ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2024ರ ಫಲಿತಾಂಶ ಪ್ರಕಟ; ಮೊದಲ ಬಹುಮಾನ ಗೆದ್ದ ಗಣೇಶ ಭಟ್ ಕೊಪ್ಪಲತೋಟ, ವಿಜೇತರ ಪಟ್ಟಿ ಇಲ್ಲಿದೆ
Dec 14, 2024 07:30 AM IST
ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ(2024)ಯಲ್ಲಿ ವಿಜೇತರನ್ನು ಘೋಷಿಸಲಾಗಿದೆ.
- ಉತ್ಥಾನ ಮಾಸಪತ್ರಿಕೆಯ ಆಯೋಜಿಸಿದ್ದ ವಾರ್ಷಿಕ ಕಥಾಸ್ಪರ್ಧೆಯಲ್ಲಿ ವಿಜೇತರನ್ನು ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶಭಟ್ಟ ಕೊಪ್ಪಲತೋಟ ಅವರು ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. ವಿಜೇತರ ಪಟ್ಟಿ ಇಲ್ಲಿದೆ.
ಬೆಂಗಳೂರು: ಸದಭಿರುಚಿಯ ಮಾಸ ಪತ್ರಿಕೆ ಉತ್ಥಾನ ವತಿಯಿಂದ ಆಯೋಜಿಸಲಾಗಿದ್ದ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ(2024)ಯಲ್ಲಿ ವಿಜೇತರನ್ನು ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶಭಟ್ಟ ಕೊಪ್ಪಲತೋಟ ಅವರು ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. ಇವರು ತೀರ್ಪು ಎಂಬ ಕಥೆಗೆ 15 ಸಾವಿರ ರೂಪಾಯಿಗಳ ಮೊದಲ ಬಹುಮಾನವನ್ನು ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ಮೃತ್ಯುಂಜಯ ಎಚ್ ಅವರಿಗೆ ಎರಡನೇ (12,000 ರೂಪಾಯಿ) ಬಹುಮಾನ ಬಂದಿದೆ. ಇವರ ಕಥೆಯ ಪಾತ್ರದ ಎದುರು ಎಂಬ ಕಥೆಗೆ ಬಹುಮಾನ ಸಂದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಸದಾಶಿವ ಸೊರಟೂರು ಅವರಿಗೆ ತೃತೀಯ ಬಹುಮಾನ ( 10,000 ರೂಪಾಯಿ) ಸಿಕ್ಕಿದೆ. ಮುರಿದ ಮರದ ಚಿಗುರು ಕಥೆಗೆ ಬಹುಮಾನ ಬಂದಿದೆ.
ಐದು ಕಥೆಗಳಿಗೆ ಮೆಚ್ಚುಗೆಯ ಬಹುಮಾನ (2 ಸಾವಿರ ರೂಪಾಯಿ) ನೀಡಲಾಗಿದೆ.
1. ವನರಾಗ ಶರ್ಮಾ (ಯಲ್ಲಾಪುರ, ಉತ್ತರ ಕನ್ನಡ) ಕಥೆ - ನೆತ್ತರ ಬೀದಿಗುಂಟ
2. ಕಿರಣ್ ಪ್ರಸಾದ್ (ರಾಜನಹಳ್ಳಿ, ಬೆಂಗಳೂರು) ಕಥೆ - ಸ್ಥಿತ್ಯಂತರ
3. ಭಾಗ್ಯರೇಖಾ ದೇಶಪಾಂಡೆ (ಬೆಂಗಳೂರು) ಕಥೆ - ನಿಷ್ಕ್ರಮಣ
4. ಜಯರಾಮಚಾರಿ (ಬೆಂಗಳೂರು) ಕಥೆ - ಅನಿಕೇತನ
5. ಶೈಲಜಾ ಗೊರನ್ಮನೆ (ಶಿರಸಿ) ಕಥೆ - ಸಾಂಗತ್ಯ
ಲೇಖಕರು ಹಾಗೂ ಪತ್ರಕರ್ತರಾಗಿರುವ ಪ್ರೊ ಎನ್ ಎಸ್ ಶ್ರೀಧರ್ ಮೂರ್ತಿ ಅವರು ಉತ್ಥಾನ ವಾರ್ಷಿಕ ಕಥಾಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದರು. ಉತ್ಥಾನ ವತಿಯಿಂದ ವಾರ್ಷಿಕ ಕಥಾ ಸ್ಪರ್ಧೆ 2024 ಕಥೆಗಳನ್ನು ಆಹ್ವಾನಿಸಿತ್ತು. ಕಥೆಗಳನ್ನು ತಲುಪಿಸಲು 2024ರ ಅಕ್ಟೋಬರ್ 10 ಕೊನೆಯ ದಿನವಾಗಿತ್ತು.