PFI Crackdown: ಮಂಗಳೂರಲ್ಲಿ ಮತ್ತೆ SDPI, ನಿಷೇಧಿತ PFI ಮುಖಂಡರ ಮನೆಗಳ ಮೇಲೆ ದಾಳಿ; ಪೊಲೀಸ್ ವಶಕ್ಕೆ ಐವರು
Oct 13, 2022 09:45 AM IST
ಪಿಎಫ್‌ಐ
- PFI Crackdown: ಮಂಗಳೂರಿನಲ್ಲಿ ಇಂದು ಬೆಳಗ್ಗೆಯೇ ಪೊಲೀಸರು SDPI ಮತ್ತು ನಿಷೇಧಿತ PFI ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ, ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಅದರ ರಾಜಕೀಯ ಘಟಕ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮುಖಂಡರಿಗೆ ಮಂಗಳೂರು ಪೊಲೀಸರು ಇಂದು ಬೆಳಗ್ಗೆಯೇ ಶಾಕ್ ನೀಡಿದ್ದಾರೆ.
ಮಂಗಳೂರಿನ ವಿವಿಧೆಡೆ ಮತ್ತೆ ದಾಳಿ ನಡೆಸಿರುವ ಪೊಲೀಸರ ತಂಡ, ಪಿಎಫ್‌ಐನ ಐವರು ಮುಖಂಡರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ವಿರುದ್ಧ ಯುಎಪಿಎ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಪ್ರಕಾರ ಕೇಸ್ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಕಮಿಷನರ್ N.ಶಶಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಮಂಗಳೂರು ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ದಾಳಿ
ಮಂಗಳೂರಿನ ಪಣಂಬೂರು, ಸುರತ್ಕಲ್, ಮಂಗಳೂರು ಗ್ರಾಮಾಂತರ, ಉಳ್ಳಾಲ ಸೇರಿ ಏಳೆಂಟು ಕಡೆ ದಾಳಿ ನಡೆದಿದೆ. ಪೊಲೀಸರ ತಂಡ ಅಲ್ಲಿ ಪಿಎಫ್‌ಐ, ಎಸ್‌ಡಿಪಿಐ ಮುಖಂಡರ ಮನೆಗಳನ್ನು ಸಂಪೂರ್ಣವಾಗಿ ಶೋಧಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಕತಾರ್‌ನಲ್ಲಿ ನಡೆದಿತ್ತು ರಹಸ್ಯ ಸಭೆ
ಪಿಎಫ್‌ಐ ಪ್ರಮುಖರ ತಂಡ ಕತಾರ್‌ನ ದೋಹಾಕ್ಕೂ ಭೇಟಿ ನೀಡಿದೆ. ಟರ್ಕಿಯಿಂದಲೂ ಒಂದು ತಂಡ ಕತಾರ್‌ಗೆ ಹೋಗಿದ್ದು, ಅಲ್ಲಿ ಎರಡು ದಿನಗಳ ಸಭೆ ನಡೆದಿತ್ತು. ಸಭೆಯ ನಂತರ ಹಣಕಾಸಿನ ವಹಿವಾಟು ನಡೆದಿದೆ. ಇದಾದ ಬಳಿಕ ಭಾರತದಲ್ಲಿ ಪಿಎಫ್‌ಐನ ಚಟುವಟಿಕೆಗಳು ತೀವ್ರಗೊಂಡಿವೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ತನಿಖಾ ತಂಡ ಕಲೆ ಹಾಕಿದೆ ಎಂದು ಮೂಲಗಳು ತಿಳಿಸಿವೆ.
ಟರ್ಕಿ ಜತೆಗೆ ಪಿಎಫ್ಐ ನಂಟು
ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡರನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ನೀಡಿರುವ ಮಾಹಿತಿಯ ಅನುಸಾರ ಎನ್‌ಐಎ ರಾಜ್ಯ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ಮುಂದುವರಿಸಿದೆ.
