logo
ಕನ್ನಡ ಸುದ್ದಿ  /  ಕರ್ನಾಟಕ  /  Praveen Nettaru Murder: ಕನ್ಹಯ್ಯಲಾಲ್‌ ಹತ್ಯೆಗೆ ಲಿಂಕ್‌?; ಪ್ರವೀಣ್‌‍ Fb ಪೋಸ್ಟ್‌ ವೈರಲ್

Praveen Nettaru Murder: ಕನ್ಹಯ್ಯಲಾಲ್‌ ಹತ್ಯೆಗೆ ಲಿಂಕ್‌?; ಪ್ರವೀಣ್‌‍ FB ಪೋಸ್ಟ್‌ ವೈರಲ್

HT Kannada Desk HT Kannada

Jul 27, 2022 07:05 PM IST

google News

ಕಳೆದ ತಿಂಗಳು ರಾಜಸ್ಥಾನದ ಉದಯಪುರದಲ್ಲಿ ಹತ್ಯೆಗೀಡಾದ ಕನ್ಹಯ್ಯಲಾಲ್‌, ನಿನ್ನೆ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಪ್ರವೀಣ್‌ ನೆಟ್ಟಾರು

    • ರಾಜಸ್ಥಾನದ ಉದಯಪುರದ ಟೈಲರ್‌ ಕನ್ಹಯ್ಯಲಾಲ್‌ ಹತ್ಯೆ ಪ್ರಕರಣಕ್ಕೂ ಬೆಳ್ಳಾರೆಯ ಬಿಜೆಪಿ ಯುವ ನಾಯಕ ಪ್ರವೀಣ್‌ ನೆಟ್ಟಾರು ಹತ್ಯೆಗೂ ಲಿಂಕ್‌ ಇದೆಯಾ? ಇದೆ ಎನ್ನುವ ವಾದವೂ ಹುಟ್ಟಿಕೊಂಡಿದೆ. ಅದಕ್ಕೆ ಪೂರಕವಾಗಿ ಅವರ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಆಗಿದ್ದ ಜೂನ್‌ 29ರ ಸ್ಟೇಟಸ್‌ನ ಇಮೇಜ್‌ ವೈರಲ್‌ ಆಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 
ಕಳೆದ ತಿಂಗಳು ರಾಜಸ್ಥಾನದ ಉದಯಪುರದಲ್ಲಿ ಹತ್ಯೆಗೀಡಾದ ಕನ್ಹಯ್ಯಲಾಲ್‌, ನಿನ್ನೆ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಪ್ರವೀಣ್‌ ನೆಟ್ಟಾರು
ಕಳೆದ ತಿಂಗಳು ರಾಜಸ್ಥಾನದ ಉದಯಪುರದಲ್ಲಿ ಹತ್ಯೆಗೀಡಾದ ಕನ್ಹಯ್ಯಲಾಲ್‌, ನಿನ್ನೆ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಪ್ರವೀಣ್‌ ನೆಟ್ಟಾರು

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಈ ಪ್ರಕರಣಕ್ಕೂ ರಾಜಸ್ಥಾನದ ಉದಯಪುರದ ಟೈಲರ್‌ ಕನ್ಹಯ್ಯಲಾಲ್‌ ಹತ್ಯೆಗೂ ಲಿಂಕ್‌ ಇದೆಯಾ ಎಂಬ ಚರ್ಚೆ ಜನರ ನಡುವೆ ಶುರುವಾಗಿದೆ.

ಕೊಲೆ ಪ್ರಕರಣಕ್ಕೆ ನಿಖರ ಕಾರಣ, ಕೊಲೆ ಮಾಡಿದವರು ಯಾರು ಎಂಬುದು ಇನ್ನೂ ಬಹಿರಂಗವಾಗದ ಕಾರಣ ಈ ರೀತಿ ವಿಚಾರಗಳು ಜನಸಾಮಾನ್ಯರ ಚರ್ಚೆಗೆ ಗ್ರಾಸವಾಗುವ ಪ್ರಮುಖ ವಿಷಯವಾಗಿ ಬಿಡುತ್ತದೆ.

ಕಳೆದ ತಿಂಗಳು ರಾಜಸ್ಥಾನದ ಉದಯಪುರದಲ್ಲಿ ಭಯಾನಕ ರೀತಿಯಲ್ಲಿ ಮತಾಂಧರಿಂದ ಶಿರಚ್ಛೇದಕ್ಕೆ ಒಳಗಾದ ಟೈಲರ್‌ ಕನ್ಹಯ್ಯಾಲಾಲ್ ಬೆಂಬಲಿಸಿ ಭಾರತೀಯ ಜನತಾ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕಳೆದ ತಿಂಗಳು ಪೋಸ್ಟ್ ಮಾಡಿದ್ದರು.

ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಇಮೇಜ್‌ನಲ್ಲಿ ಜೂನ್‌ 29ರ ಪೋಸ್ಟ್ ಎಂಬುದು ವೇದ್ಯವಾಗುತ್ತಿದೆ. ಅದರಲ್ಲಿ ಅವರು, ಬಡ ದರ್ಜಿಯ ಶಿರಚ್ಛೇದ ಮತ್ತು ಕೊಲೆಗಾರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿರುವ ಬಗ್ಗೆ ಬರೆದಿದ್ದರು. ರಾಜಸ್ಥಾನದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದರು. ಕನ್ಹಯ್ಯಾಲಾಲ್ ಅವರ ಹತ್ಯೆಯ ಸುದ್ದಿ ಹೊರಬಿದ್ದ ಒಂದು ದಿನದ ನಂತರ, ಜೂನ್ 29ರಂದು ಈ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಅವರು ಕೆಲವರನ್ನು ಟ್ಯಾಗ್‌ ಮಾಡಿದ್ದರು.

<p>ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಫೇಸ್‌ಬುಕ್‌ ಪೋಸ್ಟ್‌&nbsp;</p>

ಕನ್ಹಯ್ಯಲಾಲ್‌ ಅವರನ್ನು ಹಾಡುಹಗಲೇ ಅವರದೇ ಅಂಗಡಿಯಲ್ಲಿ ಹತ್ಯೆ ಮಾಡಲಾಗಿತ್ತು. ಈಗ ಪ್ರವೀಣ್‌ ಅವರನ್ನೂ ಅವರ ಅಂಗಡಿ ಸಮೀಪವೇ ಹತ್ಯೆಮಾಡಲಾಗಿದೆ.

ಕನ್ಹಯ್ಯಲಾಲ್‌ ಮರ್ಡರ್‌ ಹೀಗಾಯ್ತು

ರಾಜಸ್ಥಾನದ ಉದಯಪುರದಲ್ಲಿ ಜೂನ್‌ 28ರಂದು ಮಧ್ಯಾಹ್ನ ನಡೆದಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ನೂಪುರ್ ಶರ್ಮಾ ಅವರನ್ನು ಟೈಲರ್‌ ಕನ್ಹಯ್ಯಲಾಲ್‌ ಬೆಂಬಲಿಸಿದ್ದಕ್ಕಾಗಿ ಮತಾಂಧರು ಅವರ ಕತ್ತು ಸೀಳಿ ಹತ್ಯೆ ಮಾಡಿದರು.

ಬಟ್ಟೆ ಹೊಲಿಸುವ ನೆಪದಲ್ಲಿ ಅಂಗಡಿಗೆ ನುಗ್ಗಿದ ಆರೋಪಿಗಳು ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಇದಲ್ಲದೆ ಇನ್ನೊಂದು ವಿಡಿಯೋವನ್ನು ರೆಕಾರ್ಡ್‌ ಮಾಡಿದ್ದರು. ಪ್ರಧಾನಿ ಮೋದಿಯವರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕುವ ದೃಶ್ಯ ಈ ವಿಡಿಯೋದಲ್ಲಿತ್ತು.

ಐಸಿಸ್‌ ಉಗ್ರರ ವರ್ತನೆ

ಆರೋಪಿ ರಿಯಾಜ್ ಮತ್ತು ಗೌಸ್ ಕೃತ್ಯ ನಡೆಸಿದ ರೀತಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಕ್ರೌರ್ಯದೊಂದಿಗೆ ಹೋಲಿಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ, ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಅನೇಕ ಪಾಶ್ಚಿಮಾತ್ಯ ನಾಗರಿಕರನ್ನು ಇದೇ ಶೈಲಿಯಲ್ಲಿ ಕತ್ತು ಸೀಳಿ ಕೊಂದಿದ್ದರು. ರಿಯಾಜ್ ಮತ್ತು ಗೌಸ್ ಅವರ ಕ್ರೌರ್ಯ ಗಮನಿಸಿರುವ ತನಿಖಾ ತಂಡ, ಅವರಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಯಾವುದೇ ಸಂಬಂಧವಿದೆಯೇ ಎಂಬ ಬಗ್ಗೆಯೂ ತನಿಖೆ ಆರಂಭಿಸಿದೆ. ಎನ್‌ಐಎ ತಂಡ ಈಗ ಉದಯಪುರ ಟೈಲರ್‌ ಹತ್ಯೆ ಕೇಸ್‌ನ ತನಿಖೆ ನಡೆಸುತ್ತಿದೆ.

ಪ್ರವೀಣ್‌ ಕೊಲೆಗೆ ಅಧಿಕೃತ ಕಾರಣ ಬಹಿರಂಗವಾಗಿಲ್ಲ

ಪ್ರವೀಣ್‌ ನೆಟ್ಟಾರು ಅವರ ಕೊಲೆಗೆ ಕಾರಣ ಏನು ಎಂಬುದು ಬಹಿರಂಗವಾಗಿಲ್ಲ. ರಾಜಕೀಯ ದ್ವೇಷ ಎಂದು ಕೆಲವರು ಹೇಳಿದರೆ, ಇಲ್ಲ ವೈಯಕ್ತಿಕ ದ್ವೇಷ ಎಂದು ಹೇಳುತ್ತಿದ್ದಾರೆ. ಕೊಲೆ ಮಾಡಿದವರು ಯಾರು ಎಂಬುದೂ ಸುಳಿವು ಸಿಕ್ಕಿಲ್ಲ. ಪೊಲೀಸರು ಶಂಕಿತರ ವಿಚಾರಣೆ ನಡೆಸುತ್ತಿದ್ದಾರೆಯೇ ಹೊರತು, ಮಾಹಿತಿ ಬಹಿರಂಗಪಡಿಸಿಲ್ಲ. ಹೀಗಾಗಿ ವದಂತಿಗಳ ಹೆಚ್ಚು ಹರಿದಾಡುತ್ತಿದೆ. ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲಿ ಹಲವರ ಫೋಟೋ ಹರಿದಾಡುತ್ತಿದ್ದು, ಇವರೇ ಹತ್ಯೆ ಮಾಡಿದ್ದು ಎಂಬ ಒಕ್ಕಣೆಯೂ ಕಾಣಸಿಕ್ಕಿದೆ. ಪೊಲೀಸರು ಇನ್ನೂ ಇದೇ ಕಾರಣಕ್ಕೆ ಪ್ರವೀಣ್‌ ಹತ್ಯೆ ಆಗಿರುವಂಥದ್ದು ಎಂದು ಅಧಿಕೃತವಾಗಿ ಹೇಳಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