logo
ಕನ್ನಡ ಸುದ್ದಿ  /  Karnataka  /  Mangaluru Blast Case: Police Is Facing Challenge Of Taking Statement From Cooker Bomb Blast Case Accused Sharik

Mangaluru Blast Case: ಶಾರೀಕ್‌ ಹೇಳಿಕೆ ಪಡೆಯುವುದೇ ಪೊಲೀಸರಿಗೆ ದೊಡ್ಡ ಸವಾಲು! ಯಾಕೆ ಅಂಥದ್ದೇನಾಯಿತು? ಇಲ್ಲಿದೆ ವಿವರ

HT Kannada Desk HT Kannada

Nov 26, 2022 12:35 PM IST

ಮಂಗಳೂರು ಆಟೋ ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದ ಸಿಸಿಟಿವಿ ಕ್ಯಾಮೆರಾ ದೃಶ್ಯ

  • Mangaluru Blast Case: ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಪೋಟ ಪ್ರಕರಣದಲ್ಲಿ ಆರೋಪಿ ಶಾರೀಕ್‌ನ ಹೇಳಿಕೆ ದಾಖಲಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಂಥದ್ದೇನಾಗಿದೆ? - ಇಲ್ಲಿದೆ ವಿವರ ವರದಿ. 

ಮಂಗಳೂರು ಆಟೋ ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದ ಸಿಸಿಟಿವಿ ಕ್ಯಾಮೆರಾ ದೃಶ್ಯ
ಮಂಗಳೂರು ಆಟೋ ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದ ಸಿಸಿಟಿವಿ ಕ್ಯಾಮೆರಾ ದೃಶ್ಯ

ಬೆಂಗಳೂರು: ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಪೋಟ ಪ್ರಕರಣದಲ್ಲಿ ಆರೋಪಿ ಶಾರೀಕ್‌ನ ಹೇಳಿಕೆ ದಾಖಲಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಟ್ರೆಂಡಿಂಗ್​ ಸುದ್ದಿ

Vijayapura News: ವಿಜಯಪುರ ಜಿಲ್ಲೆಯ ಲಚ್ಯಾಣ ಜಾತ್ರೆಯ ರಥದಡಿ ಸಿಲುಕಿ ಇಬ್ಬರು ಭಕ್ತರ ಸಾವು

Bangalore News: ಬೆಂಗಳೂರಲ್ಲಿ ಅನಧಿಕೃತ ಬಡಾವಣೆಗಳ ಅಬ್ಬರ, ನಿವೇಶನ ಖರೀದಿಸುವಾಗ ಇರಲಿ ಎಚ್ಚರ

Arecanut News: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘಕ್ಕೆ ಯುವ ಮುಖ, ಹೊಸ ಅಧ್ಯಕ್ಷರ ಯೋಜನೆಗಳು ಏನೇನು?

Hassan Sex Scandal: ಪ್ರಜ್ವಲ್‌ ನಂತರ ತಂದೆ ಎಚ್‌ಡಿರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ದೂರು, ಮೊಕದ್ದಮೆ ದಾಖಲು

ಸ್ಫೋಟದಲ್ಲಿ ಆರೋಪಿ ಶಾರೀಕ್‌ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾನೆ. ಬಲಗಣ್ಣು, ಎರಡೂ ಕೈಗಳಿಗೆ ಸುಟ್ಟಗಾಯಗಳಾಗಿವೆ. ಮುಖ ಹಾಗೂ ಹೊಟ್ಟೆ ಭಾಗದಲ್ಲೂ ಸುಟ್ಟ ಗಾಯಗಳಾಗಿವೆ. ಕಿಡ್ನಿ ಕೂಡ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದ್ದು, ಚಿಕಿತ್ಸೆ ಮುಂದುವರಿದಿದೆ. ಹೇಳಿಕೆ ನೀಡಲು ಒಂದು ವಾರ ಸಮಯ ಬೇಕಾಗಬಹುದು ಎಂದು ವೈದ್ಯರು ಪೊಲೀಸರಿಗೆ ತಿಳಿಸಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ ಎಂದು ಟಿವಿ ಮಾಧ್ಯಮಗಳು ವರದಿ ಮಾಡಿವೆ.

ಒಂದೊಮ್ಮೆ ಆತ ಚೇತರಿಸಿಕೊಂಡರೂ, ಪೊಲೀಸರ ಪ್ರಶ್ನೆಗೆ ಆತ ಸಮರ್ಪಕವಾಗಿ ಉತ್ತರಿಸುವನೇ ಎಂಬ ಸಂದೇಹ ಕೂಡ ಇದೆ. ಈ ಪ್ರಕರಣದಲ್ಲಿ ಬದುಕಿ ಉಳಿದಿರುವ ಆತನ ಹೇಳಿಕೆ ಬಹಳ ಪ್ರಾಮುಖ್ಯತೆ ಪಡೆದಿದೆ. ಆದ್ದರಿಂದ ಪೊಲೀಸರು ಆತನ ಚೇತರಿಕೆಯನ್ನು ನಿರೀಕ್ಷಿಸುತ್ತಿದ್ದಾರೆ.

