logo
ಕನ್ನಡ ಸುದ್ದಿ  /  ಕರ್ನಾಟಕ  /  Kodagu News: ಕೊಡಗು ಜಿಲ್ಲೆಯಲ್ಲಿ ಕೇರಳದ ಅನಧಿಕೃತ ಲಾಟರಿ ಮಾರಾಟದ ಮೇಲೆ ಪೊಲೀಸರ ಕಟ್ಟೆಚ್ಚರ; 49 ಪ್ರಕರಣ ದಾಖಲು, ಮಾಹಿತಿ ನೀಡಲು ಸೂಚನೆ

Kodagu News: ಕೊಡಗು ಜಿಲ್ಲೆಯಲ್ಲಿ ಕೇರಳದ ಅನಧಿಕೃತ ಲಾಟರಿ ಮಾರಾಟದ ಮೇಲೆ ಪೊಲೀಸರ ಕಟ್ಟೆಚ್ಚರ; 49 ಪ್ರಕರಣ ದಾಖಲು, ಮಾಹಿತಿ ನೀಡಲು ಸೂಚನೆ

Umesha Bhatta P H HT Kannada

Nov 25, 2024 08:46 PM IST

google News

ಕೊಡಗಿನಲ್ಲಿ ಕೇರಳ ಲಾಟರಿ ಮಾರಾಟದ ಮೇಲೆ ಕಟ್ಟೆಚ್ಚರವನ್ನು ಪೊಲೀಸರು ವಹಿಸಿದ್ದಾರೆ.

    • Kodagu Illegal Kerala Lottery Sale: ಕೊಡಗಿನಲ್ಲಿ ಕೇರಳದ ಲಾಟರಿ ಮಾರಾಟ ಅಲ್ಲಲ್ಲಿ ವರದಿಯಾಗುತ್ತಲೇ ಇದೆ.  ಈ ಕಾರಣದಿಂದ ಕಟ್ಟೆಚ್ಚರದಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. 
ಕೊಡಗಿನಲ್ಲಿ ಕೇರಳ ಲಾಟರಿ ಮಾರಾಟದ ಮೇಲೆ ಕಟ್ಟೆಚ್ಚರವನ್ನು ಪೊಲೀಸರು ವಹಿಸಿದ್ದಾರೆ.
ಕೊಡಗಿನಲ್ಲಿ ಕೇರಳ ಲಾಟರಿ ಮಾರಾಟದ ಮೇಲೆ ಕಟ್ಟೆಚ್ಚರವನ್ನು ಪೊಲೀಸರು ವಹಿಸಿದ್ದಾರೆ.

Kodagu Illegal Kerala Lottery Sale: ಕರ್ನಾಟಕದಲ್ಲಿ ಲಾಟರಿ ಮಾರಾಟ ನಿಷೇಧ ಆಗಿ ಸರಿ ಸುಮಾರು ಎರಡು ದಶಕವೇ ಕಳೆದಿದೆ. ಹಾಗೆಂದು ಲಾಟರಿ ಖರೀದಿಸುವವರು ಇಲ್ಲ ಎಂದಲ್ಲ. ಅನಧಿಕೃತ ಮಾರಾಟಕ್ಕೆ ಬ್ರೇಕ್‌ ಹಾಕಲಾಗಿದ್ದರೂ ಕೇರಳಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಮಾರಾಟ ಆಗಾಗ ನಡೆಯುತ್ತಲೇ ಇರುತ್ತದೆ. ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ಕಾರಣದಿಂದ ಕೇರಳಕ್ಕೆ ಹೊಂದಿಕೊಂಡಿರುವ ಕೊಡಗಿನ ಗಡಿ ಭಾಗದ ಠಾಣೆಗಳ ಪೊಲೀಸರು ಕಟ್ಟೆಚ್ಚರದಲ್ಲಿದ್ದರೂ ಅಕ್ರಮ ಲಾಟರಿ ಮಾರಾಟ ಅಲ್ಲಲ್ಲಿ ಮುಂದುವರಿದಿದೆ. ಕೇರಳದಿಂದ ಲಾಟರಿ ತಂದು ಗಡಿ ಭಾಗದ ಕೆಲಸಗಾರರು, ಕಾರ್ಮಿಕರನ್ನು ಗುರಿಯಾಗಿಟ್ಟುಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಒಂದೂವರೆ ವರ್ಷದಲ್ಲೇ ಕೊಡಗಿನಲ್ಲಿ ಇಂತಹ 49 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.

ಕೇರಳ ಮಾರಾಟ ಜೋರು

ಕೇರಳದಲ್ಲಿ ಈಗಲೂ ಲಾಟರಿ ಮಾರಾಟ ಅಧಿಕೃತ. ಕೇರಳಕ್ಕೆ ಹೋದವರು ಲಾಟರಿ ಖರೀದಿಸಿಕೊಂಡು ಬರುವುದು ಮುಂದುವರೆದುಕೊಂಡು ಬರುತ್ತಿದೆ. ಕೆಲವರು ಲಾಟರಿ ಗೆದ್ದ ಉದಾಹರಣೆಯೂ ಇದೆ. ಕೆಲ ದಿನಗಳ ಹಿಂದೆಯೂ ಪಾಂಡವಪುರದವರೊಬ್ಬರಿಗೆ ಭಾರೀ ಬಹುಮಾನವೇ ಬಂದಿತ್ತು.

ಆದರೆ ಕರ್ನಾಟಕದಲ್ಲಿ ಲಾಟರಿ ಮಾರಾಟವಿಲ್ಲ.ಮತ್ತೊಂದು ಕಡೆ ಕೇರಳ ಸಹಿತ ಯಾವುದೇ ಲಾಟರಿಯನ್ನೂ ಮಾರಾಟ ಮಾಡಲು ಅವಕಾಶವಿಲ್ಲ. ಮಾರಾಟ ಮಾಡಿದರೆ ಪೊಲೀಸರು ಪ್ರಕರಣವನ್ನೂ ದಾಖಲಿಸಿ ಬಂಧಿಸುತ್ತಾರೆ.

ಪೊಲೀಸ್‌ ಘಟಕಗಳ ನಿಗಾ

ಕರ್ನಾಟಕದಲ್ಲಿ ಲಾಟರಿ ನಿಷೇಧದ ನಂತರ ಲಾಟರಿ ನಿಗ್ರಹದಳವನ್ನೂ ರಚಿಸಿ ಪ್ರತ್ಯೇಕ ಪೊಲೀಸ್‌ ಉಸ್ತುವಾರಿ ಇತ್ತು. ಈಗ ಆ ಘಟಕವನ್ನು ರದ್ದು ಮಾಡಲಾಗಿದೆ. ಆಯಾ ಜಿಲ್ಲಾ ಪೊಲೀಸ್‌ ಘಟಕಗಳೇ ಈ ಪ್ರಕರಣವನ್ನೂ ನೋಡುತ್ತವೆ.

ಅದರಲ್ಲೂ ಕೇರಳಕ್ಕೆ ಹೊಂದಿಕೊಂಡ ಕೊಡಗು,ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಾರೆ. ವಿಶೇಷವಾಗಿ ಕೊಡಗಿನಲ್ಲಿ ಇದು ಮುಂದುವರಿದಿದೆ, ಇದರಡಿಯೇ 2023 ರ ಜನವರಿಯಿಂದ 2024 ರ ಸೆಪ್ಟೆಂಬರ್ ರವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 49 ಅನಧಿಕೃತ ಲಾಟರಿ ಪ್ರಕರಣಗಳು ದಾಖಲಾಗಿದ್ದು, ತಪಾಸಣೆ ಚುರುಕಾಗಿದೆ.

ಎಎಸ್ಪಿ ಹೇಳೋದು ಏನು

ಕೊಡಗು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಅವರ ಪ್ರಕಾರ, ಕೊಡಗು ಜಿಲ್ಲೆಯಲ್ಲಿ 2023 ರ ಜನವರಿಯಿಂದ 2024 ರ ಸೆಪ್ಟೆಂಬರ್ ರವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 49 ಅನಧಿಕೃತ ಲಾಟರಿ ಪ್ರಕರಣಗಳು ವರದಿಯಾಗಿದೆ. ಹಾಗೆಯೇ 6 ಮಟ್ಕಾ ಪ್ರಕರಣಗಳು ವರದಿಯಾಗಿದೆ.ಅಕ್ರಮ ಲಾಟರಿ ಮತ್ತು ಮಟ್ಕಾ ದಂಧೆಗಳು ನಡೆಯುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ಸಮಿತಿಯ ಅಧಿಕೃತ ದೂರವಾಣಿ ಸಂಖ್ಯೆ 08272-228678 ಗೆ ಮಾಹಿತಿ ನೀಡಬಹುದಾಗಿದೆ. ಲ್ಲೆಯ ಅಂತರ ರಾಜ್ಯ ಗಡಿಭಾಗ ಭಾಗದಲ್ಲಿ ಪೇಪರ್ ಲಾಟರಿ ಮಾರಾಟವಾಗುವ ಸಂಭವವಿದ್ದು, ಈ ಭಾಗದಲ್ಲಿ ಹೆಚ್ಚಿನ ಪೊಲೀಸ್ ನಿಗಾ ವಹಿಸಲಾಗಿದೆ ಎನ್ನುತ್ತಾರೆ.

ಎಡಿಸಿ ಐಶ್ವರ್ಯ ಸೂಚನೆ

ಕೊಡಗು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪ್ಲೈಯಿಂಗ್ ಸ್ಕ್ವಾಡ್‍ನ ಕಾರ್ಯಾಚರಣೆ ತ್ರೈಮಾಸಿಕ ಸಭೆಯು ನಡೆದಿದೆ.

ಕೊಡಗು ಜಿಲ್ಲೆಯಲ್ಲಿ ಅನಧಿಕೃತ ಲಾಟರಿ ಹಾಗೂ ಮಟ್ಕಾ ಹಾವಳಿಯನ್ನು ನಿಯಮಾನುಸಾರ ನಿಯಂತ್ರಿಸುವ ಕುರಿತು ಕಟ್ಟುನಿಟ್ಟಿನ ಸೂಚನೆಗಳನ್ನು ಸಭೆಯಲ್ಲಿ ನೀಡಲಾಗಿದೆ.

ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾವನ್ನು ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಬೇಕು. ಅಕ್ರಮ ಲಾಟರಿ ಮತ್ತು ಮಟ್ಕಾ ದಂಧೆಯನ್ನು ನಿಯಂತ್ರಿಸಲು ಸಮಿತಿಯು ಪರಿಶೀಲನೆ ನಡೆಸಬೇಕು. ಲಾಟರಿ ಪ್ಲೈಯಿಂಗ್ ಸ್ಕ್ವಾಡ್ ಸಮಿತಿ ಕಾರ್ಯನಿರ್ವಹಿಸಬೇಕು.ವ್ಯಾಪಾರ ಮಳಿಗೆಗಳನ್ನು ಪರಿಶೀಲನೆ ಮಾಡುವ ಸಂದರ್ಭದಲ್ಲಿ ಅಕ್ರಮ ಲಾಟರಿ ಮಾರಾಟ ನಡೆಯುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗೆ ಸಲಹೆ ಹೆಚ್ಚುವರಿ ಡಿಸಿ ಐಶ್ವರ್ಯ ನೀಡಿರುವ ಸೂಚನೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