logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Polls 2023: ಚುನಾವಣೆ ಘೋಷಣೆಗೆ ಮುನ್ನ ಪ್ರಜಾಧ್ವನಿ ಯಾತ್ರೆಯಲ್ಲಿ ಜನರೆಡೆಗೆ 500 ರೂಪಾಯಿ ನೋಟುಗಳನ್ನೆಸೆದ ಡಿಕೆಶಿ- ವಿಡಿಯೋ ಔಟ್‌

Karnataka Polls 2023: ಚುನಾವಣೆ ಘೋಷಣೆಗೆ ಮುನ್ನ ಪ್ರಜಾಧ್ವನಿ ಯಾತ್ರೆಯಲ್ಲಿ ಜನರೆಡೆಗೆ 500 ರೂಪಾಯಿ ನೋಟುಗಳನ್ನೆಸೆದ ಡಿಕೆಶಿ- ವಿಡಿಯೋ ಔಟ್‌

HT Kannada Desk HT Kannada

Mar 29, 2023 10:32 AM IST

ಪ್ರಜಾಧ್ವನಿ ಯಾತ್ರೆಯ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ 500 ರೂಪಾಯಿ ನೋಟುಗಳನ್ನು ಜನರೆಡೆಗೆ ಎಸೆದ ಸಂದರ್ಭದ ಚಿತ್ರ.

  • Karnataka Polls 2023: ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ವಿಧಾನಸಭೆ ಚುನಾವಣೆ ಘೋಷಣೆಗೆ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಜನರೆಡೆಗೆ 500 ರೂಪಾಯಿ ನೋಟುಗಳನ್ನು ಎಸೆದ ವಿಡಿಯೋ ಬಹಿರಂಗವಾಗಿದೆ.

ಪ್ರಜಾಧ್ವನಿ ಯಾತ್ರೆಯ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ 500 ರೂಪಾಯಿ ನೋಟುಗಳನ್ನು ಜನರೆಡೆಗೆ ಎಸೆದ ಸಂದರ್ಭದ ಚಿತ್ರ.
ಪ್ರಜಾಧ್ವನಿ ಯಾತ್ರೆಯ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ 500 ರೂಪಾಯಿ ನೋಟುಗಳನ್ನು ಜನರೆಡೆಗೆ ಎಸೆದ ಸಂದರ್ಭದ ಚಿತ್ರ. (ANI video grab)

ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಗೆ ಮೊದಲು, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ 500 ರೂಪಾಯಿ ನೋಟುಗಳನ್ನು ಎಸೆದ ದೃಶ್ಯವಿರುವ ವಿಡಿಯೋ ಬಹಿರಂಗವಾಗಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು: ಬ್ಯೂಟಿಷಿಯನ್ ಮನೆಯ ಕೀ ಕದ್ದು ನಕಲಿ ಕೀ ಮಾಡಿಸಿಕೊಂಡು ಕಳವು ಮಾಡಿದ್ದ ಮೂವರು ಕಳ್ಳರ ಬಂಧನ

ಬಿಸಿಲ ಝಳಕ್ಕೆ ರಾಯಚೂರಲ್ಲಿ ಒಂದೇ ದಿನ 6 ಸಾವು, ಉಡುಪಿಯಲ್ಲಿ ಸೆಖೆ ತಡೆಯದೇ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು

Bengaluru Crime: ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಮಹಿಳೆಯಿಂದ ಕಳ್ಳತನ; 34 ಲಕ್ಷ ಬೆಲೆಬಾಳುವ ವಜ್ರ, ಚಿನ್ನ, ಬೆಳ್ಳಿಯ ಆಭರಣ, ನಗದು ವಶಕ್ಕೆ

Mangaluru Rains: 10 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು; ಸುಬ್ರಹ್ಮಣ್ಯದಲ್ಲಿ ಘಟನೆ

ಎಎನ್‌ಐ ಸುದ್ದಿ ಸಂಸ್ಥೆ ಈ ವಿಡಿಯೋವನ್ನು ಟ್ವೀಟ್‌ ಮಾಡಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ʻಪ್ರಜಾಧ್ವನಿ ಯಾತ್ರೆʼ ಆಯೋಜನೆ ಆಗಿದ್ದ ವೇಳೆ ಬೇವಿನಹಳ್ಳಿ ಸಮೀಪ ಈ ಘಟನೆ ನಡೆದಿದೆ. ಪ್ರಜಾಧ್ವನಿ ಬಸ್‌ನ ಸಮೀಪ ಬಂದ ಕಲಾವಿದರ ಕಡೆಗೆ 500 ರೂಪಾಯಿಯ ಕೆಲವು ನೋಟುಗಳನ್ನು ಎಸೆದ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ.

