆ ಜೆಡಿಎಸ್‌ನ ಸಾಮಾನ್ಯ ಕಾರ್ಯಕರ್ತ ಸೂಕ್ತ ಉತ್ತರ ನೀಡಿದ್ದಾರೆ ಎಂದು ಕಾರ್ಯಕರ್ತರ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ.

    ಹಂಚಿಕೊಳ್ಳಲು ಲೇಖನಗಳು