logo
ಕನ್ನಡ ಸುದ್ದಿ  /  Karnataka  /  Karnataka Pourakarmikas To Take Three Day Official Singapore Trip Report

Pourakarmikas: ರಾಜ್ಯದ 300 ಪೌರ ಕಾರ್ಮಿಕರಿಗೆ 3 ದಿನಗಳ ಸಿಂಗಾಪುರ ಪ್ರವಾಸ; ನಗರ ನೈರ್ಮಲ್ಯ, ಸ್ವಚ್ಛತೆಯ ವೀಕ್ಷಣೆ

HT Kannada Desk HT Kannada

Mar 12, 2023 07:32 AM IST

ಸರ್ಕಾರದಿಂದ ಪೌರ ಕಾರ್ಮಿಕರಿಗೆ 3 ದಿನಗಳ ಸಿಂಗಾಪುರ ಪ್ರವಾಸದ ಭಾಗ್ಯ ಸಿಕ್ಕಿದೆ.

  • ಇಬ್ಬರು ಅಧಿಕಾರಿಗಳೊಂದಿಗೆ ಮೊದಲ ಪೌರ ಕಾರ್ಮಿಕರ ತಂಡ ಗುರುವಾರ ರಾತ್ರಿ ಸಿಂಗಾಪುರಕ್ಕೆ ಹೊರಟಿದೆ. ಬಿಬಿಎಂಪಿ ಒಟ್ಟು 300 ಮಂದಿ ಪೌರ ಕಾರ್ಮಿಕರನ್ನು ಸಿಂಗಾಪುರಕ್ಕೆ ಕಳುಹಿಸಲಿದೆ ಎಂದು ವರದಿಯಾಗಿದೆ.

ಸರ್ಕಾರದಿಂದ ಪೌರ ಕಾರ್ಮಿಕರಿಗೆ 3 ದಿನಗಳ ಸಿಂಗಾಪುರ ಪ್ರವಾಸದ ಭಾಗ್ಯ ಸಿಕ್ಕಿದೆ.
ಸರ್ಕಾರದಿಂದ ಪೌರ ಕಾರ್ಮಿಕರಿಗೆ 3 ದಿನಗಳ ಸಿಂಗಾಪುರ ಪ್ರವಾಸದ ಭಾಗ್ಯ ಸಿಕ್ಕಿದೆ.

ಬೆಂಗಳೂರು: ಬೆಂಗಳೂರು ನಗರ ಮತ್ತು ರಾಜ್ಯದ ಇತರ ಪಟ್ಟಣಗಳ 300 ಪೌರಕಾರ್ಮಿಕರನ್ನು ನಗರ ನೈರ್ಮಲ್ಯ ಮತ್ತು ಶುಚಿತ್ವದ ಅಧ್ಯಯನಕ್ಕಾಗಿ ಸಿಂಗಾಪುರಕ್ಕೆ ಕಳುಹಿಸಲು ಸರ್ಕಾರ ಮುಂದಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

Vijayanagara News: ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್‌ ಪತ್ನಿ ರುದ್ರಾಂಬ ನಿಧನ

Ramanagar News: ಮೇಕೆದಾಟಿನಲ್ಲಿ ಈಜಲು ಹೋಗಿ ಮೂವರು ಯುವತಿಯರು ಸೇರಿ ಐವರ ದುರ್ಮರಣ

Railway News: ಬೆಂಗಳೂರು ಬಿಲಾಸ್‌ಪುರಕ್ಕೆ ವಿಶೇಷ ಬೇಸಿಗೆ ರೈಲು, ಮೇ ತಿಂಗಳ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Holiday Declared: ಶ್ರೀನಿವಾಸಪ್ರಸಾದ್‌ ನಿಧನ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ನಾಳೆ ಸರ್ಕಾರಿ ಕಚೇರಿಗಳಿಗೆ ರಜೆ

ರಾಜ್ಯ ಸರ್ಕಾರದ ಇಬ್ಬರು ಅಧಿಕಾರಿಗಳೊಂದಿಗೆ ಮೊದಲ ಪೌರಕಾರ್ಮಿಕರ ತಂಡ ಗುರುವಾರ ರಾತ್ರಿ ಸಿಂಗಾಪುರಕ್ಕೆ ಹೋಗಿದ್ದಾರೆ ಎಂದು ಹೇಳಲಾಗಿದೆ.

