logo
ಕನ್ನಡ ಸುದ್ದಿ  /  ಕರ್ನಾಟಕ  /  ಸಿಟಿ ರವಿ ಬಂಧನ ವಿಚಾರ; ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ; ಮಾಜಿ ಸ್ಪೀಕರ್‌ಗಳು ಹೇಳಿರುವುದಿಷ್ಟು

ಸಿಟಿ ರವಿ ಬಂಧನ ವಿಚಾರ; ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ; ಮಾಜಿ ಸ್ಪೀಕರ್‌ಗಳು ಹೇಳಿರುವುದಿಷ್ಟು

Umesh Kumar S HT Kannada

Dec 21, 2024 06:33 AM IST

google News

ಸಿಟಿ ರವಿ ಬಂಧನ ವಿಚಾರ; ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ ಎಂಬ ಚರ್ಚೆಗೆ ಉತ್ತರವಾಗಿ ಮಾಜಿ ಸ್ಪೀಕರ್‌ಗಳು ಹಳೆಯ ಪ್ರಕರಣಗಳನ್ನು ನೆನಪಿಸಿದ್ದಾರೆ.

  • ಸಿಟಿ ರವಿ ಬಂಧನ ವಿಚಾರ ಚರ್ಚೆಗೆ ಒಳಗಾಗಿದೆ. ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ ಎಂಬ ನೆಲೆಯಲ್ಲಿ ಚರ್ಚೆ ನಡೆಯುತ್ತಿರುವ ಕಾರಣ, ಮಾಜಿ ಸ್ಪೀಕರ್‌ಗಳು ಹಳೆ ಪ್ರಕರಣಗಳನ್ನು ನೆನಪಿಸಿಕೊಟ್ಟಿದ್ದಾರೆ. ಆ ವಿವರ ಇಲ್ಲಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)

ಸಿಟಿ ರವಿ ಬಂಧನ ವಿಚಾರ; ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ ಎಂಬ ಚರ್ಚೆಗೆ ಉತ್ತರವಾಗಿ ಮಾಜಿ ಸ್ಪೀಕರ್‌ಗಳು ಹಳೆಯ ಪ್ರಕರಣಗಳನ್ನು ನೆನಪಿಸಿದ್ದಾರೆ.
ಸಿಟಿ ರವಿ ಬಂಧನ ವಿಚಾರ; ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ ಎಂಬ ಚರ್ಚೆಗೆ ಉತ್ತರವಾಗಿ ಮಾಜಿ ಸ್ಪೀಕರ್‌ಗಳು ಹಳೆಯ ಪ್ರಕರಣಗಳನ್ನು ನೆನಪಿಸಿದ್ದಾರೆ.

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಅಶ್ಲೀಲವಾಗಿ ನಿಂದಿಸಿದ ಬಿಜೆಪಿ ಮುಖಂಡ ವಿಧಾನಪರಿಷತ್‌ ಸದಸ್ಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಬಂಧಿಸಲು ಸಭಾಪತಿಗಳ ಪೂರ್ವಾನುಮತಿ ಪಡೆಯಬೇಕಿತ್ತು ಎಂಬ ವಾದ ಮುನ್ನಲೆಗೆ ಬಂದಿದೆ. ಆದರೆ ಸದನದ ಹೊರಗೆ ನಡೆಯುವ ವಿದ್ಯಾಮಾನಗಳಿಗೆ ಸಭಾಧ್ಯಕ್ಷರು ಅಥವಾ ಸಭಾಪತಿಗಳ ಅನುಮತಿ ಬೇಕಿರುವುದಿಲ್ಲ. ಇದನ್ನು ಸುಪ್ರೀಂಕೋರ್ಟ್‌ ಸೇರಿ ಅನೇಕ ರಾಜ್ಯಗಳ ಹೈಕೋರ್ಟ್‌ಗಳು ಸ್ಪಷ್ಟಪಡಿಸಿವೆ ಎಂಬುದನ್ನು ಮಾಜಿ ಸ್ಪೀಕರ್‌ಗಳು ನೆನಪಿಸಿಕೊಂಡಿದ್ದು, ತಮ್ಮ ಕಾಲದ ಉದಾಹರಣೆಗಳನ್ನು ಮುಂದಿಟ್ಟಿದ್ದಾರೆ.

ಸಿಟಿ ರವಿ ಬಂಧನ ವಿಚಾರ; ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ

ಬಿಜೆಪಿ ವಿಧಾನಪರಿಷ್‌ ಸದಸ್ಯ ರವಿ ಅವರನ್ನು ಬೆಳಗಾವಿಯ ಸುವರ್ಣಸೌಧದ ಹೊರಗೆ ಬಂಧಿಸಲಾಗಿದೆ. ಸದನದ ಒಳಗೆ ಸದಸ್ಯರನ್ನು ಬಂಧಿಸಬೇಕಾದರೆ ಸಭಾಧ್ಯಕ್ಷರ ಅನುಮತಿ ಬೇಕಾಗುತ್ತದೆ ಎಂದು ಮಾಜಿ ಸ್ಪೀಕರ್‌ ಆರ್.‌ ರಮೇಶ್‌ ಕುಮಾರ್‌ ಹೇಳುತ್ತಾರೆ.

2019 ಜನವರಿ, 20ರಂದು ರಲ್ಲಿ ಬೆಂಗಳೂರಿನ ಹೊರವಲಯದ ರೆಸಾರ್ಟ್‌ ವೊಂದರಲ್ಲಿ ಆನಂದ್‌ ಸಿಂಗ್‌ ಮತ್ತು ಕಂಪ್ಲಿ ಶಾಸಕ ಗಣೇಶ್‌ ಪರಸ್ಪರ ಹೊಡೆದಾಡಿಕೊಂಡಿದ್ದರು. ಆಗ ಆನಂದ ಸಿಂಗ್‌ ನೀಡಿದ ದೂರಿನ ಮೇರೆಗೆ ಗಣೇಶ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಆಗ ರಮೇಶ್‌ ಕುಮಾರ್‌ ಅವರು ಸದನದ ಹೊರಗೆ ನಡೆಯುವ ಘಟನೆಗಳು ನನ್ನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿದ್ದರು.

2021ರಲ್ಲಿ ನಡೆದ ಪ್ರಕರಣವೊಂದರ ವಿಚಾರಣೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ಸಹ ಇದೇ ಅಭಿಪ್ರಾಯಪಟ್ಟಿದೆ. ಸಂಸದರು ಅಥವಾ ಶಾಸಕರ ಮೇಲಿನ ಕ್ರಿಮಿನಲ್‌ ಮೊಕದ್ದಮೆಗಳಲ್ಲಿ ದಾಖಲಾಗಿರುವ ಎಫ್‌ ಐ ಆರ್‌ ಗಳಿಗೆ ಸಂಬಂಧಪಟ್ಟಂತೆ ಅವರನ್ನು ಬಂಧಿಸಲು ಪೊಲೀಸರಿಗೆ ಸಭಾಧ್ಯಕ್ಷರ ಅನುಮತಿ ಬೇಕಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅದಕ್ಕೂ ಹಿಂದೆ ಬಿ. ಎಸ್‌. ಯಡಿಯೂರಪ್ಪ ಅವರನ್ನು ಬಂಧಿಸಿದಾಗ ಅಂದಿನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿಧಾನಸಭೆ ಅಥವಾ ವಿಧಾನಪರಿಷತ್‌ ಸದಸ್ಯರನ್ನು ಯಾರೂ ನೇಮಕ ಮಾಡುವುದಿಲ್ಲ. ಬದಲಾಗಿ ಅವರು ಆಯ್ಕೆಯಾಗುತ್ತಾರೆ. ಅವರನ್ನು ವಜಾ ಮಾಡುವ ಅಧಿಕಾರವೂ ಸಭಾಧ್ಯಕ್ಷ ಅಥವಾ ಸಭಾಪತಿಗಳಿಗೂ ಇರುವುದಿಲ್ಲ. ಆದ್ದರಿಂದ ಶಾಸಕರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.

ಕಾನೂನು ಪ್ರಕಾರ ಎಲ್ಲರೂ ಸಮಾನರು, ಆರೋಪ ಸಾಬೀತಾದರೆ ಸಿಟಿ ರವಿಗೂ ಶಿಕ್ಷೆ

ಶಾಸಕರ ಬಂಧನ-ಬಿಡುಗಡೆ ಬಗ್ಗೆ ಸಂಬಂಧಪಟ್ಟ ಅಧಿಕಾರಿ ತಮಗೆ ಮಾಹಿತಿ ನೀಡುತ್ತಾರೆ. ಅದನ್ನು ನಾವು ಸದನದ ಸದಸ್ಯರಿಗೆ ತಿಳಿಸುತ್ತೇವೆ ಎಂದು ಅವರು ಹೇಳಿದ್ದರು. ಸದನದ ಹೊರಗಿನ ಶಾಸಕರ ನಡವಳಿಕೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಭಾರತೀಯ ದಂಡ ಸಂಹಿತೆ (ಐಪಿಸಿ) ದೃಷ್ಟಿಯಲ್ಲಿ ಮುಖ್ಯಮಂತ್ರಿ, ಸಚಿವ, ಶಾಸಕನೆಂಬ ಯಾವುದೇ ಭೇದವಿಲ್ಲ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.

ಸಿಟಿ ರವಿ ವಿರುದ್ಧ ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ , ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರ ಆಪ್ತ ಕಾರ್ಯದರ್ಶಿ ನೀಡಿರುವ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ ಎಸ್) ಸೆಕ್ಷನ್‌ 75 ಮತ್ತು 79 ರ ಅಡಿಯಲ್ಲಿ ಎಫ್ ಐ ಆರ್‌ ದಾಖಲಿಸಲಾಗಿದೆ.‌ ಲೈಂಗಿಕ ಕಿರುಕುಳ, ಲೈಂಗಿಕ ಸಂಜ್ಞೆ, ಲೈಂಗಿಕ ಬೇಡಿಕೆ, ಲೈಂಗಿಕ ಚಿತ್ರಗಳನ್ನು ತೋರಿಸುವುದು ಮತ್ತು ಮಹಿಳೆಯೊಬ್ಬರ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್‌ ಗಳ ಅಡಿಯಲ್ಲ ಆರೋಪ ಸಾಬೀತಾದರೆ ಮೂರು ವರ್ಷಗಳ ಸಾದಾ ಶಿಕ್ಷೆ ಅನುಭವಿಸಬೇಕಾಗುತ್ತದೆ.

(ವರದಿ- ಎಚ್ ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