ಪಿಎಫ್‌ಐಗೆ ಹಣಕಾಸಿನ ನೆರವು ವಿದೇಶಗಳಿಂದ ವಿಶೇಷವಾಗಿ ಟರ್ಕಿ, ಕತಾರ್‌ಗಳಿಂದ ಲಭಿಸುತ್ತಿದೆ. ಈ ಹಣ ಕೇರಳದ ಮೂಲಕ ಪಿಎಫ್‌ಐಗೆ ಹವಾಲಾ ರೂಪದಲ್ಲಿ ಬಂದು ಸೇರುತ್ತಿರುವುದು ದೃಢಪಟ್ಟಿದೆ. ಈ ಹಣವನ್ನು ಪಿಎಫ್‌ಐ ದೇಶ ವಿರೋಧಿ ಕೃತ್ಯಕ್ಕೆ, ಸರ್ಕಾರದ ವಿರುದ್ಧದ ಪ್ರತಿಭಟನೆ, ಅಪರಾಧಿ ಕೃತ್ಯಗಳಲ್ಲಿ ಬಂಧಿತ PFI ಸದಸ್ಯರ ಕುಟುಂಬಗಳಿಗೆ ನೆರವು ಮತ್ತು ತರಬೇತಿ ಶಿಬಿರಗಳಿಗೆ ಬಳಕೆ ಆಗುತ್ತಿತ್ತು ಎಂಬ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದೆ.
ಪಿಎಫ್‌ಐನ ಕೇಸ್ ಹಿಸ್ಟರಿ (Case History of PFI)
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಎಂದರೆ ನಿಷೇಧಿತ ಉಗ್ರ ಸಂಘಟನೆ ಸಿಮಿಯ ಹೊಸ ಸ್ವರೂಪ ಎಂದೇ ಬಿಂಬಿತವಾಗಿರುವಂಥದ್ದು. ಸದ್ಯ ಈ ಸಂಘಟನೆ ವಿರುದ್ಧ ಟೆರರ್ ಫಂಡಿಂಗ್ ಪ್ರಕರಣ ಗಮನಸೆಳೆಯುತ್ತಿದೆ. ಆದಾಗ್ಯೂ, ಇದು ಕಾಲಾನುಕ್ರಮದಲ್ಲಿ ಹಿಂಸಾಚಾರ ಮತ್ತು ಕೊಲೆಯ ಆರೋಪಗಳಿಗೆ ಸಿಲುಕಿಕೊಂಡಿದೆ. ಕೋಮು ಸಂಘರ್ಷಗಳಲ್ಲೂ ಇದು ಭಾಗಿಯಾಗಿದೆ. ಕೇರಳ ಸರ್ಕಾರದ ದಾಖಲೆಗಳು ಸಂಘಟನೆಯು ಪ್ರಾರಂಭವಾದಾಗಿನಿಂದ ಇದುವರೆಗೆ 30 ಕೊಲೆಗಳೊಂದಿಗೆ ನಂಟು ಹೊಂದಿದೆ. Case History of PFI: ಪಿಎಫ್‌ಐನ ಕೇಸ್ ಹಿಸ್ಟರಿ ಇದು; ಟೆರರ್ ಫಂಡಿಂಗ್ ಸೇರಿ ಪ್ರಮುಖ ಗಂಭೀರ ಪ್ರಕರಣಗಳ ವಿವರ ಇಲ್ಲಿವೆ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕೇರಳದಲ್ಲಿ 2006ರಲ್ಲಿ ಸ್ಥಾಪನೆಯಾಯಿತು. ಅಷ್ಟೇ ಅಲ್ಲ, ಅಲ್ಪ ಅವಧಿಯಲ್ಲಿ ದೇಶಕ್ಕೆ ಘಾತಕವೆನಿಸುವ ಬೆಳವಣಿಗೆಯನ್ನು ದಾಖಲಿಸಿದೆ. 22 ರಾಜ್ಯಗಳಲ್ಲಿ ತನ್ನ ಸಂಘಟನೆ ಬಲಪಡಿಸಿದ ಪಿಎಫ್‌ಐ, ಚುನಾವಣಾ ರಾಜಕೀಯಕ್ಕೂ ಕೈ ಹಾಕಿದೆ. ಎಸ್‌ಡಿಪಿಐ ಮೂಲಕ ರಾಜಕೀಯ ಚಟುವಟಿಕೆ ನಡೆಸುತ್ತಿರುವ ಪಿಎಫ್‌ಐ, ಒಂದೂವರೆ ದಶಕದಲ್ಲಿ ಅನೇಕ ಹಿಂಸಾಚಾರ, ಉಗ್ರಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದೆ. History of PFI: 16 ವರ್ಷಗಳ ಪಿಎಫ್‌ಐ ಇತಿಹಾಸ ಹೀಗಿದೆ ನೋಡಿ; ಪಿಎಫ್‌ಐ ಹುಟ್ಟಿಗೆ ಇದೆ 2 ಸ್ಪಷ್ಟ ಕಾರಣ; ಇಲ್ಲಿದೆ ವಿವರ