ವರದಿ ಪ್ರಕಾರ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಕೆಡಿಸಿ) ಮೂಲಕ ಸಮಾಜ ಕಲ್ಯಾಣ ಇಲಾಖೆ ಈ ಪ್ರವಾಸವನ್ನು ಆಯೋಜಿಸುತ್ತಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ - ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ಈ ಪ್ರವಾಸಕ್ಕೆ ಪೌರಕಾರ್ಮಿಕರನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಮುಂದಿನ ಬ್ಯಾಚ್ ಹೊರಡಲು ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಸಿಂಗಾಪುರಕ್ಕೆ ಹಾರಿರುವ ಮೊದಲ ಬ್ಯಾಚ್‌ನಲ್ಲಿ ದಾವಣಗೆರೆ, ಮಂಗಳೂರು ಮತ್ತು ತುಮಕೂರಿನ ಕಾರ್ಮಿಕರು ಇದ್ದಾರೆ.

ಅವರು ಮೂರು ದಿನಗಳ ಕಾಲ ಸಿಂಗಾಪುರದಲ್ಲಿ ಇರುತ್ತಾರೆ. ದ್ವೀಪ ದೇಶದಲ್ಲಿನ ಮೂಲಸೌಕರ್ಯ ಮತ್ತು ಅದರ ನಿರ್ವಹಣೆಯನ್ನು ಪೌರ ಕಾರ್ಮಿಕರಿಗೆ ತೋರಿಸಲಾಗುತ್ತದೆ. ಸಿಂಗಾಪುರದಲ್ಲಿ ಅಳವಡಿಸಿಕೊಂಡಿರುವ ಘನತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ಸಂಸ್ಕರಣಾ ಕಾರ್ಯವಿಧಾನಗಳ ಬಗ್ಗೆಯೂ ಕಲಿಯುತ್ತಾರೆ.

ಬಿಬಿಎಂಪಿಯಿಂದ 200 ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಮುಂದಿನ ಬ್ಯಾಚ್ ಈ ತಿಂಗಳ ಮೂರು ಅಥವಾ ನಾಲ್ಕನೇ ವಾರದಲ್ಲಿ ಸಿಂಗಾಪುರಕ್ಕೆ ತೆರಳಲಿದೆ.

ಕೆಎಸ್‌ಎಸ್‌ಕೆಡಿಸಿಯ ಎಂಡಿ ಕೆಬಿ ಮಲ್ಲಿಕಾರ್ಜುನ ಅವರು ಬಿಬಿಎಂಪಿಯಿಂದ 200 ಪೌರಕಾರ್ಮಿಕರು ಕರ್ನಾಟಕದಿಂದ ಒಟ್ಟು 300 ಮಂದಿಯನ್ನು ಪ್ರವಾಸಕ್ಕೆ ಆಯ್ಕೆ ಮಾಡಿದ್ದಾರೆ. 35 ಪೌರಕಾರ್ಮಿಕರ ಮೊದಲ ಬ್ಯಾಚ್ ಗುರುವಾರ ರಾತ್ರಿ ಸಿಂಗಾಪುರಕ್ಕೆ ಹೋಗಿದೆ. ಅವರ ಜೊತೆ ಇಬ್ಬರು ಅಧಿಕಾರಿಗಳು ಇದ್ದಾರೆ.

ಬಿಬಿಎಂಪಿ 200 ಹೆಸರುಗಳನ್ನು ಸಲ್ಲಿಸಿದೆ. ಪ್ರಸ್ತುತ ನಾವು ಸಿಂಗಾಪುರಕ್ಕೆ ಹಾರಲು ದಾಖಲಾತಿ ಪ್ರಕ್ರಿಯೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಉಳಿದ 100 ಕಾರ್ಮಿಕರು ಬೆಳಗಾವಿ, ಬಳ್ಳಾರಿ, ಮೈಸೂರು, ಕಲಬುರ್ಗಿ, ಶಿವಮೊಗ್ಗ ಮತ್ತು ವಿಜಯಪುರ ಪಾಲಿಕೆಗೆ ಸೇರಿದವರಾಗಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

11,136 ಪೌರ ಕಾರ್ಮಿಕರಿಗೆ ಖಾಯಂ ನೌಕರಿ ನೀಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಉಳಿದವರಿಗೆ 2 ಮತ್ತು 3ನೇ ಹಂತದಲ್ಲಿ ಬೆಂಗಳೂರು ಮತ್ತು ಬೆಂಗಳೂರಿನಾಚೆ ಇರುವ ನಗರ ಭಾಗದಲ್ಲಿನ ಪೌರಕಾರ್ಮಿಕ ಸರ್ಕಾರಿ ನೌಕರರನ್ನಾಗಿ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ತಿಳಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು