logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿಗರೇ ಗಮನಿಸಿ; ಅಕ್ಟೋಬರ್ 23ರಂದು ನಗರದ ಈ ಭಾಗಗಳಲ್ಲಿ ಪವರ್ ಕಟ್, ಅಗತ್ಯ ಸಿದ್ಧತೆ ಮಾಡಿಕೊಳ್ಳಿ

ಬೆಂಗಳೂರಿಗರೇ ಗಮನಿಸಿ; ಅಕ್ಟೋಬರ್ 23ರಂದು ನಗರದ ಈ ಭಾಗಗಳಲ್ಲಿ ಪವರ್ ಕಟ್, ಅಗತ್ಯ ಸಿದ್ಧತೆ ಮಾಡಿಕೊಳ್ಳಿ

Jayaraj HT Kannada

Oct 21, 2024 09:32 PM IST

google News

ಬೆಂಗಳೂರಿಗರೇ ಗಮನಿಸಿ; ಅಕ್ಟೋಬರ್ 23ರಂದು ನಗರದ ಈ ಭಾಗಗಳಲ್ಲಿ ಪವರ್ ಕಟ್

    • Bengaluru Power cut: ಜಾಲಹಳ್ಳಿ ವಿಭಾಗದ ಎನ್-9 ಉಪವಿಭಾಗದ ಹಲವು ಪ್ರದೇಶಗಳಲ್ಲಿ ಅಕ್ಟೋಬರ್‌ 23ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯವಾಗಲಿದೆ.
ಬೆಂಗಳೂರಿಗರೇ ಗಮನಿಸಿ; ಅಕ್ಟೋಬರ್ 23ರಂದು ನಗರದ ಈ ಭಾಗಗಳಲ್ಲಿ ಪವರ್ ಕಟ್
ಬೆಂಗಳೂರಿಗರೇ ಗಮನಿಸಿ; ಅಕ್ಟೋಬರ್ 23ರಂದು ನಗರದ ಈ ಭಾಗಗಳಲ್ಲಿ ಪವರ್ ಕಟ್ (AFP)

ಬೆಂಗಳೂರು: ಉದ್ಯಾನ ನಗರಿಯ ಹಲವು ಭಾಗಗಳಲ್ಲಿ ಅಕ್ಟೋಬರ್‌ 23ರ ಬುಧವಾರ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 66/11 kV ವಿಡಿಯಾ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ, ಕರೆಂಟ್‌ ಕಡಿತ ಮಾಡಲಾಗುತ್ತಿದೆ. ಹೀಗಾಗಿ ಬುಧವಾರ ಬೆಳಗ್ಗೆ 10 ಗಂಟೆಗಿಂತ ಮುಂಚಿತವಾಗಿ ವಿದ್ಯುತ್‌ಗೆ ಸಂಬಂಧಿಸಿದ ಅಗತ್ಯ ಕೆಲಸಗಳನ್ನು ಮಾಡಿಕೊಳ್ಳುವುದು ಒಳ್ಳೆಯದು. ದಿನದ ಒಟ್ಟು 7 ಗಂಟೆ ಅವಧಿಗೆ ಪವರ್‌ ಸಪ್ಲೈ ಸಮಸ್ಯೆಯಾಗಲಿದೆ.

ಜಾಲಹಳ್ಳಿ ವಿಭಾಗದ ಎನ್-9 ಉಪವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ ಅಕ್ಟೋಬರ್‌ 23ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿನಾಯಕ ನಗರ, ವಿಕಾಸ್ ನಗರ, ಶೋಭಾ ಅಪಾರ್ಟ್‌ಮೆಂಟ್, 8ನೇ ಮೈಲ್ ರಸ್ತೆ, ರಾಮಯ್ಯ ಲೇಔಟ್, ಹಾವನೂರು ಎಕ್ಸ್‌ಟೆನ್, ನಾರಾಯಣ ಲೇಔಟ್, ವಿಡಿಯಾ ಸ್ಕೂಲ್, ಕುವೆಂಪು ನಗರ, ವಿಡಿಯಾ ಬಸ್ ಸ್ಟಾಪ್, ರಿಲಯನ್ಸ್ ಫ್ರೆಶ್, ಮುನಿಕೊಂಡಪ್ಪ ಲೇಔಟ್, ಅಶೋಕ್ ನಗರ, ವಿದ್ಯಾ ನಗರ, ಡಿಫೆನ್ಸ್ ಕಾಲೊನಿ, ಹಾವನೂರು ಎಕ್ಸ್, ಮಂಜುನಾಥ್ ನಗರ, ಮಹಾಲಕ್ಷ್ಮಿ ನಗರ, ಕಾಟರಾಯ ನಗರ, ಸೋಪ್ ಫ್ಯಾಕ್ಟರಿ ಲೇಔಟ್, ವಿಜಯಲಕ್ಷ್ಮಿ ಲೇಔಟ್, ಅಂದಾನಪ್ಪ ಲೇಔಟ್‌ನಲ್ಲಿ ವಿದ್ತುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬಿಟಿಎಸ್ ಲೇಔಟ್, ಸಿದ್ದೇಶ್ವರ ಲೇಔಟ್, ಸಾಸುವೆಘಟ್ಟ, ಸೋಲದೇವನಹಳ್ಳಿಯ ಕೆಲವು ಪ್ರದೇಶಗಳು, ತರಬನಹಳ್ಳಿ ಮುಖ್ಯ ರಸ್ತೆ, ಹಾವನೂರು ಎಕ್ಸ್‌ಟೆನ್ಷನ್, ಹೆಸರಘಟ್ಟ ಮುಖ್ಯ ರಸ್ತೆ, ಸಿಡೇದಹಳ್ಳಿ, ವಿಶ್ವೇಶರಯ್ಯ ಲೇಔಟ್‌ನ ಬಹುತೇಕ ಪ್ರದೇಶಗಳು, ರಾಯಲ್ ಎನ್‌ಕ್ಲೇವ್, ಬೈರವೇಶ್ವರ ವೃತ್ತ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಮಂಗಳವಾರ ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಕುರಿತು ಮಾಹಿತಿ ಇಲ್ಲ. ಹೀಗಾಗಿ ಬುಧವಾರ ಪವರ್‌ ಕಟ್‌ ಆಗುವ ಮುಂಚಿತವಾಗಿ ವಿದ್ಯುತ್‌ನಿಂದ ಮಾಡಬೇಕಾಗಿರುವ ಅಗತ್ಯ ಕೆಲಸಗಳನ್ನು ಮಾಡುವುದು ಒಳ್ಳೆಯದು. ಅಗತ್ಯ ವಸ್ತುಗಳಿಗೆ ಒಂದು ದಿನಕ್ಕೆ ಬೇಕಾದ ಚಾರ್ಜಿಂಗ್‌ ಮೊದಲೇ ಮಾಡಿಟ್ಟುಕೊಳ್ಳಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