logo
ಕನ್ನಡ ಸುದ್ದಿ  /  Karnataka  /  Vindhya E-info Media Is The Light Of Life For The Disabled And It Achieved The Prestigious Great Place To Work Certification

Vindhya E-Infomedia: ಅಂಗವಿಕಲರ ಬಾಳಿನ ಬೆಳಕು ವಿಂಧ್ಯಾ; ಸಂಸ್ಥೆಗೆ ಗ್ರೇಟ್‌ ಪ್ಲೇಸ್‌ ಟು ವರ್ಕ್‌ನ ಗರಿ

HT Kannada Desk HT Kannada

Jan 17, 2023 06:23 PM IST

ಸಾಮಾನ್ಯರಂತೆಯೇ ಮತ್ತು ಅವರಿಗಿಂತ ಹೆಚ್ಚು ಕ್ರಿಯಾಶೀಲರಾಗಿ ಅಂಗವಿಕಲರು ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿರುವ ವಿಂಧ್ಯಾ ಇ ಇನ್ಫೋಮೀಡಿಯಾಕ್ಕೆ ಈಗ ಗ್ರೇಟ್‌ ಪ್ಲೇಸ್‌ ಟು ವರ್ಕ್‌ ಪ್ರಮಾಣದ ಹಿರಿಮೆ.

  • Vindhya E-Infomedia: ಸಾಮಾನ್ಯರಂತೆಯೇ ಮತ್ತು ಅವರಿಗಿಂತ ಹೆಚ್ಚು ಕ್ರಿಯಾಶೀಲರಾಗಿ ಅಂಗವಿಕಲರು ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ ವಿಂಧ್ಯಾ ಇ ಇನ್ಫೋಮೀಡಿಯಾ. ಇದೇ ಬದ್ಧತೆಯ ಕಾರಣ ಅದು ಇತ್ತೀಚೆಗೆ ʻಗ್ರೇಟ್‌ ಪ್ಲೇಸ್‌ ಟು ವರ್ಕ್‌ʼ ಎಂಬ ಹಿರಿಮೆಗೆ ಭಾಜನವಾಗಿದೆ. 

ಸಾಮಾನ್ಯರಂತೆಯೇ ಮತ್ತು ಅವರಿಗಿಂತ ಹೆಚ್ಚು ಕ್ರಿಯಾಶೀಲರಾಗಿ ಅಂಗವಿಕಲರು ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿರುವ ವಿಂಧ್ಯಾ ಇ ಇನ್ಫೋಮೀಡಿಯಾಕ್ಕೆ ಈಗ ಗ್ರೇಟ್‌ ಪ್ಲೇಸ್‌ ಟು ವರ್ಕ್‌ ಪ್ರಮಾಣದ ಹಿರಿಮೆ.
ಸಾಮಾನ್ಯರಂತೆಯೇ ಮತ್ತು ಅವರಿಗಿಂತ ಹೆಚ್ಚು ಕ್ರಿಯಾಶೀಲರಾಗಿ ಅಂಗವಿಕಲರು ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿರುವ ವಿಂಧ್ಯಾ ಇ ಇನ್ಫೋಮೀಡಿಯಾಕ್ಕೆ ಈಗ ಗ್ರೇಟ್‌ ಪ್ಲೇಸ್‌ ಟು ವರ್ಕ್‌ ಪ್ರಮಾಣದ ಹಿರಿಮೆ.

