logo
ಕನ್ನಡ ಸುದ್ದಿ  /  ಕರ್ನಾಟಕ  /  New Esi Hospital For Karnataka: ರಾಜ್ಯಕ್ಕೆ 2 ಇಎಸ್‌ಐ ಆಸ್ಪತ್ರೆ, ಯಾವ ಜಿಲ್ಲೆಗಳಿಗೆ?

New ESI hospital for Karnataka: ರಾಜ್ಯಕ್ಕೆ 2 ಇಎಸ್‌ಐ ಆಸ್ಪತ್ರೆ, ಯಾವ ಜಿಲ್ಲೆಗಳಿಗೆ?

HT Kannada Desk HT Kannada

Jun 20, 2022 02:23 PM IST

google News

ESIC ಆಸ್ಪತ್ರೆ (ಸಾಂದರ್ಭಿಕ ಚಿತ್ರ)

    • ಕರ್ನಾಟಕದಲ್ಲಿ ಎರಡು ಸೇರಿ ದೇಶಾದ್ಯಂತ ವಿವಿಧೆಡೆ 23 ಹೊಸ ಆಸ್ಪತ್ರೆಗಳು, 62 ಡಿಸ್ಪೆನ್ಸರಿಗಳನ್ನು ತೆರೆಯಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್‌ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಇಎಸ್‌ಐಸಿಯ ೧೮೮ನೇ ಸಭೆಯಲ್ಲಿ ಈ ಪ್ರಸ್ತಾವನೆ ಅಂಗೀಕಾರವಾಗಿದೆ. ಇದು ಈ ವರ್ಷದ ಕೊನೆಯೊಳಗೆ ಜಾರಿಗೆ ಬರಲಿದೆ.
ESIC ಆಸ್ಪತ್ರೆ (ಸಾಂದರ್ಭಿಕ ಚಿತ್ರ)
ESIC ಆಸ್ಪತ್ರೆ (ಸಾಂದರ್ಭಿಕ ಚಿತ್ರ)

ನವದೆಹಲಿ: ಕರ್ನಾಟಕದ ತುಮಕೂರು ಮತ್ತು ಉಡುಪಿ ಸೇರಿ ದೇಶದ ವಿವಿಧ್ಯ ರಾಜ್ಯಗಳಲ್ಲಿ 23 ಹೊಸ ಆಸ್ಪತ್ರೆ ಸ್ಥಾಪನೆ ಮತ್ತು 63 ಡಿಸ್ಪೆನ್ಸರಿಗಳನ್ನು ತೆರೆಯಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ರೀತಿಯಾಗಿ, ಈ ವರ್ಷದ ಅಂತ್ಯದ ಒಳಗೆ ದೇಶಾದ್ಯಂತ ವೈದ್ಯಕೀಯ ಸೌಲಭ್ಯ ಮತ್ತು ಸೇವಾ ಪೂರೈಕೆ ವ್ಯವಸ್ಥೆಯನ್ನು ವಿಸ್ತರಿಸುವ ತೀರ್ಮಾನವನ್ನು ಇಎಸ್‌ಐಸಿಯ 188ನೇ ಸಭೆ ಭಾನುವಾರ ತೆಗೆದುಕೊಂಡಿದೆ.

ಪ್ರಸ್ತುತ ಈ ಯೋಜನೆಯು 443 ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಮತ್ತು 153 ಜಿಲ್ಲೆಗಳಲ್ಲಿ ಭಾಗಶಃ ಅನುಷ್ಠಾನಗೊಂಡಿದೆ. ಒಟ್ಟು 148 ಜಿಲ್ಲೆಗಳು ಇನ್ನೂ ಇಎಸ್‌ಐ ಯೋಜನೆಗೆ ಒಳಪಟ್ಟಿಲ್ ಎಂದು ಎಂದು ಕಾರ್ಮಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಇಎಸ್‌ಐಸಿಯ 188ನೇ ಸಭೆಯಲ್ಲಿ, ದೇಶಾದ್ಯಂತ ವೈದ್ಯಕೀಯ ಸೌಲಭ್ಯ ಮತ್ತು ಸೇವಾ ಪೂರೈಕೆ ವ್ಯವಸ್ಥೆಯನ್ನು ವಿಸ್ತರಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಈ ವರ್ಷದ ಅಂತ್ಯದೊಳಗೆ ಇಎಸ್‌ಐ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಲು ನಿರ್ಧರಿಸಲಾಯಿತು.

