logo
ಕನ್ನಡ ಸುದ್ದಿ  /  ಕರ್ನಾಟಕ  /  Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಇಂದು, ಕೊನೆಯ ದಿನ ಏನೇನು ಚಟುವಟಿಕೆಗಳಲ್ಲಿ ನೀವು ಭಾಗಿಯಾಗಬಹುದು

Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಇಂದು, ಕೊನೆಯ ದಿನ ಏನೇನು ಚಟುವಟಿಕೆಗಳಲ್ಲಿ ನೀವು ಭಾಗಿಯಾಗಬಹುದು

Umesha Bhatta P H HT Kannada

Dec 22, 2024 07:00 AM IST

google News

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ತೆರೆ ಬೀಳಲಿದೆ.

    • Mandya Sahitya Sammelana: ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಏನೇನು ಗೋಷ್ಠಿ, ಚಟುವಟಿಕೆಗಳಿವೆ. ಇಲ್ಲಿದೆ ವಿವರ.
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ತೆರೆ ಬೀಳಲಿದೆ.
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ತೆರೆ ಬೀಳಲಿದೆ.

ಮಂಡ್ಯ: ಸಕ್ಕರೆಯ ನಾಡು ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ಹಾಗೂ ಕೊನೆಯ ದಿನವಾದ ಭಾನುವಾರವೂ ನಾನಾ ಗೋಷ್ಠಿಗಳು, ಕವಿಗೋಷ್ಠಿ, ಅಧ್ಯಕ್ಷರೊಂದಿಗೆ ಸಂವಾದ ಸಹಿತ ನಾನಾ ಕಾರ್ಯಕ್ರಮಗಳು ಜರುಗಲಿವೆ. ಎರಡು ದಿನದಿಂದ ಸಾಕಷ್ಟು ಚರ್ಚೆಗಳು, ವಿಚಾರ ಮಂಥನ ನಡೆದಿವೆ. ಮೂರನೇ ದಿನ ಮೂರು ವೇದಿಕೆಗಳಲ್ಲೂ ಚಟುವಟಿಕೆಗಳಿವೆ. ಅಲ್ಲದೇ ಹಲವಾರು ವಿಷಯಗಳ ಕುರಿತು ಕರ್ನಾಟಕದ ಮಾತ್ರವಲ್ಲದೇ ಹೊರ ದೇಶಗಳಿಂದಲೂ ಬಂದಿರುವ ಕನ್ನಡ ತಜ್ಞರು ವಿಚಾರವನ್ನು ಮಂಡಿಸಲಿದ್ದಾರೆ. 2024 ಡಿಸೆಂಬರ್ 22 ರಂದು ನಡೆಯುವ ಕಾರ್ಯಕ್ರಮದ ವಿವರದ ನೋಟ ಇಲ್ಲಿದೆ.

