logo
ಕನ್ನಡ ಸುದ್ದಿ  /  ಕರ್ನಾಟಕ  /  Laxmi Hebbalkar Woos Marathas: ಮರಾಠಿಗರಿಗೆ 2 ಎ ಮೀಸಲಾತಿ ಬೇಡಿಕೆ; ರಾಜಕೀಯ ಮರುಜನ್ಮನೀಡಿದವರಿಗೆ ಇಷ್ಟು ಮಾಡದಿದ್ದರೆ ಹೇಗೆ ಎಂದ ಲಕ್ಷ್ಮಿ

Laxmi Hebbalkar woos marathas: ಮರಾಠಿಗರಿಗೆ 2 ಎ ಮೀಸಲಾತಿ ಬೇಡಿಕೆ; ರಾಜಕೀಯ ಮರುಜನ್ಮನೀಡಿದವರಿಗೆ ಇಷ್ಟು ಮಾಡದಿದ್ದರೆ ಹೇಗೆ ಎಂದ ಲಕ್ಷ್ಮಿ

HT Kannada Desk HT Kannada

Dec 20, 2022 04:20 PM IST

google News

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌

  • Laxmi Hebbalkar woos marathas: ನನಗೆ ರಾಜಕೀಯ ಮರುಜನ್ಮ ನೀಡಿದವರು ಮರಾಠಿಗರು. 2 ಎ ಮೀಸಲಾತಿ ವಿಚಾರದಲ್ಲಿ ನಿಮ್ಮ ಜತೆಗೆ ನಿಲ್ಲದಿದ್ದರೆ ಹೇಗೆ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಬಳಿಕ ಮರಾಠಿಯಲ್ಲಿ ಮಾತು ಮುಂದುವರಿಸಿ ಓಲೈಸಲು ಪ್ರಯತ್ನಿಸಿದ್ದು ಗಮನಸೆಳೆಯಿತು.  

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ (Laxmihebbalkarofficial)

ಬೆಳಗಾವಿ: ವಿಧಾನಮಂಡಲ ಅಧಿವೇಶನ ಪ್ರಗತಿಯಲ್ಲಿದೆ. ವಿವಿಧ ಸಂಘಟನೆಗಳ ಪ್ರತಿಭಟನೆಯೂ ಬೆಳಗಾವಿ ವಿಧಾನಸೌಧ ಸಮೀಪ ಮುಂದುವರಿದಿದೆ. ಈ ಪ್ರತಿಭಟನೆಗಳ ಪೈಕಿ, ಮರಾಠರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌, ಅವರನ್ನು ಓಲೈಸಲು ಪ್ರಯತ್ನಿಸಿದ್ದು ಗಮನಸೆಳೆಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮರಾಠರ ಪ್ರತಿಭಟನಾ ಸ್ಥಳಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಿನ್ನೆ ಲಿಂಗಾಯತ ಪಂಚಮಶಾಲಿ ಹೋರಾಟದಲ್ಲಿ ಭಾಗಿಯಾಗಿದ್ದರು. ಚುನಾವಣೆ ಸಮೀಪದಲ್ಲಿರುವ ಕಾರಣ ಲಕ್ಷ್ಮೀ ಕ್ಷೇತ್ರದಲ್ಲಿರುವ ಮರಾಠ ಸಮುದಾಯದವನ್ನು ಓಲೈಸುವ ಪ್ರಯತ್ನದಲ್ಲಿದ್ದಾರೆ.

ಪ್ರತಿಭಟನಾ ನಿರತ ಮರಾಠಿಗರನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮೀ, ಆರಂಭದಲ್ಲಿ ಕನ್ನಡದಲ್ಲೇ ಮಾತನಾಡಿದರು. ಬಳಿಕ ಮರಾಠಿಯಲ್ಲಿ ಮಾತು ಮುಂದುವರಿಸಿದರು.

ನಿಮ್ಮ ಸಮಾಜದ ಬಗ್ಗೆ ಗೌರವ ಕಾಳಜಿ ಇದೆ. ಹೀಗಾಗಿಯೇ ಇಲ್ಲಿಗೆ ಬಂದಿದ್ದೇನೆ. ನನಗೆ ರಾಜಕೀಯ ಪುನರ್ಜನ್ಮ ನೀಡಿದ ಸಮುದಾಯ ನಿಮ್ಮದು. ನಿಮ್ಮ ಜತೆಗೆ ಸದಾ ನಾನಿರುತ್ತೇನೆ. 2ಎ ಮೀಸಲಾತಿ ವಿಚಾರವಾಗಿ ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ಮನವಿ ಮಾಡುತ್ತೇನೆ. ಸದನದಲ್ಲಿ ಅವಕಾಶ ಸಿಕ್ಕರೆ ಈ ವಿಚಾರ ಖಚಿತವಾಗಿ ಮಾತನಾಡುತ್ತೇ‌ನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಅಲ್ಲಿ ಭರವಸೆ ನೀಡಿದರು.