ನೋಂದಾಯಿತ MIMP (Modified Insurance Medical Practitioner) ಮತ್ತು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಗಳ ಟೈ-ಅಪ್ ಆಗಿರುವ ಆಸ್ಪತ್ರೆಗಳ ಮೂಲಕ ಹೊಸ DCBO(ಡಿಸ್ಪೆನ್ಸರಿ ಕಮ್ ಬ್ರಾಂಚ್ ಆಫೀಸ್) ಗಳನ್ನು ಸ್ಥಾಪಿಸುವ ಮೂಲಕ ವೈದ್ಯಕೀಯ ಆರೈಕೆ ಸೇವೆಗಳನ್ನು ಒದಗಿಸಲಾಗುತ್ತದೆ. ಇದಲ್ಲದೆ, ದೇಶಾದ್ಯಂತ 23 ಹೊಸ 100 ಹಾಸಿಗೆಗಳ ಆಸ್ಪತ್ರೆಗಳನ್ನು ಸ್ಥಾಪಿಸಲು ESIC ನಿರ್ಧರಿಸಿದೆ. ಈಗಾಗಲೇ 157 ಜಿಲ್ಲೆಗಳಲ್ಲಿ ಇಎಸ್‌ಐ ಯೋಜನೆಯ ಫಲಾನುಭವಿಗಳು ಈ ಟೈ-ಅಪ್ ವ್ಯವಸ್ಥೆ ಮೂಲಕ ನಗದು ರಹಿತ ವೈದ್ಯಕೀಯ ಸೇವೆಯನ್ನು ಪಡೆಯುತ್ತಿದ್ದಾರೆ.

ದೇಶಾದ್ಯಂತ ಸ್ಥಾಪನೆಯಾಗಲಿರುವ 23 ಆಸ್ಪತ್ರೆಗಳ ಪೈಕಿ ಆರು ಆಸ್ಪತ್ರೆಗಳು ಮಹಾರಾಷ್ಟ್ರದ ಪಾಲ್ಘರ್, ಸತಾರಾ, ಪೆನ್, ಜಲಗಾಂವ್, ಚಕನ್ ಮತ್ತು ಪನ್ವೆಲ್ ನಲ್ಲಿ, ಹರಿಯಾಣದ ಹಿಸಾರ್, ಸೋನೆಪತ್, ಅಂಬಾಲಾ ಮತ್ತು ರೋಹ್ಟಕ್‌ನಲ್ಲಿ ನಾಲ್ಕು ಮತ್ತು ತಮಿಳುನಾಡಿನ ಚೆಂಗಲ್ಪಟ್ಟು ಮತ್ತು ಈರೋಡ್‌ನಲ್ಲಿ, ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಗೋರಖ್‌ಪುರದಲ್ಲಿ, ಮತ್ತು ಕರ್ನಾಟಕದಲ್ಲಿ ತುಮಕೂರು ಮತ್ತು ಉಡುಪಿಯಲ್ಲಿ ಆಸ್ಪತ್ರೆಗಳನ್ನು ತೆರೆಯುವುದಾಗಿ ಸರ್ಕಾರ ತಿಳಿಸಿದೆ.

ಆಂಧ್ರಪ್ರದೇಶದ ನೆಲ್ಲೂರು, ಛತ್ತೀಸ್‌ಗಢದ ಬಿಲಾಸ್‌ಪುರ, ಗೋವಾದ ಮುಲ್ಗಾಂವ್, ಗುಜರಾತ್‌ನ ಸಾನಂದ್, ಮಧ್ಯಪ್ರದೇಶದ ಜಬಲ್‌ಪುರ, ಒಡಿಶಾದ ಜರ್ಸುಗುಡಾ ಮತ್ತು ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ತಲಾ ಒಂದು ಆಸ್ಪತ್ರೆ ತೆರೆಯಲಾಗುವುದು. ಈ ಆಸ್ಪತ್ರೆಗಳಲ್ಲದೆ 62 ಸ್ಥಳಗಳಲ್ಲಿ ಐದು ಡಿಸ್ಪೆನ್ಸರಿಗಳನ್ನು ತೆರೆಯಲಾಗುವುದು. ಇದರೊಂದಿಗೆ ಮಹಾರಾಷ್ಟ್ರದಲ್ಲಿ 48, ದೆಹಲಿಯಲ್ಲಿ 12 ಮತ್ತು ಹರಿಯಾಣದಲ್ಲಿ 2 ಔಷಧಾಲಯ(ಡಿಸ್ಪೆನ್ಸರಿ)ಗಳನ್ನು ಆರಂಭಿಸುವುದಾಗಿ ಕಾರ್ಮಿಕ ಸಚಿವಾಲಯ ಹೇಳಿದೆ.

ಮೂರು ಇಎಸ್‌ಐಸಿ ವೈದ್ಯಕೀಯ ಕಾಲೇಜುಗಳೂ ಆರಂಭವಾಗಲಿವೆ. ತೆಲಂಗಾಣದ ಸನತ್‌ನಗರ, ಫರೀದಾಬಾದ್ ಮತ್ತು ಚೆನ್ನೈನಲ್ಲಿರುವ ಮೂರು ಇಎಸ್‌ಐಸಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ವಿಕಿರಣ ಆಂಕೊಲಾಜಿ ಮತ್ತು ನ್ಯೂಕ್ಲಿಯರ್ ಮೆಡಿಸಿನ್ ವಿಭಾಗಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