ಗೋಷ್ಠಿಗಳು: ಮುಖ್ಯ ವೇದಿಕೆ

ಡಿಸೆಂಬರ್ 22 ರಂದು ಬೆಳಿಗ್ಗೆ 9.30 ರಿಂದ 11

ಗಂಟೆಯವರೆಗೆ ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ವಿಷಯದ ಬಗ್ಗೆ ಗೋಷ್ಠಿ - 8 ನಡೆಯಲಿದೆ. ಅಮೆರಿಕಾದ ಅಮರನಾಥ ಗೌಡ ಅವರು ಅಧ್ಯಕ್ಷತೆ ವಹಿಸಲಿದ್ದು, ಬಹರೇನ್ ನ ಕಿರಣ್ ಉಪಾಧ್ಯಾಯ ಅವರು ಆಶಯ ನುಡಿ ಆಡಲಿದ್ದಾರೆ. ವಿದೇಶದಲ್ಲಿರುವ ಕನ್ನಡಿಗರ ಸಮಸ್ಯೆಗಳು, ಪರಿಹಾರಗಳು ವಿಷಯದ ಬಗ್ಗೆ ಕತಾರ್ ನ ಎಚ್ ಕೆ ಮಧು ಅವರು, ಜಗತ್ತಿನ ರಾಷ್ಟ್ರಗಳಲ್ಲಿ ಮಾತೃಭಾಷೆಯನ್ನು ನೋಡುವ ಕ್ರಮ ವಿಷಯದ ಬಗ್ಗೆ ಇಂಗ್ಲೆಂಡ್ ನ ಅಶ್ವಿನ್ ಶೇಷಾದ್ರಿ, ಹೊರನಾಡಿನಲ್ಲಿ ಕನ್ನಡದ ಅಸ್ತಿತ್ವ, ಸವಾಲುಗಳು ವಿಷಯದ ಬಗ್ಗೆ ಮಹಾರಾಷ್ಟ್ರದ ಕಮಲಾಕರ ಕಡವೆ, ವಿದೇಶದಲ್ಲಿರುವ ಕನ್ನಡ ಶಾಲೆಗಳ ಸ್ಥಿತಿಗತಿಗಳು ವಿಷಯದ ಬಗ್ಗೆ ಯುಎಇ ಶಶಿಧರ ನಾಗರಾಜಪ್ಪ ಹಾಗೂ ಜರ್ಮನಿಯ ರಶ್ಮಿ ನಾಗರಾಜ್ ಅವರು ವಿಷಯ ಮಂಡನೆ ಮಾಡಲಿದ್ದಾರೆ. ಕ. ಸಾ. ಪ ಅಂತರಾಷ್ಟ್ರೀಯ ಸಮನ್ವಯಾಧಿಕಾರಿ ನಿವೇದಿತ ಹಾವನೂರ - ಹೊನ್ನತ್ತಿ ಅವರು ವಿಶೇಷ ಉಪಸ್ಥಿತಿ ವಹಿಸಲಿದ್ದಾರೆ.

ಗೋಷ್ಠಿ - 9: ಬೆಳಿಗ್ಗೆ 11 ರಿಂದ 12:30 ಗಂಟೆಯವರೆಗೆ ಸ್ತ್ರೀ ಎಂದರೆ ಅಷ್ಟೇ ಸಾಕೇ? ವಿಷಯದ ಬಗ್ಗೆ ಗೋಷ್ಠಿ - 9 ನಡೆಯಲಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಡಾ ಹೇಮಾ ಪಟ್ಟಣಶೆಟ್ಟಿ ಅವರು ಆಶಯ ನುಡಿಯನ್ನಾಡಲಿದ್ದಾರೆ. ಭ್ರೂಣ ಹತ್ಯೆ ವಿಷಯದ ಬಗ್ಗೆ ಸುಮತಿ ಜಿ, ವರ್ತಮಾನದ ತಲ್ಲಣಗಳು ವಿಷಯದ ಬಗ್ಗೆ ಡಾ ಶುಭಶ್ರೀ ಪ್ರಸಾದ್, ವಿವಾಹ ಮತ್ತು ಮರ್ಯಾದಾ ಹತ್ಯೆ ವಿಷಯದ ಬಗ್ಗೆ ಡಾ ತಾರಿಣಿ ಶುಭದಾಯಿನಿ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಗೋಷ್ಠಿ - 10:- ಮಧ್ಯಾಹ್ನ 12:30 ರಿಂದ 2.10 ಗಂಟೆಯವರೆಗೆ ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ: ಸಾಧ್ಯತೆ ಮತ್ತು ಸವಾಲುಗಳು ವಿಷಯದ ಬಗ್ಗೆ ಗೋಷ್ಠಿ - 10 ನಡೆಯಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ ಎಲ್ ಎನ್ ಮುಕುಂದರಾಜ್ ಅವರು ಆಶಯ ನುಡಿಯನ್ನಾಡಲಿದ್ದಾರೆ. ಡಾ ನಿರಂಜನಾರಾಧ್ಯ ವಿ ಪಿ ಅವರು ಸರ್ಕಾರಿ ಕನ್ನಡ ಶಾಲೆಗಳ ಇಂದಿನ ಸ್ಥಿತಿಗತಿಯ ಅವಲೋಕನ ವಿಷಯದ ಬಗ್ಗೆ, ಎಫ್ ಸಿ ಚೇಗರಡ್ಡಿ ಅವರು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಸವಾಲುಗಳು, ಆನಂದ್ ಜಿ ಅವರು ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ವೃತ್ತಿ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ಹಾಗೂ ಸೋಮಣ್ಣ ಬೇವಿನ ಮರದ ಅವರು ಗಡಿ ಭಾಗದ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ಸಾಧಕರಿಗೆ ಸನ್ಮಾನ

