logo
ಕನ್ನಡ ಸುದ್ದಿ  /  ಕರ್ನಾಟಕ  /  Crime News: ಸಾಯೋದಕ್ಕೆಂದು 100 ಅಡಿ ಕಂದಕಕ್ಕೆ ಜಿಗಿದ ಪ್ರೇಮಿಗಳು; ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ!

Crime News: ಸಾಯೋದಕ್ಕೆಂದು 100 ಅಡಿ ಕಂದಕಕ್ಕೆ ಜಿಗಿದ ಪ್ರೇಮಿಗಳು; ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ!

HT Kannada Desk HT Kannada

Mar 25, 2023 02:32 PM IST

ಸಾಂಕೇತಿಕ ಚಿತ್ರ

  • Love story: ಪ್ರೇಮಕ್ಕೆ ಸಾವಿಲ್ಲ ಅಂತಾರೆ. ಅದೃಷ್ಟವಶಾತ್‌ ಈ ಪ್ರೇಮಿಗಳೂ ಬದುಕಿ ಉಳಿದಿದ್ದಾರೆ. ಮನೆಯವರು ಪ್ರೇಮಕ್ಕೆ ಅಡ್ಡಿ ಬಂದರು ಎಂದು 19ರ ಹರೆಯದ ಜೋಡಿ ಸಾಯೋದಕ್ಕೆಂದು 100 ಅಡಿ ಕಂದಕಕ್ಕೆ ಜಿಗಿದಿತ್ತು. ಅದೃಷ್ಟವಶಾತ್‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು!

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (unsplash)

ರಾಮನಗರ ರಾಮದೇವರ ಬೆಟ್ಟ ಏರಿದ ಹತ್ತೊಂಬತ್ತರ ಹರೆಯದ ಪ್ರೇಮ ಜೋಡಿ, ಸಾಯೋದಕ್ಕೆ ನಿರ್ಧರಿಸಿ 100 ಅಡಿ ಆಳದ ಕಂದಕಕ್ಕೆ ಜಿಗಿದಿತ್ತು. ಅದೃಷ್ಟವಶಾತ್‌ ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದರು.

ಟ್ರೆಂಡಿಂಗ್​ ಸುದ್ದಿ

Hassan Scandal: ವಾಟ್ಸ್‌ ಆಪ್‌ ಮೂಲಕವೂ ವಿಡಿಯೋ ಹಂಚಿದರೆ ಕ್ರಮ, ಎಸ್‌ಐಟಿ ಎಚ್ಚರಿಕೆ

ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರೋಗ್ಯ ಸೇವೆಯಲ್ಲಿ ವ್ಯತ್ಯಯ; ಅವರ ಬೇಡಿಕೆಗಳೇನು?

Hassan Scandal: 4 ದಿನ ಎಸ್‌ಐಟಿ ವಶಕ್ಕೆ ಮಾಜಿ ಸಚಿವ ರೇವಣ್ಣ, ತೀವ್ರ ವಿಚಾರಣೆ ಸಾಧ್ಯತೆ

Bangalore Metro:ಮೆಟ್ರೋದಲ್ಲೇ ಬೆಂಗಳೂರು ಸುತ್ತುವ ಅವಕಾಶ, 5 ವರ್ಷದಲ್ಲಿ ನಮ್ಮ ಮೆಟ್ರೋ ಜಾಲಕ್ಕೆ 16 ಇಂಟರ್‌ಚೇಂಜ್‌ ನಿಲ್ದಾಣಗಳ ಸೇರ್ಪಡೆ

ಹೌದು, ಮನೆಯವರು ಪ್ರೀತಿ ನಿರಾಕರಿಸಿದ್ದಕ್ಕೆ ನೊಂದ ಪ್ರೇಮಿಗಳು ಅವರು. ರಾಮದೇವರ ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿ ಅದೃಷ್ಟವಶಾತ್ ಬದುಕುಳಿದಿದ್ದಾರೆ.

ಇಬ್ಬರೂ ಬೆಂಗಳೂರಿನವರು. ಹುಡುಗ ಚೇತನ್‌ (19) ಬೆಂಗಳೂರಿನ ನಾಗರಬಾವಿ ನಿವಾಸಿ. ಹುಡುಗಿ ಕತ್ತರಿಗುಪ್ಪೆಯವಳು. ಆಕೆಗೂ ವಯಸ್ಸು 19. ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಚೇತನ್ ಬಿಇ ವ್ಯಾಸಂಗ ಮಾಡುತ್ತಿದ್ದರೆ, ಯುವತಿ ಬಿಕಾಂ ಓದುತ್ತಿದ್ದಾಳೆ.

