logo
ಕನ್ನಡ ಸುದ್ದಿ  /  ಕರ್ನಾಟಕ  /  Byndoor Fire: ಎಂಟು ಬೋಟುಗಳು ಅಗ್ನಿಗೆ ಆಹುತಿ, ಧಗಧಗನೆ ಹೊತ್ತಿ ಉರಿದ ದೋಣಿಗಳು

Byndoor fire: ಎಂಟು ಬೋಟುಗಳು ಅಗ್ನಿಗೆ ಆಹುತಿ, ಧಗಧಗನೆ ಹೊತ್ತಿ ಉರಿದ ದೋಣಿಗಳು

HT Kannada Desk HT Kannada

Nov 13, 2023 01:58 PM IST

google News

ಉಡುಪಿ ಜಿಲ್ಲೆ ಬೈಂದೂರಿನ ಗಂಗೊಳ್ಳಿಯಲ್ಲಿ ಅಗ್ನಿ ಅವಘಡಕ್ಕೆ ಸಿಲುಕಿದ ಭಾರೀ ಗಾತ್ರದ ದೋಣಿ.

    • Fire incident ಉಡುಪಿ ಜಿಲ್ಲೆ( Udupi) ಬೈಂದೂರು ತಾಲ್ಲೂಕಿನ ಗಂಗೊಳ್ಳಿಯಲ್ಲಿ( gangolly) ನಿಂತಿದ್ದ ದೋಣಿಗಳಿಗೆ ಬೆಂಕಿ ಬಿದ್ದಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. 
ಉಡುಪಿ ಜಿಲ್ಲೆ ಬೈಂದೂರಿನ ಗಂಗೊಳ್ಳಿಯಲ್ಲಿ ಅಗ್ನಿ ಅವಘಡಕ್ಕೆ ಸಿಲುಕಿದ ಭಾರೀ ಗಾತ್ರದ ದೋಣಿ.
ಉಡುಪಿ ಜಿಲ್ಲೆ ಬೈಂದೂರಿನ ಗಂಗೊಳ್ಳಿಯಲ್ಲಿ ಅಗ್ನಿ ಅವಘಡಕ್ಕೆ ಸಿಲುಕಿದ ಭಾರೀ ಗಾತ್ರದ ದೋಣಿ.

ಉಡುಪಿ: ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ ನಿಲ್ಲಿಸಿದ್ದ ಬೋಟುಗಳಿಗೆ ಬೆಂಕಿ ಬಿದ್ದು ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.

ದೀಪಾವಳಿ ದಿನವಾದ ಸೋಮವಾರ ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಗಂಗೊಳ್ಳಿಯಲ್ಲಿ ದುರಂತ ಸಂಭವಿಸಿದ್ದು. ನಾಲ್ಕು ಗಂಟೆ ನಂತರವೂ ಬೆಂಕಿ ಆರಿಸುವ ಕೆಲಸ ನಡೆದಿದೆ.

ಸಮುದ್ರ ತೀರದಲ್ಲಿ ನಿಲ್ಲಿಸಲಾಗಿದ್ದ ಬೋಟುಗಳಿವು. ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅನಾಹುತಕ್ಕೆ ಅಂದಾಜು 5 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಈ ಘಟನೆಯಲ್ಲಿ 8 ಬೋಟ್, 2 ಬೈಕ್ ಅಲ್ಲದೆ, ಲಕ್ಷಾಂತರ ರೂಪಾಯಿ ಮೌಲ್ಯದ ಬಲೆ ಬೆಂಕಿಗೆ ಆಹುತಿಯಾಗಿದೆ.

ಎರಡು ಅಗ್ನಿಶಾಮಕ ದಳ ವಾಹನ ಸಹಕಾರದಿಂದ ಕಾರ್ಯಾಚರಣೆ ನಡೆಯಿತು. ಸ್ಥಳೀಯರಿಂದಲೂ ಗಾಡಿಯಲ್ಲಿ ನೀರು ಪೂರೈಸಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ಗಾಳಿ ರಭಸಕ್ಕೆ ಗಗನಕ್ಕೆ ಬೆಂಕಿ ಚಿಮ್ಮುತ್ತಿರುವ ದೃಶ್ಯಗಳು ಕಂಡುಬಂತು. ದೀಪಾವಳಿಯ ಸಂದರ್ಭ ಪೂಜೆ ನಡೆಯುತ್ತಿದ್ದ ವೇಳೆ ಪಟಾಕಿ ಸಿಡಿತದಿಂದ ಈ ಅನಾಹುತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಬಹಳಷ್ಟು ಮೀನುಗಾರರು ತಮ್ಮ ಬೋಟ್‌ಗಳನ್ನು ಅಲ್ಲಿ ನಿಲ್ಲಿಸಿದ್ದರು. ಕೆಲವಕ್ಕೆ ಬಣ್ಣ ಹಚ್ಚಲಾಗಿತ್ತು. ಇನ್ನೂ ಕೆಲವಕ್ಕೆ ಬಣ್ಣ ಹಚ್ಚುವುದು ಬಾಕಿ ಇತ್ತು. ಈ ದುರಂತದಲ್ಲಿ ಬೋಟು ಸುಟ್ಟು ಹೋದ ಹಲವು ಮೀನುಗಾರರು ತಮಗೆ ಅನ್ನ ನೀಡುವ ವಸ್ತುವೇ ಇಲ್ಲದಾಗಿಯೇ ಎಂದು ಬೇಸರದಿಂದ ಹೇಳಿಕೊಂಡರು. ಕೆಲವರು ಕಣ್ಣೀರು ಹಾಕಿದ್ದೂ ಕಂಡು ಬಂದಿತು.

ವಿಷಯ ತಿಳಿದು ಸ್ಥಳೀಯ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಧಾವಿಸಿದರು. ಅಗ್ನಿ ಶಾಮಕ ಘಟಕದ ವಾಹನಗಳೂ ಆಗಮಿಸಿ ಬೆಂಕಿ ನಂದಿಸುವಲ್ಲಿ ನಿರತವಾಗಿದ್ದವು. ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಲೇ ಇದ್ದರು.

ಘಟನೆ ಹೇಗಾಯಿತು ಎನ್ನುವುದು ಗೊತ್ತಾಗಲೇ ಇಲ್ಲ. ಕೆಲವರು ದೀಪಾವಳಿ ಹಿನ್ನೆಲೆಯಲ್ಲಿ ಬೋಟ್‌ಗಳ ಬಳಿ ಪೂಜೆಯಲ್ಲಿದ್ದರು. ಬೆಂಕಿ ಬಿದ್ದುದನ್ನು ಗಮನಿಸಿದ ಕೆಲವರು ಕೂಗಿಕೊಂಡರು. ಅದು ನೋಡುವಷ್ಟರಲ್ಲಿ ಅಕ್ಕಪಕ್ಕದ ಬೋಟುಗಳಿಗೂ ಹಬ್ಬಿಕೊಂಡಿತು ಎಂದು ಪ್ರತ್ಯಕ್ಷ ದರ್ಶಿಗಳು ವಿವರಿಸಿದರು.

ಬೆಂಕಿ ಹೇಗೆ ಇಲ್ಲಿಗೆ ಬಿದ್ದಿದೆ ಎನ್ನುವುದನ್ನು ತಿಳಿಯಬೇಕಿದೆ. ಯಾರಾದರೂ ಬೆಂಕಿ ಹಾಕಿದ್ದರೋ ಅಥವಾ ಪಟಾಕಿ ಹಚ್ಚಿದಾಗ ಏನಾದರೂ ಅನಾಹುತ ಆಗಿದೆಯೋ ಗೊತ್ತಿಲ್ಲ. ಘಟನೆಯ ಮೂಲದ ಕುರಿತು ತನಿಖೆ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಇದನ್ನೂ ಓದಿರಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