ಶಾಸಕರ ಖರೀದಿ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಆರೋಪಿಸಿದ ಬೆನ್ನಿಗೆ, ಡಿಕೆಶಿ ಅವರ ಈ ವಿಡಿಯೋ ಸಂಚಲನ ಮೂಡಿಸಿದೆ.

ಕಾಂಗ್ರೆಸ್‌ ಪಕ್ಷ ಈಗಾಗಲೇ 124 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನೂ 100 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮವಾಗಿಲ್ಲ.

ಗಮನಿಸಬಹುದಾದ ಸುದ್ದಿಗಳು

ಪಕ್ಷ ಒಪ್ಪಿದ್ರೆ 2 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆಂದ ಸಿದ್ದರಾಮಯ್ಯ; ವರುಣಾ ಜೊತೆಗೆ ಕೋಲಾರ ಅಥವಾ ಬಾದಾಮಿ?

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಪಕ್ಕಾ ಆಗಿದೆ. ಇದರ ಜೊತೆಗೆ ಪಕ್ಷ ಒಪ್ಪಿದರೆ ಮತ್ತೊಂದು ಕ್ಷೇತ್ರದಲ್ಲಿ ಕಣಕ್ಕಿಳಿಯಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಆ ಕ್ಷೇತ್ರ ಯಾವುದೆಂದು ತಿಳಿಸಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರವೂ ಫಿಕ್ಸ್

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರವೂ ಘೋಷಣೆಯಾಗಿದೆ. 124 ಕ್ಷೇತ್ರಗಳಿಗೆ ಘೋಷಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕ್ಷೇತ್ರ ಹುಡುಕಾಟದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ಪರ್ಧೆಯ ಕಣವೂ ಫಿಕ್ಸ್ ಆಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರದಿಂದ ಸ್ಪರ್ಧಿಸಿದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ವಿಧಾನಸಭಾ ಕೇತ್ರದಿಂದ ಕಣಕ್ಕಿಳಿಯಲಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ತಂದೆ-ಮಗ, 6 ಮಂದಿ ಮಹಿಳೆಯರು, 8 ಮುಸ್ಲಿಂರಿಗೆ ಟಿಕೆಟ್ ಸೇರಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ವಿಶೇಷತೆಗಳಿವು

ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿನ್ನೆ (ಮಾರ್ಚ್ 25) ಬಿಡುಗಡೆ ಮಾಡಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ. ಅಳೆದು ತೂಗಿ ಅಖೈರುಗೊಳಿಸಿರುವ ಈ ಲಿಸ್ಟ್ ನಲ್ಲಿ 8 ಮಂದಿ ಮುಸ್ಲಿಂರು, 6 ಮಂದಿ ಮಹಿಳೆಯರಿಗೆ ಟಿಕೆಟ್ ಘೋಷಿಸಲಾಗಿದೆ. ಅಪ್ಪ-ಮಗ, ಅಪ್ಪ-ಮಗಳಿಗೂ ಮಣೆ ಹಾಕಲಾಗಿದೆ. ಇದರಲ್ಲಿ ಪಕ್ಷಾಂತರಿಗಳೂ ಇದ್ದಾರೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಚುನಾವಣೆ ಎದುರಾಗಿದೆ; ಬೊಮ್ಮಾಯಿ ಸಂಪುಟ ವಿಸ್ತರಣೆ ಆಗಲೇ ಇಲ್ಲ...

Bommai's cabinet expansion Explainer: ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಸುದ್ದಿ ಅನೇಕ ಬಾರಿ ಪ್ರಕಟವಾಗಿದೆ. ಆಕಾಂಕ್ಷಿಗಳಲ್ಲಿ ನಿರೀಕ್ಷೆ ಹುಟ್ಟಿಸುತ್ತ ಸಾಗಿದ, ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ಎಂಬ ʻಮಹತ್ಕಾರ್ಯʼ ಈಡೇರಲೇ ಇಲ್ಲ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು