logo
ಕನ್ನಡ ಸುದ್ದಿ  /  ಕರ್ನಾಟಕ  /  ಕಾವೇರಿ ತೀರದಲ್ಲಿ ಮತ್ತೊಂದು ಜಲಪಾತೋತ್ಸವ; ನವೆಂಬರ್‌ 30, ಡಿಸೆಂಬರ್ 1ರಂದು ಚುಂಚನಕಟ್ಟೆಯಲ್ಲಿ ಆಯೋಜನೆ

ಕಾವೇರಿ ತೀರದಲ್ಲಿ ಮತ್ತೊಂದು ಜಲಪಾತೋತ್ಸವ; ನವೆಂಬರ್‌ 30, ಡಿಸೆಂಬರ್ 1ರಂದು ಚುಂಚನಕಟ್ಟೆಯಲ್ಲಿ ಆಯೋಜನೆ

Umesha Bhatta P H HT Kannada

Nov 12, 2024 06:30 AM IST

google News

ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಕಾವೇರಿ ಜಲಪಾತದಲ್ಲಿ ಡಿಸೆಂಬರ್‌ ಮೊದಲ ವಾರ ಜಲಪಾತೋತ್ಸವ ನಡೆಯಲಿದೆ.

    • Mysore Tourism: ಕಾವೇರಿ ನದಿ ತೀರದ ಪ್ರಮುಖ ಜಲಪಾತ ಹಾಗೂ ಪ್ರವಾಸಿ ತಾಣಗಳಲ್ಲಿ ಚುಂಚನಕಟ್ಟೆ ಜಲಪಾತವೂ ಒಂದು. ಇಲ್ಲಿ ಡಾ.ರಾಜಕುಮಾರ್‌, ಅನಂತನಾಗ್‌ ಸಹಿತ ಹಲವು ನಾಯಕರ ಚಿತ್ರಗಳ ಚಿತ್ರೀಕರವಾಗಿದೆ. ಇಲ್ಲಿ ಈಗ ಜಲಪಾತೋತ್ಸವ ಆಯೋಜನೆಗೊಂಡಿದೆ. 
ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಕಾವೇರಿ ಜಲಪಾತದಲ್ಲಿ ಡಿಸೆಂಬರ್‌  ಮೊದಲ ವಾರ ಜಲಪಾತೋತ್ಸವ ನಡೆಯಲಿದೆ.
ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಕಾವೇರಿ ಜಲಪಾತದಲ್ಲಿ ಡಿಸೆಂಬರ್‌ ಮೊದಲ ವಾರ ಜಲಪಾತೋತ್ಸವ ನಡೆಯಲಿದೆ.

ಮೈಸೂರು: ಕಾವೇರಿ ತೀರದ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತೋತ್ಸವದ ಬಳಿಕ ಈಗ ಮತ್ತೊಂದು ಜಲಪಾತೋತ್ಸವಕ್ಕೆ ಸಿದ್ದತೆಗಳು ನಡೆದಿವೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯಲ್ಲಿರುವ ಧನುಷ್ಕೋಟಿಯಲ್ಲಿ ಕಾವೇರಿ ಜಲಪಾತೋತ್ಸವ ನಡೆಯಲಿದೆ. ಹಿಂದೆ ಸಾ.ರಾ.ಮಹೇಶ್‌ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ಇಲ್ಲಿ ಉತ್ಸವ ನಡೆದಿತ್ತು. ಈಗ ಕೆಆರ್‌ನಗರ ಶಾಸಕ ಡಿ.ರವಿಶಂಕರ್‌ ಅವರು ಈ ಭಾಗದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಭಾಗವಾಗಿ ನವೆಂಬರ್‌ 30 ಹಾಗೂ ಡಿಸೆಂಬರ್‌ 1 ರಂದು ಎರಡು ದಿನಗಳ ಜಲಪಾತೋತ್ಸವ ಹಮ್ಮಿಕೊಳ್ಳಲು ಮುಂದಾಗಿದ್ಧಾರೆ. ಚುಂಚನಕಟ್ಟೆಯಲ್ಲಿ ಕಾವೇರಿ ನದಿ ಜಲಪಾತವಾಗಿ ಧುಮ್ಮುಕ್ಕುವ ಕ್ಷಣಗಳನ್ನು ನೋಡುವುದೇ ಚಂದ.

ಚುಂಚನಕಟ್ಟೆಗೆ ಸುದೀರ್ಘ ಇತಿಹಾಸವಿದೆ. ಇಲ್ಲಿ ಇರುವ ಶ್ರೀರಾಮ ದೇವರಿಗೂ ಐತಿಹ್ಯವಿದೆ. ಚುಂಚನಕಟ್ಟೆ ಶ್ರೀರಾಮ ದೇವರ ಉತ್ಸವ ಪ್ರತಿ ವರ್ಷದ ಸಂಕ್ರಾಂತಿ ವೇಳೆ ವಿಜೃಂಭಣೆಯಿಂದ ನಡೆಯುತ್ತದೆ. ಕರ್ನಾಟಕದ ನಾನಾ ಭಾಗಗಳಿಂದ ಕಾವೇರಿ ತೀರದ ಪ್ರಮುಖ ರಾಮದೇಗುಲಕ್ಕೆ ಆಗಮಿಸುತ್ತಾರೆ. ದೇಗುಲದ ಮತ್ತೊಂದು ಭಾಗದಲ್ಲಿಯೇ ಕಾವೇರಿ ನದಿ ಹರಿದಿದ್ದು ಜಲಪಾತದ ರೂಪ ಪಡೆದುಕೊಂಡಿದೆ.

ಮಳೆಗಾಲದ ಸಮಯದಲ್ಲಿ ಜಲಪಾತ ಹೆಚ್ಚು ವೈಭವದಿಂದ ಕೂಡಿರಲಿದೆ. ಪಕ್ಕದಲ್ಲಿಯೇ ಇರುವ ಭತ್ತದ ಹಸಿರು ಪ್ರದೇಶ ನೋಡಲು ಬಲು ಸುಂದರ.

ಈ ಭಾಗದಲ್ಲಿ ರಾಜಕುಮಾರ್‌, ಅನಂತ್‌ ನಾಗ್‌ ಸಹಿತ ಹಲವು ನಟರ ಚಿತ್ರಗಳ ಚಿತ್ರೀಕರಣವೂ ಆಗಿದೆ. ಚುಂಚನಕಟ್ಟೆ ಜಲಪಾಲದಲ್ಲೂ ಹಲವಾರು ಗೀತೆಗಳನ್ನು ಚಿತ್ರೀಕರಿಸಲಾಗಿದೆ. ಈ ಬಾರಿ ಹೊಸ ವರ್ಷದ ಆರಂಭಕ್ಕೂ ಮುನ್ನವೇ ಇಲ್ಲಿ ಜಲಪಾತೋತ್ಸವ ಆಯೋಜನೆಗೊಳ್ಳುತ್ತದೆ.

ಎರಡು ದಿನವು ಪ್ರವಾಸಿಗರನ್ನು ಸೆಳೆಯಲು ವಿಭಿನ್ನ ದೀಪಾಲಂಕಾರ, ಸಂಗೀತದ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚುಂಚನಕಟ್ಟೆ ಜಲಪಾತೋತ್ಸವ ಭಾಗವಾಗಿ ರೂಪಿಸಲಾಗುತ್ತಿದೆ. ಅರ್ಥಪೂರ್ಣವಾಗಿ ನವೆಂಬರ್‌ 30 ಹಾಗೂ ಡಿಸೆಂಬರ್‌ 1 ರಂದು ಚುಂಚನಕಟ್ಟೆ ಜಲಪಾತೋತ್ಸವ ಹಮ್ಮಿಕೊಳ್ಳಲಾಗುತ್ತಿದ್ದು ಕೆ. ಆರ್ ನಗರದಿಂದ ಚುಂಚನಕಟ್ಟೆ ಮಾರ್ಗದಲ್ಲಿ ವಿದ್ಯುತ್ ಅಲಂಕಾರ ಮಾಡಬೇಕು. ಹೆಸರಾಂತ ಕಲಾವಿದರಿಂದ ರಸಸಂಜೆ, ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಏರ್ಪಡಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ.

ಈ ಬಾರಿ ರಾಜ್ಯದಲ್ಲಿ ಉತ್ತಮವಾಗಿ ಮಳೆ ಆಗಿದ್ದುನವೆಂಬರ್‌ 30 ಹಾಗೂ ಡಿಸೆಂಬರ್‌ 1 ರಂದು ಚುಂಚನಕಟ್ಟೆ ಗ್ರಾಮದಲ್ಲಿರುವ ಧನುಷ್ಕೋಟಿ ಕಾವೇರಿ ಜಲಪಾತ ಕಾರ್ಯಕ್ರಮ ಮಾಡಲಾಗುವುದು ಎನ್ನುವುದು ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ ರವಿಶಂಕರ್ ವಿವರಣೆ.

ಕಾರ್ಯಕ್ರಮದ ಆವರಣದಲ್ಲಿ ವಸ್ತು ಪ್ರದರ್ಶನ ಹಾಗೂ ವಿವಿಧ ಮಳಿಗೆಗಳನ್ನು ತೆರೆಯಬೇಕು. ಜಲಪಾತೋತ್ಸವ ಸಂಬಂಧ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಹೆಲ್ತ್ ಕ್ಯಾಂಪ್ ಮಾಡಿ ಬರುವ ಪ್ರವಾಸಿಗರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಬೇಕು. ಆರೋಗ್ಯದ ಕುರಿತು ಈ ಭಾಗದ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಸಲಹೆಯನ್ನು ನೀಡಲಾಗಿದೆ.

ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಉತ್ತಮ ವೇದಿಕೆ ವ್ಯವಸ್ಥೆ ಮಾಡಬೇಕು. ರಸ್ತೆ ಪಾಟ್ ಹೋಲ್ ಗಳನ್ನು ಮುಚ್ಚುವ ವ್ಯವಸ್ಥೆ ಮಾಡಬೇಕು. ಆವರಣದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಕಲಾವಿದರನ್ನು ಗುರುತಿಸಿ ಕರೆಸಲು ಕ್ರಮ ವಹಿಸಲಾಗುವುದು. ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎನ್ನುತ್ತಾರೆ ಮೈಸೂರು ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