ಇವರದ್ದು 5 ವರ್ಷಗಳ ಪ್ರೇಮಕಥೆ. ಮನೆಯವರಿಗೂ ತಿಳಿದ ವಿಚಾರವೇ ಆಗಿತ್ತು. ಆದರೆ, ಇವರ ಪ್ರೀತಿಯನ್ನು ನಿರಾಕರಿಸಿದ್ದ ಎರಡೂ ಕುಟುಂಬದವರು ವ್ಯಾಸಂಗ ಮುಂದುವರಿಸುವಂತೆ ಇಬ್ಬರಿಗೂ ಸೂಚನೆ ನೀಡಿದ್ದರು.

ಅಷ್ಟೇ ಸಾಕಾಯಿತು. ಮನನೊಂದ ಯುವ ಜೋಡಿ, ಬೈಕ್‌ನಲ್ಲಿ ರಾಮದೇವರ ಬೆಟ್ಟಕ್ಕೆ ತೆರಳಿದರು. ಡೆತ್‌ನೋಟ್ ಬರೆದಿಟ್ಟು, ಬ್ಯಾಗ್ ಮತ್ತು ಚಪ್ಪಲಿ ಬಿಟ್ಟು ಬೆಟ್ಟದ ಮೇಲೆ ಬಿಟ್ಟು 100ಕ್ಕೂ ಹೆಚ್ಚು ಅಡಿ ಆಳದ ಕಂದಕಕ್ಕೆ ಜಿಗಿದರು.

ಅದೇ ಸಮಯಕ್ಕೆ ಬೆಟ್ಟದ ಮೇಲೆ ಪರಿಶೀಲನೆಗೆ ಬಂದಿದ್ದ ಹೋಮ್‌ಗಾರ್ಡ್‌ ಕಣ್ಣಿಗೆ ಈ ಬ್ಯಾಗ್‌, ಚಪ್ಪಲಿ, ಡೆತ್‌ನೋಟ್‌ ಕಂಡಿದೆ. ಅದನ್ನು ಪರಿಶೀಲಿಸಿ ಅನುಮಾನಗೊಂಡ ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ, ಪೊಲೀಸರಿಗೆ ಮಾಹಿತಿ ನೀಡಿದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿ ಜತೆಗೂಡಿ ಶೋಧ ಕಾರ್ಯ ನಡೆಸಿದರು. 3 ಗಂಟೆ ಕಾರ್ಯಾಚರಣೆ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವಜೋಡಿ ಪತ್ತೆಯಾಗಿದೆ. ಕೂಡಲೇ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗಮನಿಸಬಹುದಾದ ಸುದ್ದಿಗಳು

ಭಾರತೀಯ ವಿದ್ಯಾಭವನ - ಬಿಬಿಎಂಪಿ ಪಬ್ಲಿಕ್ ಸ್ಕೂಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

BVB-BBMP School Admission: ಬೆಂಗಳೂರಿನ ಶ್ರೀರಾಮಪುರ ಕ್ರಾಂತಿಕವಿ ಸರ್ವಜ್ಞರಸ್ತೆಯ 215ನೇ ಮುಖ್ಯರಸ್ತೆಯ ಭಾರತೀಯ ವಿದ್ಯಾಭವನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಶುವಿಹಾರಕ್ಕೆ ಅಡ್ಮಿಷನ್‌ ಶುರುವಾಗುತ್ತಿದೆ. ಮಾರ್ಚ್‌ 27ರಿಂದ ಅಡ್ಮಿಷನ್‌ ಶುರುವಾಗುತ್ತಿದ್ದು, ಏಪ್ರಿಲ್‌ 10ರ ತನಕ ಅರ್ಜಿ ವಿತರಣೆ ನಡೆಯಲಿದೆ ಎಂದು ಪಾಲಿಕೆ ಹೇಳಿದೆ. ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಎಂ.ಎಡ್ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಸಂಯೋಜಿತ ಕಾಲೇಜುಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಎಂ.ಎಡ್ (M.Ed) ಕೋರ್ಸಿನ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯೂನಿವರ್ಸಿಟಿ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಪ್ರವೇಶಾತಿ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದಾಗಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಕಂಪ್ಯೂಟರ್‌ ಸೈನ್ಸ್‌ನಲ್ಲಿ ಮಾಸ್ಟರ್‌ ಆಫ್‌ ಟೆಕ್ನಾಲಜಿ (ರೀಸರ್ಚ್‌); ಐಐಐಟಿ ದೆಹಲಿ ಪರಿಚಯಿಸಿದೆ ಹೊಸ ಕೋರ್ಸ್‌

Master of Technology: ಉದ್ಯಮ ಮತ್ತು ಸಮಾಜಕ್ಕೆ ಸಂಬಂಧಿಸಿದ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಸಂಕೀರ್ಣ ಸಂಶೋಧನಾ ಸಮಸ್ಯೆಗಳನ್ನು ಪರಿಹರಿಸಲು ಪೂರ್ವ ಡಾಕ್ಟರೇಟ್ ಹಂತದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವುದಕ್ಕೆ ಈ 2 ವರ್ಷಗಳ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು