logo
ಕನ್ನಡ ಸುದ್ದಿ  /  ಕರ್ನಾಟಕ  /  Garlic High Rate:ಬೆಳ್ಳುಳ್ಳಿ ದರದಲ್ಲೀ ಭಾರೀ ಏರಿಕೆ, ಕೆಜಿ ದರ ಎಷ್ಟು ಹೆಚ್ಚಿದೆ; ಇನ್ನೂ 3 ತಿಂಗಳು ಬೆಲೆ ಇಳಿಕೆ ಲಕ್ಷಣ ಕಡಿಮೆ

Garlic high Rate:ಬೆಳ್ಳುಳ್ಳಿ ದರದಲ್ಲೀ ಭಾರೀ ಏರಿಕೆ, ಕೆಜಿ ದರ ಎಷ್ಟು ಹೆಚ್ಚಿದೆ; ಇನ್ನೂ 3 ತಿಂಗಳು ಬೆಲೆ ಇಳಿಕೆ ಲಕ್ಷಣ ಕಡಿಮೆ

Umesha Bhatta P H HT Kannada

Nov 12, 2024 08:34 AM IST

google News

ಕರ್ನಾಟಕದಲ್ಲಿ ಬೆಳ್ಳುಳ್ಳಿ ದರದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

    • Garlic rates jumped: ಕರ್ನಾಟಕದಲ್ಲಿ ಬೆಳ್ಳುಳ್ಳಿ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು. ಕೆಜಿ ದರ ಅತ್ಯಧಿಕ 500 ರೂ. ತಲುಪಿದೆ. ಇನ್ನೂ ಮೂರು ತಿಂಗಳ ಕಾಲ ಇದೇ ರೀತಿಯಲ್ಲೇ ದರ ಇರಲಿದೆ. 
ಕರ್ನಾಟಕದಲ್ಲಿ ಬೆಳ್ಳುಳ್ಳಿ ದರದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.
ಕರ್ನಾಟಕದಲ್ಲಿ ಬೆಳ್ಳುಳ್ಳಿ ದರದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ಬೆಂಗಳೂರು: ಈ ವರ್ಷ ಕರ್ನಾಟಕ ಮಾತ್ರವಲ್ಲದೇ ಭಾರತದ ಮಾರುಕಟ್ಟೆಯಲ್ಲಿ ಭಾರೀ ದರ ಏರಿಳಿತ ಕಂಡ ದಿನ ಬಳಕೆಯ ಆಹಾರ ಹಾಗೂ ಪ್ರಮುಖ ಕೃಷಿ ಉತ್ಪನ್ನಗಳಲ್ಲಿ ಬೆಳುಳ್ಳಿಯೇ ಮುಂಚೂಣಿಯಲ್ಲಿದೆ. ಈಗಾಗಲೇ ಎರಡು ತಿಂಗಳಿನಿಂದ ದುಬಾರಿಯಾಗಿರುವ ಬೆಳ್ಳುಳ್ಳಿ ದರ ಮತ್ತೆ ಏರಿಕೆ ಕಂಡಿದೆ. ಬೆಂಗಳೂರು ಸಹಿತ ಕರ್ನಾಟಕದ ಹಲವು ಮಾರುಕಟ್ಟೆಗಳಲ್ಲಿ ಕೆಜಿ ಬೆಳ್ಳುಳ್ಳಿ ದರವೇ 500 ರೂ. ತಲುಪಿವೆ. ತಿಂಗಳ ಹಿಂದೆಯಷ್ಟೇ 400 ರೂ. ಗಡಿ ದಾಟಿದ್ದ ಬೆಳ್ಳುಳ್ಳಿ ದರ ಈಗ ಮತ್ತಷ್ಟು ಏರಿಕೆ ಕಂಡಿದೆ. ಒಂದೇ ತಿಂಗಳ ಅಂತರದಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 100 ರೂ. ಹೆಚ್ಚಿದೆ. ಮುಂದಿನ ತಿಂಗಳ ಫೆಬ್ರವರಿ ವರೆಗೂ ಇದೇ ರೀತಿ ದರದಲ್ಲಿ ಏರಿಳಿತ ಕಾಣಬಹುದು ಎನ್ನುವ ಅಭಿಪ್ರಾಯ ಮಾರುಕಟ್ಟೆಯಲ್ಲಿದೆ.

ದರ ದುಬಾರಿ ಏಕೆ

ಬೆಳ್ಳುಳ್ಳಿಯನ್ನು ಮುಖ್ಯವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಅದರಲ್ಲೂ ಮಧ್ಯಪ್ರದೇಶ, ರಾಜಸ್ತಾನದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಮಹಾರಾಷ್ಟ್ರ ಕೂಡ ಬೆಳ್ಳುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದು.

ಆ ರಾಜ್ಯಗಳಲ್ಲಿ ಈಗ ಇಳುವರಿ ಕಡಿಮೆಯಾಗಿದೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಬರುವ ಬೆಳ್ಳುಳ್ಳಿ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡಿರುವುದರಿಂದ ದರ ಸಹಜವಾಗಿಯೇ ಏರಿಕೆ ಕಂಡಿದೆ.