ಅಂಗವಿಕಲರ ಶೈಕ್ಷಣಿಕ ಅರ್ಹತೆ, ಪ್ರತಿಭೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತ ಉದ್ಯೋಗ ಒದಗಿಸುವವರಾರು? ಎಲ್ಲ ಅರ್ಹತೆ ಇದ್ದರೂ ಅಂಗವೈಕಲ್ಯದ ಕಾರಣ ಕೆಲಸ ಕೊಡದೆ ತಿರಸ್ಕರಿಸಲಾಗುತ್ತದೆ. ಆದರೆ, ಇತರ ಸಾಮಾನ್ಯರಂತೆಯೇ ಮತ್ತು ಅವರಿಗಿಂತ ಹೆಚ್ಚು ಕ್ರಿಯಾಶೀಲರಾಗಿ ಅಂಗವಿಕಲರು ಕೆಲಸ ಮಾಡಬಹುದು ಎಂಬುದನ್ನು ತಮ್ಮ ವಿಂಧ್ಯಾ ಇ ಇನ್ಫೋಮೀಡಿಯಾ ಸಂಸ್ಥೆ ಮೂಲಕ ತೋರಿಸಿಕೊಟ್ಟಿರುವ ಪವಿತ್ರಾ ವೈ.ಎಸ್‌. ಅವರ ಉದ್ಯಮಸಾಹಸ ಪ್ರೇರಣೆ ನೀಡುವಂಥದ್ದು. ರಾಷ್ಟ್ರ ಮಟ್ಟದ ಸಮೀಕ್ಷೆಯಲ್ಲಿ ಇತ್ತೀಚೆಗೆ ವಿಂಧ್ಯಾ ಇ-ಇನ್ಫೋಮೀಡಿಯಾ ʻಗ್ರೇಟ್‌ ಪ್ಲೇಸ್‌ ಟು ವರ್ಕ್‌ʼ ಎಂಬ ಹಿರಿಮೆಗೆ ಭಾಜನವಾಗಿದೆ.

ಟ್ರೆಂಡಿಂಗ್​ ಸುದ್ದಿ

Hassan Sex Scandal: ಸಂತ್ರಸ್ತ ಮಹಿಳೆಯರ ಭಾವನೆಗಳ ಜತೆ ನಾವೆಲ್ಲ ನಿಲ್ಲಬೇಕು; ರಹಮತ್ ತರೀಕೆರೆ ಸೇರಿ ಕನ್ನಡ ಚಿಂತಕರ ಅಭಿಮತದ ಸಂಗ್ರಹ ಇದು

Forest Tales: ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಜಾಗೃತಿಗೆ ಮೈಸೂರಿನ ರಂಗಾಯಣದಲ್ಲಿ ವೃಕ್ಷರಾಜನ ರಂಗರೂಪ

Hassan Sex Scandal: ಪ್ರಜ್ವಲ್‌ ರೇವಣ್ಣ ಲೈಂಗಿಕ ಪ್ರಕರಣಗಳ ವರದಿ ಕೇಳಿದ ರಾಷ್ಟ್ರೀಯ ಮಹಿಳಾ ಆಯೋಗ

Hassan Sex Scandal: ಪ್ರಜ್ವಲ್‌ ರೇವಣ್ಣ ಹಾಸನ ಚುನಾವಣಾ ಟಿಕೆಟ್‌ಗೆ ಸಂವಹನದ ಕೊರತೆಯೇ ಕಾರಣ ಎಂದ ಬಿಜೆಪಿ ನಾಯಕ

ಅನನ್ಯ ಕಾಳಜಿ, ವಿಶಿಷ್ಟ ಚಿಂತನೆಯೊಂದಿಗೆ ಸಾಮಾಜಿಕ ನವೋದ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ ಪವಿತ್ರಾ ವೈ.ಎಸ್. ಮತ್ತು ಅಶೋಕ್‌ ಗಿರಿ ದಂಪತಿ.‌ ಇವರು ಹುಟ್ಟುಹಾಕಿರುವ ವಿಂಧ್ಯಾ ಇ ಇನ್ಫೋಮೀಡಿಯಾ ಸಂಸ್ಥೆ ಅಂಗವಿಕಲರ, ಮಹಿಳೆಯರ, ಆರ್ಥಿಕ ದುರ್ಬಲರ ಆಶಾಕಿರಣವಾಗಿ ಬೆಳೆದಿದೆ.