ಇದೇ ವೇಳೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೂಡ ಮರಾಠರ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಅವರನ್ನು ಉದ್ದೇಶಿಸಿ ಮಾತನಾಡಿದರು. ಜಾರಕಿಹೊಳಿ, ಇತ್ತೀಚೆಗೆ ಹಿಂದು ಪದದ ಹೇಳಿಕೆ ಹಾಗೂ ಶಂಭಾಜಿ ಮಹಾರಾಜ್ ಬಗ್ಗೆ ನೀಡಿದ್ದ ಹೇಳಿಕೆಗಳು ವಿವಾದಕ್ಕೀಡಾಗಿದ್ದವು. ಹೀಗಾಗಿ ಡ್ಯಾಮೇಜ್‌ ಕಂಟ್ರೋಲ್‌ ಮಾಡುವ ಪ್ರಯತ್ನವನ್ನು ಜಾರಕಿಹೊಳಿ ಮಾಡಿದರು ಎನ್ನುತ್ತಿವೆ ಸ್ಥಳೀಯ ಮಾಧ್ಯಮಗಳು.

ಗಮನಿಸಬಹುದಾದ ಇತರೆ ಸುದ್ದಿಗಳು

ಡಿಕೆಶಿ ಮತ್ತು ಸಿದ್ರಾಮಣ್ಣ ಪರಸ್ಪರ ಸೋಲಿಸ್ತಾರೆ, ಬಿಜೆಪಿ ಬೆಂಬಲಕ್ಕೆ ಜನ ನಿಲ್ತಾರೆ ಎಂದ ಕಟೀಲ್‌

BJP state office bearers meet: ಡಿಕೆಶಿ ಕೊಟ್ಟ ಸೀಟನ್ನು ಸಿದ್ರಾಮಣ್ಣ ಸೋಲಿಸ್ತಾರೆ. ಅದೇ ಮಾದರಿಯಲ್ಲಿ ಸಿದ್ರಾಮಣ್ಣ ಬೆಂಬಲಿಗರನ್ನು ಡಿಕೆಶಿ ಮುಗಿಸುತ್ತಾರೆ. ಇವರಿಬ್ಬರನ್ನು ಸೋಲಿಸಲು ಖರ್ಗೆ ಶ್ರಮಿಸುತ್ತಾರೆ. ಇನ್ನೊಂದೆಡೆ, ರೇವಣ್ಣ- ಕುಮಾರಣ್ಣನ ನಡುವೆ ಗಲಾಟೆ ಕಾರಣ ಹಾಸನದ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

BJP meet in Murudeshwar: ಟಿಪ್ಪು ನರಮೇಧದ ಕುರಿತು ಸಾಮಾನ್ಯ ಜನರಿಗೆ ಮನವರಿಕೆ ಮಾಡಬೇಕಲ್ಲವೇ? ವೀರ ಸಾವರ್ಕರ್ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದನ್ನು ಖಂಡಿಸಬೇಕಲ್ಲವೇ? ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು. ಅವರು ಮಂಗಳವಾರ ಮುರುಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದರು. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

NPS vs OPS: ಹಳೆಯ ಪಿಂಚಣಿ ವ್ಯವಸ್ಥೇನಾ ಅಥವಾ ಹೊಸತಾ?; ಸಮಾಲೋಚಿಸಿ ತೀರ್ಮಾನಿಸೋಣ ಎಂದ ಮುಖ್ಯಮಂತ್ರಿ

NPS vs OPS: ರ್ಕಾರಿ ನೌಕರರ ನೂತನ ಪಿಂಚಣಿ ವ್ಯವಸ್ಥೆಯ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆ ನಡೆಸಿ ನಂತರ ಈ ಬಗ್ಗೆ ತೀರ್ಮಾನ ಮಾಡೋಣ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಗೆ ವಿಧಾನಸಭೆ ಒಪ್ಪಿದೆ. ನೂತನ ಪಿಂಚಣಿ ವ್ಯವಸ್ಥೆ ಕುರಿತಾದ ತನ್ನ ನಿಲುವನ್ನು ನಾಳೆ ತಪ್ಪಿದರೆ ನಾಡಿದ್ದು ಸರ್ಕಾರವು ಸದನದಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