ಮಧ್ಯಾಹ್ನ 2.10 ರಿಂದ 3.30 ಗಂಟೆಯವರೆಗೆ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾಗೂ ಸುವರ್ಣ ಮಹೋತ್ಸವದ ನೆನಪಿನಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ತುಮಕೂರು ಶ್ರೀ ಸಿದ್ದಗಂಗಾ ಮಠದ ಅಧ್ಯಕ್ಷ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅವರ ಸನ್ನಿಧಾನದಲ್ಲಿ, ನವದೆಹಲಿಯ ಭಾರತ ಲೋಕಪಾಲ್ ನ ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಎಲ್ ನಾರಾಯಣ ಸ್ವಾಮಿ ಅವರು ಸನ್ಮಾನಿಸಲಿದ್ದಾರೆ.

ಸನ್ಮಾನಿತರು:- ಸಂದೇಶ ಸಾಂಸ್ಕೃತಿಕ ಮತ್ತು ಶಿಕ್ಷಣ ಪ್ರತಿಷ್ಠಾನ (ರಿ) (ಮಂಗಳೂರು) ಕನ್ನಡ ಸೇವೆ ಸ್ವೀಕರಿಸುವವರು : ಫಾದರ್ ಸುದೀಪ್ ಪೌಲ್ ನಿರ್ದೇಶಕರು, ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಭಾರತೀಯ ಸೇನೆ, ಪರಮ ವಿಶಿಷ್ಟ ಸೇವಾ ಮೆಡಲ್ ಉತ್ತಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್ ಮತ್ತು ಯುದ್ಧ ಸೇವಾ ಮೆಡಲ್ ಪುರಸ್ಕೃತರು, ರವಿಶಂಕರ ಕೆ. ಭಟ್ (ಕನ್ನಡ ಮಾಧ್ಯಮ ಕ್ಷೇತ್ರ), ಕೆ.ಎನ್. ಚನ್ನೇಗೌಡ (ಕನ್ನಡ ಮಾಧ್ಯಮ ಕ್ಷೇತ್ರ), ಸುದರ್ಶನ ಚನ್ನಂಗಿಹಳ್ಳಿ (ಕನ್ನಡ ಮಾಧ್ಯಮ ಕ್ಷೇತ್ರ), ಡಾ. ಎಂ.ಬಿ. ಬೋರಲಿಂಗಯ್ಯ ಆಡಳಿತ-(ಕನ್ನಡ), ಗಾಯತ್ರಿ ಕೆ.ಎಂ. ಆಡಳಿತ-(ಕನ್ನಡ), ಬಸವರಾಜು ಆಡಳಿತ-(ಕನ್ನಡ), ಕರಿಗೌಡ ಆಡಳಿತ-(ಕನ್ನಡ), ಪೃಥ್ವಿ ಶಂಕರ್ ಆಡಳಿತ-(ಕನ್ನಡ), ಡಾ.ಬಿ. ಪ್ರಭುದೇವ್ ಕೆ.ಪಿ.ಎಸ್.ಸಿ. ಸದಸ್ಯರು ಆಡಳಿತ (ಕನ್ನಡ), ಅನುಪಮಾ ಬಿ.ಎಸ್ (ಯುವ ಸಬಲೀಕರಣ), ಡಾ. ಪಿ.ಜಿ. ಕೆಂಪಣ್ಣನವರ್ (ಸಮಾಜ ಸೇವೆ), ಡಾ. ಯುವರಾಜ್ ಬಿ.