logo
ಕನ್ನಡ ಸುದ್ದಿ  /  ಕರ್ನಾಟಕ  /  Hubli Crime News: ಹುಬ್ಬಳ್ಳಿಯಲ್ಲಿ ಆಸ್ತಿಗಾಗಿ ಮಗನಿಂದಲೇ ಅಪ್ಪನ ಕೊಲೆ; ಪುತ್ರನ ವಿರುದ್ಧ ತಾಯಿಯಿಂದ ದೂರು, ಮಗ ನಾಪತ್ತೆ

Hubli Crime News: ಹುಬ್ಬಳ್ಳಿಯಲ್ಲಿ ಆಸ್ತಿಗಾಗಿ ಮಗನಿಂದಲೇ ಅಪ್ಪನ ಕೊಲೆ; ಪುತ್ರನ ವಿರುದ್ಧ ತಾಯಿಯಿಂದ ದೂರು, ಮಗ ನಾಪತ್ತೆ

Umesha Bhatta P H HT Kannada

Nov 25, 2024 03:43 PM IST

google News

ಹುಬ್ಬಳ್ಳಿಯಲ್ಲಿ ಕೊಲೆಯಾದ ನಾಗರಾಜ್‌. ತಲೆ ಮರೆಸಿಕೊಂಡಿರುವ ಮಗ ಅಣ್ಣಪ್ಪ.

    • Hubli Crime News: ಆಸ್ತಿ ವಿಚಾರವಾಗಿ ಅಪ್ಪ ಮಗನ ನಡುವೆ ಜಗಳ ನಡೆದು ಅಪ್ಪನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. 
ಹುಬ್ಬಳ್ಳಿಯಲ್ಲಿ ಕೊಲೆಯಾದ ನಾಗರಾಜ್‌. ತಲೆ ಮರೆಸಿಕೊಂಡಿರುವ ಮಗ ಅಣ್ಣಪ್ಪ.
ಹುಬ್ಬಳ್ಳಿಯಲ್ಲಿ ಕೊಲೆಯಾದ ನಾಗರಾಜ್‌. ತಲೆ ಮರೆಸಿಕೊಂಡಿರುವ ಮಗ ಅಣ್ಣಪ್ಪ.

Hubli Crime News: ಹಳೆ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಆಸ್ತಿ ವಿಚಾರವಾಗಿ ತಂದೆಯನ್ನು ಮಗನನ್ನು ಕೊಲೆ ಮಾಡಿದ್ದಾರೆಂದು ಮೃತನ ಪತ್ನಿ ಹಳೆ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪ್ಪ ಮಗ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪತಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದು, ಮಗ ಹೆಂಡತಿಯನ್ನು ಕರೆದುಕೊಂಡು ಊರು ಬಿಟ್ಟು ಹೋಗಿದ್ದಾನೆಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಕೊಲೆಯಾದ ವ್ಯಕ್ತಿ 77 ವರ್ಷದ ನಾಗರಾಜ ಚಂದ್ರಶೇಖರ್ ಎಂಬುವವರಾಗಿದ್ದು,ಮಗ ಅಣ್ಣಪ್ಪನೆ ಕೊಲೆ ಮಾಡಿದ್ದಾನೆ.

ಕಳೆದ ನವೆಂಬರ್ 19 ರಂದು ಮನೆಯಲ್ಲಿ ಆಸ್ತಿ ವಿಚಾರಕ್ಕೇ ತಂದೆ ಹಾಗೂ ಮಗನ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ಹೋಗಿದೆ.

ಈ ವೇಳೆ ಇಬ್ಬರು ನಶೆಯಲ್ಲಿದ್ದ ಕಾರಣ ಅಣ್ಣಪ್ಪ ತಂದೆಯ ಮೇಲೆ ಹಲ್ಲೆ ಮಾಡಿದ ಪರಿಣಾಮ ನಾಗರಾಜ ಗಾಯಗೊಂಡ ನಂತರ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಿದ್ದ ಏಟಿನಿಂದ ಚೇತರಿಸಿಕೊಳ್ಳಲಾಗದೆ ನಾಗರಾಜ ರವಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಮಿಷನರ್ ಎನ್ ಶಶಿಕುಮಾರ್ ಸಹ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಶವ ಪರಿಶೀಲನೆ ನಡೆಸಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ತಲಾಷ್‌ ಮುಂದುವರೆಸಿದ್ದಾರೆ.

ಹಳೆ ಹುಬ್ಬಳ್ಳಿಯ ಆಸ್ತಿ ವಿಚಾರವಾಗಿ ಮಗ ಹಾಗೂ ಅಪ್ಪನ ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಮಗ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇದ್ದವನು ಆಸ್ತಿಗೆ ತಗಾದೆ ತೆಗೆಯುತ್ತಲೇ ಇದೆ. ಆಗಾಗ ರಾಜೀ ಪಂಚಾಯಿತಿ ನಡೆಯುತ್ತಲೇ ಇತ್ತು. ಆದರೆ ಅಪ್ಪ ಹಾಗೂ ಮಗನ ನಡುವೆ ಆಸ್ತಿ ವಿಚಾರ ದ ಜಗಳ ಮಾತ್ರ ಕಡಿಮೆಯಾಗಿರಲಿಲ್ಲ.

ವಾರದ ಹಿಂದೆ ನನಗೆ ಆಸ್ತಿಯ ಪಾಲನ್ನು ಕೊಡಲೇಬೇಕು ಎಂದು ಮಗ ಅಪ್ಪನಿಗೆ ಕೇಳಿದ್ದ. ಅಪ್ಪ ನಾಗರಾಜ ಇದಕ್ಕೆ ಒಪ್ಪಿರಲಿಲ್ಲ. ಈ ವೇಳೆ ಮಾತಿಗೆ ಮಾತು ನಡೆದು ಅಪ್ಪನನ್ನು ತಳ್ಳಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ನಾಗರಾಜಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೊನೆಗೆ ಅಪ್ಪ ತೀರಿಕೊಂಡಿದ್ದಾನೆ.

ಈ ನಡುವೆ ತಾಯಿಯೇ ಮಗನ ವಿರುದ್ದ ದೂರು ನೀಡಿದ ನಂತರ ಅಣ್ಣಪ್ಪ ತಲೆ ಮರೆಸಿಕೊಂಡಿದ್ದಾನೆ. ತಂದೆಯ ಅಂತ್ಯಕ್ರಿಯೆಯೂ ಬಂದಿಲ್ಲ. ಆಸ್ತಿ ವಿಚಾರವಾಗಿಯೇ ತಂದೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