logo
ಕನ್ನಡ ಸುದ್ದಿ  /  Karnataka  /  Tribute To Kumble Sundar Rao: Citizens Of Udupi Pays Tribute To Popular Yakshagana Artiste Ex Mla Kumble Sundar Rao

Tribute to Kumble Sundar Rao: ಯಕ್ಷ ಕಲಾತಪಸ್ವಿ ಕುಂಬ್ಳೆ ಸುಂದರ ರಾಯರಿಗೆ ಶ್ರದ್ಧಾಂಜಲಿ

HT Kannada Desk HT Kannada

Dec 02, 2022 09:43 AM IST

ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ ನಿನ್ನೆ ದಿವಂಗತ ಕುಂಬಳೆ ಸುಂದರ ರಾವ್‌ ಅವರಿಗೆ ನಾಗರಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

  • Tribute to Kumble Sundar Rao: ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ ಬುಧವಾರ ದಿವಂಗತ ಕುಂಬಳೆ ಸುಂದರ ರಾವ್‌ ಅವರಿಗೆ ನಾಗರಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ ನಿನ್ನೆ ದಿವಂಗತ ಕುಂಬಳೆ ಸುಂದರ ರಾವ್‌ ಅವರಿಗೆ ನಾಗರಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ ನಿನ್ನೆ ದಿವಂಗತ ಕುಂಬಳೆ ಸುಂದರ ರಾವ್‌ ಅವರಿಗೆ ನಾಗರಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಉಡುಪಿ: ಮಾತಿನ ಮೋಡಿಯ ಮೂಲಕವೇ ಯಕ್ಷರಂಗವನ್ನು ಆಳಿದ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್‌ ಅವರು ಬುಧವಾರ ಅಸ್ತಂಗತರಾದರು. ಅಗಲಿದ ಯಕ್ಷ ಕಲಾ ತಪಸ್ವಿ ಕುಂಬ್ಳೆ ಸುಂದರ ರಾವ್‌ ಅವರಿಗೆ ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ ನಿನ್ನೆ ನಾಗರಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಟ್ರೆಂಡಿಂಗ್​ ಸುದ್ದಿ

Hassan Sex Scandal: ಸಂತ್ರಸ್ತ ಮಹಿಳೆಯರ ಭಾವನೆಗಳ ಜತೆ ನಾವೆಲ್ಲ ನಿಲ್ಲಬೇಕು; ರಹಮತ್ ತರೀಕೆರೆ ಸೇರಿ ಕನ್ನಡ ಚಿಂತಕರ ಅಭಿಮತದ ಸಂಗ್ರಹ ಇದು

Forest Tales: ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಜಾಗೃತಿಗೆ ಮೈಸೂರಿನ ರಂಗಾಯಣದಲ್ಲಿ ವೃಕ್ಷರಾಜನ ರಂಗರೂಪ

Hassan Sex Scandal: ಪ್ರಜ್ವಲ್‌ ರೇವಣ್ಣ ಲೈಂಗಿಕ ಪ್ರಕರಣಗಳ ವರದಿ ಕೇಳಿದ ರಾಷ್ಟ್ರೀಯ ಮಹಿಳಾ ಆಯೋಗ

Hassan Sex Scandal: ಪ್ರಜ್ವಲ್‌ ರೇವಣ್ಣ ಹಾಸನ ಚುನಾವಣಾ ಟಿಕೆಟ್‌ಗೆ ಸಂವಹನದ ಕೊರತೆಯೇ ಕಾರಣ ಎಂದ ಬಿಜೆಪಿ ನಾಯಕ

ಪ್ರಸಂಗಕರ್ತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಡಿ.ಎಸ್ ಶ್ರೀಧರ್ ಅವರು, ಕುಂಬಳೆಯವರ ಮಾತಿನ ಪ್ರೌಢಿಮೆಯನ್ನು ಯಕ್ಷಗಾನ ಬಯಲಾಟ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ ಪಾರ್ತಿಸುಬ್ಬ ಪ್ರಶಸ್ತಿಯ ಸ್ಥಾಪನೆ, ಹಿಂದೆ ಇದ್ದ ಪ್ರಶಸ್ತಿಯ ಸಂಖ್ಯೆ ಮತ್ತು ಮೊತ್ತವನ್ನು ವೃದ್ಧಿಸುವಲ್ಲಿ ಅವರು ಮಾಡಿದ ಪ್ರಯತ್ನ, ಯಕ್ಷೋಪಾಸಕರು ಪುಸ್ತಕ ಪ್ರಕಟಣೆ, ಕಲಾವಿದರಿಗೆ ತರಬೇತಿ ಕಮ್ಮಟ ಇದನ್ನೆಲ್ಲಾ ಸ್ಮರಿಸಿಕೊಂಡು ಕಲಾವಿದರಾಗಿ, ಸಂಘಟಕರಾಗಿ ಅವರು ಮಾಡಿದ ಕಾರ್ಯಗಳನ್ನು ಶ್ಲಾಘಿಸಿದರು.

ಕುಂಬ್ಳೆಯವರ ಸಹಕಲಾವಿದ ತಾರಾನಾಥ ವರ್ಕಾಡಿಯವರು ಮಾತಿನಿಂದಲೇ ಪಾತ್ರಗಳನ್ನು ಕಟ್ಟಿಕೊಡುತ್ತಿದ್ದ ಪರಿಯನ್ನು ನೆನಪಿಸಿಕೊಂಡರು. ಮಲ್ಪೆ ಶಂಕರನಾರಾಯಣ ಸಾಮಗರಿಂದ ಆರಂಭವಾದ ಮಾತಿನ ವೈಖರಿ ಯಕ್ಷಗಾನ ರಂಗದಲ್ಲಿ ಮುಂದುವರಿಯಲು ಕುಂಬ್ಳೆಯವರ ಕೊಡುಗೆ ಅಸಾಧಾರಣವೆಂದು ಬಣ್ಣಿಸಿದರು. ಕಿಲ್ಲೆಯವರು ಆರಂಭಿಸಿದ ಪ್ರಾಸಬದ್ಧ ಮಾತುಗಾರಿಕೆಯ ನಡೆಯನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿದರು ಎಂದು ಅಭಿಪ್ರಾಯಪಟ್ಟರು.

ಹಿರಿಯ ಕಲಾವಿದ ಡಾ. ಕೋಳ್ಯೂರು ರಾಮಚಂದ್ರ ರಾವ್ ಮಾತನಾಡಿ ಅವರು ರಂಗದಲ್ಲಿ ಸಹಕಲಾವಿದನನ್ನು ಉತ್ತೇಜಿಸುತ್ತಾ ಪ್ರಸಂಗವನ್ನು ಸುಂದರವಾಗಿ ಕೊಂಡು ಹೋಗುತ್ತಿದ್ದುದನ್ನು ಸ್ಮರಿಸಿಕೊಂಡರು.

ವಾಸುದೇವ ಭಟ್ ಪೆರಂಪಳ್ಳಿಯವರು ಸಂಸ್ಕಾರ ಭಾರತಿಯ ಮೂಲಕ ಅವರು ನಮ್ಮ ಸಂಸ್ಕೃತಿಗೆ ನೀಡಿದ ಕೊಡುಗೆಯ ಕುರಿತು ಮಾತನಾಡಿದರು. ಅಗಲಿದ ಚೇತನಕ್ಕೆ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕುಂಬ್ಳೆಯವರ ಅಧ್ಯಕ್ಷಾವಧಿಯಲ್ಲಿ ಅಕಾಡೆಮಿಯ ಸದಸ್ಯನಾಗಿ ಅವರು ಯಕ್ಷಗಾನಕ್ಕೆ ನೀಡಿದ ಅಪೂರ್ವ ಕಾರ್ಯಕ್ರಮಗಳನ್ನು ನೆನಪಿಸಿಕೊಂಡು ಕಾರ್ಯಕ್ರಮ ನಿರೂಪಿಸಿದರು. ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು.

ಯಕ್ಷಗಾನ ಕಲಾವಿದ, ತಾಳಮದ್ದಳೆ ವಾಗ್ಮಿ ಕುಂಬಳೆ ಸುಂದರ ರಾವ್ ವ್ಯಕ್ತಿಚಿತ್ರಣ

Who is Kumble Sundar Rao: ತಾಳಮದ್ದಳೆ ಮತ್ತು ಬಯಲಾಟ ಎಂಬ ಯಕ್ಷಗಾನದ ಎರಡೂ ವಿಭಾಗಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದ ಕುಂಬಳೆ ಸುಂದರ ರಾವ್‌ 1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದಿಂದ ಶಾಸಕರಾಗಿ ಗೆದ್ದು ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

ಯಕ್ಷಗಾನ ಲೋಕದ ಮಾಣಿಕ್ಯವೊಂದು ಕಳಚಿಕೊಂಡಿದೆ. ಖ್ಯಾತ ಯಕ್ಷಗಾನ ಮತ್ತು ತಾಳೆ ಮದ್ದಳೆ ಕಲಾವಿದರಾದ, ಮಾಜಿ ಶಾಸಕ ಕುಂಬ್ಳೆ ಸುಂದರರಾವ್‌ (88) ನ.30ರಂದು ಮುಂಜಾನೆ ನಿಧನರಾಗಿದ್ದಾರೆ. ಇವರು ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ನಿಧನ ಸುದ್ದಿಯ ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

ಗಮನಿಸಬಹುದಾದ ವಿಚಾರಗಳು

December Rashifal 2022: ಈ ತಿಂಗಳು ಯಾವ ರಾಶಿಯವರಿಗೆ ಹೆಚ್ಚು ಲಾಭ, ಯಾರಿಗೆ ಹೆಚ್ಚು ನಷ್ಟ

December Rashifal 2022: ಡಿಸೆಂಬರ್ ತಿಂಗಳಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನವು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ಸಾಬೀತುಪಡಿಸುತ್ತದೆ. ಈ ತಿಂಗಳು ಯಾವ ರಾಶಿಯವರಿಗೆ ಹೆಚ್ಚು ಲಾಭ, ಯಾರಿಗೆ ಹೆಚ್ಚು ನಷ್ಟ- ರಾಶಿಫಲ ಹೇಳುವುದೇನು? ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

December born characteristics: ಡಿಸೆಂಬರ್‌ನಲ್ಲಿ ಜನಿಸಿದವರು ಅದೃಷ್ಟವಂತರು! ಯಾಕೆ ಹೀಗಂತಾರೆ?

December born characteristics: ಕ್ಯಾಲೆಂಡರ್‌ ವರ್ಷದ ಕೊನೆಯ ತಿಂಗಳು ಡಿಸೆಂಬರ್‌. ಈ ತಿಂಗಳು ಜನಿಸಿದವರೇಕೆ ಅದೃಷ್ಟವಂತರು? ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದಲ್ಲಿ ಅವರ ಗುಣಲಕ್ಷಣಗಳೇನು? ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

    ಹಂಚಿಕೊಳ್ಳಲು ಲೇಖನಗಳು