ಆರ್. (ವೈದ್ಯಕೀಯ ಕ್ಷೇತ್ರ), ಅಂಜನಶೆಟ್ಟಿ (ಕನ್ನಡ ಮಾಧ್ಯಮ ಕ್ಷೇತ್ರ), ಗೋವಿಂದಹಳ್ಳಿ ಕೃಷ್ಣೆಗೌಡ (ಸಮಾಜ ಸೇವೆ), ಮುನಿರಾಜ ರೆಂಜಾಳ (ಶಿಕ್ಷಣ), ಡಾ. ವೆಂಕಟರಮಣ (ವೈದ್ಯಕೀಯ ಕ್ಷೇತ್ರ), ಡಾ. ತಲಕಾಡು ಚಿಕ್ಕರಂಗೇಗೌಡ (ಸಂಶೋಧನೆ), ಡಾ. ದಯಾನಂದ ಪಟೇಲ್ (ಪ್ರಾಚ್ಯವಸ್ತು ಶಾಸ್ತ್ರ), ಡಿ. ಕೆಂಪಣ್ಣ (ರಂಗಭೂಮಿ), ಅಮರನಾಥ ಗೌಡ ಮಿಷಿಗನ್, ಅಮೆರಿಕಾ, ಅಕ್ಕ ಸಂಸ್ಥೆ ಸಂಸ್ಥಾಪಕರು, ಕನ್ನಡ ಸಂಘಟನೆ, ಬಿ ವಿ ನಾಗರಾಜು ಟೊರಾಂಟೊ, ಕೆನಡಾ, ಕನ್ನಡ ಸಂಘಟನೆ, ಜಗನ್ನಾಥ್ ಹೇಮಾದ್ರಿ (ಸಾಹಿತ್ಯ), ವಿ.ಪಿ. ರಮೇಶ್ ಆಡಳಿತ, (ಕನ್ನಡ ಸೇವೆ), ಭಾರತಿ ಶೇಷಗಿರಿ ರಾವ್ (ಸಾಹಿತ್ಯ), ಹೆಚ್.ಎಲ್.ಎನ್. ರಾವ್ (ಸಂಘಟನೆ), ಕೆ.ಎನ್. ಪರಮೇಶ್ವರನ್ (ಸಾಹಿತ್ಯ), ಕ್ಯಾತನಹಳ್ಳಿ ರಾಮಣ್ಣ (ಜಾನಪದ), ಕಾಗತಿ ವೆಂಕಟರತ್ನಂ (ಸಾಹಿತ್ಯ), ಕೆ.ಎಂ. ನಾಗರಾಜು (ಕನ್ನಡ ಸೇವೆ), ಸೊಂದಲಗೆರೆ ಲಕ್ಷ್ಮೀಪತಿ (ಸಾಹಿತ್ಯ), ಆರ್. ಮಲ್ಲಿಕಾರ್ಜುನಯ್ಯ (ಸಾಹಿತ್ಯ), ಜೆ.ಎಲ್. ಪದ್ಮನಾಭ (ಶಿಕ್ಷಣ), ಮೂಗೂರು ನಂಜುಂಡಸ್ವಾಮಿ (ಕನ್ನಡ ಸಂಘಟನೆ), ಚಾ.ರಂ. ಶ್ರೀನಿವಾಸಗೌಡ (ಕನ್ನಡ ಸೇವೆ), ಬಿ.ಜೆ. ಗೋಪಾಲಕೃಷ್ಣ (ಕನ್ನಡ ಸೇವೆ), ಸುಬ್ರಾಯ ಸಂಪಾಜೆ (ಸಾಹಿತ್ಯ), ಅರುಣ್ ವೆಂಕಟೇಶ ಸಿಡ್ನಿ, ಆಸ್ಟ್ರೇಲಿಯಾ, (ಕನ್ನಡ ಸಂಘಟನೆ), ಬಿ.ಆರ್. ಸುರೇಂದ್ರ ನ್ಯೂಯಾರ್ಕ್, ಅಮೆರಿಕಾ, (ಕನ್ನಡ ಸಂಘಟನೆ), ತೀರ್ಥಪ್ರಸಾದ್ ಎಸ್.ಡಿ. ಅರಬ್ ದೇಶ, (ಕನ್ನಡ ಸಂಘಟನೆ), ಶ್ರೀನಿವಾಸ ಕೃ ದೇಸಾಯಿ (ಸಾಹಿತ್ಯ), ನಾಗರತ್ನ ಹೆಮ್ಮಿಗೆ (ಶಿಕ್ಷಣ), ಬಿ.ಎಲ್. ಶಿವಕುಮಾರ್ (ಕನ್ನಡ ಸಂಘಟನೆ), ಬಿ. ಶಿವು (ಕ್ರೀಡಾ ಕ್ಷೇತ್ರ).

