ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೆಚ್ಚು ಒಂದೇ ದಿನ ದಾಖಲೆ ವಿಮಾನಗಳ ಸಂಚಾರ , ಹೊಸ ನಗರಗಳಿಗೆ ಸಂಪರ್ಕ ಜಾಲ ವಿಸ್ತರಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೆಚ್ಚು ಒಂದೇ ದಿನ ದಾಖಲೆ ವಿಮಾನಗಳ ಸಂಚಾರ , ಹೊಸ ನಗರಗಳಿಗೆ ಸಂಪರ್ಕ ಜಾಲ ವಿಸ್ತರಣೆ

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೆಚ್ಚು ಒಂದೇ ದಿನ ದಾಖಲೆ ವಿಮಾನಗಳ ಸಂಚಾರ , ಹೊಸ ನಗರಗಳಿಗೆ ಸಂಪರ್ಕ ಜಾಲ ವಿಸ್ತರಣೆ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಒಂದೇ ದಿನ ಅತ್ಯಧಿಕ ವಿಮಾನ ಸಂಚಾರದ ದಾಖಲೆಯನ್ನು ನಿರ್ಮಿಸಿದ್ದು ಇನ್ನಷ್ಟು ವಿಸ್ತರಣೆಯ ನಿರೀಕ್ಷೆಯಲ್ಲಿದೆ.

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರ ದಟ್ಟಣೆ ಹೆಚ್ಚಿದೆ.
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರ ದಟ್ಟಣೆ ಹೆಚ್ಚಿದೆ.

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ದಿನ ದಾಖಲೆಯ ಸಂಖ್ಯೆ ವಿಮಾನ ಸಂಚಾರವಾಗಿದೆ. ವಿಮಾನ ನಿಲ್ದಾಣ 16 ವರ್ಷಗಳ ಆರಂಭಗೊಂಡಿದ್ದರೂ ಒಂದೇ ದಿನ 782 ಏರ್ ಟ್ರಾಫಿಕ್ ಚಲನೆಗಳೊಂದಿಗೆ ದಾಖಲೆ ನಿರ್ಮಿಸಿರುವುದು ಮೊದಲು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರದ ಪ್ರಮಾಣ ಹಾಗೂ ಪ್ರಯಾಣಿಕರ ದಟ್ಟಣೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೊಸ ಊರುಗಳಿಗೂ ವಿಮಾನ ಸಂಚಾರ ವಿಸ್ತರಣೆಯಾಗಿದೆ. ಹೊಸ ಬೇಡಿಕೆಗಳೂ ಸಾಕಷ್ಟು ಬರುತ್ತಿದೆ. ಇದರಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಜಾಗತಿಕ ಮಟ್ಟದಲ್ಲಿ ಮಾತ್ರವಲ್ಲದೇ ಭಾರತದ ಮಟ್ಟದಲ್ಲೂ ಸಾಕಷ್ಟು ಗಮನ ಸೆಳೆಯುತ್ತಿದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ ಒಂದು ಟರ್ಮಿನಲ್ ಮತ್ತು ಒಂದು ರನ್‌ವೇಯೊಂದಿಗೆ ಸೇವೆಯನ್ನು2008ರಲ್ಲಿ ಆರಂಭಗೊಂಡಿತ್ತು. ತನ್ನ ಮೊದಲ ವರ್ಷದ ಕಾರ್ಯಾಚರಣೆಯಲ್ಲಿ 9 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸಿದೆ. ಈಗ ಎರಡು ರನ್‌ವೇಗಳು ಮತ್ತು ಎರಡು ಟರ್ಮಿನಲ್‌ಗಳೊಂದಿಗೆ, ಈ ಆರ್ಥಿಕ ವರ್ಷದಲ್ಲಿ ವಿಮಾನ ನಿಲ್ದಾಣವು 40 ಮಿಲಿಯನ್ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳುತ್ತಾರೆ.

ನಾಲ್ಕು ದಿನದ ಹಿಂದೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಚರಿಸಿದ ವಿಮಾನಗಳ ಸಂಖ್ಯೆ 782. ಅಂದರೆ ಒಂದು ದಿನದಲ್ಲಿ ಇಷ್ಟೊಂದು ವಿಮಾನ ಸಂಚಾರ ಆಗಿರುವುದು ಕಡಿಮೆಯೇ. ಏರ್‌ ಇಂಡಿಯಾ ಸೇರಿದಂತೆ ಹಲವಾರು ವಿಮಾನ ಯಾನ ಸಂಸ್ಥೆಗಳು ಸೇವೆಯನ್ನು ಬೆಂಗಳೂರಿನಿಂದ ಹಲವು ಕಡೆಗೆ ವಿಸ್ತರಿಸುವ ಜತೆಗೆ ರಜೆಯ ಕಾರಣದಿಂದ ಬೆಂಗಳೂರಿಗೆ ವಿಮಾನ ಯಾನ ಸಂಚಾರ ಬೇಡಿಕೆ ಅಧಿಕವಾಗಿರುವುದರಿಂದಲೂ ದಟ್ಟಣೆ ಹೆಚ್ಚಿದೆ.

