logo
ಕನ್ನಡ ಸುದ್ದಿ  /  ಕರ್ನಾಟಕ  /  ಮಳೆ ಕಡಿಮೆ, ಆಹ್ಲಾದಕರ ವಾತಾವರಣ; ದಸರಾ ಸಂಭ್ರಮ-ಪ್ರವಾಸ ಯೋಜನೆಗೆ ಅಕ್ಟೋಬರ್ ಸೂಕ್ತ; ಕರ್ನಾಟಕ ಹವಾಮಾನ ಮುನ್ಸೂಚನೆ

ಮಳೆ ಕಡಿಮೆ, ಆಹ್ಲಾದಕರ ವಾತಾವರಣ; ದಸರಾ ಸಂಭ್ರಮ-ಪ್ರವಾಸ ಯೋಜನೆಗೆ ಅಕ್ಟೋಬರ್ ಸೂಕ್ತ; ಕರ್ನಾಟಕ ಹವಾಮಾನ ಮುನ್ಸೂಚನೆ

Jayaraj HT Kannada

Sep 23, 2024 10:58 AM IST

google News

ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕ ಹವಾಮಾನ ಮುನ್ಸೂಚನೆ

    • Karnataka Weather: ಪ್ರವಾಸ ಯೋಜನೆಗೆ ಅಕ್ಟೋಬರ್‌ ಸೂಕ್ತ ಎನಿಸುವ ತಿಂಗಳು. ಸಾಧಾರಣ ಬಿಸಿಲು, ಆಹ್ಲಾದಕರ ವಾತಾವರಣ ಹಾಗೂ ಕಡಿಮೆ ಮಳೆಯಿಂದಾಗಿ ರಾಜ್ಯದಾದ್ಯಂತ ಪ್ರವಾಸ ಹೋಗುವುದು ಸುಲಭ. ಹಾಗಿದ್ದರೆ ಮುಂದಿನ ತಿಂಗಳು ಕರ್ನಾಟಕದ ಹವಾಮಾನ ಮುನ್ಸೂಚನೆ ಹೇಗಿದೆ ಎಂದು ನೋಡೋಣ.
ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕ ಹವಾಮಾನ ಮುನ್ಸೂಚನೆ
ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕ ಹವಾಮಾನ ಮುನ್ಸೂಚನೆ

ಅಕ್ಟೋಬರ್ ತಿಂಗಳು ಬಂದ್ರೆ ಹಬ್ಬಗಳ ಜಾತ್ರೆಯೇ ಶುರು. ನವರಾತ್ರಿ, ದಸರಾ ವೈಭವದ ನಡುವೆ ಮಕ್ಕಳಿಗೂ ಸುದೀರ್ಘ ರಜೆ ಇರುತ್ತದೆ. ಅಲ್ಲದೆ, ಟ್ರಿಪ್‌ ಪ್ಲಾನ್‌ ಮಾಡುವವರಿಗೂ ಇದು ಸೂಕ್ತ ಸಮಯ. ಅಕ್ಟೋಬರ್‌ನಲ್ಲಿ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಹವಾಮಾನ ಕೂಡಾ ಬಹುತೇಕ ಸಮತೋಲನದಲ್ಲಿರುತ್ತದೆ. ಹೀಗಾಗಿ ವಾತಾವರಣ ಕೂಡಾ ನಿಮ್ಮ ಪ್ಲಾನ್‌ಗೆ ನೆರವಾಗುತ್ತದೆ. ಇದೇ ವೇಳೆ ಮೈಸೂರು ದಸರಾ, ವಿಜಯದಶಮಿಯ ಜಂಬೂ ಸವಾರಿ, ಮಂಗಳೂರು ದಸರಾ ಸೇರಿದಂತೆ ನವರಾತ್ರಿ ಪೂಜೆಗಳೂ ನಡೆಯುತ್ತವೆ. ಈ ಎಲ್ಲಾ ಶುಭದಿನಗಳಿಗೆ ಹವಾಮಾನವೂ ಮುಖ್ಯ. ಹಾಗಿದ್ದರೆ ಕರ್ನಾಟಕದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಹವಾಮಾನ ಹೇಗಿರಲಿದೆ, ನಿಮ್ಮ ಪ್ರವಾಸ ಯೋಜನೆಗಳಿಗೆ ಈ ತಿಂಗಳೂ ಸೂಕ್ತವೇ ಎಂಬುದನ್ನು ನೋಡೋಣ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ಅಕ್ಟೋಬರ್ ತಿಂಗಳ ಹವಾಮಾನ ಬಹುತೇಕ ಸ್ಥಿರ ಹಾಗೂ ಸಮತೋಲನದಲ್ಲಿರುತ್ತದೆ. ರಾಜ್ಯದಾದ್ಯಂತ ತಾಪಮಾನವು 19 ಡಿಗ್ರಿಯಿಂದ 28 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಕರಾವಳಿ , ಮಲೆನಾಡು ಭಾಗಗಳಲ್ಲಿ ಅಲ್ಪ ಪ್ರಮಾಣದ ಮಳೆಯ ನಿರೀಕ್ಷೆ ಇದೆ. ತಿಂಗಳಲ್ಲಿ ಸುಮಾರು 8ರಿಂದ 15 ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದೆ.

ತಾಪಮಾನ ಹೇಗಿರಲಿದೆ?

ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಸರಾಸರಿ ಗರಿಷ್ಠ ತಾಪಮಾನವು 26.4 ಡಿಗ್ರಿಯಿಂದ 28.6 ಇದ್ದರೆ, ಕಡಿಮೆಯೆಂದರೆ ಸರಾಸರಿ 18.4ಡಿಗ್ರಿಯಿಂದ 20 ಡಿಗ್ರಿಯವರೆಗೆ ಇರಲಿದೆ. ರಾಜಧಾನಿ ಬೆಂಗಳೂರು, ಮೈಸೂರಿನಲ್ಲಿ ಆಹ್ಲಾದಕರ ವಾತಾವರಣ ಇರಲಿದೆ.

ರಾಜ್ಯದಲ್ಲಿ ಅಕ್ಟೋಬರ್‌ನಲ್ಲಿ ಹೆಚ್ಚು ಮಳೆಯ ನಿರೀಕ್ಷೆ/ಮುನ್ಸೂಚನೆ ಇಲ್ಲ. ಒಟ್ಟಾರೆ ಮಳೆಯ ಪ್ರಮಾಣವು 137 ಮಿಮೀನಿಂದ 232 ಮಿಮೀವರೆಗೆ ಇರುವ ಸಾಧ್ಯತೆ ಇದೆ. ಬೆಂಗಳೂರು ಭಾಗದಲ್ಲಿ 19ರಿಂದ 27 ಡಿಗ್ರಿಯವರೆಗೆ ತಾಪಮಾನವಿದ್ದರೆ, 8ರಿಂದ 15 ದಿನಗಳ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ ಭಾಗದಲ್ಲಿ 20 ಡಿಗ್ರಿಯಿಂದ 28.3 ಡಿಗ್ರಿಯವರೆಗೆ ತಾಪಮಾನವಿದ್ದರೆ, 116 ಎಂಎಂ ಮಳೆಯಾಗುವ ಸಂಭವವಿದೆ.

ಬೆಂಗಳೂರು ನಗರದ ಹವಾಮಾನ

ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ 18.4ಡಿಗ್ರಿಯಿಂದ 26.4 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಆ ಮೂಲಕ ಚಳಿಗಾಲದ ಆರಂಭದ ಸೂಚನೆ ಇರಲಿದೆ. ನಗರದಲ್ಲಿ ಮಧ್ಯಂತರ ಮಳೆಯಿಂದಾಗಿ ತಾಪಮಾನದಲ್ಲಿ ಕುಸಿತವಾಗಲಿದೆ. ಹೀಗಾಗಿ ಉದ್ಯಾನ ನಗರಿಗೆ ಪ್ರವಾಸ ಯೋಜನೆಗೆ ಇದು ಸೂಕ್ತ ಸಮಯ ಎಂದು ಹೇಳಲಾಗುತ್ತದೆ. ಏಕೆಂದರೆ ಹವಾಮಾನವು ತುಂಬಾ ಬಿಸಿಯಾಗಿರುವುದಿಲ್ಲ. ಅಲ್ಲದೆ ತೀರಾ ತಂಪಾಗಿಯೂ ಇರುವುದಿಲ್ಲ. ನವರಾತ್ರಿ ಹಾಗೂ ಮಾಸಾಂತ್ಯಕ್ಕೆ ದೀಪಾವಳಿ ಆರಂಭವಿರುವುದರಿಂದ ಹಬ್ಬದ ಸಮಯದಲ್ಲಿ ನಗರ ಇನ್ನೂ ಸಕ್ರಿಯವಾಗಿರುತ್ತದೆ.

ಮೈಸೂರು ನಗರದ ಹವಾಮಾನ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಅಕ್ಟೋಬರ್ ಹವಾಮಾನ ಆಹ್ಲಾದಕರವಾಗಿದೆ. ಸಾಧಾರಣ ತಾಪಮಾನದಿಂದ ದಸರಾ ಎಂಜಾಯ್‌ ಮಾಡಬಹುದು. ನಗರದಲ್ಲಿ ಸರಾಸರಿ ಗರಿಷ್ಠ ತಾಪಮಾನ 29 ಡಿಗ್ರಿ ಇದ್ದರೆ, ಕನಿಷ್ಠ 24 ಡಿಗ್ರಿ ತಾಪಮಾನ ನಿರೀಕ್ಷಿಸಬಹುದು. ಮಳೆಯ ಪ್ರಮಾಣ ಕಡಿಮೆಯಿದ್ದು, ಪ್ರತಿದಿನ ಸುಮಾರು 6 ಗಂಟೆಗಳಷ್ಟು ಬಿಸಿಲು ಇರದೆ. ಹೀಗಾಗಿ ಟ್ರಿಪ್‌ ಪ್ಲಾನ್‌ ಅಥವಾ ದಸರಾ ಸಂಭ್ರಮ ಸವಿಯಲು ಇದು ಸೂಕ್ತ ಸಮಯ.

ಮೈಸೂರಿನಲ್ಲಿ ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ 15 ದಿನಗಳ ಕಾಲ 294 ಮಿಮೀ ಮಳೆಯಾಗುತ್ತದೆ. ನೀವು ಮೈಸೂರಿಗೆ ಭೇಟಿ ನೀಡುವ ಯೋಜನೆ ರೂಪಿಸುತ್ತಿದ್ದರೆ, ಅಕ್ಟೋಬರ್ ಅಥವಾ ನವೆಂಬರ್ ತಿಂಗಳು ಉತ್ತಮ.

ಗಮನಿಸಿ: ಈ ಹವಾಮಾನ ವರದಿಯು ಕಳೆದ ವರ್ಷದ ಹವಾಮಾನ, ವಿವಿಧ ಆನ್‌ಲೈನ್‌ ವರದಿಗಳು ಮತ್ತು ಹವಾಮಾನ ತಾಣಗಳಲ್ಲಿ ಲಭ್ಯವಿರುವ ಮಾಹಿತಿಗಳನ್ನು ಆಧರಿಸಿದ ಬರಹ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