ದರ ಎಷ್ಟು ಏರಿಕೆಯಾಗಿದೆ

ಆರು ತಿಂಗಳ ಹಿಂದೆ ದರ ಕೊಂಚ ಏರಿಕೆ ಕಂಡಿತ್ತು.ಮಳೆಯಿಂದ ಇಳುವರಿ ಬಾರದೇ 350 ರೂ.ವರೆಗೂ ಕೆಜಿಯ ಬೆಳ್ಳುಳ್ಳಿ ದರ ತಲುಪಿತ್ತು.ಆನಂತರ ಸಹಜ ಸ್ಥಿತಿಗೆ ಬಂದಿತ್ತು. ಕಳೆದ ತಿಂಗಳು ಏಕಾಏಕಿ ದರ ಏರಿಕೆ ಕಂಡಿತ್ತು. ಕೆಜಿ ಬೆಳ್ಳುಳ್ಳಿ ದರ 350ರಿಂದ 400 ರೂಪಾಯಿಗೆ ಮಾರಾಟವಾಗುತ್ತಿತ್ತು.

ಅದರಲ್ಲೂ ಸಗಟು ದರದಲ್ಲಿ ಕೊಂಚ ಕಡಿಮೆ ಇದ್ದರೂ ಅಂಗಡಿಗಳಲ್ಲಿ ಕೆಜಿಗೆ 400 ರೂ. ಗೆ ಏರಿಕೆ ಕಂಡಿತ್ತು. ಈಗ ಇದೇ ದರ ಮತ್ತೆ ಏರಿಕೆಯಾಗಿದೆ. ಒಂದೇ ತಿಂಗಳಲ್ಲಿ ಕೆಜಿ ದರ ಬೆಂಗಳೂರು ಸಹಿತ ಹಲವು ಕಡೆಗಳಲ್ಲಿ ನೂರು ರೂ. ಏರಿಕೆಯಾಗಿದೆ. ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ದರ ಕೆಜಿಗೆ 500 ರೂ ತಲುಪಿದೆ.

ಇದನ್ನೂ ಓದಿರಿ: ಭತ್ತ, ರಾಗಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ಎಷ್ಟು ದರ ಸಿಗಲಿದೆ; ರೈತರ ನೋಂದಣಿಗೆ ಏನೇನು ಪ್ರಕ್ರಿಯೆಗಳಿವೆ

ಬೆಂಗಳೂರು ಮಾರುಕಟ್ಟೆ ದರ

ಕೆಲವು ದಿನಗಳಿಂದ ಬೆಳ್ಳುಳ್ಳಿ ದರ ಏರಿಕೆಯಾಗುತ್ತಲೇ ಇದೆ. ಈ ವರ್ಷ ದುಬಾರಿ ಕೃಷಿ ಉತ್ಪನ್ನವಾಗಿ ಬೆಳ್ಳುಳ್ಳಿ ಕಂಡಿದೆ. ಈಗ ಮಾರುಕಟ್ಟೆಗೆ ಬರುವ ಬೆಳ್ಳುಳ್ಳಿ ಪ್ರಮಾಣ ಕಡಿಮೆಯಾಗಿರುವುದಿಂದ ಬೆಲೆ ಏರಿಕೆ ಕಂಡು ಬಂದಿದೆ. ಇಷ್ಟು ದರ ಏರಿಕೆ ಕಂಡಿರುವುದು ಮೊದಲು ಇರಬೇಕು ಎನ್ನುವುದು ಬೆಂಗಳೂರಿನ ಮಾರುಕಟ್ಟೆ ವ್ಯಾಪಾರಸ್ಥರ ಅಭಿಪ್ರಾಯ.

ಜನವರಿ ಫೆಬ್ರವರಿ ಹೊತ್ತಿಗೆ ಉತ್ತರ ಭಾರತದಲ್ಲಿ ಬೆಳ್ಳುಳ್ಳಿ ಉತ್ಪಾದನೆಯಾಗಲಿದೆ. ಆನಂತರ ಅಲ್ಲಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಬೆಳ್ಳುಳ್ಳಿ ಬರಬೇಕು. ಆಗ ದರ ಮತ್ತೆ ಸಹಜ ಸ್ಥಿತಿಗೆ ಬರಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ.

ಸರ್ಕಾರ ಮಧ್ಯಪ್ರವೇಶಿಸಲಿ

ಈಗಾಗಲೇ ಈರುಳ್ಳಿ ದರವೂ ನಿಧಾನವಾಗಿ ಏರಿಕೆಯಾಗುತ್ತಿದೆ. ಟೊಮೆಟೋ ದರವೂ ಏರಿಕೆಯಾಗಿ ಈಗ ಸಹಜ ಸ್ಥಿತಿಗೆ ಬಂದಿದೆ. ಬೆಳ್ಳುಳ್ಳಿ ದರವೂ ಹೆಚ್ಚಾಗಿದ್ದು, ದರ ದುಬಾರಿಯಾಗುವುದನ್ನು ಸರ್ಕಾರ ತಡೆಯಬೇಕು. ಬೆಳ್ಳುಳ್ಳಿ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಹಕರು ಆಗ್ರಹಿಸುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