ಎನ್‌ಐಎ ತನಿಖೆ ಶುರು

ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರ ಎನ್‌ಐಎ ಹೆಗಲಿಗೇರಿಸಿದೆ. ಈ ನಡುವೆ, ಕುಕ್ಕರ್‌ ಬಾಂಬ್ ಸ್ಫೋಟ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆದ್ದರಿಂದ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ತನಿಖೆಯ ಹೊಣೆಗಾರಿಕೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದು ಕಂಕನಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ಘಟನೆ ನಡೆದ ಕೂಡಲೇ ಪೊಲೀಸರು ಸಂಗ್ರಹಿಸಿದ ಪ್ರಾಥಮಿಕ ಸಾಕ್ಷ್ಯ, ಪ್ರಥಮ ವರ್ತಮಾನ ವರದಿ ಮತ್ತು ಇತರೆ ಮಾಹಿತಿಗಳನ್ನು ಆಧರಿಸಿ ರಾಜ್ಯ ಸರ್ಕಾರ ಎನ್‌ಐಎಗೆ ತನಿಖೆ ವರ್ಗಾವಣೆ ಮಾಡುವ ತೀರ್ಮಾನ ತೆಗೆದುಕೊಂಡಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ತಿಳಿಸಿದ್ದರು.

ಮಂಗಳೂರಿನಲ್ಲಿದೆ ಎನ್‌ಐಎ ತಂಡ

ಪೊಲೀಸರು ಸಿದ್ಧಪಡಿಸಿರುವ ಎಫ್‌ಐಆರ್‌ನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದ ಮೊದಲ ಆರೋಪಿ ಶಾರೀಕ್‌. ಈತ ಶಂಕಿತ ಉಗ್ರನಾಗಿದ್ದು, ಎನ್‌ಐಎ ತಂಡ ವಿಚಾರಣೆ ಶುರುಮಾಡಿದ ಬಳಿಕ ಉಳಿದ ವಿಚಾರಗಳು ಬಹಿರಂಗವಾಗುವ ನಿರೀಕ್ಷೆ ಇದೆ. ಸದ್ಯ ಎನ್‌ಐಎ ಅಧಿಕಾರಿಗಳ ಒಂದು ತಂಡ ಮಂಗಳೂರಿನಲ್ಲಿದೆ. ಇನ್ನು ಕೆಲವು ತಂಡಗಳು ಮೈಸೂರು, ಕೊಯಮತ್ತೂರು, ಕನ್ಯಾಕುಮಾರಿ ಮತ್ತು ಕೊಚ್ಚಿಯಲ್ಲಿ ಶೋಧ ಮುಂದುವರಿಸಿವೆ.

ಮಂಗಳೂರು ಸ್ಫೋಟದ ಹೊಣೆ ಹೊತ್ತ ಸಂಘಟನೆಯಿಂದ ಅಲೋಕ್ ಕಮಾರ್‌ ಅವರಿಗೆ ಜೀವ ಬೆದರಿಕೆ

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಹೊಣೆ ಹೊತ್ತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ರಾಜ್ಯದ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್​ಕುಮಾರ್​ಗೆ ಜೀವ ಬೆದರಿಕೆ ಒಡ್ಡಿದೆ ಎಂದು ನ್ಯೂಸ್‌ 18 ಕನ್ನಡ ವರದಿ ಮಾಡಿದೆ. ನಿಮ್ಮ ಸಂತೋಷ ಬಹಳ ದಿನ ಇರಲ್ಲ. ನಮ್ಮ ಕೆಲಸ ನಾವು ಮುಂದುವರಿಸಿದ್ದೇವೆ. ನಾವು ನಿಮ್ಮ ಬಳಿ ಯಾವಾಗ ಬರ್ತೀವೋ ಗೊತ್ತಿಲ್ಲ ಎಂದು ಬೆದರಿಕೆ ಹಾಕಿದೆ.

ಶಾರೀಕ್‌ ನಂಟು- ಅನೇಕರ ಫೋನ್‌ ಸ್ವಿಚ್ ಆಫ್‌

ಐಸಿಸ್‌ ಉಗ್ರ ಸಂಘಟನೆ ಸೇರಲು ಶಾರೀಕ್‌ ಬಯಸಿದ್ದ. ಇದೇ ಕಾರಣಕ್ಕೆ ಆತ ಕುಕ್ಕರ್‌ ಬಾಂಬ್‌ ಹಿಡಿದು ಫೋಟೋಗೆ ಪೋಸ್‌ ಕೊಟ್ಟಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಶಾರೀಕ್‌ ಪೊಲೀಸ್‌ ಬಲೆಗೆ ಬಿದ್ದ ಕೂಡಲೇ, ಆತನ ಸಂಪರ್ಕದಲ್ಲಿದ್ದ ಅನೇಕರ ಫೋನ್‌ ಸ್ವಿಚ್‌ ಆಫ್‌ ಆಗಿವೆ. ಶಾರೀಕ್‌ ಮೊಬೈಲ್‌ ಕರೆ ಪಟ್ಟಿ ಸಂಗ್ರಹಿಸಿರುವ ಪೊಲೀಸರು, ಸಂಪರ್ಕದಲ್ಲಿದ್ದವರನ್ನು ಜಾಲಾಡ ತೊಡಗಿದ್ದಾರೆ. ಇದೇ ಕಾರಣಕ್ಕೆ ಅನೇಕರ ಫೋನ್‌ ಸ್ವಿಚ್‌ ಆಫ್‌ ಆಗಿವೆ. ಇನ್ನು ಕೆಲವರು ಊರು ಬಿಟ್ಟು ಬೇರೆ ಕಡೆ ಹೋಗಿದ್ದಾರೆ. ಇವರಲ್ಲಿ ಕೆಲವ ನಂಬರ್‌ ತಮಿಳುನಾಡು ಮತ್ತು ಕೇರಳಗಳಲ್ಲಿ ಸಕ್ರಿಯವಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.

    ಹಂಚಿಕೊಳ್ಳಲು ಲೇಖನಗಳು