ಸಮಾನಂತರ ವೇದಿಕೆ - 1ರಲ್ಲಿ ಗೋಷ್ಠಿಗಳು

ಬೆಳಿಗ್ಗೆ 9.30 ರಿಂದ 11 ಗಂಟೆಯವರೆಗೆ ಡಿಸೆಂಬರ್ 22 ರಂದು ಸಮಾನಂತರ ವೇದಿಕೆ - 1ರಲ್ಲಿ ಪುನಶ್ಚೇತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು ವಿಷಯದ ಬಗ್ಗೆ ಗೋಷ್ಠಿ - 8 ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಲೇಖಕಿ ಬಾನು ಮುಸ್ತಾಕ್ ಅವರು ವಹಿಸಲಿದ್ದಾರೆ. ಆತ್ಮ ಕಥನಗಳು ವಿಷಯದ ಬಗ್ಗೆ - ಡಾ. ಅರುಣ್ ಜೋಳದಕೂಡ್ಲಿಗಿ , ವಿಜ್ಞಾನ ಸಾಹಿತ್ಯ - ಡಾ. ಬಿ.ಎಸ್. ಶೈಲಜ, ಲಿಂಗತ್ವ ಮತ್ತು ಲೈಂಗಿಕತೆ ಅಲ್ಪ ಸಂಖ್ಯಾತರ ಸಾಹಿತ್ಯ – ಡಾ. ಅಕ್ಕೆಯ್ ಪದ್ಮಶಾಲಿ, ಪ್ರಬಂಧ ಸಾಹಿತ್ಯ - ಚ.ಹ. ರಘುನಾಥ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಗೋಷ್ಠಿ - 9 : ಬೆಳಗ್ಗೆ 11 ರಿಂದ 12:30 ಗಂಟೆಯವರೆಗೆ ಸಮಾನತೆ ಸಾರಿದ ದಾರ್ಶನಿಕರು ವಿಷಯದ ಬಗ್ಗೆ ಗೋಷ್ಠಿ - 9 ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತಿ ಚಿಂತಕರು ಮತ್ತು ವಿಶ್ರಾಂತ ಮುಖ್ಯ ಅಭಿಯಂತರರು ಶಂಕರ ದೇವನೂರು ಅವರು ವಹಿಸಲಿದ್ದು, ಸಂಸ್ಕೃತಿ ಚಿಂತಕ ಕೆ ಎಂ ಅಬೂಬಕ್ಕರ್ ಸಿದ್ದೀಕ ಅವರು ಆಶಯ ನುಡಿ ನುಡಿಯಲಿದ್ದಾರೆ. ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯದ ಬಗ್ಗೆ ಶ್ರೀ ಶಿವವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿಗಳು, ಸಾಮರಸ್ಯ ಸಾರಿದ ದಾಸವರೇಣ್ಯಯರು - ಡಾ ಎನ್ ಆರ್ ಲಲಿತಾಂಬ, ಅರಿವು ಮೂಡಿಸಿದ ತತ್ವಪದಕಾರರು - ಮೀನಾ ಸದಾಶಿವ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಗೋಷ್ಠಿ 10 : ಮಧ್ಯಾಹ್ನ 12:30 ರಿಂದ 2 ಗಂಟೆಯವರೆಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ - 2022 : ಪರಿಣಾಮಕಾರಿ ಅನುಷ್ಠಾನ ವಿಷಯದ ಬಗ್ಗೆ ಗೋಷ್ಠಿ ಮತ್ತು ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನುನ್ಯಾಯಮೂರ್ತಿ ಅಶೋಕ ನಿಜಗಣ್ಣನವರ ಸದಸ್ಯರು, ಕರ್ನಾಟಕ ಕಾನೂನು ಆಯೋಗ ಅವರು ವಹಿಸಲಿದ್ದು, ಬಿ.ಆರ್. ಜಯರಾಮರಾಜೇ ಅರಸ್ ಹಿರಿಯ ಚಿಂತಕರು ಆಶಯ ನುಡಿ ಯನ್ನು ನುಡಿಯಲಿದ್ದಾರೆ. ಆಡಳಿತದಲ್ಲಿ ಕನ್ನಡ ಬಳಕೆ - ಮುಳಬಾಗಿಲು ಜಿ. ಶ್ರೀಧರ್, ಸಾರ್ವಜನಿಕ ವಲಯದಲ್ಲಿ ಕನ್ನಡ ಬಳಕೆ - ಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಶಾ, ನ್ಯಾಯಾಲಯದಲ್ಲಿ ಕನ್ನಡ ತೀರ್ಪುಗಳು - ನ್ಯಾಯಾಧೀಶ ಬಿ. ಶಿವಲಿಂಗೇಗೌಡ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಸಂಜೆ 7.30 ಗಂಟೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