ಕಳಕಳಿಯೇ ಕಾರ್ಯರೂಪಕ್ಕೆ ಬಂತು: ವಿಂಧ್ಯಾ ಇ-ಇನ್ಫೋಮೀಡಿಯಾ ಐದು ಸಿಬ್ಬಂದಿಯೊಡನೆ 2006ರಲ್ಲಿ ಆರಂಭವಾಯಿತು. ಇವರು ಕಠಿಣ ಹಾಗೂ ಅಸಾಧ್ಯದ ದಾರಿ ತುಳಿದಿದ್ದಾರೆ; ಯಶಸ್ಸು ಸಿಗುವುದು ದುಸ್ತರ ಎಂದು ಬಹುತೇಕರಿಗೆ ಅನಿಸತೊಡಗಿತು. ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಪ್ರತಿ ಹಂತದಲ್ಲೂ ಅನುಭವಗಳಿಂದಲೇ ಪಾಠ ಕಲಿತು ಗಟ್ಟಿಯಾದರು ಪವಿತ್ರಾ.

ನೋಡುನೋಡುತ್ತಿದ್ದಂತೆ ಸಂಸ್ಥೆ ಬೆಳೆಯತೊಡಗಿತು. ಮುಖ್ಯವಾಗಿ, ಕಾಲ್‌ ಸೆಂಟರ್‌ಗಳ ನಿರ್ವಹಣೆ, ಡೇಟಾ ಎಂಟ್ರಿ, ಡೇಟಾ ಮ್ಯಾನೇಜ್‌ಮೆಂಟ್‌ ಕಾರ್ಯಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನಿರ್ವಹಿಸುತ್ತಿರುವ ವಿಂಧ್ಯಾಗೆ ಗ್ರಾಹಕರು ಒಮ್ಮೆ ಬಂದರೆ ಸಾಕು, ಇಲ್ಲಿನ ಗುಣಮಟ್ಟ, ಕಾರ್ಯದಕ್ಷತೆ ಮತ್ತು ಬದ್ಧತೆ ನೋಡಿ ಕಾಯಂ ಗ್ರಾಹಕರಾಗಿ ಸೇವೆಗಳನ್ನು ಪಡೆದುಕೊಳ್ಳುತ್ತಾರೆ.

ಇತ್ತೀಚೆಗಷ್ಟೇ ಸಂಸ್ಥೆ16 ವರ್ಷಗಳನ್ನು ಪೂರೈಸಿದ್ದು, ಇದರ ಸಾರ್ಥಕ ಆಚರಣೆಯೂ ನಡೆಯಿತು. ಸಂಸ್ಥೆಯ ಪ್ರೇರಣಾದಾಯಿ ಪಯಣವನ್ನು ಪವಿತ್ರಾ ಅವರು ರಾಷ್ಟ್ರ- ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ವಿಂಧ್ಯಾದ ಮುಖ್ಯ ಕಚೇರಿ ಬೆಂಗಳೂರಿನ ರಾಜಾಜಿನಗರದ ಕೈಗಾರಿಕಾ ಪ್ರದೇಶದಲ್ಲಿದೆ. ಲಿಫ್ಟ್‌, ಸುಸಜ್ಜಿತ ಕ್ಯಾಂಟೀನ್‌ ಸೇರಿ ಎಲ್ಲ ವ್ಯವಸ್ಥೆಗಳನ್ನು ಹೊಂದಿದೆ.

