logo
ಕನ್ನಡ ಸುದ್ದಿ  /  Karnataka  /  Siddaramaiah Dk Shivakumar To Take Oath List Of Dignitaries Cm Of Tamil Nadu Bihar For Karnataka Cm Oath Ceremony Rmy

Karnataka CM: ಸಿದ್ದರಾಮಯ್ಯ, ಡಿಕೆಶಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಮಿಳುನಾಡು, ಬಿಹಾರ ಸಿಎಂ ಸೇರಿ ಗಣ್ಯರ ಪಟ್ಟಿ ಹೀಗಿದೆ

Raghavendra M Y HT Kannada

May 19, 2023 06:53 PM IST

ಸಿದ್ದರಾಮಯ್ಯ, ಡಿಕೆಶಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲಿದ್ದಾರೆ ತಮಿಳುನಾಡು, ಬಿಹಾರ ಸಿಎಂ

  • ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ತಮಿಳುನಾಡು, ಬಿಹಾರ ಮುಖ್ಯಮಂತ್ರಿಗಳು ಸೇರಿ ಒಟ್ಟು 20 ಮಂದಿ ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಆ ಪಟ್ಟಿ ಇಲ್ಲಿದೆ.

ಸಿದ್ದರಾಮಯ್ಯ, ಡಿಕೆಶಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲಿದ್ದಾರೆ ತಮಿಳುನಾಡು, ಬಿಹಾರ ಸಿಎಂ
ಸಿದ್ದರಾಮಯ್ಯ, ಡಿಕೆಶಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲಿದ್ದಾರೆ ತಮಿಳುನಾಡು, ಬಿಹಾರ ಸಿಎಂ

ಬೆಂಗಳೂರು: ನಗರದ ಕಂಠೀವ ಕ್ರೀಡಾಂಗಣದಲ್ಲಿ (Kanteerava Stadium) ನಾಳೆ (ಮೇ 20, ಶನಿವಾರ) ನಡೆಯಲಿರುವ ಸಮಾರಂಭದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Vijayanagara News: ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್‌ ಪತ್ನಿ ರುದ್ರಾಂಬ ನಿಧನ

Ramanagar News: ಮೇಕೆದಾಟಿನಲ್ಲಿ ಈಜಲು ಹೋಗಿ ಮೂವರು ಯುವತಿಯರು ಸೇರಿ ಐವರ ದುರ್ಮರಣ

Railway News: ಬೆಂಗಳೂರು ಬಿಲಾಸ್‌ಪುರಕ್ಕೆ ವಿಶೇಷ ಬೇಸಿಗೆ ರೈಲು, ಮೇ ತಿಂಗಳ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Holiday Declared: ಶ್ರೀನಿವಾಸಪ್ರಸಾದ್‌ ನಿಧನ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ನಾಳೆ ಸರ್ಕಾರಿ ಕಚೇರಿಗಳಿಗೆ ರಜೆ

ಈ ಸಮಾರಂಭಕ್ಕೆ ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಇತರೆ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿದೆ. ನೆರೆಯ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin), ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಸೇರಿದಂತೆ ಒಟ್ಟು 20 ಮಂದಿ ಗಣ್ಯರಿಗೆ ಕಾಂಗ್ರೆಸ್‌ ನಾಯಕರು ಆಹ್ವಾನ ನೀಡಿದ್ದಾರೆ. ಆ ಪಟ್ಟಿ ಇಲ್ಲಿದೆ.

  1. ಡಿಎಂಕೆ ಪಕ್ಷದ ನಾಯಕ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್
  2. ಜೆಡಿಯು ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
  3. ಟಿಎಂಸಿ ನಾಯಕಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
  4. ಜೆಎಂಎಂ ಪಕ್ಷದ ನಾಯಕ ಹಾಗೂ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್
  5. ಆರ್‌ಜೆಡಿ ನಾಯಕ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್
  6. ಎನ್‌ಸಿಪಿ ಪಕ್ಷದ ನಾಯಕ ಹಾಗೂ ಸಂಸದ ಶರದ್ ಪವಾರ್
  7. ಶಿವಸೇನಾ ಪಕ್ಷದ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ
  8. ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ, ಹಾಲಿ ಶಾಸಕ ಅಖಿಲೇಶ್ ಯಾದವ್
  9. ಎನ್‌ಸಿ ಪಕ್ಷದ ನಾಯಕ, ಜಮ್ಮು ಕಾಶ್ಮೀರದ ಮಾಜಿ ಸಿಎಂ, ಸಂಸದ ಫಾರೂಕ್ ಅಬ್ದುಲ್ಲಾ
  10. ಪಿಡಿಪಿ ಪಕ್ಷದ ನಾಯಕಿ ಹಾಗೂ ಜಮ್ಮುಕಾಶ್ಮೀರದ ಮಾಜಿ ಸಿಎಂ ಮೆಹಬೂಬ ಮುಫ್ತಿ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಉಳಿದಂತೆ ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ ರಾಜ, ಜೆಡಿಯು ಅಧ್ಯಕ್ಷ ಹಾಗೂ ಸಂಸದ ಲಲನ್ ಸಿಂಗ್, ತಮಿಳುನಾಡಿನ ಎಂಡಿಎಂಕೆ ಪಕ್ಷದ ಅಧ್ಯಕ್ಷ ಹಾಗೂ ಸಂಸದ ವೈಕೋ, ಆರ್‌ಎಸ್‌ಪಿ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಎನ್‌ ಕೆ ಪ್ರೇಮಚಂದ್ರನ್, ವಿಸಿಕೆ ಅಧ್ಯಕ್ಷ ಹಾಗೂ ಸಂಸದ ಡಾ ತಿರುಮಾವಳವನ್, ಆರ್‌ಎಲ್‌ಡಿ ಅಧ್ಯಕ್ಷ ಹಾಗೂ ಸಂಸದ ಜಯಂತ್ ಚೌಧರಿ, ಕೇರಳ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸದ ಜೋಸ್‌ ಕೆ ಮಣಿ, ಐಯುಎಂಎಲ್‌ ಅಧ್ಯಕ್ಷ ಸಾದಿಕ್ ಅಲಿ ತಂಗಲ್ ಅವರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

    ಹಂಚಿಕೊಳ್ಳಲು ಲೇಖನಗಳು