ಏರ್ ಇಂಡಿಯಾದ ಕಳೆದ ಮೂರು ತಿಂಗಳಿನಿಂದ ಬೆಂಗಳೂರಿನಲ್ಲಿ ತನ್ನ ಫ್ಲೀಟ್ ಅನ್ನು ವಿಸ್ತರಿಸಿದೆ. ಏರ್ ಇಂಡಿಯಾ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾನದಿಂದ ತಿರುವನಂತಪುರ, ಪುಣೆ, ಕೋಲ್ಕತ್ತಾ ಮತ್ತು ಲಂಡನ್ ಗ್ಯಾಟ್ವಿಕ್‌ಗೆ ವಿಮಾನ ಸೇವೆ ವಿಸ್ತರಿಸಿದೆ. ಇದಲ್ಲದೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದೋರ್, ವಿಜಯವಾಡ ಮತ್ತು ಅಬುಧಾಬಿಗೆ ಸೇವೆಗಳನ್ನು ಶುರು ಮಾಡಿದೆ.

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಪ್ರಸ್ತುತ ಬೆಂಗಳೂರಿನಿಂದ ಪ್ರತಿದಿನ 200 ಕ್ಕೂ ಹೆಚ್ಚು ನಿರ್ಗಮನಗಳನ್ನು ಹೊಂದಿದೆ. ಅದರ ಇತ್ತೀಚಿನ ಸೇರ್ಪಡೆಗಳಲ್ಲಿ ಬೆಂಗಳೂರಿನಿಂದ ಜಬಲ್‌ಪುರ ಮತ್ತು ನಾಸಿಕ್‌ಗೆ ನೇರ ವಿಮಾನಗಳು ಕಳೆದ ತಿಂಗಳು ಪ್ರಾರಂಭಿಸಲ್ಪಟ್ಟಿವೆ. ಇಂಡಿಗೋ ಆಗಸ್ಟ್ 1 ರಂದು ಬೆಂಗಳೂರು ಮತ್ತು ಅಬುಧಾಬಿ ನಡುವೆ ದೈನಂದಿನ ನೇರ ವಿಮಾನಯಾನವನ್ನು ಪ್ರಾರಂಭಿಸಿತು. ನವೆಂಬರ್ 19 ರಿಂದ ವಾರಕ್ಕೆ ನಾಲ್ಕು ವಿಮಾನಗಳೊಂದಿಗೆ ಮಾರಿಷಸ್‌ಗೆ ನೇರ ವಿಮಾನಗಳನ್ನು ಪರಿಚಯಿಸುತ್ತಿದೆ. ಇದೂ ಕೂಡ ದಟ್ಟಣೆ ಹೆಚ್ಚುವಂತೆ ಮಾಡಿದೆ.

ದೀಪಾವಳಿ ಜತೆಗೆ ಹೊಸ ವರ್ಷದ ಅವಧಿಯೂ ಸಮೀಪಿಸುತ್ತಿರುವುದರಿಂದ, ಬೇಡಿಕೆ ಹೆಚ್ಚುತ್ತಲೇ ಇದೆ. ಇದರಿಂದ ಮುಂದಿನ ಎರಡು ತಿಂಗಳಲ್ಲಿ ಮತ್ತಷ್ಟು ದಾಖಲೆಗಳನ್ನು ನಿರ್ಮಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ.

ಏರ್ ಟ್ರಾಫಿಕ್ ಬೆಳೆಯುತ್ತಿರುವಂತೆ, ಸಂಚಾರ ದಟ್ಟಣೆ ನಿರ್ವಹಿಸಲು ಮತ್ತು ಇತ್ತೀಚಿನ ಸಂವಹನ ಸಾಧನಗಳನ್ನು ಸಂಯೋಜಿಸಲು ತನ್ನ ಏರ್ ಟ್ರಾಫಿಕ್ ಕಂಟ್ರೋಲ್ ತಂತ್ರಜ್ಞಾನ ಹಾಗೂ ಸೇವೆಗಳನ್ನು ವಿಸ್ತರಿಸಿದೆ. ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಮತ್ತು ವಿಮಾನಯಾನ ಸಂಸ್ಥೆಗಳಿಂದ ಹೊಸ ಮಾರ್ಗಗಳ ಪ್ರಾರಂಭಕ್ಕೆ ಧನ್ಯವಾದಗಳು, ವಿಮಾನ ನಿಲ್ದಾಣವು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.ಪೂರ್ವ ಕೋವಿಡ್ ಬೂಮ್ ಸಮಯದಲ್ಲಿ ಕಂಡು ಬಂದಿದ್ದ ಹಿಂದಿನ ದಾಖಲೆಯನ್ನು ಈಗ ಮೀರಿಸಲಾಗಿದೆ. ಬೆಂಗಳೂರಿನ ವಿಮಾನ ಸೇವೆಗೆ ಬೇಡಿಕೆ ಅಧಿಕವಾಗಿರುವುದು ಇದನ್ನು ತೋರಿಸುತದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

Whats_app_banner