ವಿಂಧ್ಯಾದ ವೈಶಿಷ್ಟ್ಯಗಳು

  • ಅಂಗವಿಕಲರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದು. ವೃತ್ತಿಪರ ತರಬೇತಿ, ಸೂಕ್ತ ಮಾರ್ಗದರ್ಶನದ ಮೂಲಕ ಅವರ ಕೌಶಲಗಳನ್ನು ಹೆಚ್ಚಿಸಿ, ಕೆಲಸಕ್ಕೆ ಅಣಿಗೊಳಿಸುವುದು.
  • ಕೆಲಸದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಹಂತ-ಹಂತವಾಗಿ ಅಂಗವಿಕಲರ ಆತ್ಮವಿಶ್ವಾಸ ಹೆಚ್ಚಿಸಿ, ಅವರ ವೃತ್ತಿಪರತೆ, ದಕ್ಷತೆಯ ಆಧಾರದ ಮೇಲೆ ಮುಂಬಡ್ತಿ ಒದಗಿಸುವುದು.
  • ಮಹಿಳಾ ಸಬಲೀಕರಣದ ನಿಟ್ಟಿನಲ್ಲಿಯೂ ಗಟ್ಟಿಹೆಜ್ಜೆಗಳನ್ನು ಇಟ್ಟಿರುವುದು. ಆರ್ಥಿಕವಾಗಿ ದುರ್ಬಲವಾಗಿರುವ, ಕೌಟುಂಬಿಕ ತಾಪತ್ರಯಗಳಿಂದ ನೊಂದಿರುವ ದೇಶದ ಬೇರೆ-ಬೇರೆ ರಾಜ್ಯಗಳ ಮಹಿಳೆಯರು ಇಲ್ಲಿ ಉದ್ಯೋಗ ಪಡೆದುಕೊಂಡು, ಸ್ವಾವಲಂಬಿ ಬದುಕು ರೂಪಿಸಿಕೊಳ್ಳುತ್ತಿದ್ದಾರೆ.
  • ಬೆಂಗಳೂರಿನಲ್ಲಿ ವಿಂಧ್ಯಾ ಎತ್ತರಕ್ಕೆ ಬೆಳೆಯುತ್ತಿದ್ದಂತೆ ತನ್ನ ಪಯಣವನ್ನು ಪಕ್ಕದ ಮೈಸೂರಿಗೂ ವಿಸ್ತರಿಸಿ, ಇತರ ರಾಜ್ಯಗಳಿಗೂ ತಲುಪಿದೆ. ತಮಿಳುನಾಡಿನ ಕೃಷ್ಣಗಿರಿ, ತೆಲಂಗಾಣದ ಹೈದರಾಬಾದ್‌, ಮಹಾರಾಷ್ಟ್ರದ ನಾಗಪುರದಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ, ಸಿಬ್ಬಂದಿ ಸಂಖ್ಯೆ ಹೆಚ್ಚುತ್ತಿದೆ.
  • ಪ್ರಸ್ತುತ ವಿಂಧ್ಯಾದ ಎಲ್ಲ ಶಾಖೆಗಳು ಸೇರಿ 2000ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಶೇಕಡ 35ಕ್ಕೂ ಹೆಚ್ಚು ಸಿಬ್ಬಂದಿ ಬಹುವಿಧದ ಅಂಗವೈಕಲ್ಯ ಹೊಂದಿದ್ದಾರೆ. ಆದರೆ, ಇವರೆಲ್ಲ ಅಂಗವೈಕಲ್ಯ ಎಂಬ ಟ್ಯಾಗ್‌ ಕಳಚಿಕೊಂಡು ಆತ್ಮವಿಶ್ವಾಸದಿಂದ ಬದುಕುತ್ತಿದ್ದಾರೆ. ಅವರ ದುಡಿಮೆ, ಸಂಬಳ ಕುಟುಂಬದವರಿಗೆ ಆಸರೆಯಾಗುವ ಜತೆಗೆ, ಇವರು ಬದುಕು ಕಟ್ಟಿಕೊಂಡಿರುವ ಪರಿಯೇ ಪ್ರೇರಣಾದಾಯಿ.
  • ಅಂಗವಿಕಲರ ಒಳಗೊಳ್ಳುವಿಕೆ, ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಸಮರ್ಥ ಮಾದರಿಯಾಗಿ ಹೊಮ್ಮಿದೆ. ಕೈ, ಕಾಲು. ಕಣ್ಣು ಇಲ್ಲದಿರುವವರು, ಮಾತು ಬಾರದವರು, ಆಟಿಸಂ ಸಮಸ್ಯೆ ಹೊಂದಿದವರು ಹೀಗೆ ಹಲವು ಬಗೆಯ ಅಂಗವೈಕಲ್ಯ ಹೊಂದಿದ್ದರೂ ಇಲ್ಲಿ ಮನೋಲ್ಲಾಸದಿಂದ ಕೆಲಸ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು