Foggy Bangalore: ಬೆಂಗಳೂರು ಮೇಲ್ ಮಂಜು, ಉದ್ಯಾನಗರಿಯಲ್ಲಿ ಚಳಿಯ ಉದಯರಾಗ; ಬೆಳ್ಳಂಬೆಳಗ್ಗೆ ಕೂಲ್ ಕೂಲ್ ವಾತಾವರಣದ ಕ್ಷಣ ಹೇಗಿತ್ತು
- ಬೆಂಗಳೂರು ಉದ್ಯಾನ ನಗರಿ ಮಾತ್ರವಲ್ಲ.ಚಳಿಯ ನಗರವೂ ಹೌದು. ನವೆಂಬರ್ ಬಂದರೆ ಇಲ್ಲಿ ಹಿಮದ ಅನುಭವ ಹಿತ ನೀಡುತ್ತದೆ. ಭಾನುವಾರವೂ ಬೆಂಗಳೂರು ಹಿಮವೊದ್ದು ಎದ್ದ ಕ್ಷಣಗಳು ಹೀಗಿದ್ದವು.
- ಬೆಂಗಳೂರು ಉದ್ಯಾನ ನಗರಿ ಮಾತ್ರವಲ್ಲ.ಚಳಿಯ ನಗರವೂ ಹೌದು. ನವೆಂಬರ್ ಬಂದರೆ ಇಲ್ಲಿ ಹಿಮದ ಅನುಭವ ಹಿತ ನೀಡುತ್ತದೆ. ಭಾನುವಾರವೂ ಬೆಂಗಳೂರು ಹಿಮವೊದ್ದು ಎದ್ದ ಕ್ಷಣಗಳು ಹೀಗಿದ್ದವು.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 9)
ಬೆಂಗಳೂರಿನ ಬಡಾವಣೆಯೊಂದರಲ್ಲಿ ಹಿಮಬಿದ್ದ ರಸ್ತೆ ಕಂಡಿದ್ದು ಹೀಗೆ. ಬೆಳಿಗ್ಗೆ ಬಹು ಹೊತ್ತಿನವರೆಗೂ ಇಂತಹದೇ ವಾತಾವರಣ ಇತ್ತು.(pic: Dhirendra Kumar )
(2 / 9)
ಬೆಂಗಳೂರಿನಲ್ಲಿ ಬೆಳಿಗ್ಗೆ ವಾಯುವಿಹಾರಕ್ಕೆ ಹೊರಟರು ಕೆಲವು ಭಾಗಗಳಲ್ಲಿ ದಟ್ಟ ಮಂಜಿನ ಅನುಭವಕ್ಕೂ ಸಾಕ್ಷಿಯಾದರು.
(3 / 9)
ಬೆಂಗಳೂರಿನ ಹಲವಾರು ಉದ್ಯಾನಗಳಲ್ಲೂ ಬೆಳಗಿನ ಜಾವವೇ ಹಿಮ ಬಿದ್ದಿತ್ತು, ಇದರಿಂದ ಹಸಿರು ವಾತಾವರಣಕ್ಕೆ ಮೆರಗು ಬಂದಿತ್ತು.
(5 / 9)
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ದಟ್ಟ ಮಂಜು ಆವರಿಸಿ ಕೆಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿತು.
(6 / 9)
ಬೆಂಗಳೂರಿಗೆ ಸೂರ್ಯ ದೇವ ಪ್ರವೇಶಿಸುವಾಗ ತಡವೇ ಆಗಿತ್ತು. ಚಳಿಯಿಂದಾಗಿ ಸೂರ್ಯದೇವನೂ ಇಂದು ನಿಧಾನವಾಗಿಯೇ ತನ್ನ ನಿತ್ಯದ ಕಾಯಕ ಶುರು ಮಾಡಿದ.
(7 / 9)
ಬೆಂಗಳೂರಿನ ಹಲವಾರು ಬಡಾವಣೆಗಳಲ್ಲಿ ಇಂತಹ ದಟ್ಟ ಮಂಜಿನ ಅನುಭವವಾಯಿತು. ಈ ವಾತಾವರಣ ಇನ್ನೂ ಕೆಲವು ದಿನಗಳ ಕಾಲ ಇರಲಿದೆ.
(8 / 9)
ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಸುತ್ತಲೂ ಹಿಮದ ಸನ್ನಿವೇಶ ಸೃಷ್ಟಿಯಾಗಿತ್ತು.
ಇತರ ಗ್ಯಾಲರಿಗಳು