logo
ಕನ್ನಡ ಸುದ್ದಿ  /  ಕರ್ನಾಟಕ  /  Vijayapur Airport: ವಿಜಯಪುರ ನಿಲ್ದಾಣ ಬಹುತೇಕ ಪೂರ್ಣ, 2025 ರ ವೇಳೆಗೆ ಉದ್ಘಾಟನೆ ಸಾಧ್ಯತೆ; ರಾತ್ರಿ ವೇಳೆ ಕಾರ್ಯಾಚರಣೆಗೂ ವ್ಯವಸ್ಥೆ

Vijayapur Airport: ವಿಜಯಪುರ ನಿಲ್ದಾಣ ಬಹುತೇಕ ಪೂರ್ಣ, 2025 ರ ವೇಳೆಗೆ ಉದ್ಘಾಟನೆ ಸಾಧ್ಯತೆ; ರಾತ್ರಿ ವೇಳೆ ಕಾರ್ಯಾಚರಣೆಗೂ ವ್ಯವಸ್ಥೆ

Umesha Bhatta P H HT Kannada

Nov 01, 2024 05:26 PM IST

google News

ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. ಮುಂದಿನ ವರ್ಷ ಸೇವೆಗೆ ಸಿಗಲಿದೆ.

    • ಐದು ವರ್ಷದಿಂದ ಪ್ರಗತಿಯಲ್ಲಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಮುಂದಿನ ವರ್ಷ ಉದ್ಘಾಟನೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.
ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. ಮುಂದಿನ ವರ್ಷ ಸೇವೆಗೆ ಸಿಗಲಿದೆ.
ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. ಮುಂದಿನ ವರ್ಷ ಸೇವೆಗೆ ಸಿಗಲಿದೆ.

ವಿಜಯಪುರ: ವಿಜಯಪುರದಲ್ಲಿ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಿ ಆರು ದಶಕದ ನಂತರ ಕಾಮಗಾರಿ ಶುರುವಾಗಿ ಐದು ವರ್ಷ ಕಳೆದಿದ್ದು. ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಮುಗಿಸಿ ಮುಂದಿನ ವರ್ಷದಲ್ಲಿಯೇ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ಒದಗಿಸಲು ಸರ್ಕಾರ ಮುಂದಾಗಿದೆ. ಹುಬ್ಬಳ್ಳಿಗಿಂತ ಮೂರು ವರ್ಷ ಮೊದಲೇ ವಿಮಾನ ನಿಲ್ದಾಣ ಭೂಸ್ವಾಧೀನವಾಗಿದ್ದರೂ ಕೆಲಸ ಮಾತ್ರ ನಾನಾ ಕಾರಣದಿಂದ ಶುರುವಾಗಿರಲಿಲ್ಲ. ಐದೇ ವರ್ಷದಲ್ಲಿ ನಿಲ್ದಾಣ ಕಾಮಗಾರಿ ತ್ವರಿತಗತಿಯಲ್ಲಿ ನಡೆದಿದೆ. ಹಗಲು ವಿಮಾನ ಸಂಚಾರಕ್ಕೆ ಬೇಕಾದ ಕಾಮಗಾರಿಗಳು ಮುಗಿದಿದ್ದರೆ, ರಾತ್ರಿ ಸಮಯದಲ್ಲಿ ವಿಮಾನ ಹಾರಾಟಕ್ಕೆ ಬೇಕಾದ ಕೆಲಸಗಳು ನಡೆದಿವೆ.

ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್‌ ವಿಜಯಪುರ ವಿಮಾನ ನಿಲ್ದಾಣದ ಪ್ರಗತಿಯ ಕುರಿತು ಮಾಹಿತಿ ನೀಡಿದರು.

  • ವಿಜಯಪುರ ವಿಮಾನ ನಿಲ್ದಾಣದಲ್ಲಿ ಏರ್‍ಬಸ್-320 ವಿಮಾನಗಳ ಹಗಲು ಹಾರಾಟದ ವ್ಯವಸ್ಥೆಗಾಗಿ ಮಂಜೂರಾಗಿರುವ 347.92 ಕೋಟಿ ರೂಪಾಯಿಗಳ ಅನುದಾನದಲ್ಲಿ 2 ಪ್ಯಾಕೇಜ್‍ಗಳಲ್ಲಿ ಕೈಗೊಂಡ ಎಲ್ಲ ಕಾಮಗಾರಿಗಳೂ ಮುಕ್ತಾಯವಾಗಿವೆ
  • ವಿಮಾನಯಾನ ಕಾರ್ಯಾಚರಣೆಗೆ ಅವಶ್ಯವಿರುವ ವಿಮಾನ ನಿಲ್ದಾಣದ ಪರಿಕರಗಳನ್ನು ಖರೀದಿಸುವ ಸಲುವಾಗಿ ಟೆಂಡರ್ ಆಹ್ವಾನಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
  • ಸದರಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿಯೂ ಕಾರ್ಯಾಚರಣೆ ಕೈಗೊಳ್ಳಲು ಮತ್ತು ರಾಷ್ಟ್ರೀಯ ಹೆದ್ದಾರಿ-50 ರಿಂದ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿರುತ್ತದೆ. ಇದಕ್ಕಾಗಿ 117 ಕೋಟಿ ರೂಪಾಯಿಗಳ ಹೆಚ್ಚುವರಿ ಮೊತ್ತದ ಡಿ.ಪಿ.ಆರ್ ತಯಾರಿಸಿ ಅನುಮೋದನೆಗಾಗಿ ಸಲ್ಲಿಸಲಾಗಿದೆ.

    ಇದನ್ನೂ ಓದಿರಿ: ಬೆಂಗಳೂರಿನಿಂದ ಅಯೋಧ್ಯೆಗೆ ಹೊರಟಿದ್ದ ಆಕಾಶ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್‌ ಬೆದರಿಕೆ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್‌
  • ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ರನ್‍ವೇ ಸಹಿತ ಎಲ್ಲ ಕಾಮಗಾರಿಗಳು ಮುಗಿದಿದೆ. ಆದರೆ, ಪರಿಸರ ಸಚಿವಾಲಯಕ್ಕೆ ಸಂಬಂಧಿಸಿದ ಅನುಮತಿಗಳು ಹಿಂದಿನಿಂದಲೂ ಬಾಕಿ ಇವೆ.
  • ಸರ್ವೋಚ್ಚ ನ್ಯಾಯಾಲಯ ಚೆನೈ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ರಾಷ್ಟ್ರದ ಎಲ್ಲ ನೂತನ ವಿಮಾನ ನಿಲ್ದಾಣಗಳಿಗೆ ಪರಿಸರ ಸಂಬಂಧಿತ ವಿಷಯಗಳ ಇತ್ಯರ್ಥವಾಗುವವರೆಗೆ ತಡೆಯಾಜ್ಞೆ ನೀಡಿದೆ.
  • ಈ ತಡೆಯಾಜ್ಞೆ ತೆರವಾದ ಎರಡು ತಿಂಗಳ ಒಳಗೆ ವಿಮಾನ ಹಾರಾಟ ಆರಂಭಿಸಲಾಗುವುದು ಎನ್ನುವುದು ಎಂ.ಬಿ.ಪಾಟೀಲರು ನೀಡಿದ ಸ್ಪಷ್ಟನೆ.

    ಇದನ್ನೂ ಓದಿರಿ: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೆಚ್ಚು ಒಂದೇ ದಿನ ದಾಖಲೆ ವಿಮಾನಗಳ ಸಂಚಾರ , ಹೊಸ ನಗರಗಳಿಗೆ ಸಂಪರ್ಕ ಜಾಲ ವಿಸ್ತರಣೆ

ಕೈಗಾರಿಕೆಗೂ ಒತ್ತು

  • ಕೆ.ಐ.ಎ.ಡಿ.ಬಿ ವಿಜಯಪುರದ ಅಲಿಯಾಬಾದ ಹಂತ-3 ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ 1870 ಎಕರೆ ಜಮೀನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ.
  • ಕೈಗಾರಿಕೆ ಅಭಿವೃದ್ಧಿಗಾಗಿ ಒಟ್ಟು 3239 ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಕ್ರಮವಹಿಸಲಾಗಿದ್ದು, ಈಗಾಗಲೆ 245 ಕೋಟಿ ರೂಪಾಯಿಗಳ ಬಂಡವಾಳ ಹೂಡಿ ಕೊಲ್ಹಾರ ತಾಲೂಕಿನಲ್ಲಿ 614 ಎಕರೆ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಹೊಸ ಕೈಗಾರಿಕೆಗಳ ಸ್ಥಾಪನೆಗಾಗಿ 411 ನಿವೇಶನಗಳು ಲಭ್ಯವಿರುತ್ತವೆ.
  • ದಿನಾಂಕ: 02-11-2023 ರಿಂದ 27-10-2024 ರ ವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ 9,300 ಲಕ್ಷ ರೂಪಾಯಿಗಳ ಬಂಡವಾಳ ಹೂಡಿಕೆಯೊಂದಿಗೆ ಸ್ಥಾಪಿತಗೊಂಡಿರುವ 4,537 ಕೈಗಾರಿಕೋದ್ಯಮಗಳಲ್ಲಿ 24,645 ಉದ್ಯೋಗಾವಕಾಶ ಕಲ್ಪಿಸಲಾಗಿದೆ.
  • ಇಂಡಿ ತಾಲ್ಲೂಕಿನ ಬೂದಿಹಾಳ ಗ್ರಾಮದಲ್ಲಿ 19 ಎಕರೆ 38 ಗುಂಟೆ ಪ್ರದೇಶದಲ್ಲಿ ಹಾಗೂ ಮುದ್ದೇಬಿಹಾಳ ಪಟ್ಟಣದಲ್ಲಿ 6 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಕಾಮಗಾರಿಗಳು ಅಭಿವೃದ್ಧಿ ಹಂತದಲ್ಲಿದೆ ಎನ್ನುವುದು ಸಚಿವ ಎಂ.ಬಿ.ಪಾಟೀಲ್‌ ನೀಡಿದ ವಿವರಣೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