Praveen Nettaru Murder: ಬೆಳ್ಳಾರೆಯಲ್ಲಿ ಮುಗಿಲು ಮುಟ್ಟಿದ ಜನರ ಆಕ್ರೋಶ, ಬಿಜೆಪಿಗೆ ದಿಕ್ಕಾರ.. ದಿಕ್ಕಾರ..
Jul 27, 2022 02:01 PM IST
ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರ ಅಂತಿಮ ದರ್ಶನಕ್ಕೆ ಜನಸಾಗರ
- ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಅಂತಿಮ ದರ್ಶನಕ್ಕೆ ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಜನಸಾಗರವೇ ನೆರೆದಿದೆ. ಈ ಸಮಯದಲ್ಲಿ ಜನರು ಬಿಜೆಪಿ, ನಳಿನಿ ಕುಮಾರ್ ಕಟೀಲು ಸೇರಿದಂತೆ ನಾಯಕರ ವಿರುದ್ಧ ದಿಕ್ಕಾರ ಕೂಗುತ್ತಿದ್ದು, ನಾಯಕರು ಮೌನಕ್ಕೆ ಶರಣಾಗಿದ್ದಾರೆ. ದಿಕ್ಕಾರ.. ದಿಕ್ಕಾರ... ಬಿಜೆಪಿಗೆ ದಿಕ್ಕಾರ ಎಂಬ ಘೋಷಣೆಯು ಬೆಳ್ಳಾರೆಯಲ್ಲಿ ಮುಗಿಲು ಮುಟ್ಟಿದೆ.
ಬೆಳ್ಳಾರೆ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಅಂತಿಮ ದರ್ಶನಕ್ಕೆ ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಜನಸಾಗರವೇ ನೆರೆದಿದೆ. ಈ ಸಮಯದಲ್ಲಿ ಜನರು ಬಿಜೆಪಿ, ನಳಿನಿ ಕುಮಾರ್ ಕಟೀಲು ಸೇರಿದಂತೆ ನಾಯಕರ ವಿರುದ್ಧ ದಿಕ್ಕಾರ ಕೂಗುತ್ತಿದ್ದು, ನಾಯಕರು ಮೌನಕ್ಕೆ ಶರಣಾಗಿದ್ದಾರೆ. ದಿಕ್ಕಾರ.. ದಿಕ್ಕಾರ... ಬಿಜೆಪಿಗೆ ದಿಕ್ಕಾರ ಎಂಬ ಘೋಷಣೆಯು ಬೆಳ್ಳಾರೆಯಲ್ಲಿ ಮುಗಿಲು ಮುಟ್ಟಿದೆ.
ಇಂದು ಮಧ್ಯಾಹ್ನದ ವೇಳೆಗೆ ಬೆಳ್ಳಾರೆ ತಲುಪಿದ ಪ್ರವೀಣ್ ನೆಟ್ಟಾರು ಅವರ ಮೃತದೇಹದ ಅಂತಿಮ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಬೆಳ್ಳಾರೆ ಮೇಲಿನ ಪೇಟೆಯ ಬಸ್ ನಿಲ್ದಾಣವಿರುವ ಸ್ಥಳ, ಸುತ್ತಮುತ್ತಲಿನ ಕಟ್ಟಡಗಳ, ರಸ್ತೆಗಳು, ಎಲ್ಲೆಲ್ಲೂ ಜನ ಸಾಗರವೇ ನೆರದಿತ್ತು. ಈ ಸಮಯದಲ್ಲಿ ಆಗಮಿಸಿದ ಬಿಜೆಪಿ ನಾಯಕರುಗಳಿಗೆ ದಿಕ್ಕಾರದ ಘೋಷಣೆಯ ಸ್ವಾಗತವೂ ದೊರಕಿದೆ.
ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಬೆಳ್ಳಾರೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ನೆಟ್ಟಾರುಗೆ ಕೊಂಡೊಯ್ದು ಅಲ್ಲಿ ಅಂತಿಮ ಸಂಸ್ಕಾರ ಕಾರ್ಯಗಳನ್ನು ನಡೆಸಲಾಗುತ್ತದೆ. ಅಂತಿಮ ಸಂಸ್ಕಾರ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇದೇ ಸಂದರ್ಭದಲ್ಲಿ ಹದಿನೈದು ಶಂಕೀತರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿಗಳೂ ಹೊರಬೀಳುತ್ತಿದ್ದು, ಈ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಷ್ಟೇ.
ಪ್ರವೀಣ್ ನೆಟ್ಟಾರು ಹತ್ಯೆಗೀಡಾದ ಬಳಿಕ ಬೆಳ್ಳಾರೆಯಲ್ಲಿ ಶೋಕಸಾಗರ ಮಡುಗಟ್ಟಿದ್ದು, ಇಂದು ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿ ಪ್ರವೀಣ್ ನೆಟ್ಟಾರು ಮೃತದೇಹದ ಅಂತಿಮ ದರ್ಶನಕ್ಕೆ ಸಾವಿರಾರು ಜನರು ಸೇರಿದ್ದಾರೆ. ಬೆಳಗ್ಗೆಯಿಂದ ಅಂತಿಮ ದರ್ಶನಕ್ಕೆ ಕಾಯುತ್ತಿದ್ದ ಮತ್ತು ಮೆರವಣಿಗೆಯಲ್ಲಿ ಬಂದ ಜನರೆಲ್ಲರ ಆಕ್ರೋಶ ಕಟ್ಟೆಯೊಡೆದಿದೆ.
ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್ ಬಳಿ ಕೋಳಿ ಮಾಂಸದಂಗಡಿ ಹೊಂದಿರುವ ಪ್ರವೀಣ್ ನೆಟ್ಟಾರು ಅವರು ರಾತ್ರಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಮೂವರು ದುಷ್ಕರ್ಮಿಗಳು ಬಂದು ಮಾರಾಕಾಸ್ತ್ರಗಳಿಂದ ಏಕಾಏಕೆ ದಾಳಿ ಮಾಡಿ ಹತ್ಯೆ ಮಾಡಿದ್ದರು.
ಕರಾವಳಿಯಲ್ಲಿ ಪದೇಪದೇ ಇಂತಹ ಹತ್ಯೆ ಘಟನೆಗಳು ನಡೆಯುತ್ತಿವೆ. ಈ ಪ್ರಕರಣವನ್ನು ಪತ್ತೆಹಚ್ಚಲು ಗಂಭೀರ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕರಣ ಪತ್ತೆಹಚ್ಚಬೇಕು, ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದೇವೆ. ಆ ಭಾಗದ ಜನತೆ ಶಾಂತಿಯಿಂದ ಇರಬೇಕು. ಪೊಲೀಸರಿಗೆ ಬೇಕಾದ ಸೂಚನೆಗಳನ್ನು ನೀಡಲಾಗಿದೆ. ಕೇರಳ ಪೊಲೀಸರೊಂದಿಗೆ ಸೇರಿ ಆರೋಪಿಗಳನ್ನು ಪತ್ತೆಹಚ್ಚಲಾಗುವುದು ಎಂದು ಕರ್ನಾಟಕ ರಾಜ್ಯದ ಗೃಹ ಸಚಿವೃಾದ ಅರಗ ಜ್ಞಾನೇಂದ್ರ ಇಂದು ಹೇಳಿದ್ದರು.